ಗೃಹಿಣಿಯರಿಗೆ ಪ್ರತಿ ತಿಂಗಳು ₹3000 ಹಾಗೂ ₹400ಕ್ಕೆ LPG ಸಿಲಿಂಡರ್! ಸರ್ಕಾರದ ಘೋಷಣೆ

ಜನರಿಗೆ ಉಪಯುಕ್ತವಾದ ಯೋಜನೆಗಳನ್ನು (Govt Scheme) ಯಾರಿಗೆ ತಂದಾಗ ಮಾತ್ರ ಚುನಾವಣೆಯಲ್ಲಿ (Election) ಹೆಚ್ಚು ಮತಗಳನ್ನು ಪಡೆದು ಗೆಲ್ಲಲು ಸಾಧ್ಯ

ಸರ್ಕಾರಗಳು ಅಧಿಕಾರದಲ್ಲಿ ಇರುವಾಗ ಜನರಿಗೆ ಉಪಯುಕ್ತವಾದ ಯೋಜನೆಗಳನ್ನು (Govt Scheme) ಯಾರಿಗೆ ತಂದಾಗ ಮಾತ್ರ ಚುನಾವಣೆಯಲ್ಲಿ (Election) ಹೆಚ್ಚು ಮತಗಳನ್ನು ಪಡೆದು ಗೆಲ್ಲಲು ಸಾಧ್ಯ.

ಇತ್ತೀಚಿಗೆ ನಡೆಯುವ ಎಲೆಕ್ಷನ್ ಸಮಯದಲ್ಲಿ ನೀಡುವ ಭರವಸೆಗಳು ಹೆಚ್ಚು ಜನರನ್ನು ಆಕರ್ಷಿಸುತ್ತವೆ ಎನ್ನಬಹುದು. ಈಗಾಗಲೇ ದೇಶಾದ್ಯಂತ ಮುಂಬರುವ ಚುನಾವಣಾ ತಯಾರಿ ನಡೆಯುತ್ತಿದೆ

ಈ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳು ತಮ್ಮ ರಾಜ್ಯದ ಪ್ರಜೆಗಳಿಗೆ ಅನುಕೂಲವಾಗುವಂತಹ ಕೆಲವು ಯೋಜನೆಗಳನ್ನು ಪರಿಚಯಿಸುತ್ತಿವೆ.

ಗೃಹಿಣಿಯರಿಗೆ ಪ್ರತಿ ತಿಂಗಳು ₹3000 ಹಾಗೂ ₹400ಕ್ಕೆ LPG ಸಿಲಿಂಡರ್! ಸರ್ಕಾರದ ಘೋಷಣೆ - Kannada News

ಎರಡಕ್ಕಿಂತ ಹೆಚ್ಚು ಮನೆ ಬಾಡಿಗೆಗೆ ಕೊಟ್ಟಿರುವ ಮಾಲೀಕರಿಗೆ ಹೊಸ ನಿಯಮಗಳು! ಹೊಸ ರೂಲ್ಸ್

ವಿಧಾನಸಭಾ ಚುನಾವಣೆ: (Vidhan Sabha election)

5 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಉಚಿತ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ ಸಾಧ್ಯವಾಗಿತ್ತು.

ಇದೇ ಸೂತ್ರವನ್ನು ಇರತ ರಾಜ್ಯಗಳೂ ಕೂಡ ಅನ್ವಯಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಹಾಗಾಗಿ ತಮ್ಮ ರಾಜ್ಯಗಳಲ್ಲಿಯೂ ಕೂಡ ಪ್ರಮುಖ ಉಚಿತ ಯೋಜನೆ ಗಳನ್ನು ಘೋಷಿಸಿ ಜನರ ಗಮನ ಸೆಳೆಯುವತ್ತ ತಮ್ಮದೇ ಆಗಿರುವ ಚುನಾವಣಾ ಟ್ರಿಕ್ಸ್ ಬಳಸಲು ಮುಂದಾಗಿದ್ದಾರೆ.

ತೆಲಂಗಾಣದಲ್ಲಿ ಚುನಾವಣಾ ಬಿಸಿ:

ದಕ್ಷಿಣ ಭಾರತದ ತೆಲಂಗಾಣದಲ್ಲಿ (Telangana) ಚುನಾವಣಾ ತಯಾರಿ ಜೋರಾಗಿದೆ. ಈ ಹಿಂದೆ 2 ಬಾರಿ ಚುನಾವಣೆಯಲ್ಲಿ ಸುಲಭವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿಆರ್ಎಸ್ ಪಕ್ಷ (BRS party) ಈ ಬಾರಿಯೂ ಆಡಳಿತ ಪಕ್ಷದಲ್ಲಿ ಕುಳಿತುಕೊಳ್ಳಬೇಕೆಂದರೆ ಭಾರೀ ಪೈಪೋಟಿ ಎದುರಿಸಬೇಕು.

ಇದೀಗ ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿದಂತೆ ಪ್ರಣಾಳಿಕೆ ಹೊರಡಿಸಿರುವ ಬಿ ಆರ್ ಎಸ್ ಪಕ್ಷ ಕೇವಲ 400 ರೂ. ಗಳಿಗೆ ಗ್ಯಾಸ್ ಸಿಲೆಂಡರ್ ಕೊಡಲು ನಿರ್ಧರಿಸಿದೆ.

ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿರುವ ಸಿಎಂ, ಕೆಸಿಆರ್ (CM KCR) ಇನ್ನು ಮುಂದೆ ಕೇವಲ 400 ರೂ. ಗಳಿಗೆ ಗೃಹಬಳಕೆಯ ಗ್ಯಾಸ್ ಸಿಲೆಂಡರ್ ನೀಡಲು ಸರ್ಕಾರ ನಿರ್ಧರಿಸಿದೆ ಎಂದಿದ್ದಾರೆ. ಇದರ ಜೊತೆಗೆ ಪಿಂಚಣಿದಾರರಿಗೂ ಬಹಳ ಅನುಕೂಲವಾದ ಆದೇಶ ನೀಡಲಿದ್ದಾರೆ.

ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ; ವಿದ್ಯಾರ್ಥಿಗಳಿಗಾಗಿ ವಿಶೇಷ ಯೋಜನೆ ಜಾರಿಗೆ

ಪಿಂಚಣಿದಾರರಿಗೆ ಶುಭ ಸುದ್ದಿ:

Pension Schemeಹೌದು, ಆಸರೆ ಪಿಂಚಣಿದಾರರಿಗೆ ಕೆಸಿಆರ್ ಒಂದು ಗುಡ್ ನ್ಯೂಸ್ ನೀಡಿದ್ದಾರೆ. ಪಿಂಚಣಿ (Pension) ಮೊತ್ತವನ್ನು 5,000ರೂ. ಗಳನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಆದರೆ ಇದನ್ನು ಕಂತುಗಳಲ್ಲಿ ಕೊಡಲಾಗುತ್ತದೆ.

ವಾರ್ಷಿಕವಾಗಿ 500ರೂ. ಗಳನ್ನು ಹೆಚ್ಚಿಸಲಾಗುವುದು. ಈಗ ಸಿಗುತ್ತಿರುವ ಪಿಂಚಣಿ 3016 ರೂ. ಇದನ್ನು ಮುಂದಿನ ಐದು ವರ್ಷಗಳಲ್ಲಿ 5,000 ರೂ. ಗಳಿಗೆ ಹೆಚ್ಚಿಸಲಾಗುವುದು.

ಅಂಗವಿಕಲರ ಪಿಂಚಣಿಯಲ್ಲೂ ಹೆಚ್ಚಳ:

ಅಂಗವಿಕಲರಿಗೆ (Physically challenged) ಕೆ ಸಿ ಆರ್ ನೇತೃತ್ವದ ಸರ್ಕಾರ 4,000ರೂ. ಗಳಿದ್ದ ಪಿಂಚಣಿಯನ್ನು 6,000 ರೂ. ಗೆ ಹೆಚ್ಚಿಸುವುದಾಗಿ ತಿಳಿಸಿದೆ. ಅಷ್ಟೇ ಅಲ್ಲದೇ ಕೆಸಿಆರ್ ಭಿಮಾ ಹೆಸರಲ್ಲಿ 93 ಲಕ್ಷ ಕುಟುಂಬಗಳಿಗೆ 5 ಲಕ್ಷ ರೂ. ಗಳವರೆಗೆ ವಿಮೆ (Insurance) ನೀಡಲಾಗುವುದು ಹಾಗೂ ಈ ವಿಮಾ ಕಂತುಗಳನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ.

ಬಿಪಿಎಲ್ ಕಾರ್ಡ್ ಇದ್ದವರಿಗೆ ಬಂಪರ್ ಆಫರ್! ಸಿಗಲಿದೆ ಕೇಂದ್ರದಿಂದ ಉಚಿತ ಗ್ಯಾಸ್ ಸಿಲಿಂಡರ್

ರೈತಬಂಧು ಮೊತ್ತ ಹೆಚ್ಚಳ;

ರೈತಬಂಧು ಹಣವನ್ನು 12,000ರೂ. ಕೊಡಲಾಗುತ್ತಿತ್ತು. ಇದನ್ನು 2024, ಮಾರ್ಚ್ ನಿಂದ ಹಂತಹಂತವಾಗಿ ಹೆಚ್ಚಿಸಲು ತೀರ್ಮಾನಿಸಲಾಗಿದ್ದು, ಇದರ ಮೊತ್ತ 16,000ಕ್ಕೆ ಏರಿಕೆ ಆಗಬಹುದು. ಒಟ್ಟಿನಲ್ಲಿ ಚುನಾವಣೆ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ ಕೆ ಸಿ ಆರ್ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.

ಕರ್ನಾಟಕದ ಯೋಜನೆಗಳನ್ನು ನೋಡಿ ಅವುಗಳಂತೆ ಯೋಜನೆ ರೂಪಿಸಲು ತೆಲಂಗಾಣ ಸರ್ಕಾರ ಚಿಂತಿಸುತ್ತಿದ್ದರೆ, ಅವರ ಹೊಸ ಯೋಜನೆಗಳು ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿಯೂ ಜಾರಿಗೆ ಬರಬಹುದು.

BRS Party Releases Election Manifesto Announced in Telangana

Follow us On

FaceBook Google News

BRS Party Releases Election Manifesto Announced in Telangana