2027ರ ಕೇಂದ್ರ ಸರ್ಕಾರಿ ರಜೆ ಪಟ್ಟಿ ಬಿಡುಗಡೆ! ಕಚೇರಿಗಳು ಈ ದಿನಗಳಲ್ಲಿ ಕೆಲಸ ನಿರ್ವಹಿಸುವುದಿಲ್ಲ

2027 Central Government Holiday List: 2027ನೇ ಸಾಲಿನಲ್ಲಿ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅನ್ವಯಿಸುವ ಸಾರ್ವತ್ರಿಕ ರಜೆಗಳ ಪಟ್ಟಿ ಪ್ರಕಟವಾಗಿದೆ. ದೆಹಲಿ ಮತ್ತು ಇತರೆ ರಾಜ್ಯಗಳ ಕಚೇರಿಗಳಿಗೆ ಪ್ರತ್ಯೇಕ ನಿಯಮಗಳಿದ್ದು, ನೌಕರರು ಆಯ್ದುಕೊಳ್ಳಬಹುದಾದ ಐಚ್ಛಿಕ ರಜೆಗಳ ವಿವರಗಳನ್ನೂ ಸರ್ಕಾರ ತಿಳಿಸಿದೆ.

  • 2027ರ ರಜೆಗಳ ಅಧಿಕೃತ ಪಟ್ಟಿ ಪ್ರಕಟ
  • ದೆಹಲಿ ಕಚೇರಿಗಳಿಗೆ 17 ಸಾಮಾನ್ಯ ರಜೆ
  • ನೌಕರರಿಗೆ ಎರಡು ಐಚ್ಛಿಕ ರಜೆಗಳ ಅವಕಾಶ

2027 Central Government Holiday List: 2027ರಲ್ಲಿ ಸರ್ಕಾರಿ ರಜೆಗಳನ್ನು ಯೋಜಿಸಿಕೊಳ್ಳಲು ಕಾಯುತ್ತಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಮುಂದಿನ ವರ್ಷದ ರಜೆಗಳ ಕ್ಯಾಲೆಂಡರ್ (Holiday Calendar) ಬಿಡುಗಡೆ ಮಾಡಿದೆ. ಇದರಲ್ಲಿ ಸಾಮಾನ್ಯ ರಜೆಗಳು, ಐಚ್ಛಿಕ ರಜೆಗಳು ಹಾಗೂ ನಿರ್ಬಂಧಿತ ರಜೆಗಳಿಗೆ ಸಂಬಂಧಿಸಿದ ನಿಯಮಗಳನ್ನು ವಿವರಿಸಲಾಗಿದೆ.

ದೆಹಲಿ ಹೊರತುಪಡಿಸಿ ದೇಶದ ವಿವಿಧ ರಾಜ್ಯಗಳಲ್ಲಿರುವ ಕೇಂದ್ರ ಸರ್ಕಾರಿ ಕಚೇರಿಗಳಿಗೆ 14 ಸಾಮಾನ್ಯ ರಜೆಗಳನ್ನು ಕಡ್ಡಾಯವಾಗಿ ನಿಗದಿಪಡಿಸಲಾಗಿದೆ. ಇದರ ಜೊತೆಗೆ ಸರ್ಕಾರ ಸೂಚಿಸಿರುವ 12 ಹಬ್ಬಗಳ ಪಟ್ಟಿಯಿಂದ ಆಯಾ ರಾಜ್ಯಗಳ ಕೇಂದ್ರ ಸರ್ಕಾರಿ ನೌಕರರ ಕಲ್ಯಾಣ ಸಮನ್ವಯ ಸಮಿತಿಗಳು ಮೂರು ರಜೆಗಳನ್ನು ಆಯ್ಕೆ ಮಾಡಬೇಕು. ಒಮ್ಮೆ ಈ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದ ಬಳಿಕ ಬದಲಾವಣೆ ಮಾಡುವಂತಿಲ್ಲ.

ದೆಹಲಿ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಒಟ್ಟು 17 ಸಾಮಾನ್ಯ ರಜೆಗಳು ಅನ್ವಯಿಸುತ್ತವೆ. ಅಲ್ಲಿನ ನೌಕರರು ಹೆಚ್ಚುವರಿಯಾಗಿ 32 ನಿರ್ಬಂಧಿತ ರಜೆಗಳ (Restricted Holidays) ಪಟ್ಟಿಯಿಂದ ತಮಗೆ ಅನುಕೂಲವಾದ ಯಾವುದೇ ಎರಡು ದಿನಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಪ್ರತ್ಯೇಕ ರಜೆ ನಿಯಮಗಳಿವೆ. ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಾಂಧಿ ಜಯಂತಿ ಸೇರಿದಂತೆ ಗರಿಷ್ಠ 16 ರಜೆಗಳನ್ನು ನೀಡಲಾಗುತ್ತದೆ. ಬ್ಯಾಂಕ್‌ಗಳ ರಜೆ ವಿಚಾರದಲ್ಲಿ ಕೇಂದ್ರ ಹಣಕಾಸು ಇಲಾಖೆಯ ಪ್ರತ್ಯೇಕ ಮಾರ್ಗಸೂಚಿಗಳು ಅನ್ವಯವಾಗಲಿವೆ.

