ಸಿಹಿ ಸುದ್ದಿ! ಪ್ರತಿ ಹೆಣ್ಣುಮಗುವಿಗೂ ಸಿಗುತ್ತೆ ₹21,000, ಸರ್ಕಾರದ ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ
ಈ ಯೋಜನೆಯಲ್ಲಿ ಜನಿಸುವ ಪ್ರತಿ ಹೆಣ್ಣುಮಗುವಿಗೆ ₹21,000 ಕೊಡಲಾಗುತ್ತದೆ. ಆದರೆ ಈ ₹21,000 ಹಣ ಬರುವುದು ಹೆಣ್ಣುಮಗುವಿಗೆ 18 ವರ್ಷ ತುಂಬಿದ ನಂತರ. ಇದು ಕುಟುಂಬದಲ್ಲಿ ಜನಿಸುವ ಮೊದಲ ಹೆಣ್ಣುಮಗುವಿಗೆ ಸಿಗುವ ಹಣ ಆಗಿದೆ.
ನಮ್ಮಲ್ಲಿ ಹೆಣ್ಣುಮಗು ಗಂಡುಮಗುವಿನ ನಡುವೆ ನಡೆಯುವ ಬೇಧಭಾವ ಇಂದಿಗೂ ಕಡಿಮೆ ಆಗಿಲ್ಲ. ಹೆಣ್ಣುಮಗು ಹುಟ್ಟಿದರೆ, ಹಲವಾರು ಜನರು ದುರದೃಷ್ಟ ಎಂದೇ ಅಂದುಕೊಳ್ಳುತ್ತಾರೆ. ಹೆಣ್ಣು ಭ್ರೂಣ ಹತ್ಯೆ ಕೂಡ ಇಂದಿಗೂ ನಿಲ್ಲದೆ ನಡೆಯುತ್ತಿದೆ.
ಹೆಣ್ಣು ಮಗು ಜನಿಸುವುದನ್ನು ಹೊರೆ ಎಂದು ಭಾವಿಸುವ ಸಾಕಷ್ಟು ತಂದೆ ತಾಯಿಯರು ಇದ್ದಾರೆ. ಆದರೆ ಹೆಣ್ಣುಮಗು ಯಾವತ್ತೂ ಹೊರೆಯಲ್ಲ, ಗಂಡುಮಕ್ಕಳಿಗಿಂತ ಹೆಣ್ಣುಮಗು ಯಾವುದರಲ್ಲೂ ಕಡಿಮೆ ಇಲ್ಲ ಎಂದು ಈಗಾಗಲೇ ಸಾಕಷ್ಟು ಹೆಣ್ಣುಮಕ್ಕಳು ಸಾಬೀತು ಪಡಿಸಿದ್ದಾರೆ.
ಕೆಲಸ ವಿಷಯದಲ್ಲಿ, ಓದುವ ವಿಷಯದಲ್ಲಿ ಈಗಾಗಲೇ ಗಂಡಿಗಿಂತ ಹೆಣ್ಣು ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವುದು ನಿರೂಪಿಸಿ ಆಗಿದೆ. ಈ ರೀತಿ ಇರುವಾಗಲು ಕೂಡ ಜನರ ನಂಬಿಕೆಗಳು ಉತ್ತಮವಾಗಿ ಸಾಗುತ್ತಿಲ್ಲ.
ಇನ್ಮುಂದೆ ನಿಮ್ಮ ಮಕ್ಕಳಿಗೆ ಸರ್ಕಾರಿ ನೌಕರಿ ಬೇಕಾದ್ರೆ ಈ ದಾಖಲೆ ಇರಲೇಬೇಕು, ಈಗಲೇ ಮಾಡಿಸಿಕೊಳ್ಳಿ! ಹೊಸ ರೂಲ್ಸ್ ಜಾರಿ
ಇತ್ತ ಸರ್ಕಾರ ಕೂಡ ಹೆಣ್ಣು ಭ್ರೂಣ ಹತ್ಯೆ ತಡೆಯಬೇಕು, ಹೆಣ್ಣುಮಗುವಿನ ಮಹತ್ವವನ್ನು ಜನರಿಗೆ ತಿಳಿಸಬೇಕು ಎಂದು ಹೆಣ್ಣುಮಗುವಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹೆಣ್ಣುಮಗುವಿಗೆ ಓದುವುದಕ್ಕೆ ಮತ್ತು ಕೆಲಸಕ್ಕೆ ಹೋಗುವುದಕ್ಕೆ ಸ್ವಾತಂತ್ರ್ಯ ಇರಬೇಕು ಎಂದು ಸರ್ಕಾರ ಈಗ ‘ಆಪ್ಕಿ ಬೇಟಿ, ಹಮಾರಿ ಬೇಟಿ’ (Aapki Beti Hamari Beti Scheme) ಎನ್ನುವ ಯೋಜನೆಯನ್ನು ಜಾರಿಗೆ ತಂದಿದೆ. ಪ್ರಸ್ತುತ ಈ ಯೋಜನೆ ಹರಿಯಾಣದಲ್ಲಿ (Haryana) ಮಾತ್ರ ಜಾರಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರಾಜಗಳಲ್ಲಿ ವಿಸ್ತರಿಸುವ ನಿರೀಕ್ಷೆ ಇದೆ.
