ರೈತರಿಗೆ ಸಿಹಿ ಸುದ್ದಿ, ಕೇಂದ್ರದಿಂದ ತಿಂಗಳಿಗೆ 3000 ರೂಪಾಯಿ ಪಿಂಚಣಿ! ಅರ್ಜಿ ಸಲ್ಲಿಸಿ

ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಮಾನ್ ಧನ್ ಯೋಜನೆಯಡಿ ಸಣ್ಣ ಮತ್ತು ಅಲ್ಪಭೂಮಿ ರೈತರಿಗೆ 60 ವರ್ಷದ ನಂತರ ತಿಂಗಳಿಗೆ ₹3000 ಪಿಂಚಣಿ ಸಿಗಲಿದೆ. 18ರಿಂದ 40 ವರ್ಷದೊಳಗಿನ ರೈತರು CSC ಕೇಂದ್ರಗಳಲ್ಲಿ ನೋಂದಣಿ ಮಾಡಬಹುದು.

PM Kisan Maandhan Scheme: ರೈತರ ಆರ್ಥಿಕ ಭದ್ರತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪ್ರಮುಖವಾದದ್ದು ಪಿಎಂ ಕಿಸಾನ್ ಮಾನ್ ಧನ್ ಯೋಜನೆ. ಈ ಯೋಜನೆಯಡಿ ರೈತರು 60 ವರ್ಷ ವಯಸ್ಸು ತಲುಪಿದ ನಂತರ ಪ್ರತಿಮಾಸ ₹3000 ಪಿಂಚಣಿ (Pension) ಪಡೆಯುವ ಅವಕಾಶ ಇದೆ.

ವಿಶೇಷವಾಗಿ ಸಣ್ಣ ಹಾಗೂ ಅಲ್ಪಭೂಮಿ ರೈತರ ವೃದ್ಧಾಪ್ಯ ಜೀವನಕ್ಕೆ ಆರ್ಥಿಕ ನೆರವಾಗುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಲಾಗಿದೆ. ನಿಯಮಿತ ಆದಾಯ ಇಲ್ಲದ ರೈತರಿಗೆ ನಿವೃತ್ತಿ ನಂತರ ಸಹಾಯವಾಗುವಂತೆ ಪಿಂಚಣಿ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ.

ಇದೇ ವೇಳೆ, ಈಗಾಗಲೇ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವರ್ಷಕ್ಕೆ ₹6000 ಪಡೆಯುತ್ತಿರುವ ರೈತರಿಗೆ ಈ ಯೋಜನೆಯಲ್ಲಿ ಸೇರಿಕೊಳ್ಳುವುದು ಇನ್ನಷ್ಟು ಸುಲಭವಾಗಿದೆ. ಕೆಲ ಸಂದರ್ಭಗಳಲ್ಲಿ ಪಿಂಚಣಿ ಯೋಜನೆಗೆ ಅಗತ್ಯವಿರುವ ಕೊಡುಗೆಯನ್ನು ಈ ನೆರವಿನಿಂದಲೇ ಹೊಂದಾಣಿಕೆ ಮಾಡುವ ಅವಕಾಶವೂ ಇದೆ.

ರೈತರು ತಮ್ಮ ಒಪ್ಪಿಗೆಯನ್ನು ನೀಡಿದ ಬಳಿಕ ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಇದರಿಂದಾಗಿ ರೈತರಿಗೆ ಬೇರೆ ಖರ್ಚು ಮಾಡದೇ ಕೂಡ ಯೋಜನೆಯಲ್ಲಿ ಭಾಗಿಯಾಗಲು ಅವಕಾಶ ಸಿಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಷ್ಟು ಹಣ ಠೇವಣಿ ಮಾಡಬೇಕು?

PM ಕಿಸಾನ್ ಮಾನ್ ಧನ್ ಯೋಜನೆಗೆ ಸೇರಿದ ರೈತರು 60 ವರ್ಷ ವಯಸ್ಸು ಬರುವವರೆಗೆ ಪ್ರತಿಮಾಸ ಸ್ವಲ್ಪ ಮೊತ್ತವನ್ನು ಠೇವಣಿ ಮಾಡಬೇಕು. ಈ ಮೊತ್ತ ರೈತರ ವಯಸ್ಸಿನ ಆಧಾರದ ಮೇಲೆ ಬದಲಾಗುತ್ತದೆ.

ಸಾಮಾನ್ಯವಾಗಿ ₹55 ರಿಂದ ₹200 ರವರೆಗೆ ಪ್ರತಿ ತಿಂಗಳು ಕೊಡುಗೆ ನೀಡಬೇಕು. ವಯಸ್ಸು ಕಡಿಮೆ ಇದ್ದರೆ ಕೊಡುಗೆ ಮೊತ್ತವೂ ಕಡಿಮೆ ಇರುತ್ತದೆ. ನಂತರ 60 ವರ್ಷ ತಲುಪಿದ ಮೇಲೆ ತಿಂಗಳಿಗೆ ₹3000 ಪಿಂಚಣಿ ಪಡೆಯಬಹುದು.

ಅರ್ಜಿ ಸಲ್ಲಿಸುವ ವಿಧಾನ

ಈ ಯೋಜನೆಗೆ ಸೇರಲು ರೈತರು ತಮ್ಮ ಸಮೀಪದ Common Service Center (CSC) ಗೆ ಭೇಟಿ ನೀಡಬೇಕು. ಅಲ್ಲಿ ಸರಳ ಅರ್ಜಿ ನಮೂನೆ ಭರ್ತಿ ಮಾಡಿದ ಬಳಿಕ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಅರ್ಜಿಗಾಗಿ ರೈತರು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ನೀಡಬೇಕು. 18 ರಿಂದ 40 ವರ್ಷದೊಳಗಿನ ರೈತರು ಈ ಯೋಜನೆಗೆ ಅರ್ಹರಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳಲು ಸರ್ಕಾರ ಪ್ರೋತ್ಸಾಹಿಸುತ್ತಿದೆ.

Related Stories