India NewsBusiness News

ಮನೆ, ಆಸ್ತಿ ಹಾಗೂ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 1ರಿಂದ ಹೊಸ ನಿಯಮ

ಆಸ್ತಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ದೇಶದಲ್ಲಿ ಸಾಕಷ್ಟು ಕಾನೂನುಗಳು (law for property) ಇವೆ, ಜೊತೆಗೆ ಹಲವು ನಿಯಮಗಳು ಆಗಾಗ ಬದಲಾಗುತ್ತಾ ಇರುತ್ತದೆ. ಇದೀಗ ಕೆಲವು ದಿನಗಳ ಹಿಂದೆ ಎಲ್ಲಾ ಕಡೆ ಚರ್ಚೆಗೆ ಕಾರಣವಾಗಿದ್ದ ಆಸ್ತಿ ವಿಚಾರದ ವಿಷಯಕ್ಕೆ ಸಂಬಂಧಪಟ್ಟಂತೆ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Indian Reserve Bank) ಬ್ಯಾಂಕ್ ಗಳಿಗೆ ಹೊಸ ಸೂಚನೆ ಒಂದನ್ನು ಕೊಟ್ಟಿದೆ.

ಡಿಸೆಂಬರ್ (December month) ಒಂದರಿಂದಲೇ ಈ ಹೊಸ ನಿಯಮ ಎಲ್ಲಾ ಬ್ಯಾಂಕುಗಳಿಗೂ (Bank) ಕೂಡ ಅನ್ವಯವಾಗಲಿದೆ.

New rules regarding property, land registration

ಪೋಸ್ಟ್ ಆಫೀಸ್ ಸ್ಕೀಮ್! ಕೇವಲ ₹5000 ಹೂಡಿಕೆಗೆ ಕೆಲವೇ ದಿನಗಳಲ್ಲಿ ಸಿಗುತ್ತೆ ₹8.5 ಲಕ್ಷ ರೂಪಾಯಿ

ಆಸ್ತಿ ದಾಖಲೆಗಳು ಕಾಣೆಯಾದರೆ ಬ್ಯಾಂಕುಗಳು ಏನು ಮಾಡಬೇಕು?

ಕೆಲವು ಬ್ಯಾಂಕ್ ಗಳ ನಿರ್ಲಕ್ಷದಿಂದ ಬ್ಯಾಂಕ್ ಗಳಲ್ಲಿ ಸಾಲ (Bank Loan) ಮಾಡಿದ ಗ್ರಾಹಕರು ತಮ್ಮ ಅಡವಿಟ್ಟ ಆಸ್ತಿ ಪತ್ರವನ್ನು (property documents) ಕಳೆದುಕೊಳ್ಳುವಂತಾಗಿದೆ, ಈ ಬಗ್ಗೆ ಆರ್ ಬಿ ಐ (RBI) ಗೆ ಗ್ರಾಹಕರು ಹಲವು ದೂರುಗಳನ್ನು (complaints) ಸಲ್ಲಿಸಿದ್ದು ಈ ದೂರುಗಳ ಆಧಾರದ ಮೇಲೆ ಆರ್ ಬಿ ಐ ಬ್ಯಾಂಕ್ ಗಳ ಮೇಲೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಂಡಿರುವ ವ್ಯಕ್ತಿ ಸಾಲ ತೆಗೆದುಕೊಳ್ಳುವಾಗ ತನ್ನ ಬಳಿ ಇದ್ದ ಆಸ್ತಿ ಪತ್ರವನ್ನು ಅಡವಿಡುವುದು ಸಹಜ. ಇಂತಹ ಸಂದರ್ಭದಲ್ಲಿ ಸಾಲ ಮರುಪಾವತಿ (Loan Re-Payment) ಮಾಡಿದ ನಂತರ ಬ್ಯಾಂಕ್ ಬಹಳ ಜವಾಬ್ದಾರಿಯುತವಾಗಿ ಆಸ್ತಿ ಪತ್ರವನ್ನು ಸಂಬಂಧಪಟ್ಟವರಿಗೆ ಹಿಂತಿರುಗಿಸಬೇಕು.

ಗ್ರಾಮೀಣ ವಸತಿ ಯೋಜನೆ; ಸ್ವಂತ ಮನೆ ಮಾಡಿಕೊಳ್ಳಲು ಕೇಂದ್ರ ಸರ್ಕಾರದ ಯೋಜನೆಗೆ ಅರ್ಜಿ ಹಾಕಿ

ಆದರೆ ಅದೆಷ್ಟು ದಿನಗಳು ಕಳೆದರೂ ಸಾಲ ಮರುಪಾವತಿ ಮಾಡಿದ ನಂತರ ಗ್ರಾಹಕರು ಬ್ಯಾಂಕ್ಗಳಿಗೆ ಅಲೆದಾಡುವಂತೆ ಆಗಿತ್ತು. ಕೆಲವು ಬ್ಯಾಂಕುಗಳು ನಿಮ್ಮ ಆಸ್ತಿ ಪತ್ರ (property documents) ಕಳೆದು ಹೋಗಿದೆ ಎನ್ನುವ ಕಾರಣವನ್ನು ಕೂಡ ಕೊಡುತ್ತಿದ್ದರು.

