ಮಹಾಶಿವರಾತ್ರಿ ವೇಳೆ ಈ ಸಮಯದಲ್ಲಿ ಶಿವನ ಪೂಜೆ ಮಾಡಿದರೆ ವಿಶೇಷ ಅನುಗ್ರಹ

Maha Shivratri 2025 : ಮಹಾಶಿವರಾತ್ರಿ ದಿನ ಶಿವನ ಪೂಜೆಗೆ ಅವಶ್ಯಕವಾದ ಕೆಲವು ವಿಶೇಷ ಸಾಮಗ್ರಿಗಳನ್ನು ಬಳಸುವುದರಿಂದ ಶಿವನ ಅನುಗ್ರಹ ಪಡೆಯಬಹುದು. ಈ ಪಟ್ತಿಯಲ್ಲಿ ಅಗತ್ಯವಿರುವ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಿ.

  • ಮಹಾಶಿವರಾತ್ರಿ ಪೂಜೆಗೆ ಮುಖ್ಯ ಸಾಮಗ್ರಿಗಳ ಪಟ್ಟಿ ಇಲ್ಲಿದೆ
  • ಶಿವನ ಪೂಜೆ ಜೀವನದಲ್ಲಿ ಶಾಂತಿ ಮತ್ತು ಸಮೃದ್ಧಿ ತರುತ್ತದೆ
  • ಈ ಸಮಯದ ಶಿವನ ಪೂಜೆಯಿಂದ ವಿಶೇಷ ಅನುಗ್ರಹ

Maha Shivratri 2025 : ಮಹಾಶಿವರಾತ್ರಿ ಪೂಜೆಗೆ (Maha Shivratri Puja) ಸಿದ್ಧವಾಗಿದ್ದೀರಾ? ಶಿವನ ಅನುಗ್ರಹವನ್ನು ಸಂಪೂರ್ಣವಾಗಿ ಪಡೆಯಲು ಕೆಲವು ಮುಖ್ಯ ಸಾಮಗ್ರಿಗಳನ್ನು ಸಹ ಮರೆಯದೇ ಇಟ್ಟುಕೊಳ್ಳಬೇಕು.

ಮಹಾಶಿವರಾತ್ರಿ ದಿನ ಶಿವ ಮತ್ತು ಪಾರ್ವತಿ ದೇವಿಯ ವಿವಾಹ ದಿನವೆಂದು ನಂಬಲಾಗುತ್ತದೆ. ಜೊತೆಗೆ, ಶಿವಲಿಂಗ ರೂಪದಲ್ಲಿ ಶಿವನ ಪ್ರಾರಂಭವೂ ಇದೇ ದಿನದಂದು ನಡೆದಿದೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ, ಈ ದಿನದ ಪೂಜೆ ಹೆಚ್ಚು ಪವಿತ್ರವಾಗಿದೆ.

ಪೂಜೆಗೆ ಬೇಕಾಗಿರುವ ಪ್ರಮುಖ ಸಾಮಗ್ರಿಗಳು ಏನೆಂದರೆ: ಜಲ, ಹಾಲು, ಮೊಸರು, ಜೇನು, ಚಂದನ, ತುಪ್ಪ, ಬೆಲದ ಎಲೆ, ಧತೂರಾ, ಹೂವು, ಹಣ್ಣು, ಧೂಪದೀಪ, ಭಸ್ಮ, ಅಕ್ಷತೆ, ಕೇಸರಿ, ಶಿವ–ಪಾರ್ವತಿಯ ಪ್ರತಿಮೆ, ಹವನ ಸಾಮಗ್ರಿ, ಗುಲಾಬಿ ನೀರು, ಮಾವಿನ ಎಲೆ, ಮಣ್ಣಿನ ದೀಪ ಮತ್ತು ಅಗರಬತ್ತಿ.

ಇದನ್ನೂ ಓದಿ: ಮಹಾಶಿವರಾತ್ರಿ ದಿನ ಮಧ್ಯರಾತ್ರಿ ಶಿವನಿಗೆ ಪೂಜೆ ಮಾಡಬಹುದಾ? ಮಹತ್ವದ ಮಾಹಿತಿ

Maha Shivratri 2025

ಈಗ ಮುಖ್ಯ ವಿಷಯಕ್ಕೆ ಬರೋಣ… ನೀವು ಎಷ್ಟು ಪೂಜೆ ಮಾಡ್ತೀರೋ, ಅದೇ ಫಲ ಸಿಗುತ್ತೆ ಅಂತ ನಮ್ಮ ಹಿರೀಕರು ಮತ್ತು ನಮ್ಮ ಧರ್ಮ ಹೇಳುತ್ತದೆ. ಹಾಗೆಯೇ, ನಿಶಿತ ಕಾಲದಲ್ಲಿ ಮಾಡಿದ ಪೂಜೆ (Maha Shivratri 2025 Puja Timings) ಹೆಚ್ಚು ಪರಿಣಾಮಕಾರಿ ಎನ್ನಲಾಗುತ್ತದೆ. ಈ ವರ್ಷ, ನಿಶಿತ ಕಾಲ ಫೆಬ್ರವರಿ 27, 2025ರ ರಾತ್ರಿ 12:09 ರಿಂದ 12:59ರವರೆಗೆ ಇರುತ್ತದೆ. ಆ ಸಮಯದಲ್ಲಿ ಶಿವನಿಗೆ ಪೂಜೆ ಮಾಡಿದರೆ ವಿಶೇಷ ಅನುಗ್ರಹ ಸಿಗುತ್ತದೆ ಎಂಬ ನಂಬಿಕೆ ಇದೆ.

ಇನ್ನು ಮಹತ್ವದ ವಿಷಯವೆಂದರೆ, ಶಿವನ ಪೂಜೆಯ ಫಲ… ಶಿವನ ಪುಜೆಯ ಅನುಗ್ರಹದಿಂದ ಜೀವನದಲ್ಲಿ ಸಂತೋಷ ಮತ್ತು ಶಾಂತಿ ದೊರಕುತ್ತದೆ. ಜೊತೆಗೆ ವಿವಾಹದಲ್ಲಿ ಎದುರಿಸುವ ತೊಂದರೆಗಳು ದೂರವಾಗುತ್ತವೆ. ಮನಸಿನ ಆಸೆಗಳು ಈಡೇರುತ್ತವೆ.

ಎಲ್ಲಾ ಸಾಮಗ್ರಿಗಳನ್ನು ಸಿದ್ಧಪಡಿಸಿ, ನಿಶಿತ ಕಾಲದಲ್ಲಿ ಪೂಜೆ ಮಾಡಿ ಮತ್ತು ಶಿವನ ಕೃಪೆಯನ್ನು ಪಡೆಯೋಣ. ಶಿವನ ಅನುಗ್ರಹ ಯಾವತ್ತೂ ನಮ್ಮ ಮೇಲೆ ಇರಲಿ!

Puja Timings for Maha Shivratri 2025

English Summary▼

TRENDING ARTICLES1 / 3
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories