ದೇವ ದರ್ಶನಕ್ಕೆ ಹೋಗುವ ಭಕ್ತರು ಈ ತಪ್ಪು ಮಾಡಿದ್ರೆ ಸರ್ಕಾರ ನಿಮ್ಮ ಮೇಲೆ ದಂಡ ಹಾಕುವುದು ಪಕ್ಕಾ!

ರಾಜ್ಯ ಸರ್ಕಾರ ಈಗ ದೇವಸ್ಥಾನಗಳಲ್ಲಿ ಪುಣ್ಯಕ್ಷೇತ್ರಗಳಲ್ಲಿ ಮತ್ತು ಅಲ್ಲಿನ ಆವರಣಗಳಲ್ಲಿ ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರಿದೆ.

ಸಾಮಾನ್ಯವಾಗಿ ದೇವಸ್ಥಾನಕ್ಕೆ (Temple Visit) ಹೋಗುವ ಭಕ್ತರ ಸಂಖ್ಯೆ ಜಾಸ್ತಿಯೇ ಇರುತ್ತದೆ, ದೇವಸ್ಥಾನಕ್ಕೆ ಎಲ್ಲರೂ ಹೋಗುವುದು ದೇವರ ದರ್ಶನ ಮಾಡಿ, ನಮ್ಮ ಕಷ್ಟಗಳನ್ನು ದೂರ ಮಾಡಿ, ನಮ್ಮ ಮೇಲೆ ಕೃಪೆ ತೋರಿಸು ಎಂದು ಬೇಡಿಕೊಳ್ಳುವುದಕ್ಕೆ, ಅದೆಷ್ಟೋ ಜನರಿಗೆ ದೇವಸ್ಥಾನಕ್ಕೆ ಹೋದರೆ ನೆಮ್ಮದಿ ಸಿಗುತ್ತದೆ. ದೇವಸ್ಥಾನದ ಪ್ರಶಾಂತತೆ ಮನಸ್ಸಿಗೆ ಹಿತ ನೀಡುತ್ತದೆ.

ನಾವೆಲ್ಲರೂ ದೇವಸ್ಥಾನಕ್ಕೆ ಹೋಗೋದು ಇದೇ ಕಾರಣಕ್ಕೆ ಆದರೆ ಕೆಲವು ಜನರು ದೇವಸ್ಥಾನಕ್ಕೆ ಬರೋದು ಶೋಕಿಗಾಗಿ ಎಂದರೆ ತಪ್ಪಲ್ಲ. ದೇವರ ದರ್ಶನ ಪಡೆದು ಒಳ್ಳೆಯದು ಮಾಡಪ್ಪ ಎಂದು ಕೇಳಿಕೊಳ್ಳುವ ಬದಲು ಮೊಬೈಲ್ ಬಳಸಿ ಒಳಗಿರುವ ದೇವರ ಫೋಟೋ ತೆಗೆಯುತ್ತಾ ನಿಂತಿರುತ್ತಾರೆ, ಅಥವಾ ಮೊಬೈಲ್ (Mobile Phone) ನಲ್ಲೇ ಇನ್ನೇನನ್ನೋ ಮಾಡುತ್ತಾ ನಿಂತಿರುತ್ತಾರೆ.

Video: ಟ್ರಕ್ ಡಿಕ್ಕಿ ಹೊಡೆದು ಹೆದ್ದಾರಿಯಲ್ಲಿ ಕಾರಿಗೆ ಬೆಂಕಿ, ಪತಿ, ಪತ್ನಿ ಸೇರಿ ನಾಲ್ವರು ಸಜೀವ ದಹನ ! ಭಯಾನಕ ವಿಡಿಯೋ

ದೇವ ದರ್ಶನಕ್ಕೆ ಹೋಗುವ ಭಕ್ತರು ಈ ತಪ್ಪು ಮಾಡಿದ್ರೆ ಸರ್ಕಾರ ನಿಮ್ಮ ಮೇಲೆ ದಂಡ ಹಾಕುವುದು ಪಕ್ಕಾ! - Kannada News

ದೇವಸ್ಥಾನದ ಆಡಳಿತ ಮಂದಿ, ದೇವಸ್ಥಾನದಲ್ಲಿ ಸಿಬ್ಬಂದಿಗಳು ಎಷ್ಟೇ ಹೇಳಿದರು ಸಹ ಜನರು ಮಾತ್ರ ಫೋನ್ ನೋಡುವುದನ್ನು ಬಿಡುವುದಿಲ್ಲ. ಅಂಥ ಜನರಿಗೆ ಈಗ ಸರ್ಕಾರವು ಹೊಸದೊಂದು ನಿಯಮವನ್ನು ಜಾರಿಗೆ ತಂದಿದೆ. ರಾಜ್ಯ ಸರ್ಕಾರ ಈಗ ಇದೆಲ್ಲವನ್ನು ನಿಲ್ಲಿಸಲು ಹೊಸದೊಂದು ಆದೇಶ ತಂದಿದ್ದು, ಅದೇನು ಎಂದರೆ.