ಈ ಯೋಜನೆಯಲ್ಲಿ ಜನಿಸುವ ಪ್ರತಿ ಹೆಣ್ಣುಮಗುವಿಗೆ ₹21,000 ಕೊಡಲಾಗುತ್ತದೆ. ಆದರೆ ಈ ₹21,000 ಹಣ ಬರುವುದು ಹೆಣ್ಣುಮಗುವಿಗೆ 18 ವರ್ಷ ತುಂಬಿದ ನಂತರ. ಇದು ಕುಟುಂಬದಲ್ಲಿ ಜನಿಸುವ ಮೊದಲ ಹೆಣ್ಣುಮಗುವಿಗೆ ಸಿಗುವ ಹಣ ಆಗಿದೆ.
ಎರಡನೇ ಹೆಣ್ಣುಮಗು ಜನಿಸಿದರೆ, 5 ವರ್ಷಗಳಲ್ಲಿ 5 ಸಾವಿರ ಕೊಡಲಾಗುತ್ತದೆ. ಸಮಾಜದಲ್ಲಿ ಹೆಣ್ಣುಮಗು ಗಂಡುಮಗು ಎನ್ನುವ ಬೇಧಭಾವ ಸ್ವಲ್ಪ ಮಟ್ಟಿಗೆ ಆದರೂ ಕಡಿಮೆ ಆಗಲಿ ಎಂದು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಸಿಹಿ ಸುದ್ದಿ! ಪ್ರತಿ ತಿಂಗಳು ರೈತರ ಖಾತೆಗೆ ₹3000 ಜಮಾ, ಸರ್ಕಾರದಿಂದ ರೈತರಿಗಾಗಿ ಹೊಸ ಯೋಜನೆ ಜಾರಿಗೆ
ಬಿಪಿಎಲ್ ಕಾರ್ಡ್ ಹೊಂದಿರುವ, ಬಡತನದಲ್ಲಿ ಇರುವ ಕುಟುಂಬದಲ್ಲಿ ಮೊದಲ ಹೆಣ್ಣುಮಗು ಜನಿಸಿದರೆ, ಮಗುವಿಗೆ 18 ವರ್ಷ ತುಂಬಿದ ನಂತರ LIC ಇಂದ ₹21,000 ಸಿಗುತ್ತದೆ. 2ನೇ ಹೆಣ್ಣುಮಗು ಜನಿಸಿದರೆ, 5 ವರ್ಷಗಳ ಒಳಗೆ ₹5,000 ಸಿಗುತ್ತದೆ.
ಆಪ್ಕಿ ಬೇಟಿ, ಹಮಾರಿ ಬೇಟಿ ಯೋಜನೆ ಜಾರಿಗೆ ಬಂದಿರುವುದು ಹರಿಯಾಣದಲ್ಲಿ. ಅಲ್ಲಿನ ಖಾಯಂ ನಿವಾಸಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು ಹೆಣ್ಣು ಮಗು 2015ರ ಜನವರಿ 22ರಂದು ಅಥವಾ ಆ ದಿನಾಂಕದ ನಂತರ ಹುಟ್ಟಿರಬೇಕು.
ಗರ್ಭಿಣಿ ಆಗಿರುವಾಗಲೇ ಹೆಣ್ಣುಮಕ್ಕಳು, ತಮ್ಮ ಹತ್ತಿರ ಇರುವ ಅಂಗನವಾಡಿ ಕೇಂದ್ರದಲ್ಲಿ ತಮ್ಮ ಹೆಸರನ್ನು ರಿಜಿಸ್ಟರ್ ಮಾಡಿಸಿಕೊಳ್ಳಬೇಕು. ಈ ಯೋಜನೆಗೆ ನೀವು ಆನ್ಲೈನ್ ಮತ್ತು ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅದು ಹೇಗೆ ಎಂದು ತಿಳಿಸುತ್ತೇವೆ ನೋಡಿ..
*ಮನೆಯಲ್ಲಿ ಹೆಣ್ಣುಮಗು ಹುಟ್ಟಿದಾಗ, ಮನೆಯವರು ಅಂಗನವಾಡಿ ಕೇಂದ್ರಕ್ಕೆ ಹೋಗಿ, ಅಲ್ಲಿ ಆಪ್ಕಿ ಬೇಟಿ ಹಮಾರಿ ಬೇಟಿ ಯೋಜನೆಯ ಅರ್ಜಿಯನ್ನು ಪಡೆಯಬೇಕು.
