ಗೃಹಿಣಿಯರು ಪ್ರತಿ ತಿಂಗಳು 20 ಸಾವಿರ ಗಳಿಸುವ ಅವಕಾಶ! ಕೇಂದ್ರ ಸರ್ಕಾರದ ಬಂಪರ್ ಯೋಜನೆ

ದೇಶದ ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕು, (financial support) ಅವರು ಕೂಡ ಆರ್ಥಿಕವಾಗಿ ಸದೃಢರಾಗಬೇಕು, ತಮ್ಮ ಹಣವನ್ನು ತಾವೇ ದುಡಿದು, ಸ್ವಾವಲಂಬಿಗಳಾಗಿ ಬದುಕಬೇಕು ಎನ್ನುವ ಕಾರಣಕ್ಕೆ ಸರ್ಕಾರ ಈಗಾಗಲೇ ಹಲವಾರು ಯೋಜನೆಗಳನ್ನು (Govt Schemes) ಜಾರಿಗೆ ತಂದಿದೆ. ಸಾಕಷ್ಟು ಜನ ಪ್ರಯೋಜನವನ್ನು ಕೂಡ ಪಡೆದುಕೊಂಡಿದ್ದಾರೆ.
ಕೇಂದ್ರ ಸರ್ಕಾರದ ಲಖಪತಿ ದಿದಿ ಯೋಜನೆ; (lakhpati didi Yojana)
ಹೆಸರು ಸೂಚಿಸುವಂತೆ ದೇಶದಲ್ಲಿ ಇರುವ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡುವ ಯೋಜನೆ ಇದು, ಈಗಾಗಲೇ ಕೌಶಲ್ಯ ತರಬೇತಿ ಪಡೆದುಕೊಂಡು ಮಾಸಿಕ ವೇತನವನ್ನು ಪಡೆದುಕೊಳ್ಳುವಂತಹ ಯೋಜನೆ ಇದಾಗಿದ್ದು ಎರಡು ಕೋಟಿಗೂ ಅಧಿಕ ಮಹಿಳೆಯರಿಗೆ ಸಹಾಯಕವಾಗಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.
ಚಿನ್ನದ ಬೆಲೆ ಸತತ ಏರಿಳಿತ! ಬೆಂಗಳೂರು ಸೇರಿದಂತೆ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಹೇಗಿದೆ ಗೊತ್ತಾ
ಏನಿದು ಲಖಪತಿ ದಿದಿ ಯೋಜನೆ?
ಈ ಯೋಜನೆಯ ಅಡಿಯಲ್ಲಿ ತಮ್ಮದೇ ಆಗಿರುವ ಸ್ವಂತ ವ್ಯವಹಾರವನ್ನು (Own Business) ಆರಂಭಿಸಿ ಮಹಿಳೆಯರು ಮಾಸಿಕ ವೇತನವನ್ನು (monthly income) ಪಡೆದುಕೊಳ್ಳಬಹುದು. ಕಲ್ಯಾಣ ಉದ್ಯಮದ ಅಡಿಯಲ್ಲಿ ಎರಡು ಕೋಟಿಗೂ ಹೆಚ್ಚಿನ ಗೃಹಿಣಿಯರಿಗೆ ತರಬೇತಿ ನೀಡಲು ಸರ್ಕಾರ ಮುಂದಾಗಿದೆ.
20,000 ಪ್ರತಿ ತಿಂಗಳು ಗಳಿಸುವ ಅವಕಾಶ:

ಈ ಯೋಜನೆಯ ಅಡಿಯಲ್ಲಿ ಹಳ್ಳಿಗಳಲ್ಲಿ ಹಾಗೂ ಸಣ್ಣ ಪುಟ್ಟ ಪಟ್ಟಣಗಳಲ್ಲಿ ಮಹಿಳೆಯರಿಗೆ ತರಬೇತಿ (Training) ನೀಡಲಾಗುತ್ತದೆ. ಡ್ರೋನ್ ನಿರ್ವಹಣೆ ತರಬೇತಿಯನ್ನು ನೀಡುವುದರಿಂದ ಮಹಿಳೆಯರು ಮನೆಯಲ್ಲಿಯೇ ಕುಳಿತು 15 ರಿಂದ 20 ಸಾವಿರ ರೂಪಾಯಿಗಳನ್ನು ಸುಲಭವಾಗಿ ಗಳಿಸಬಹುದು.
ನಿಮ್ಮ ಮಗಳ ಮದುವೆ ವಯಸ್ಸಿಗೆ 25 ಲಕ್ಷ ಸಿಗುವ ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ
ಮುಖ್ಯವಾಗಿ ಕೃಷಿಗಾಗಿ ಡ್ರೋನ್ ತರಬೇತಿ ನೀಡಲಾಗುತ್ತದೆ. ಡ್ರೋನ್ ಮೂಲಕ ಕೃಷಿಗೆ ಔಷಧಿ ಸಿಂಪಡಣೆ ಮೊದಲಾದ ತರಬೇತಿ ನೀಡಲಾಗುತ್ತದೆ, ಇದರಿಂದ ಮಹಿಳೆಯರು ತಮ್ಮ ಸ್ವಂತ ಉಪಯೋಗಕ್ಕಾಗಿ ಹಾಗೂ ಇತರರ ಕೃಷಿಗೂ ಕೂಡ ಸಹಾಯ ಮಾಡಬಹುದು, ಇದರಿಂದಾಗಿ ಪ್ರತಿ ತಿಂಗಳು 20 ಸಾವಿರ ರೂಪಾಯಿಗಳ ವರೆಗೆ ಸುಲಭವಾಗಿ ಹಣ ಗಳಿಸಬಹುದಾಗಿದೆ.
ಸಾಕಷ್ಟು ಗ್ರಹಿಣಿಯರು ಮನೆಯಲ್ಲಿಯೇ ಕುಳಿತು ತಮ್ಮ ಸ್ವಂತ ಸಂಪಾದನೆ ಮಾಡಿಕೊಳ್ಳಬಹುದಾದ ಮಾರ್ಗವನ್ನು ಕಲ್ಪಿಸಿ ಕೊಡುವ ಯೋಜನೆ ಇದಾಗಿದೆ. ಎರಡು ಕೋಟಿಗೂ ಅಧಿಕ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ (independent women) ಮಾಡುವ ಈ ಯೋಜನೆ ದೇಶದ ಹಲವು ಗ್ರಾಮೀಣ (village women) ಪ್ರದೇಶದಲ್ಲಿ ವಾಸಿಸುವ ಮಹಿಳೆಯರಿಗೆ ಹೆಚ್ಚು ಪ್ರಯೋಜನಕಾರಿ ಆಗಲಿದೆ.
Lakhpati Didi Scheme for Women for Start Own Business



