ಹೆಂಡತಿ ಫೋನ್ ಕರೆ ಕದ್ದು ಕೇಳೋದು, ರೆಕಾರ್ಡ್ ಮಾಡೋದು ಮಾಡಿದ್ರೆ ಪತಿಗೆ ಶಿಕ್ಷೆ! ಮಹತ್ವದ ಆದೇಶ

ಹೆಂಡತಿಯ ಫೋನ್ ಕರೆಯನ್ನು ರೆಕಾರ್ಡ್ ಮಾಡಿದರೆ ಪತಿಗೆ ಶಿಕ್ಷೆ! ಹೈಕೋರ್ಟ್ ನ ಮಹತ್ವದ ತೀರ್ಪು. ಹೀಗೆ ಮಾಡಿದರೆ ಅದು ಪತ್ನಿಯ ಖಾಸಗೀತನವನ್ನು ಉಲ್ಲಂಘನೆ ಮಾಡಿದಂತೆ ಆಗುತ್ತದೆ, ಹಾಗಾಗಿ ಪತಿ ಈ ಕೆಲಸವನ್ನು ಮಾಡಬಾರದು ಎಂದು ಹೈಕೋರ್ಟ್ (High court) ಮಹತ್ವದ ತೀರ್ಪನ್ನ ನೀಡಿದೆ. ಡೈವರ್ಸ್ ವಿಚಾರವಾಗಿ ನಡೆದ ವಿಚಾರಣೆ ಒಂದರಲ್ಲಿ ಹೈಕೋರ್ಟ್ ಈ ತೀರ್ಮಾನವನ್ನು ತೆಗೆದುಕೊಂಡಿದೆ.

ಪತ್ನಿಯ ಕರೆಯನ್ನು ರೆಕಾರ್ಡ್ ಮಾಡುವಂತಿಲ್ಲ: (husband should not record wife phone call)

ಗಂಡ ಹೆಂಡತಿ ನಡುವೆ ಯಾವಾಗ ಜಗಳವಾಗುತ್ತೆ, ಯಾವಾಗ ಡೈವೋರ್ಸ್ (divorce) ವರೆಗೆ ಅವರ ಸಂಬಂಧ ಹದಗೆಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈಗಾಗಲೇ ನಮ್ಮ ದೇಶದಲ್ಲಿ ಸಾಕಷ್ಟು ವಿಚ್ಛೇದನ (divorce) ಪ್ರಕರಣಗಳು ಸರಿಯಾದ ಕಾರಣವೂ ಇಲ್ಲದೆ ನಡೆದು ಹೋಗಿದೆ.

ವಿಚ್ಛೇದನ ಎಂದ ಕೂಡಲೇ ಪತಿ-ಪತ್ನಿಗೆ ಜೀವನಾಂಶವನ್ನು ನೀಡಬೇಕಾಗುತ್ತದೆ. ಒಂದು ವೇಳೆ ಪತಿ ಜೀವನಾಂಶ ಕೊಡಲು ನಿರಾಕರಿಸಿದರೆ ಆತನ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬಹುದು.

ಗೃಹಿಣಿಯರಿಗೆ ಪ್ರತಿ ತಿಂಗಳು ₹3000 ಹಾಗೂ ₹400ಕ್ಕೆ LPG ಸಿಲಿಂಡರ್! ಸರ್ಕಾರದ ಘೋಷಣೆ

ಆದರೆ ಇನ್ನೊಬ್ಬ ಭೂಪ ತನ್ನ ಪತ್ನಿಗೆ ಕೊಡಬೇಕಾಗಿರುವ ಜೀವನಾಂಶವನ್ನು ತಪ್ಪಿಸಿಕೊಳ್ಳಲು ಪತ್ನಿಯ ಫೋನ್ ಕರೆಯನ್ನು ರೆಕಾರ್ಡ್ ಮಾಡಿದ್ದಾನೆ ಇದನ್ನು ಗಮನಿಸಿರುವ ಹೈಕೋರ್ಟ್ ವಿಚಾರಣೆಯ ವೇಳೆ ಪತ್ನಿಯ ಖಾಸಗಿತನಕ್ಕೆ ಇದು ಧಕ್ಕೆ ಆಗುತ್ತಿದೆ ಎಂದು ತಿಳಿಸಿದೆ.

