ಗುಜರಾತ್ ನಲ್ಲಿ 360 ಕೋಟಿ ಮೌಲ್ಯದ ಹೆರಾಯಿನ್ ವಶ
ಗುಜರಾತ್‌ನ ಅರಬ್ಬಿ ಸಮುದ್ರ ತೀರದಲ್ಲಿರುವ ಜಾಖಾವ್ ಬಂದರಿನಲ್ಲಿ ಭಾರೀ ಪ್ರಮಾಣದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.
ಅಹಮದಾಬಾದ್: ಗುಜರಾತ್‌ನ ಅರಬ್ಬಿ ಸಮುದ್ರ ತೀರದಲ್ಲಿರುವ ಜಾಖಾವ್ ಬಂದರಿನಲ್ಲಿ ಭಾರೀ ಪ್ರಮಾಣದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಕರಾವಳಿ ಗಸ್ತು ಪಡೆಗಳು ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಜಂಟಿಯಾಗಿ ನಡೆಸಿದ ತನಿಖೆಯಲ್ಲಿ 50 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ರೂ. 360 ಕೋಟಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ವೆಬ್ ಸ್ಟೋರೀಸ್
ಇಂದು ಬೆಳಗ್ಗೆ ಪಾಕಿಸ್ತಾನದಿಂದ ಬಂದಿದ್ದ ದೋಣಿಯಲ್ಲಿ ಹೆರಾಯಿನ್ ಸಿಕ್ಕಿಬಿದ್ದಿದೆ ಎಂದು ಅವರು ಹೇಳಿದ್ದಾರೆ. ದೋಣಿಯಲ್ಲಿದ್ದ ಆರು ಮಂದಿಯನ್ನು ಸಹ ಬಂಧಿಸಲಾಗಿದೆ. ಹೆರಾಯಿನ್ ಸಾಗಿಸುತ್ತಿದ್ದ ಬೋಟ್ ಅನ್ನು ಎ1 ಸಾಕರ್ ಬೋಟ್ ಎಂದು ಗುರುತಿಸಲಾಗಿದೆ.
Heroin Seize At Jakhau Port In Gujarat
Indian Coast Guard, in joint ops with ATS Gujarat, apprehended a Pakistani boat Al Sakar with 6 crew members & 50 kg of heroin worth Rs 350 cr market value in the early hrs of today, Oct 8, close to the International Maritime Boundary Line.Boat brought to Jakhau for further probe https://t.co/umLzMRgzUl pic.twitter.com/VKPjRzmy6z
— ANI (@ANI) October 8, 2022
Follow us On
Google News |
Advertisement