ಹಬ್ಬಕ್ಕೆ ಪಿಎಂ ಕಿಸಾನ್ ಹಣ ಜಮಾ! ಆದ್ರೆ 7 ಸಾವಿರ ರೈತರಿಗೆ ಶಾಕ್, ಹಣ ಬರಲ್ಲ
ದೀಪಾವಳಿ ಮೊದಲು ಪಿಎಂ ಕಿಸಾನ್ ಯೋಜನೆಯ 21ನೇ ಹಂತದ ಹಣ ರೈತರ ಖಾತೆಗೆ ಬರಲಿದೆ. ಆದರೆ ಸುಮಾರು 7 ಸಾವಿರ ರೈತರಿಗೆ ಈ ಬಾರಿ ಹಣ ಬಾರದ ಸಾಧ್ಯತೆ ಇದೆ.

ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ವರ್ಷಕ್ಕೆ ₹6,000 ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಹಣವನ್ನು ಮೂರು ಹಂತಗಳಲ್ಲಿ ₹2,000 ನೇರವಾಗಿ ಬ್ಯಾಂಕ್ ಖಾತೆಗಳಿಗೆ ವರ್ಗಿಸಲಾಗುತ್ತದೆ. ಇದೀಗ ದೀಪಾವಳಿಗೂ ಮುನ್ನ 21ನೇ ಹಂತದ ಮೊತ್ತವೂ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಇದುವರೆಗೆ ಮೋದಿ ಸರ್ಕಾರವು ಒಟ್ಟು 20 ಹಂತದ ಹಣ ರೈತರ ಖಾತೆಗಳಿಗೆ ವರ್ಗಿಸಿದೆ. ಅಂದರೆ ಪ್ರತಿ ರೈತನು ಸುಮಾರು ₹40,000ರಷ್ಟು ನೆರವು ಪಡೆದಿದ್ದಾನೆ. ಈ ಬಾರಿ ಕೇಂದ್ರ ಸರ್ಕಾರ 21ನೇ ಹಂತದ ಹಣ ಬಿಡುಗಡೆ ಮಾಡುವ ತಯಾರಿಯಲ್ಲಿ ಇದೆ.
ಇದೀಗ ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶದ ರೈತರಿಗೆ ಮೊತ್ತವನ್ನು ಮೊದಲೇ ಬಿಡುಗಡೆ ಮಾಡಲಾಗಿದೆ. ಅಲ್ಲಿ ಪ್ರವಾಹದಿಂದ ಉಂಟಾದ ನಷ್ಟದ ಹಿನ್ನೆಲೆ ಸರ್ಕಾರವು ತುರ್ತು ನೆರವಿನ ರೂಪದಲ್ಲಿ ಮೊತ್ತ ಬಿಡುಗಡೆ ಮಾಡಿತ್ತು. ಶೀಘ್ರದಲ್ಲೇ ಇತರೆ ರಾಜ್ಯಗಳಿಗೂ ಮೊತ್ತ ಬರಲಿದೆ.
ಆದರೆ ಸುಮಾರು 7 ಸಾವಿರ ರೈತರಿಗೆ ಈ ಬಾರಿ ಹಣ ಬಾರದ ಸಾಧ್ಯತೆ ಇದೆ. ಹೌದು, ಸುಮಾರು 7 ಸಾವಿರ ರೈತರಿಗೆ ಹಣ ಬಾರದ ಪರಿಸ್ಥಿತಿ ಉಂಟಾಗಿದೆ. ಇದರ ಹಿಂದೆ ಖಾತೆ ದೋಷ, ಆಧಾರ್–ಬ್ಯಾಂಕ್ ಲಿಂಕ್ ಸಮಸ್ಯೆ ಅಥವಾ ದಾಖಲೆಗಳಲ್ಲಿ ವ್ಯತ್ಯಾಸ ಇರಬಹುದು.
ರೈತರು ತಮ್ಮ ಪಿಎಂ ಕಿಸಾನ್ ಸ್ಥಿತಿ (status) ಪರಿಶೀಲಿಸಲು ಹತ್ತಿರದ ಕಾಮನ್ ಸರ್ವೀಸ್ ಸೆಂಟರ್ (CSC) ಗೆ ಹೋಗಬಹುದು ಅಥವಾ ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಖಾತೆ ವಿವರಗಳನ್ನು ಪರಿಶೀಲಿಸಬಹುದು. ಸಮಸ್ಯೆ ಸರಿಪಡಿಸಿದರೆ, ಬಾಕಿಯಿರುವ ಮೊತ್ತವನ್ನು ಮುಂದಿನ ಹಂತದಲ್ಲಿ ಒಟ್ಟಿಗೇ ಪಡೆಯುವ ಅವಕಾಶವೂ ಇದೆ.
PM Kisan Money Shock for 7,000 Farmers




