ಈ ರೈತರಿಗೆ ಸಿಗಲ್ಲ 21ನೇ ಹಂತದ ಪಿಎಂ ಕಿಸಾನ್ ಯೋಜನೆ ಹಣ! ಹೊಸ ನಿಯಮ ಗೊತ್ತಾ?
ಪಿಎಂ ಕಿಸಾನ್ ಯೋಜನೆಯ 21ನೇ ಹಂತದ ಹಣವನ್ನು ಅನೇಕ ರೈತರಿಗೆ ತಾತ್ಕಾಲಿಕವಾಗಿ ತಡೆದಿದೆ. eKYC ಪೂರ್ಣಗೊಳಿಸದವರು ಹಾಗೂ ಆಧಾರ್ ಲಿಂಕ್ ಮಾಡದವರಿಗೆ ಸಹಾಯಧನ ಲಭ್ಯವಿರುವುದಿಲ್ಲ.

PM Kisan Scheme: ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ಸರ್ಕಾರ ವರ್ಷಕ್ಕೆ ಮೂರು ಹಂತಗಳಲ್ಲಿ ₹2,000ರಂತೆ ಒಟ್ಟು ₹6,000 ನೆರವು ನೀಡುತ್ತದೆ. ಈಗಾಗಲೇ 20 ಹಂತದ ಮೊತ್ತವನ್ನು ರೈತರಿಗೆ ವಿತರಿಸಲಾಗಿದೆ. ಇದೀಗ ಎಲ್ಲರ ಗಮನ 21ನೇ ಹಂತದ ಹಣದತ್ತ ತಿರುಗಿದೆ. ಆದರೆ ಈ ಬಾರಿ ಎಲ್ಲರಿಗೂ ಹಣ ಬರದಿರಬಹುದೆಂದು ಕೇಂದ್ರದಿಂದ ಸ್ಪಷ್ಟನೆ ಬಂದಿದೆ.
ಅರ್ಹರಾಗಿದ್ದರೂ eKYC ಮಾಡದವರು ಅಥವಾ ಆಧಾರ್ ಕಾರ್ಡ್‌ನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡದವರು ಈ ಹಂತದ ಹಣದಿಂದ ವಂಚಿತರಾಗುವ ಸಾಧ್ಯತೆ ಇದೆ. ಕೇಂದ್ರ ಕೃಷಿ ಇಲಾಖೆಯು ಹಲವು ಬಾರಿ ರೈತರಿಗೆ eKYC ನವೀಕರಣದ ಬಗ್ಗೆ ಎಚ್ಚರಿಕೆ ನೀಡಿದ್ದರೂ ಇನ್ನೂ ಹಲವರು ಪ್ರಕ್ರಿಯೆ ಪೂರ್ಣಗೊಳಿಸಿಲ್ಲ.
ಇನ್ನೊಂದು ಪ್ರಮುಖ ಅಂಶವೆಂದರೆ, ಆಧಾರ್ ಹಾಗೂ ಭೂ ದಾಖಲೆಗಳು ಸರಿಹೊಂದದಿದ್ದರೂ ಹಣ ಬಿಡುಗಡೆ ಆಗುವುದಿಲ್ಲ. ಜೊತೆಗೆ, ಪತಿಯೂ ಪತ್ನಿಯೂ ಇಬ್ಬರೂ ಪಿಎಂ ಕಿಸಾನ್‌ನ ಪ್ರಯೋಜನ ಪಡೆಯಲು ಸಾಧ್ಯವಿಲ್ಲ, ಕುಟುಂಬಕ್ಕೆ ಒಬ್ಬರೇ ಅರ್ಹರಾಗಿರುತ್ತಾರೆ.
ಕಾನೂನು ಹುದ್ದೆ ಹೊಂದಿರುವವರು, ಸಂಸತ್ ಅಥವಾ ವಿಧಾನಸಭೆಯ ಸದಸ್ಯರು, ಪೌರಪಾಲಿಕೆ ಅಧ್ಯಕ್ಷರು, ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿಸುವವರು ಹಾಗೂ ನಿವೃತ್ತ ಅಧಿಕಾರಿಗಳು ಈ ಯೋಜನೆಗೆ ಅರ್ಹರಾಗುವುದಿಲ್ಲ ಎಂದು ನಿಯಮಗಳಲ್ಲಿ ಸ್ಪಷ್ಟಪಡಿಸಲಾಗಿದೆ.
ತಂದೆ-ತಾಯಿ ಜೀವಂತರಾಗಿರುವಾಗ ಅವರ ಹೆಸರಿನ ಭೂಮಿಯನ್ನು ಮಗುವಿನ ಹೆಸರಿಗೆ ವರ್ಗಾಯಿಸಿದರೆ, ಆ ಮಗುವಿಗೆ ಪಿಎಂ ಕಿಸಾನ್ ಮೊತ್ತ ಸಿಗುವುದಿಲ್ಲ. ಈ ನಿಯಮದ ಉದ್ದೇಶ ಸಹಾಯಧನ ನಿಜವಾದ ರೈತನ ಕೈಗೆ ತಲುಪುವುದನ್ನು ಖಚಿತಪಡಿಸುವುದು.
ಆದ್ದರಿಂದ, 21ನೇ ಹಂತದ ಮೊತ್ತಕ್ಕಾಗಿ ನಿರೀಕ್ಷಿಸುತ್ತಿರುವ ರೈತರು ತಮ್ಮ eKYC, ಆಧಾರ್ ಲಿಂಕ್ ಹಾಗೂ ಭೂ ದಾಖಲೆಗಳು ಸರಿಯೇ ಎಂದು ಪರಿಶೀಲಿಸಬೇಕು. ಇಲ್ಲವಾದರೆ ಈ ಹಂತದ ಪಾವತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
PM Kisan 21st Installment May Be Stopped for Many Farmers