*ಅರ್ಜಿಯಲ್ಲಿ ಕೇಳಿರುವ ಎಲ್ಲವನ್ನು ಓದಿ, ಸರಿಯಾದ ಮಾಹಿತಿಯನ್ನು ಭರ್ತಿ ಮಾಡಬೇಕು.
*ಅರ್ಜಿ ಭರ್ತಿಯಾದ ಬಳಿಕ ಅದರಲ್ಲಿ ಕೇಳಿರುವ ಎಲ್ಲಾ ದಾಖಲೆಗಳನ್ನು ಕೂಡ ಅರ್ಜಿ ಜೊತೆಗೆ ಅಟ್ಯಾಚ್ ಮಾಡಬೇಕು.
*ಅರ್ಜಿ ಭರ್ತಿಯಾದ ನಂತರ ನಿಮ್ಮ ಅರ್ಜಿಯನ್ನು ಅಂಗನವಾಡಿಗೆ ಸಲ್ಲಿಸಬೇಕು.
*ಮಗು ಹುಟ್ಟಿ 1 ತಿಂಗಳ ಒಳಗೆ ಈ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೀಗೆ..
*ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ ಓಪನ್ ಮಾಡಿ.
*ಹೋಮ್ ಪೇಜ್ ನಲ್ಲಿ ಸ್ಕೀಮ್ ಆಪ್ಶನ್ ಸೆಲೆಕ್ಟ್ ಮಾಡಿ, ಮಕ್ಕಳ ಯೋಜನೆಗಳನ್ನು ಆಯ್ಕೆ ಮಾಡಿ.
*ಈ ಲಿಸ್ಟ್ ನಲ್ಲಿ ಆಪ್ಕಿ ಬೇಟಿ, ಹಮಾರಿ ಬೇಟಿ ಯೋಜನೆಯ ಲಿಂಕ್ ಓಪನ್ ಮಾಡಿ
*ಈಗ ಈ ಯೋಜನೆಯ ಅಪ್ಲಿಕೇಶನ್ ಲಿಂಕ್ ಅನ್ನು ಓಪನ್ ಮಾಡಿ
*ಅಪ್ಲಿಕೇಶನ್ ಡೌನ್ಲೋಡ್ ಮಾಡಿ, ಅದನ್ನು ಪ್ರಿಂಟ್ ತೆಗೆದುಕೊಳ್ಳಿ
*ಅಪ್ಲಿಕೇಶನ್ ನಲ್ಲಿ ಕೇಳುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಫಿಲ್ ಮಾಡಿ
*ಕೇಳಿದ ಎಲ್ಲಾ ಡಾಕ್ಯುಮೆಂಟ್ ಗಳನ್ನು ಅಟ್ಯಾಚ್ ಮಾಡಿ
*ಬಳಿಕ ಅರ್ಜಿಯನ್ನು ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಸಲ್ಲಿಸಿ.
*ಈ ರೀತಿಯಲ್ಲಿ ಆನ್ಲೈನ್ ಅರ್ಜಿ ಡೌನ್ಲೋಡ್ ಮಾಡಿ, ಅಪ್ಲಿಕೇಶನ್ ಸಲ್ಲಿಸಬಹುದು.
ಆಪ್ಕಿ ಬೇಟಿ ಹಮಾರಿ ಬೇಟಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು..
*ಹೆಣ್ಣುಮಗುವಿನ ತಾಯಿಯ ಆಧಾರ್ ಕಾರ್ಡ್ (Aadhaar Card)
*ಕುಟುಂಬದ ವಾರ್ಷಿಕ ಇನ್ಕಮ್ ಸರ್ಟಿಫಿಕೇಟ್ (Income Certificate)
*ಅಪ್ಲಿಕೇಶನ್ ಹಾಕುವವರ ಕ್ಯಾಸ್ಟ್ ಸರ್ಟಿಫಿಕೇಟ್ (Caste Certificate)
*ಕುಟುಂಬದ ಬಿಪಿಎಲ್ ಕಾರ್ಡ್ (BPL Ration Card)
*ಹೆಣ್ಣುಮಗುವಿನ ಬರ್ತ್ ಸರ್ಟಿಫಿಕೇಟ್ (Birth Certificate)
*ಹೆಣ್ಣುಮಗುವಿನ ಪಾಸ್ ಪೋರ್ಟ್ ಸೈಜ್ ಫೋಟೋ (Photos)
*ಹೆಣ್ಣುಮಗುವಿನ ತಾಯಿಯ ವಾಸ ಸ್ಥಳ ಪ್ರಮಾಣ ಪತ್ರ. (Address Proof)
ಪ್ರಸ್ತುತ ಈ ಯೋಜನೆ ಹರಿಯಾಣದಲ್ಲಿ ಮಾತ್ರ ಜಾರಿಗೆ ಬಂದಿದೆ.
Aapki Beti Hamari Beti Scheme Benefits Details
Follow us On
Google News |