ಎಲ್ಲಾ ಲೋಪ ದೋಷಗಳನ್ನು ಪರಿಹರಿಸುವುದಕ್ಕಾಗಿ ಆರ್ ಬಿ ಐ ಹೊಸ ನಿಯಮ ಜಾರಿಗೆ ತಂದಿದ್ದು ಗ್ರಾಹಕರು ಸಾಲ ಮರುಪಾವತಿ (loan repayment) ಮಾಡಿದ ಕೇವಲ ಒಂದು ತಿಂಗಳ ಒಳಗೆ ಅವರ ಅಸ್ತಿ ಪತ್ರವನ್ನು ಅವರಿಗೆ ಹಿಂತಿರುಗಿಸಬೇಕು ಎಂದು ಬ್ಯಾಂಕ್ ಗಳಿಗೆ ತಿಳಿಸಿದೆ.

ದಾಖಲೆಗಳನ್ನು ಹಿಂತಿರುಗಿಸಲು 30 ದಿನಗಳ ಅವಕಾಶ!

property Documentsಒಬ್ಬ ವ್ಯಕ್ತಿ ಸಾಲ ಮರುಪಾವತಿ (Loan Re-Payment) ಮಾಡಿದ ನಂತರ ಅವನ ಬಳಿ ಅಡಮಾನ ಇರಿಸಿಕೊಂಡ ಆತನ ಆಸ್ತಿ ಪತ್ರವನ್ನು (Property Documents) ಕೇವಲ 30 ದಿನಗಳ ಒಳಗೆ ಹಿಂತಿರುಗಿಸಬೇಕು.

ನಿಯಮ ಎಲ್ಲಾ ಬ್ಯಾಂಕ್ ಗಳು, ಹಣಕಾಸು ಸಂಸ್ಥೆಗಳು,(finance company) ಎನ್ ಬಿ ಎಫ್ ಸಿ ಗಳಿಗೆ ಅನ್ವಯವಾಗುತ್ತದೆ. ಆರ್ ಬಿ ಐ ಹೊರಡಿಸಿರುವ ಸುತ್ತೋಲೆಯಲ್ಲಿ ಈ ನಿಯಮಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ.

ನಿರುದ್ಯೋಗಿಗಳಿಗೂ ಬ್ಯಾಂಕ್‌ಗಳಿಂದ ಹೋಮ್ ಲೋನ್ ಸಿಗುತ್ತಾ? ಹಾಗಾದ್ರೆ ಪಡೆಯೋದು ಹೇಗೆ

30 ದಿನಗಳ ಒಳಗೆ ಗ್ರಾಹಕರ ಆಸ್ತಿ ಪತ್ರವನ್ನು ಹಿಂತಿರುಗಿಸಬೇಕು ಒಂದು ವೇಳೆ ಆಸ್ತಿ ಪತ್ರಕ್ಕೆ ಹಾನಿಯಾಗಿದ್ದರೆ ಅಥವಾ ಆಸ್ತಿಪತ್ರ ಕಳೆದು ಹೋಗಿದ್ದರೆ ಮತ್ತೆ 30 ದಿನಗಳ ಅವಕಾಶ ಪಡೆದುಕೊಂಡು ಬ್ಯಾಂಕ್ ಗಳು ಆಸ್ತಿಪತ್ರವನ್ನು ರಿಜಿಸ್ಟರ್ ಮಾಡಿಸಿ ಗ್ರಾಹಕರಿಗೆ ನೀಡಬೇಕು.

ಇದಕ್ಕೆ ಸಂಬಂಧಪಟ್ಟ ಖರ್ಚು ವೆಚ್ಚವನ್ನು ಬ್ಯಾಂಕ್ ನೋಡಿಕೊಳ್ಳಬೇಕಾಗುತ್ತದೆ. ಇನ್ನು ಒಂದು ವೇಳೆ 30 ದಿನಗಳ ಒಳಗೆ ಅಥವಾ ಆಸ್ತಿ ಪತ್ರ ಹಾನಿಯಾದಲ್ಲಿ 60 ದಿನಗಳ ಒಳಗೆ ಗ್ರಾಹಕರಿಗೆ ಅವರ ಆಸ್ತಿಪತ್ರ ಹಿಂತಿರುಗಿಸದೆ ಇದ್ದಲ್ಲಿ ಬ್ಯಾಂಕ್ ಪ್ರತಿದಿನ 5000 ಗಳಂತೆ ದಂಡ ಪಾವತಿ ಮಾಡಬೇಕು. ಇದಿಷ್ಟು ಆರ್ ಬಿ ಐ ನ ಹೊಸ ಆದೇಶವಾಗಿದ್ದು ಪ್ರತಿಯೊಂದು ಬ್ಯಾಂಕ್ ಕೂಡ ಈ ಆದೇಶವನ್ನು ಪಾಲಿಸುವುದು ಕಡ್ಡಾಯವಾಗಿದೆ.

New rule from December 1 regarding house, property and land Documents

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories