ವೋಟರ್ ಐಡಿಯಲ್ಲಿ ಕೂಡಲೇ ಈ ಬದಲಾವಣೆ ಮಾಡಿಕೊಳ್ಳಿ! ಹೊಸ ಅರ್ಜಿ, ತಿದ್ದುಪಡಿಗೂ ಅವಕಾಶ
ನಮ್ಮ ದೇಶದಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬ ಯುವಕ ಯುವತಿಯರು ಮತದಾನದ ಹಕ್ಕನ್ನು (Voting) ಪಡೆಯುತ್ತಾರೆ. ಪ್ರತಿಯೊಂದು ಚುನಾವಣೆಯಲ್ಲಿ (election) ಮತದಾನ ಮಾಡಬೇಕು ಅಂದ್ರೆ ಕೇವಲ 18 ವರ್ಷ ತುಂಬಿದರೆ ಮಾತ್ರ ಸಾಲೋಲ್ಲ, ನಿಮ್ಮ ಬಳಿ ವೋಟರ್ ಐಡಿ (voter ID) ಅಥವಾ ಮತದಾರರ ಚೀಟಿ ಇರಲೇಬೇಕು.
ಒಂದು ವೇಳೆ ನೀವು ವೋಟರ್ ಐಡಿ ಹೊಂದಿಲ್ಲ ಎಂದರೆ ನಿಮಗೆ ಮತದಾನ ಮಾಡುವ ಹಕ್ಕು ಇರುವುದಿಲ್ಲ.
ಮುಂದಿನ ವರ್ಷ ನಡೆಯಲಿರುವ ಚುನಾವಣೆಗಾಗಿ ನೀವು ನಿಮ್ಮ ಹಕ್ಕನ್ನು ಚಲಾಯಿಸಬೇಕು ಎಂದುಕೊಂಡಿದ್ದರೆ ನಿಮ್ಮ ಬಳಿ ಮತದಾರರ ಗುರುತಿನ ಚೀಟಿ (voter ID) ಅಥವಾ ವೋಟರ್ ಐಡಿ ಇರಲೇಬೇಕು
ಸದ್ಯ ಸರ್ಕಾರ ಹೊಸದಾಗಿರುವ ವೋಟರ್ ಐಡಿ (Apply Voter ID Card) ಪಡೆದುಕೊಳ್ಳಲು ಹಾಗೂ ಹೀಗಿರುವ ವೋಟರ್ ಐಡಿ ಅಲ್ಲಿ ಅಗತ್ಯ ಇರುವ ತಿದ್ದುಪಡಿ (Voter ID Correction) ಮಾಡಿಕೊಳ್ಳಲು ಅವಕಾಶ ನೀಡಿದೆ.
ಈ ಯೋಜನೆ ಮೂಲಕ ಎಲ್ಲರಿಗೂ ಸಿಗಲಿದೆ 2 ಲಕ್ಷ ಉಚಿತ ಹಣ! ಕೇಂದ್ರ ಸರ್ಕಾರದ ಸ್ಕೀಮ್
ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು ಅಗತ್ಯ!
ಮತದಾರರ ಪಟ್ಟಿಯಲ್ಲಿ ಅಗತ್ಯ ಇರುವವರ ಹೆಸರು ಸೇರಿಸಲು ಹೊಸ ಅಭಿಯಾನ ಆರಂಭಿಸಲಾಗಿದೆ. ಈ ಅಭಿಯಾನದ ಅಡಿಯಲ್ಲಿ ಅಗತ್ಯ ಇರುವವರು ತಮ್ಮ ವೋಟರ್ ಐಡಿಯಲ್ಲಿ ಬೇಕಾಗಿರುವ ಬದಲಾವಣೆ ಮಾಡಿಕೊಳ್ಳಬಹುದು.
ಜೊತೆಗೆ ವೋಟರ್ ಲಿಸ್ಟ್ ನಲ್ಲಿ ತಮ್ಮ ಹೆಸರನ್ನು ಸೇರ್ಪಡೆಗೊಳಿಸಬಹುದು ಅಥವಾ ಯಾರಾದರೂ ಮೃತಪಟ್ಟಿದ್ದರೆ ಅಂತವರ ಹೆಸರನ್ನು ತೆಗೆದುಹಾಕಬಹುದು. ಬೂತ್ ಮಟ್ಟದ ಅಧಿಕಾರಿ ಅಥವಾ ಮತದಾರರ ನೋಂದಾವಣಅಧಿಕಾರಿ ಕಚೇರಿಗೆ ಹೋಗಿ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.