ಪತಿ ತನ್ನ ಹೆಂಡತಿಯ ಫೋನ್ ಕರೆಗಳನ್ನು ಆಕೆಗೆ ಗೊತ್ತಿಲ್ಲದೆ ಇರುವ ಹಾಗೆ ರೆಕಾರ್ಡ್ (Call Record) ಮಾಡಿಕೊಂಡಿದ್ದಾನೆ, ಇದು ಆಕೆಯ ಖಾಸಗಿತನದ (privacy) ಉಲ್ಲಂಘನೆ ಮಾಡಿದಂತಾಗಿದೆ. ಭಾರತೀಯ ಸಂವಿಧಾನ 21ನೇ ದ್ವಿತೀಯ ಪ್ರಕಾರ ಇದಕ್ಕೆ ಕಾನೂನಿನ ಚೌಕಟ್ಟು ಅವಕಾಶ ಮಾಡಿಕೊಡುವುದಿಲ್ಲ ಎಂದು ಛತ್ತೀಸ್ಗಢ ಹೈಕೋರ್ಟ್ ತೀರ್ಪನ್ನ ನೀಡಿದೆ.

Courtಪ್ರಕರಣದ ಹಿನ್ನೆಲೆ:

ಛತ್ತೀಸ್ಗಡ ಮಹಾಸಮುಂಡ್ ಜಿಲ್ಲೆಯಲ್ಲಿ ದಂಪತಿಗಳು ಡೈವೋರ್ಸ್ ಗೆ ಕೌಟುಂಬಿಕ ನ್ಯಾಯಾಲಯದಲ್ಲಿ (family court) ಅರ್ಜಿ ಸಲ್ಲಿಸಿದರು ಈ ಸಂದರ್ಭದಲ್ಲಿ ಪತಿಗೆ, ಪತ್ನಿಗೆ ಜೀವನಾಂಶ ನೀಡಬೇಕು ಎಂದು ನ್ಯಾಯಾಲಯ ತಿಳಿಸಿತ್ತು. ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ 2019 ರಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಕಡೆಗೂ ತನ್ನ ಪತ್ನಿಗೆ ಜೀವನ ಅಂಶವನ್ನು ಕೊಡುವುದನ್ನು ತಪ್ಪಿಸಿಕೊಳ್ಳಬೇಕು ಎಂದು ಪತಿ ಆಕೆಯ ಮೊಬೈಲ್ ಕರೆಗಳನ್ನು (Mobile Call Records) ರೆಕಾರ್ಡ್ ಮಾಡಿ, ಆಕೆ ಮಾಡಬಾರದ ಕೆಲಸ ಮಾಡುತ್ತಿದ್ದಾಳೆ ಎಂದು ಕೌಟುಂಬಿಕ ನ್ಯಾಯಾಲಯಕ್ಕೆ ನಿರೂಪಿಸಿದ್ದಾನೆ.

ಎರಡಕ್ಕಿಂತ ಹೆಚ್ಚು ಮನೆ ಬಾಡಿಗೆಗೆ ಕೊಟ್ಟಿರುವ ಮಾಲೀಕರಿಗೆ ಹೊಸ ನಿಯಮಗಳು! ಹೊಸ ರೂಲ್ಸ್

ನ್ಯಾಯಾಲಯದಲ್ಲಿ ವಿಚಾರಣೆಯ ವೇಳೆ ಈ ಮೊಬೈಲ್ ರೆಕಾರ್ಡ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾನೆ. ಆಕೆಯ ಕ್ಯಾರೆಕ್ಟರ್ ಸರಿ ಇಲ್ಲ ಹಾಗಾಗಿ ಆಕೆಗೆ ತಾನು ಜೀವನಾಂಶ ಕೊಡುವುದಿಲ್ಲ ಎಂದು ಅರ್ಜಿಯನ್ನು ಮರುಪರಿಶೀಲಿಸಲು ಮನವಿ ಮಾಡಿದ್ದ. ಇದನ್ನು ಪರಿಗಣಿಸಿದ ಕೌಟುಂಬಿಕ ನ್ಯಾಯಾಲಯ ವಿಚಾರಣೆಗೆ ಒಪ್ಪಿತ್ತು. ಈ ವಿಚಾರಣೆಗೆ ಸಂಬಂಧಪಟ್ಟ ಹಾಗೆ ಆಕೆ 2022 ರಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು.