ಇನ್ನುಮುಂದೆ ದೇವಸ್ಥಾನಗಳಲ್ಲಿ ಪುಣ್ಯಕ್ಷೇತ್ರಗಳಲ್ಲಿ ಮತ್ತು ಅಲ್ಲಿನ ಆವರಣಗಳಲ್ಲಿ ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರಿದೆ (Mobile Phone Ban). ಹೌದು ಸ್ನೇಹಿತರೆ, ಇನ್ನುಮುಂದೆ ನೀವು ದೇವಸ್ಥಾನಗಳ ಹತ್ತಿರ ಮೊಬೈಲ್ ಫೋನ್ ಬಳಸುವ ಹಾಗಿಲ್ಲ. ಕರ್ನಾಟಕ ರಾಜ್ಯ ಸರ್ಕಾರವು, ಹಿಂದೂ ಧಾರ್ಮಿಕ ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಜೊತೆಗೆ ಚರ್ಚೆ ನಡೆಸಿದ್ದು.

mobile phone Ban in Templeಈ ಸೋಮವಾರದಿಂದಲೇ ನಿಯಮ ಜಾರಿಗೆ ಬಂದಿದೆ. ಅದೇಶದಲ್ಲಿ ದೇವಸ್ಥಾನದ ಆವರಣದಲ್ಲಿ ಮೊಬೈಪ್ ಬಳಸುವ ಹಾಗಿಲ್ಲ ಎಂದು ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಒಳಗೆ 30 ಸಾವಿರಕ್ಕಿಂತ ಹೆಚ್ಚು ದೇವಸ್ಥಾನಗಳು ಬರುತ್ತದೆ, ಈ ದೇವಸ್ಥಾನಗಳಿಂದ ಎಷ್ಟು ಆದಾಯ ಬರುತ್ತದೆಯೋ ಅದರ ಮೇಲೆ..

ಎಲ್ಲಾ ದೇವಸ್ಥಾನಗಳನ್ನು A, B, C ಎಂದು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ರಾಜ್ಯ ಕಂದಾಯ ಇಲಾಖೆಯ ಕಾರ್ಯದರ್ಶಿ ಕೆಪಿ ಹೇಮಂತರಾಜು ಅವರು ಈ ಹೊಸ ನಿಯಮದ ಬಗ್ಗೆ ಆದೇಶ ಜಾರಿಗೆ ತಂದಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ದೇವಸ್ಥಾನಗಳ ಆವರಣಗಳಲ್ಲಿ ಮೊಬೈಲ್ ಫೋನ್ ಬಳಕೆ ಜಾಸ್ತಿ ಆಗುತ್ತಿರುವುದರಿಂದ ಅದರ ಶಬ್ದಗಳಿಂದ ದರ್ಶನಕ್ಕೆ ಬಂದಿರುವ ಬೇರೆ ಭಕ್ತರಿಗೆ ದರ್ಶನ ಪಡೆಯಲು ಮತ್ತು ದೇವರ ಸ್ಮರಣೆ ಮಾಡಲು ತೊಂದರೆ ಆಗುತ್ತಿದೆ ಎಂದು ತಿಳಿಸಿದ್ದಾರೆ..

ಗೃಹಜ್ಯೋತಿ ಆಯ್ತು.. ಈಗ ಮತ್ತೊಂದು ಹೊಸ ಯೋಜನೆ ತಂದ ಸರ್ಕಾರ! ಜನರಿಗೆ ಬಿಗ್ ನ್ಯೂಸ್!

ಹಾಗೆಯೇ ಇನ್ನುಮುಂದೆ ಭಕ್ತರು ದೇವರ ದರ್ಶನಕ್ಕಾಗಿ ಬಂದಾಗ, ಅವರ ಮೊಬೈಲ್ ಫೋನ್ ಗಳನ್ನು ಸ್ವಿಚ್ ಆಫ್ ಮಾಡಿರಬೇಕು ಎಂದು ಸಹ ಹೇಳಿದ್ದಾರೆ. ಅಷ್ಟೇ ಅಲ್ಲದೆ..

ಫೋನ್ ಸ್ವಿಚ್ ಆಫ್ (Phone Switch Off) ಮಾಡುವ ಬಗ್ಗೆ ಸೂಚನೆ ನೀಡುವ ಫಲಕಗಳನ್ನು ಅಳವಡಿಸಬೇಕು ಎಂದಿದ್ದಾರೆ.. ಈ ಕ್ರಮಗಳನ್ನು ಕೈಗೊಂಡರೆ ಭಕ್ತರು ನೆಮ್ಮದಿಯಾಗಿ ದೇವರ ದರ್ಶನ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.. ಒಟ್ಟಿನಲ್ಲಿ ಇನ್ನುಮುಂದೆ ನೀವು ದೇವಸ್ಥಾನಕ್ಕೆ ಹೋಗುವಾಗ ಫೋನ್ ಹಿಡಿಯದೆ ದೇವರ ನಾಮಸ್ಮರಣೆಗಾಗಿ ಮಾತ್ರ ಹೋಗಿ ಎನ್ನುತ್ತಿದೆ ಸರ್ಕಾರ.

New rules at temple regarding mobile phone

Follow us On

FaceBook Google News

New rules at temple regarding mobile phone