ವೋಟರ್ ಐ ಡಿ ತಿದ್ದುಪಡಿಗೆ ದಿನಾಂಕ ಫಿಕ್ಸ್! (Voter ID correction)
ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಮತದಾನದ ಗುರುತಿನ ಚೀಟಿ ಬದಲಾವಣೆ ಹಾಗೂ ಹೆಸರು ಸೇರ್ಪಡೆಗೆ ಅವಕಾಶ ಮಾಡಿಕೊಡಲಾಗಿದೆ. ನೀವು ವೋಟರ್ ಹೆಲ್ಪ್ ಲೈನ್ ಅಪ್ಲಿಕೇಶನ್ (helpline application) ಆಗಿರುವ https://voters.eci.gov.in ಮೂಲಕ ಹೆಸರು ಬದಲಾವಣೆ ಹೆಸರು ಸೇರ್ಪಡೆ ಅಥವಾ ವಿಳಾಸ ಬದಲಾವಣೆ ಮೊದಲಾದ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು ಅಥವಾ ನೀವೇ ಸ್ವತ: ನೋಂದಾವಣಿ ಅಧಿಕಾರಿ ಕಚೇರಿಗೆ ಹೋಗಿ ತಿದ್ದುಪಡಿ ಮಾಡಿಕೊಂಡು ಬರಬಹುದು.
ವೈರಲ್ ಆಯ್ತು ಪ್ರಧಾನಿ ನರೇಂದ್ರ ಮೋದಿ ಅವರ ಬ್ಯಾಂಕ್ ಬ್ಯಾಲೆನ್ಸ್! ಎಷ್ಟಿದೆ ಗೊತ್ತಾ?
ಯಾವ ದಿನ ತಿದ್ದುಪಡಿಗೆ ಅವಕಾಶ?
ನವೆಂಬರ್ 18 ಮತ್ತು 19 ಅಂದರೆ ಶನಿವಾರ ಹಾಗೂ ಭಾನುವಾರ ತಿದ್ದುಪಡಿ ಮಾಡಿಕೊಳ್ಳಬಹುದು. ಅದೇ ರೀತಿ ಡಿಸೆಂಬರ್ ತಿಂಗಳ ಎರಡು ಹಾಗೂ ಮೂರನೇ ತಾರೀಕು ಶನಿವಾರ ಮತ್ತು ಭಾನುವಾರ ಈ ದಿನಾಂಕದಂದು ಮತದಾರರ ಪಟ್ಟಿಯಲ್ಲಿ ಅಗತ್ಯ ಇರುವ ತಿದ್ದುಪಡಿ ಹಾಗೂ ಹೆಸರು ಸೇರ್ಪಡೆ ಮಾಡಿಕೊಳ್ಳಲು ಸರಕಾರ ಅವಕಾಶ ನೀಡಿದೆ.
ಬೆಳಿಗ್ಗೆ 10ರಿಂದ ಸಂಜೆ 5:00 ವರೆಗೆ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಹಾಗಾಗಿ ಮುಂಬರುವ ಚುನಾವಣೆಗಳಲ್ಲಿ ನೀವು ಕೂಡ ನಿಮ್ಮ ಹಕ್ಕನ್ನು ಚಲಾಯಿಸಿ ನಿಮಗೆ ಸರಿ ಎನಿಸುವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಅಂದ್ರೆ ನೀವು ನಿಮ್ಮ ಮತ ಚಲಾವಣೆ ಮಾಡಲೇಬೇಕು
ಹೀಗೆ ಮತ ಚಲಾವಣೆ ಮಾಡಲು ಅಗತ್ಯ ಇರುವ ತಿದ್ದುಪಡಿಗಳನ್ನು ವೋಟರ್ ಐಡಿಯಲ್ಲಿ ಮಾಡಿಕೊಳ್ಳಲೇಬೇಕು ಅಥವಾ ನಿಮ್ಮ ಹೆಸರನ್ನ ವೋಟರಲ್ಲಿ ಸೇರಿಸಬೇಕು ಇದು ಕಡ್ಡಾಯವಾಗಿರುವುದರಿಂದ ಮೇಲೆ ತಿಳಿಸಿದ ದಿನಾಂಕದಂದು ಅಗತ್ಯ ಇರುವ ತಿದ್ದುಪಡಿ ಮಾಡಿಕೊಳ್ಳಿ.
Make this change in Voter ID, New application, Correction also allowed