ಹೈಕೋರ್ಟ್ ಆದೇಶ:

ವಾದವಿವಾದಗಳನ್ನು ಆಲಿಸಿರುವ ಹೈಕೋರ್ಟ್ ನ್ಯಾಯಮೂರ್ತಿ ರಾಕೇಶ್ ಮೋಹನ್ ಪಾಂಡೆ ಈ ವಿಚಾರಣೆಗೆ ಸಂಬಂಧಪಟ್ಟಂತೆ ಮಹತ್ವದ ತೀರ್ಮಾನವನ್ನು ನೀಡಿದ್ದಾರೆ. ಪತಿ ತನ್ನ ಪತ್ನಿಯ ದೂರವಾಣಿ ಸಂಭಾಷಣೆಯನ್ನು ಆಕೆಗೆ ಗೊತ್ತಾಗದ ಹಾಗೆ ರೆಕಾರ್ಡ್ (record) ಮಾಡಿಕೊಂಡರೆ ಅದು ಆಕೆಯ ಖಾಸಗಿತನದ ಉಲ್ಲಂಘನೆ ಆಗುತ್ತದೆ ಎಂದು ಮಹಿಳೆಯರ ಪರ ವಕೀಲರಾದ ವೈಭವ್ ಎ ಗೋವರ್ಧನ್ ವಾದ ಮಂಡಿಸಿದ್ದಕ್ಕೆ ಹೈಕೋರ್ಟ್ ತೀರ್ಪನ್ನು ನೀಡಿದೆ.

ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ; ವಿದ್ಯಾರ್ಥಿಗಳಿಗಾಗಿ ವಿಶೇಷ ಯೋಜನೆ ಜಾರಿಗೆ

ಗೌಪ್ಯತೆಯ ಹಕ್ಕು ಅನುಚ್ಛೇದ 21ರಲ್ಲಿ ಜೀವಿಸುವ ಹಕ್ಕಿನ ಬಗ್ಗೆ ಹೇಳಲಾಗಿದೆ. ಕೌಟುಂಬಿಕ ನ್ಯಾಯಾಲಯ ಸಿಆರ್ಪಿಸಿ ಸೆಕ್ಷನ್ 31ರ ಅಡಿಯಲ್ಲಿ, ಅರ್ಜಿದಾರ ಪತ್ನಿಯ ವಿರುದ್ಧ ಸಲ್ಲಿಸಿದ ಅರ್ಜಿಯಲ್ಲಿ ಕಾನೂನಿನ ದೋಷ ಇದೆ ಎಂದು ತೀರ್ಮಾನಿಸಲಾಗಿದೆ.

ಭಾರತೀಯ ಸಾಕ್ಷಿ ಕಾಯ್ದೆ ಸೆಕ್ಷನ್ 65, ಕೌಟುಂಬಿಕ ನ್ಯಾಯಾಲಯವು ಹೊರಡಿಸಿದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಗಂಡ ತನ್ನ ಹೆಂಡತಿಯ ಅನುಮತಿ ಇಲ್ಲದೆ ಜೊತೆಯಲ್ಲಿ ಇರುವಾಗ ಅಥವಾ ವಿಚ್ಛೇದನದ ನಂತರ ಆಕೆಯ ಖಾಸಗಿತನಕ್ಕೆ ಧಕ್ಕೆ ಆಗುವಂತೆ ನಡೆದುಕೊಳ್ಳುವಂತಿಲ್ಲ.

TRENDING ARTICLES1 / 4
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories