ಗಾಯಗೊಂಡು ರಕ್ತಸ್ರಾವದಿಂದ ಬಾಲಕಿ ಒದ್ದಾಟ.. ಸಹಾಯ ಮಾಡದೆ ವಿಡಿಯೋ ತೆಗೆದ ಜನ
ಬಾಲಕಿ ಗಾಯಗೊಂಡು ರಕ್ತಸ್ರಾವವಾಗಿ ರಸ್ತೆ ಬದಿ ಅಸಹಾಯಕಳಾಗಿ ಬಿದ್ದಿದ್ದಳು. ಸ್ಥಳೀಯರು ಆಕೆಗೆ ಸಹಾಯ ಮಾಡದೇ ವೀಡಿಯೊಗಳನ್ನು ತೆಗೆದುಕೊಂಡರು
ರಸ್ತೆಯ ಬದಿಯಲ್ಲಿ ಯಾರಾದರೂ ಗಾಯಗೊಂಡರೆ ಮತ್ತು ಅಪಾಯದಲ್ಲಿದ್ದರೆ, ಜನರು ಅವರಿಗೆ ಸಹಾಯ ಮಾಡದೇ ವೀಡಿಯೊಗಳನ್ನು ತೆಗೆದುಕೊಳ್ಳಲು ಬಯಸುತ್ತಾರೆ. ಆ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡುವ ಆಲೋಚನೆಯನ್ನು ಹೊರತುಪಡಿಸಿ, ಆ ಮನುಷ್ಯನಿಗೆ ಸಹಾಯ ಮಾಡಲು ಜನರಿಗೆ ಯಾವುದೇ ಆಲೋಚನೆಗಳಿರುವುದಿಲ್ಲ.
ಈ ವೀಡಿಯೊವನ್ನು ನೋಡಿ ನೀವು ಅದನ್ನು ಮತ್ತೊಮ್ಮೆ ಅರ್ಥಮಾಡಿಕೊಳ್ಳುತ್ತೀರಿ. ಉತ್ತರ ಪ್ರದೇಶದ ಕನೌಜ್ ಬಳಿಯ ತಿರ್ವಾ ಅತಿಥಿ ಗೃಹದಲ್ಲಿ ಹನ್ನೆರಡು ವರ್ಷದ ಬಾಲಕಿ ಗಾಯಗೊಂಡಿದ್ದಾಳೆ. ಹುಡುಗಿ ಎದ್ದು ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಬಾಲಕಿಯನ್ನು ಗಮನಿಸಿದ ಸ್ಥಳೀಯರು ಆಕೆಗೆ ಸಹಾಯ ಮಾಡಿ ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವ ಬದಲು ವಿಡಿಯೋ ತೆಗೆದಿದ್ದಾರೆ.
ಬಾಲಕಿಯ ಸುತ್ತ ನೆರೆದಿದ್ದ ಗುಂಪು ವಿಡಿಯೋ ತೆಗೆಯುತ್ತಿರುವುದು ನಾಚಿಕೆಯ ಸಂಗತಿ. ಆ ಬಾಲಕಿ ಪಾಪ ಸಹಾಯ ಕೇಳುತ್ತಿದ್ದಾಳೆ. ಆದರೆ, ಆ ಜನರು ವೀಡಿಯೋ ತೆಗೆಯುವುದರತ್ತ ಗಮನ ಹರಿಸುತ್ತಿದ್ದಾರೆ. ಕೊನೆಗೆ ಬಾಲಕಿಯ ವಿಷಯ ತಿಳಿದ ಪೊಲೀಸರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರ ಸಲಹೆ ಮೇರೆಗೆ ಬಾಲಕಿಯನ್ನು ಉತ್ತಮ ಚಿಕಿತ್ಸೆಗಾಗಿ ಕಾನ್ಪುರಕ್ಕೆ ಸ್ಥಳಾಂತರಿಸಲಾಯಿತು..
ಕೆಜಿಎಫ್-2 ರೆಕಾರ್ಡ್ಸ್ ಬ್ರೇಕ್ ಮಾಡಿದ ಕಾಂತಾರ, ಈಗ ನಂ.1 ಸಿನಿಮಾ
ಬಾಲಕಿ ಗಾಯಗೊಂಡು ರಕ್ತಸ್ರಾವವಾಗಿರುವುದರಿಂದ ಏನಾಯಿತು ಎಂದು ತಿಳಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆದರೆ, ಕಳೆದ ಭಾನುವಾರ ಬಾಲಕಿ ತನ್ನ ಮನೆಯಿಂದ ಮಾರುಕಟ್ಟೆಗೆ ಹೋಗಿದ್ದಳು. ಆ ನಂತರ ವಾಪಸ್ ಬರಲಿಲ್ಲ. ಹೀಗಾಗಿ ಕುಟುಂಬಸ್ಥರು ಆಕೆಗಾಗಿ ಹುಡುಕಾಟ ನಡೆಸಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕ್ರಮದಲ್ಲಿ ಬಾಲಕಿ ಗೆಸ್ಟ್ ಹೌಸ್ ಬಳಿ ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎರಡು ದಿನಗಳಿಂದ ಪುರುಷ ವ್ಯಕ್ತಿಯೊಬ್ಬ ಬಾಲಕಿಯ ಜೊತೆ ಇದ್ದಿರಬಹುದು ಎಂದು ಶಂಕಿಸಲಾಗಿದೆ. ಮತ್ತೊಂದೆಡೆ, ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಅಂಶದಲ್ಲೂ ತನಿಖೆ ನಡೆಸಲಾಗುತ್ತಿದೆ. ಸಮೀಪದ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.
People took videos without helping Young Girl
इस वीडियो को देख लीजिए सच में रूह कांप जाएगी, आँखों में आंसू आ जाएंगे, कितने हैवान हो चुके हैं लोग
12 साल की मासूम खून में लथपथ पड़ी तड़प रही है, मदद के लिए हाथ आगे बढ़ा रही है
लोग झुक-झुककर वीडियो बना रहे हैं
गौर से इन शक्लों को देखिए pic.twitter.com/Qf6x79Ryt6
— Nigar Parveen (@NigarNawab) October 24, 2022