ಸ್ವಂತ ಮನೆ ಇಲ್ಲದವರಿಗೆ ಮನೆ ಕಟ್ಟಿಕೊಡಲು ಮುಂದಾದ ಕೇಂದ್ರ ಸರ್ಕಾರ! ಈಗಲೇ ಅರ್ಜಿ ಸಲ್ಲಿಸಿ
ದೇಶದಲ್ಲಿ ಬಡತನದಲ್ಲಿ ಇರುವವರು, ಸ್ವಂತ ಮನೆ ಕಟ್ಟಿಕೊಳ್ಳಲು ಸಾಧ್ಯ ಆಗದೆ ಇರುವವರಿಗೆ ಸ್ವಂತ ಮನೆ ಕರುಣಿಸಲು ಪಿಎಂ ಆವಾಸ್ ಯೋಜನೆ ಇದೆ. ಈ ಯೋಜನೆಯ ಮೂಲಕ ಜನರಿಗಾಗಿ ಕೇಂದ್ರ ಸರ್ಕಾರವೇ ಮನೆ ಕಟ್ಟಿಕೊಡುತ್ತದೆ.
ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಜೀವನದಲ್ಲಿ ಕಷ್ಟಪಡುವುದು ಒಂದು ಸ್ವಂತ ಮನೆ (Own House) ಮಾಡಿಕೊಳ್ಳಬೇಕು ಎಂದು. ಅದಕ್ಕಾಗಿ ಇಡೀ ಜೀವನ ಕಷ್ಟಪಡುತ್ತಾರೆ. ಆದರೆ ಹಲವಾರು ಕಾರಣಗಳಿಂದ ಎಲ್ಲರಿಂದಲೂ ಸ್ವಂತ ಮನೆ ಕಟ್ಟಿಕೊಳ್ಳಲು ಸಾಧ್ಯ ಆಗುವುದಿಲ್ಲ. ಕೆಲವರು ಹೋಮ್ ಲೋನ್ (Home Loan) ಪಡೆದು ಮನೆ ಕಟ್ಟಿಕೊಂಡರೆ ಇನ್ನು ಕೆಲವರು ಜೀವನ ಪರ್ಯಂತ ಬಾಡಿಗೆ ಮನೆಯಲ್ಲಿಯೇ (Rented House) ಉಳಿದುಬಿಡುತ್ತಾರೆ.
ಆ ಪರಿಸ್ಥಿತಿಯಲ್ಲಿ ಇರುವ ಜನರಿಗಾಗಿ ತಮಗಾಗಿ ಸ್ವಂತ ಮನೆ ಕಟ್ಟಿಕೊಳ್ಳಲು ಸರ್ಕಾರವೇ ಸಹಾಯ ಮಾಡುತ್ತದೆ. ಮನೆ ಕಟ್ಟಲು ಸಹಾಯ ಮಾಡುವುದಕ್ಕೆ ಸರ್ಕಾರದ ಹಲವು ಯೋಜನೆಗಳಿವೆ, ಅದರ ಮೂಲಕ ಸರ್ಕಾರದ ಸಹಾಯ ಪಡೆದು ಸ್ವಂತ ಮನೆ ಕಟ್ಟಿಕೊಳ್ಳಬಹುದು.
ಸಾಲಗಾರರಿಗೆ ಬಿಗ್ ರಿಲೀಫ್! ಯಾವುದೇ ಬ್ಯಾಂಕ್ ನಲ್ಲಿ ಸಾಲ ಕಟ್ಟುತ್ತಿರುವವರಿಗೆ ಹೊಸ ನಿಯಮ
ನಮ್ಮ ದೇಶದಲ್ಲಿ ಬಡತನದಲ್ಲಿ ಇರುವವರು, ಸ್ವಂತ ಮನೆ ಕಟ್ಟಿಕೊಳ್ಳಲು ಸಾಧ್ಯ ಆಗದೆ ಇರುವವರಿಗೆ ಸ್ವಂತ ಮನೆ ಕರುಣಿಸಲು ಪಿಎಂ ಆವಾಸ್ ಯೋಜನೆ (PM Awas Yojana) ಇದೆ. ಈ ಯೋಜನೆಯ ಮೂಲಕ ಜನರಿಗಾಗಿ ಕೇಂದ್ರ ಸರ್ಕಾರವೇ ಮನೆ ಕಟ್ಟಿಕೊಡುತ್ತದೆ.
ಈಗಾಗಲೇ ಹಲವು ಜನರು ಪಿಎಮ್ ಆವಾಸ್ ಯೋಜನೆಯಿಂದ ಸ್ವಂತ ಮನೆ ಪಡೆದಿದ್ದಾರೆ. ಇದೀಗ ಮತ್ತೊಮ್ಮೆ ಈ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ನೀವು ಕೂಡ ಅರ್ಜಿ ಸಲ್ಲಿಸಿ ಸ್ವಂತ ಮನೆ ಪಡೆಯಬಹುದು..
ಈ ಯೋಜನೆಗೆ ಅರ್ಜಿ ಸಲ್ಲಿಸಲು ಮೊದಲಿಗೆ ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ. ಪಿಎಮ್ ಆವಾಸ್ ಯೋಜನೆಗೆ ಈ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
http://pmaymis.gov.in/
ವೆಬ್ಸೈಟ್ ಗೆ ಭೇಟಿ ನೀಡಿ, ಪಿಎಮ್ ಆವಾಸ್ ಯೋಜನೆ ಆಯ್ಕೆಯನ್ನು ಸೆಲೆಕ್ಟ್ ಮಾಡಿದ ನಂತರ ನೀವು ಆಧಾರ್ ಕಾರ್ಡ್ ನಂಬರ್ ಎಂಟ್ರಿ ಮಾಡಬೇಕಾಗುತ್ತದೆ. ಈ ನಂಬರ್ ಹಾಕಿದ ಬಳಿಕ ನಿಮ್ಮ ಡಾಕ್ಯುಮೆಂಟ್ ವೆರಿಫಿಕೇಶನ್ ನಡೆಯುತ್ತದೆ
ಬಳಿಕ ಅಪ್ಲಿಕೇಶನ್ ಫಾರ್ಮ್ ಸಿಗುತ್ತದೆ. ಅಪ್ಲಿಕೇಶನ್ ನಲ್ಲಿ ಕೇಳುವ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವ ಮೂಲಕ, ನೀವು ಪಿಎಮ್ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಬಹುದು. ನೀವು ನೀಡಿರುವ ಎಲ್ಲಾ ಮಾಹಿತಿ ಸರಿಯಿದ್ದರೆ ನಿಮಗೆ ಪಿಎಮ್ ಆವಾಸ್ ಯೋಜನೆಯ ಮೂಲಕ ಮನೆ ಸಿಗುತ್ತದೆ.
ನಿರ್ಗತಿಕ ಜನರಿಗೆ ಸ್ವಂತ ಮನೆ (Own House) ಕೊಡಲು ಆರಂಭವಾದ ಈ ಯೋಜನೆ ಲಾಂಚ್ ಆಗಿದ್ದು 2016ರಲ್ಲಿ. ಆಗಿನಿಂದ ಈಗಿನವರೆಗೂ ಸಾಕಷ್ಟು ಜನರು ಪಿಎಮ್ ಆವಾಸ್ ಯೋಜನೆಯ ಮೂಲಕ ಸ್ವಂತ ಮನೆ ಪಡೆದುಕೊಂಡಿದ್ದಾರೆ.
ಪ್ರತಿ ವರ್ಷ ಕೂಡ ಕೇಂದ್ರ ಸರ್ಕಾರದಿಂದ ಇಷ್ಟು ಎಂದು ಕೆಲವು ಜನರಿಗೆ ಮನೆ ಕೊಡಲಾಗುತ್ತಿದೆ. ನಿರ್ಗತಿಕರು, ಬಡತನದ ರೇಖೆಗಿಂತ ಕೆಳಗೆ ಇರುವವರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
Pradhan Mantri Awas Yojana Free House Scheme
Follow us On
Google News |