ನಿಮ್ಮತ್ರ ಪ್ಯಾನ್ ಕಾರ್ಡ್ ಇದ್ದು ಈ ತಪ್ಪು ಮಾಡಿದ್ರೆ 10,000 ದಂಡ! ಎಚ್ಚರ

ಪ್ಯಾನ್ ಕಾರ್ಡ್ ಸಂಬಂಧಿತ ಮಹತ್ವದ ನಿಯಮ ಬದಲಾವಣೆ. ನೀವು ಹೆಚ್ಚು ಪ್ಯಾನ್ ಕಾರ್ಡ್ ಹೊಂದಿದ್ದರೆ ತಕ್ಷಣವೇ ಒಪ್ಪಿಸಬೇಕು, ಇಲ್ಲದಿದ್ದರೆ ದಂಡ ಅನಿವಾರ್ಯ!

  • ಹಲವು ಪ್ಯಾನ್ ಕಾರ್ಡ್ ಹೊಂದಿರುವವರು ಎಚ್ಚರವಾಗಿರಿ, ದಂಡ ಕಟ್ಟಬೇಕಾಗುತ್ತದೆ!
  • ಪ್ಯಾನ್ 2.0 ಮೂಲಕ ನಕಲಿ ಪ್ಯಾನ್ ಕಾರ್ಡ್‌ಗಳ ನಿವಾರಣೆಗೆ ಕಠಿಣ ಕ್ರಮ!
  • ಆಧುನಿಕ ತಂತ್ರಜ್ಞಾನದಿಂದ ಪ್ಯಾನ್ ಕಾರ್ಡ್ ಗಳ ಪಾರದರ್ಶಕತೆ ಹೆಚ್ಚಿಸಲು ಸರ್ಕಾರದ ನಿರ್ಧಾರ!

PAN Card Rules : ನಿಮ್ಮ ಬಳಿ ಹೆಚ್ಚು ಪ್ಯಾನ್ ಕಾರ್ಡ್ ಇದೆಯಾ? ಹೌದು, ಇತ್ತೀಚೆಗೆ ಆದಾಯ ತೆರಿಗೆ (Income Tax) ಇಲಾಖೆ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಒಬ್ಬ ವ್ಯಕ್ತಿಯ ಬಳಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ (PAN Card) ಇರಲು ಅವಕಾಶವಿಲ್ಲ.

ನೀವು ಇನ್ನೂ ಹೆಚ್ಚುವರಿ ಪ್ಯಾನ್ ಕಾರ್ಡ್ ಹೊಂದಿದ್ದರೆ, ಅದನ್ನು ತಕ್ಷಣವೇ ಒಪ್ಪಿಸಬೇಕು. ಇಲ್ಲದಿದ್ದರೆ ₹10,000 ದಂಡ ವಿಧಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಸ್ಟನ್ನಿಂಗ್ ಲುಕ್, ಅಡ್ವಾನ್ಸ್ ಫೀಚರ್! ಟಿವಿಎಸ್ ಜೂಪಿಟರ್ 110 ಸ್ಕೂಟರ್ ಬಿಡುಗಡೆ

ಪ್ಯಾನ್ 2.0 – ಹೊಸ ನಿಯಮಗಳ ಪರಿಚಯ

ಸರ್ಕಾರ ಈಗ ಪ್ಯಾನ್ 2.0 (PAN 2.0) ಎಂಬ ಹೊಸ ವ್ಯವಸ್ಥೆಯನ್ನು ಜಾರಿ ಮಾಡುತ್ತಿದೆ. ಇದು ನಕಲಿ ಪಾನ್‌ಗಳನ್ನು ಪತ್ತೆಹಚ್ಚಿ, ಪಾರದರ್ಶಕತೆ ಮತ್ತು ಸುರಕ್ಷತೆ ಹೆಚ್ಚಿಸುವ ಉದ್ದೇಶ ಹೊಂದಿದೆ. ಈ ಮೂಲಕ ಪ್ಯಾನ್, ಟ್ಯಾನ್ (TAN – Tax Deduction and Collection Account Number) ನ್ನು ನಿಯಂತ್ರಿಸಲು ಸಹಕಾರಿ ಆಗಲಿದೆ.

