ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ, 5 ವರ್ಷಗಳ ನಂತರ ಸಿಕ್ಕಿದ್ದು 31 ಲಕ್ಷ ಪರಿಹಾರ

Story Highlights

ಐದು ವರ್ಷಗಳ ತನಿಖೆ ನಡೆಸಿ ನ್ಯಾಯಮಂಡಳಿ ನವೆಂಬರ್ 12 ರಂದು ತೀರ್ಪು ನೀಡಿದೆ, ಆದಾಯದ ನಷ್ಟಕ್ಕೆ ಮತ್ತು ವೈದ್ಯಕೀಯ ವೆಚ್ಚಕ್ಕೆ ಸೇರಿ 31 ಲಕ್ಷ ಪರಿಹಾರಕ್ಕೆ ಆದೇಶಿಸಿದೆ

ಮುಂಬೈ (Mumbai): ಸ್ಕೂಟರ್‌ನಲ್ಲಿ (Scooter) ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ವೇಗವಾಗಿ ಬಂದ ಕಾರು (Car) ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಸ್ಕೂಟರ್ ಸವಾರ ತೀವ್ರವಾಗಿ ಗಾಯಗೊಂಡಿದ್ದರು. ಇದೆ ವಿಚಾರವಾಗಿ ಆತ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.

ವಿಚಾರಣೆ ನಡೆಸಿದ ಮೋಟಾರ್ ಅಪಘಾತ ಕ್ಲೇಮ್ಸ್ ಟ್ರಿಬ್ಯೂನಲ್, ವ್ಯಕ್ತಿಗೆ 31 ಲಕ್ಷ ರೂ.ಗೂ ಹೆಚ್ಚು ಪರಿಹಾರವನ್ನು ನೀಡಿ ಆದೇಶಿಸಿದೆ. ಈ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಕಾರ್ತಿಕ ಮಾಸದಲ್ಲಿ ಮನೆಗೆ ಕೋಳಿ ಮಾಂಸ ತಂದ ವ್ಯಕ್ತಿ ಕೊಲೆ

ಮಾರ್ಚ್ 31, 2019 ರಂದು, 38 ವರ್ಷದ ಗೋಪಿಚಂದ್ ಶಂಕರ್ ಪಾಟೀಲ್ ಎಂಬ ಸಣ್ಣ ವ್ಯಾಪಾರಿ, ಸ್ಕೂಟರ್ ನಲ್ಲಿ (Scooter) ಹೋಗುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಪೊಲೀಸರು ಕಾರು ಚಾಲಕನ (Car Driver) ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಅಜಾಗರೂಕ ಚಾಲನೆ ಮತ್ತು ಇತರ ಅಪರಾಧಗಳ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಆಂಬ್ಯುಲೆನ್ಸ್ ಗೆ ದಾರಿ ಕೊಡದ ಕಾರು ಮಾಲೀಕ, ಬರೋಬ್ಬರಿ 2.5 ಲಕ್ಷ ದಂಡ ವಿಧಿಸಿದ ಪೊಲೀಸರು

ಆದರೆ, ಗೋಪಿಚಂದ್ ಶಂಕರ್ ಪಾಟೀಲ್ ಅವರು ಈ ರಸ್ತೆ ಅಪಘಾತದಿಂದ ಶೇ 40 ರಷ್ಟು ಅಂಗವೈಕಲ್ಯಕ್ಕೆ ತುತ್ತಾಗಿದ್ದರು, ವಾರ್ಷಿಕ 5 ಲಕ್ಷ ಆದಾಯ ಗಳಿಸುತ್ತಿದ್ದ ಆತ ಹಾಸಿಗೆ ಹಿಡಿಯಬೇಕಾಯಿತು. ಪರಿಹಾರಕ್ಕಾಗಿ ಅವರು ಮೋಟಾರು ಅಪಘಾತ ಕ್ಲೈಮ್ಸ್ ಟ್ರಿಬ್ಯೂನಲ್ ಅನ್ನು ಸಂಪರ್ಕಿಸಿದ್ದರು.

ಮತ್ತೊಂದೆಡೆ, ಐದು ವರ್ಷಗಳ ತನಿಖೆ ನಡೆಸಿ ನ್ಯಾಯಮಂಡಳಿ ನವೆಂಬರ್ 12 ರಂದು ತೀರ್ಪು ನೀಡಿದೆ. ಪರಿಹಾರ ನೀಡುವಂತೆ ಆದೇಶಿಸಿದೆ, ಭವಿಷ್ಯದ ಆದಾಯದ ನಷ್ಟಕ್ಕೆ ಮತ್ತು ವೈದ್ಯಕೀಯ ವೆಚ್ಚಕ್ಕೆ ಸೇರಿ 31 ಲಕ್ಷ ಪರಿಹಾರಕ್ಕೆ ಆದೇಶಿಸಿದೆ

Man Injured In Road Accident In 2019 Gets Rs 31 Lakh Compensation After 5 Years

Related Stories