ಇನ್ನು ಹಬ್ಬದ ದಿನಗಳು ಭಾನುವಾರ ಅಥವಾ ಈಗಾಗಲೇ ನಿಗದಿಯಾಗಿರುವ ವಾರದ ರಜೆಯಂದು ಬಂದರೆ ಮತ್ತೊಂದು ದಿನವನ್ನು ಬದಲಿಯಾಗಿ ನೀಡುವುದಿಲ್ಲ. ಒಂದೇ ದಿನ ಎರಡು ಹಬ್ಬಗಳು ಬಂದರೂ ಇದೇ ನಿಯಮ ಮುಂದುವರಿಯಲಿದೆ.

ಚಂದ್ರನ ದರ್ಶನದ ಆಧಾರದ ಮೇಲೆ ಈದ್-ಉಲ್-ಫಿತರ್, ಬಕ್ರೀದ್, ಮೊಹರಂ ಮತ್ತು ಮಿಲಾದ್-ಉನ್-ನಬಿ ಹಬ್ಬಗಳ ದಿನಾಂಕಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ಸಂಬಂಧಪಟ್ಟ ಸಮಿತಿಗಳು ಹಾಗೂ ಕೇಂದ್ರ ಸರ್ಕಾರ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿವೆ.

2027ರಲ್ಲಿ ದೀಪಾವಳಿ (Diwali) ಅಕ್ಟೋಬರ್ 29ರ ಶುಕ್ರವಾರದಂದು ಬರಲಿದೆ ಎಂದು ಪ್ರಕಟಿತ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಕೆಲವು ರಾಜ್ಯಗಳಲ್ಲಿ ನರಕ ಚತುರ್ದಶಿಯಂದೇ ದೀಪಾವಳಿ ಆಚರಿಸುವ ಹಿನ್ನೆಲೆಯಲ್ಲಿ, ಅಲ್ಲಿನ ಕೇಂದ್ರ ಸರ್ಕಾರಿ ಕಚೇರಿಗಳು ಆ ದಿನ ರಜೆ ನೀಡುವ ಅವಕಾಶವೂ ಇದೆ.

2027ರ ಸಾಮಾನ್ಯ ರಜೆಗಳ ಪಟ್ಟಿ

ಜನವರಿ 26, ಮಂಗಳವಾರ – ಗಣರಾಜ್ಯೋತ್ಸವ
ಮಾರ್ಚ್ 10, ಬುಧವಾರ – ಈದ್-ಉಲ್-ಫಿತರ್
ಮಾರ್ಚ್ 23, ಮಂಗಳವಾರ – ಹೋಳಿ
ಮಾರ್ಚ್ 26, ಶುಕ್ರವಾರ – ಗುಡ್ ಫ್ರೈಡೇ
ಏಪ್ರಿಲ್ 15, ಗುರುವಾರ – ಶ್ರೀರಾಮನವಮಿ
ಏಪ್ರಿಲ್ 19, ಸೋಮವಾರ – ಮಹಾವೀರ ಜಯಂತಿ
ಮೇ 17, ಸೋಮವಾರ – ಈದ್-ಉಲ್-ಜುಹಾ (ಬಕ್ರೀದ್)
ಮೇ 20, ಗುರುವಾರ – ಬುದ್ಧ ಪೂರ್ಣಿಮೆ
ಜೂನ್ 16, ಬುಧವಾರ – ಮೊಹರಂ
ಆಗಸ್ಟ್ 15, ಭಾನುವಾರ – ಸ್ವಾತಂತ್ರ್ಯ ದಿನಾಚರಣೆ
ಆಗಸ್ಟ್ 15, ಭಾನುವಾರ – ಮಿಲಾದ್-ಉನ್-ನಬಿ
ಆಗಸ್ಟ್ 25, ಬುಧವಾರ – ಶ್ರೀಕೃಷ್ಣ ಜನ್ಮಾಷ್ಟಮಿ
ಅಕ್ಟೋಬರ್ 2, ಶನಿವಾರ – ಮಹಾತ್ಮ ಗಾಂಧಿ ಜಯಂತಿ
ಅಕ್ಟೋಬರ್ 9, ಶನಿವಾರ – ವಿಜಯದಶಮಿ
ಅಕ್ಟೋಬರ್ 29, ಶುಕ್ರವಾರ – ದೀಪಾವಳಿ
ನವೆಂಬರ್ 14, ಭಾನುವಾರ – ಗುರುನಾನಕ್ ಜಯಂತಿ
ಡಿಸೆಂಬರ್ 25, ಶನಿವಾರ – ಕ್ರಿಸ್‌ಮಸ್

ರಾಜ್ಯಗಳ ಕೇಂದ್ರ ಸರ್ಕಾರಿ ಕಚೇರಿಗಳಿಗೆ 12 ಐಚ್ಛಿಕ ರಜೆಗಳು

ಈ ಕೆಳಗಿನ ಪಟ್ಟಿಯಿಂದ ಮೂರು ರಜೆಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.

ದಸರಾ ಹೆಚ್ಚುವರಿ ದಿನ
ಹೋಳಿ
ಜನ್ಮಾಷ್ಟಮಿ
ಶ್ರೀರಾಮನವಮಿ
ಮಹಾಶಿವರಾತ್ರಿ
ವಿನಾಯಕ ಚತುರ್ಥಿ
ಮಕರ ಸಂಕ್ರಾಂತಿ
ರಥಯಾತ್ರೆ
ಓಣಂ
ಪೊಂಗಲ್
ವಸಂತ ಪಂಚಮಿ
ಯುಗಾದಿ / ಗುಡಿ ಪಾಡ್ವಾ / ಬಿಹು / ವೈಶಾಖಿ / ಛತ್ ಪೂಜೆ / ಕರ್ವಾ ಚೌತ್

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories