ಸಿಹಿ ಸುದ್ದಿ! ಪ್ರತಿ ತಿಂಗಳು ರೈತರ ಖಾತೆಗೆ ₹3000 ಜಮಾ, ಸರ್ಕಾರದಿಂದ ರೈತರಿಗಾಗಿ ಹೊಸ ಯೋಜನೆ ಜಾರಿಗೆ

ರೈತರು ನಮ್ಮ ದೇಶದ ಬೆನ್ನೆಲುಬು ಎನ್ನುವ ಮಾತು ನೂರಕ್ಕೆ ನೂರು ಪ್ರತಿಶತ ನಿಜ. ಇಂದಿಗೂ ನಮ್ಮ ಭಾರತ ದೇಶ ಹಚ್ಚಹಸಿರಾಗಿರಲು ಮುಖ್ಯ ಕಾರಣ ರೈತರು. ಇನ್ನು ನಮ್ಮ ರೈತರು ಬೆಳೆ ಬೆಳೆಯಲು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ.
ಹಲವಾರು ಸಮಸ್ಯೆಗಳ ಕಾರಣದಿಂದ ರೈತರ (Farmers) ಬೆಳೆ ಫಲ ಕೊಡದೆ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯಗಳನ್ನು ನಾವು ಕೇಳಿದ್ದೇವೆ. ಇನ್ನು ಇದನ್ನು ತಡೆಯಲು ರೈತರಿಗಾಗಿ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.
ಯೋಜನೆಗಳ ಪೈಕಿ ಪ್ರಧಾನಮಂತ್ರಿ ಕಿಸಾನ್ ಯೋಜನೆ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಯೋಜನೆಯ ಅಡಿಯಲ್ಲಿ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶ ಇದಾಗಿದೆ. ಕಳೆದ ಜುಲೈ ತಿಂಗಳಿನಲ್ಲಿ ಪ್ರಧಾನಮಂತ್ರಿ ಕಿಸಾನ್ ಯೋಜನೆ (PM Kisan Yojana)ಅಡಿಯಲ್ಲಿ ಸುಮಾರು 8 ಕೋಟಿಗೂ ಅಧಿಕ ರೈತರ ಖಾತೆಗೆ 2,000ಗಳ ಹಣವನ್ನು ಸರ್ಕಾರದ ಕಡೆಯಿಂದ ಜಮೆ ಮಾಡಲಾಯಿತು.
ಇದೀಗ ಮೋದಿ ಸರ್ಕಾರವು ರೈತರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಮೋದಿ ಸರ್ಕಾರವು ಇದೀಗ ರೈತರ ಖಾತೆಗೆ ನೇರವಾಗಿ ಸುಮಾರು 3000 ರೂಗಳನ್ನು ಕಳುಹಿಸಲು ಮುಂದಾಗಿದೆ.
ನೀವು ಯೋಜನೆಗಾಗಿ ಪ್ರತ್ಯೇಕ ಅರ್ಜಿಯನ್ನು (Application) ಭರ್ತಿ ಮಾಡುವ ಮೂಲಕ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಇದು ಒಂದು ಪೆನ್ಶನ್ ಸ್ಕೀಮ್ ಆಗಿದ್ದು, ರೈತರು ತಿಂಗಳಿಗೆ 55 ರಿಂದ 200 ರೂಗಳನ್ನು ಖಾತೆಗೆ ಜಮಾ ಮಾಡಬೇಕು, ಈ ಮೂಲಕ ಅವರು ಪ್ರತಿ ತಿಂಗಳು 3000 ಹಣವನ್ನು ಪೆನ್ಶನ್ ರೂಪದಲಿ ಪಡೆಯುತ್ತಾರೆ.
ಈ ಯೋಜನೆಯ ಲಾಭವನ್ನು 18 ರಿಂದ 40 ವರ್ಷದ ಯಾವುದೇ ವ್ಯಕ್ತಿ ಪಡೆಯಬಹುದು. ಇನ್ನು ರೈತರ ವಯಸ್ಸು 60 ವರ್ಷ ಆಗಿದ್ದರೆ, ಅವರು ಪ್ರತಿ ತಿಂಗಳು 3000 ಸಾವಿರ ಪೆನ್ಶನ್ (Pension Scheme) ಪಡೆಯುತ್ತಾರೆ.
ಇನ್ನು ವಯಸ್ಸಿನ ಆದಾರದ ಮೇಲೆ ನೀವು ಪ್ರೀಮಿಯಂ ಅನ್ನು ಪಡೆಯುತ್ತೀರಿ. ದೇಶದ ಹಿರಿಯ ನಾಗರಿಕ ರೈತರಿಗೆ ಪೆನ್ಶನ್ ನೀಡುವ ಸಲುವಾಗಿ ಸರ್ಕಾರ ಈ ಯೋಜನೆಯನ್ನು ಪ್ರಾರಂಭಿಸಿದೆ.
ಇನ್ನು 40 ವರ್ಷದವರೆಗೂ ರೈತರು ಈ ಯೋಜನೆಯ (Scheme) ಲಾಭವನ್ನು ಪಡೆಯಬಹುದು. ಇನ್ನು ವಾರ್ಷಿಕವಾಗಿ ರೈತರು ಈ ಯೋಜನೆಯಿಂದ ಸುಮಾರು 36 ಸಾವಿರ ರೂಗಳನ್ನು ಸರ್ಕಾರದ ಕಡೆಯಿಂದ ಸ್ವೀಕರಿಸುತ್ತಾರೆ.



