ಡೈರಿ ಫಾರ್ಮ್ ಸ್ಥಾಪಿಸಲು ಸರ್ಕಾರದ ಸಹಾಯ ಧನ! 90% ಸಬ್ಸಿಡಿ ಸಿಗುವ ಯೋಜನೆಗೆ ಇಂದೇ ಅಪ್ಲೈ ಮಾಡಿ
ರೈತರು, ಯುವಕರು ಡೈರಿ ಶುರು ಮಾಡಿ, ಪಶು ಸಂಗೋಪನೆ ಇಂದ ಉತ್ತಮವಾಗಿ ಹಣ ಗಳಿಸಬಹುದು ಎಂದು ಈ ಒಂದು ಅವಕಾಶವನ್ನು ಜನರಿಗಾಗಿ ಕೊಡಲಾಗುತ್ತಿದೆ. ಹೈಟೆಕ್ ಡೈರಿ ತೆರೆಯಲು ಸರ್ಕಾರವೇ ನಿಮಗೆ ಸಹಾಯ ಮಾಡುತ್ತದೆ.
ಸರ್ಕಾರವು ನಮ್ಮ ದೇಶದ ಜನರು ಆರ್ಥಿಕವಾಗಿ ಸಮರ್ಥವಾಗಿರಬೇಕು ಯಾವುದೇ ತೊಂದರೆ ಅನುಭವಿಸಬಾರದು ಎಂದು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು ಅವುಗಳ ಮೂಲಕ ಸಹಾಯ ಮಾಡುತ್ತಿದೆ. ಅದೇ ರೀತಿ ಈಗ ಜನರು ಮಿನಿ ಡೈರಿ ಸ್ಥಾಪಿಸಲು (Dairy Farm Subsidy) ಜನರಿಗೆ ಹರಿಯಾಣ ಸರ್ಕಾರ ಸಹಾಯ ಮಾಡಲಿದ್ದು, ಇದಕ್ಕಾಗಿ ರೈತರಿಗೆ 90% ಸಬ್ಸಿಡಿ ಸಿಗುತ್ತದೆ. ಇದರ ವಿಶೇಷತೆಗಳ ಬಗ್ಗೆ ತಿಳಿಸುತ್ತೇವೆ ನೋಡಿ..
ಈ ಯೋಜನೆ ಪ್ರಸ್ತುತ ಹರಿಯಾಣ ರಾಜ್ಯದಲ್ಲಿ ಮಾತ್ರ ಜಾರಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಇತರ ರಾಜ್ಯಗಳಲ್ಲಿಯೂ ವಿಸ್ತರಿಸುವ ನಿರೀಕ್ಷೆ ಇದೆ. ಆದ್ದರಿಂದ ಇತರ ರಾಜ್ಯದ ಜನರು ಗೊಂದಲಕ್ಕೆ ಒಳಗಾಗ ಬೇಡಿ. ಇನ್ನು ಕರ್ನಾಟಕದಲ್ಲೂ ಇದೆ ರೀತಿಯ ಹಲವು ಯೋಜನೆಗಳನ್ನು ರೈತರಿಗಾಗಿ ನೀಡಲಾಗುತ್ತಿದೆ.
ಈ ಯೋಜನೆಯನ್ನು ಹಳ್ಳಿ ಭಾಗದ ಜನರಿಗೆ ಉಪಯೋಗ ಆಗಲಿ ಎಂದು ತೆರೆಯಲಾಗಿದೆ. ರೈತರು (Farmers) ಕೃಷಿ ಜೊತೆಗೆ ಪಶುಸಂಗೋಪನೆ ಸಹ ಉತ್ತಮವಾದ ಆದಾಯ ಕೂಡುವ ಉದ್ಯಮವಾಗಿದೆ.
ಹಾಗಾಗಿ ರೈತರು, ಯುವಕರು ಡೈರಿ ಶುರು ಮಾಡಿ (Dairy Farm Subsidy Scheme), ಪಶು ಸಂಗೋಪನೆ ಇಂದ ಉತ್ತಮವಾಗಿ ಹಣ ಗಳಿಸಬಹುದು ಎಂದು ಈ ಒಂದು ಅವಕಾಶವನ್ನು ಜನರಿಗಾಗಿ ಕೊಡಲಾಗುತ್ತಿದೆ. ಹೈಟೆಕ್ ಡೈರಿ (Hi-Tech Dairy) ತೆರೆಯಲು ಸರ್ಕಾರವೇ ನಿಮಗೆ ಸಹಾಯ ಮಾಡುತ್ತದೆ. ಹಳ್ಳಿ ಭಾಗದಲ್ಲಿ ಉದ್ಯೋಗಾವಕಾಶ ಹೆಚ್ಚಾಗಬೇಕು, ಕೃಷಿ ಕ್ಷೇತ್ರದಲ್ಲಿ ಇರುವವರಿಗೆ ಒಳ್ಳೆಯ ಆದಾಯ ಬರಬೇಕು ಎಂದು ಈ ಸಹಾಯ ಮಾಡುತ್ತಿದೆ ಸರ್ಕಾರ.
ಸಿಹಿ ಸುದ್ದಿ! ಮಳೆಯಿಂದ ಬೆಳೆ ನಾಶ ಆಗಿರುವ ರೈತರಿಗೆ ಸರ್ಕಾರದಿಂದ ₹15,000 ಪರಿಹಾರ, ಇಂದೇ ಅರ್ಜಿ ಸಲ್ಲಿಸಿ
ಒಂದು ವೇಳೆ ನಿಮಗೂ ಈ ಡೈರಿ ತೆರೆಯುವ ಆಸಕ್ತಿ ಇದ್ದರೆ. ಇಂದೇ ನೀವು ಇದಕ್ಕಾಗಿ ಅರ್ಜಿ ಸಲ್ಲಿಸಬಹುದು. ರಾಜ್ಯದ ಗ್ರಾಮೀಣ ಭಾಗದ ಯುವಕರಿಗೆ ವಿಶೇಷವಾಗಿ ಈ ಯೋಜನೆಯನ್ನು ಶುರು ಮಾಡಲಾಗಿದ್ದು, ಇದಕ್ಕಾಗಿ ನೀವು ಅರ್ಜಿ ಸಲ್ಲಿಸಬಹುದು.
ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಜೊತೆ ಸೇರಿ ಗ್ರಾಮೀಣ ಭಾಗದ ರೈತರಿಗಾಗಿ ವಿಶೇಷವಾಗಿ ತಂದಿರುವ ಯೋಜನೆ ಇದು. ಅವರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡಬೇಕು ಎಂದು ಮಿನಿ ಡೈರಿ ಹೈಟೆಕ್ ಡೈರಿ ತೆರೆಯುವ ಅವಕಾಶ ನೀಡಲಾಗಿದೆ.
ಇದು ಡೈರಿ ಫಾರ್ಮ್ ಸಬ್ಸಿಡಿ ಯೋಜನೆ ಹಾಗೂ ಪಶುಸಂಗೋಪನ ಇಲಾಖೆ ಈ ಯೋಜನೆಯನ್ನು ಜಾರಿಗೆ ತಂದಿದೆ. ಸಿಎಂ ಕಿ ವಿಶೇಶ್ ಚರ್ಚಾದಲ್ಲಿ ಇದರ ಬಗ್ಗೆ ಮಾಹಿತಿ ನೀಡಲಾಯಿತು. ಈ ಯೋಜನೆಯಲ್ಲಿ ನಿಮಗೆ ಹಾಲು ಕೊಡುವ 10 ಪ್ರಾಣಿಗಳ ಮಿನಿ ಡೈರಿ ಶುರು ಮಾಡುವುದಕ್ಕೆ 25% ಅಷ್ಟು ಸಹಾಯ ಸರ್ಕಾರದಿಂದ ಸಿಗುತ್ತದೆ..
ರಾಜ್ಯ ಸರ್ಕಾರವು ಪಶು ಸಂಗೋಪನೆ ಇಲಾಖೆ ಜೊತೆ ಸೇರಿ ಪಶುಧನ್ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜೆನೆಯನ್ನು ಜಾರಿಗೆ ತಂದಿದೆ. ಈಗಾಗಲೇ 1.54 ಲಕ್ಷ ಪಶು ರೈತರಿಗೆ ಈ ಕಾರ್ಡ್ ನ ಸೌಲಭ್ಯ ನೀಡಲಾಗಿದೆ.
ಹಾಗೆಯೇ ಹಾಲು ಉತ್ಪಾದನೆ ಹೆಚ್ಚಿಸುವುದಕ್ಕಾಗಿ, ರೈತರಿಗೆ ಪ್ರೋತ್ಸಾಹ ಕೊಡುವುದಕ್ಕಾಗಿ ಸಹಾಯಧನ ಕೊಡುತ್ತಿದೆ, ಒಂದು ಲೀಟರ್ ಹಾಲಿಗೆ 5 ರೂಪಾಯಿ ಪ್ರೋತ್ಸಾಹಧನ ಸಿಗುತ್ತಿದೆ. ಅಷ್ಟೇ ಅಲ್ಲದೆ ಹೈನುಗಾರಿಕೆಗು ಕೂಡ ಸರ್ಕಾರದ ಸಹಾಯ ಸಿಗುತ್ತಿದೆ..
ಈ ಯೋಜನೆಗಳು ಪ್ರಸ್ತುತ ಹರಿಯಾಣ ರಾಜ್ಯದಲ್ಲಿ ಜಾರಿಗೆ ಬಂದಿದೆ. ಹರಿಯಾಣ ರಾಜ್ಯಕ್ಕೆ ಸೇರಿದ ಎಲ್ಲಾ ರೈತರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ, ಸರ್ಕಾರದ ಸೌಲಭ್ಯ ಪಡೆಯಬಹುದು.
Mini Dairy Farm Subsidy Scheme in Haryana Govt
Follow us On
Google News |