ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಶಾಲಾ ಬಸ್! ತಪ್ಪಿದ ಭಾರೀ ಅವಘಡ
ಆಂದ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಮಂದಸ ಬಳಿಯ ಉಮಾಗಿರಿಯಲ್ಲಿ ಭಾರೀ ಅವಘಡ ತಪ್ಪಿದೆ, ನಿಯಂತ್ರಣ ತಪ್ಪಿದ ಶಾಲಾ ಬಸ್ ಕೆರೆಗೆ ಉರುಳಿದ ಘಟನೆ ನಡೆದಿದೆ
- ಶಾಲಾ ಬಸ್ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಘಟನೆ
- ಸ್ಥಳೀಯರಿಂದ ಎಲ್ಲಾ ಮಕ್ಕಳ ರಕ್ಷಣೆ
- ಐದು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು
ಆಂದ್ರಪ್ರದೇಶ : ಶನಿವಾರ ಸಂಜೆ ಶ್ರೀಕಾಕುಳಂ ಜಿಲ್ಲೆಯ ಮಂದಸ ಬಳಿಯ ಉಮಾಗಿರಿಯಲ್ಲಿ ಭಾರೀ ಅವಘಡ ತಪ್ಪಿದೆ. ವಿವೇಕಾನಂದ ಶಾಲೆಯ ಬಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಕೆರೆಗೆ ಉರುಳಿದ ಘಟನೆ ನಡೆದಿದೆ, ತಕ್ಷಣ ಸ್ಥಳೀಯರು ಬಸ್‌ನಲ್ಲಿದ್ದ ಒಟ್ಟು 35 ಮಂದಿ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ.
ಹೆಂಡತಿಯನ್ನು ಕೊಂದು ಮುಳ್ಳಿನ ಪೊದೆಯಲ್ಲಿ ಎಸೆದು ಹೋದ ಗಂಡ! ಸಿಕ್ಕಿಬಿದ್ದಿದ್ದು ಹೇಗೆ?
ಘಟನೆಯ ಸಮಯದಲ್ಲಿ ಸ್ಥಳೀಯರು ಸಕ್ರಿಯವಾಗಿ ಪಾಲ್ಗೊಂಡು ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ಬೇಗನೆ ರಕ್ಷಿಸಿದರು. ಇನ್ನು ಘಟನೆಯಲ್ಲಿ ಗಾಯಗೊಂಡ ಐದು ವಿದ್ಯಾರ್ಥಿಗಳನ್ನು ತಕ್ಷಣ ಮಂಡಸ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಪ್ರಾಥಮಿಕ ಚಿಕಿತ್ಸೆ ನಂತರ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಹಣಕ್ಕಾಗಿ 60 ವರ್ಷದ ತಾಯಿಯನ್ನೇ ಕೊಂದ ಮಾದಕ ವ್ಯಸನಿ ಮಗ
ಆದರೆ, ಈ ದುರ್ಘಟನೆಯು ಚಾಲಕನ ನಿರ್ಲಕ್ಷ್ಯದಿಂದಲೇ ಸಂಭವಿಸಿದೆ ಎಂದು ಆ ಭಾಗದ ಶಿಕ್ಷಣಾಧಿಕಾರಿ ಲಕ್ಷ್ಮಣರಾವ್ ತಿಳಿಸಿದ್ದಾರೆ. ಇನ್ನು ನಿಯಂತ್ರಣ ಕಳೆದುಕೊಂಡ ಚಾಲಕ ಬಸ್ ಅನ್ನು ಕೇರೆಯಲ್ಲಿ ಮುಳುಗಿಸಿದ ಬಗ್ಗೆ ತನಿಖೆ ಮುಂದುವರೆದಿದೆ.
School Bus Plunges into Lake, 5 Students Injured
Our Whatsapp Channel is Live Now 👇