ನಕಲಿ ಪ್ಯಾನ್ ಹೊಂದಿರುವವರಿಗೆ ಎಚ್ಚರಿಕೆ!

ನೀವು ನಕಲಿ ಅಥವಾ ಹೆಚ್ಚುವರಿ ಪ್ಯಾನ್ ಕಾರ್ಡ್ ಅನ್ನು ಬಳಸ್ತಿದ್ದರೆ, ಆದಾಯ ತೆರಿಗೆ ಇಲಾಖೆ ಸಕತ್‌ ಗಂಭೀರವಾಗಿ ತೆಗೆದುಕೊಳ್ಳಲಿದೆ. 1961ರ ಆದಾಯ ತೆರಿಗೆ ಕಾಯ್ದೆಯ (Income Tax Act, 1961) ಅನುಸಾರ, ಪ್ಯಾನ್ ಕಾರ್ಡ್‌ಗಳ ದುರುಪಯೋಗಕ್ಕೆ ಸೆಕ್ಷನ್ 272B (Section 272B) ಅಡಿಯಲ್ಲಿ ದಂಡ ವಿಧಿಸಲಾಗುತ್ತದೆ. ಹೆಚ್ಚುವರಿ ಪ್ಯಾನ್ ಅನ್ನು ತಕ್ಷಣವೇ ಸರ್ಕಾರಕ್ಕೆ ಒಪ್ಪಿಸದಿದ್ದರೆ, ಆರ್ಥಿಕ ವ್ಯವಹಾರಗಳಲ್ಲಿ ತೊಂದರೆ ಎದುರಾಗಬಹುದು.

Pan Card Rules

ಇದನ್ನೂ ಓದಿ: ನಿಮ್ಮ ಮನೆ, ಆಸ್ತಿ ದಾಖಲೆ ಪತ್ರಗಳು ಅಸಲಿಯೋ, ನಕಲಿಯೋ ಚೆಕ್ ಮಾಡಿಕೊಳ್ಳಿ

ಪ್ಯಾನ್ ಕಾರ್ಡ್ ಇರೋದು ಏಕೆ ಅಗತ್ಯ?

ಬ್ಯಾಂಕ್ ಖಾತೆ ತೆರೆಯಲು (Bank Account)
₹50,000ಕ್ಕಿಂತ ಹೆಚ್ಚು ಮೊತ್ತದ ಹಣಕಾಸು ವಹಿವಾಟಿಗೆ (Bank Transaction)
ಕ್ರೆಡಿಟ್ ಕಾರ್ಡ್ ಅಥವಾ ಲೋನ್ ಪಡೆಯಲು (Credit Card – Loan)
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು (Income Tax)

ಇದನ್ನೂ ಓದಿ: ನಿಮಗೆ ಪ್ರತಿ ತಿಂಗಳು 5 ಸಾವಿರ ಸಿಗುತ್ತೆ! ಬೇಗ ಈ ಪ್ರಧಾನಮಂತ್ರಿ ಯೋಜನೆಗೆ ಸೇರಿಕೊಳ್ಳಿ

ಹೀಗಾಗಿ, ನಿಮ್ಮ ಬಳಿ ಹೆಚ್ಚುವರಿ ಪ್ಯಾನ್ ಕಾರ್ಡ್ ಇದ್ದರೆ ತಕ್ಷಣವೇ ಅದನ್ನು ಹಿಂತಿರುಗಿಸಿ! ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ತೊಂದರೆಗೆ ಸಿಲುಕುವ ಸಾಧ್ಯತೆ ಇದೆ.

Keep Only One Pan Card, Avoid 10,000 Fine

English Summary▼

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories