ಇಂತಹ ಡೇಂಜರ್ ಆಕ್ಸಿಡೆಂಟ್ ನೀವು ಎಂದೂ ನೋಡಿರೋಕೆ ಚಾನ್ಸ್ ಇಲ್ಲ! ಭಯಾನಕ
ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಭೀಕರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್.

ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದ ದೃಶ್ಯ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮಧ್ಯದ ಡಿವೈಡರ್‌ಗೆ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ, ಕ್ಷಣಾರ್ಧದಲ್ಲಿ ಗಾಳಿಯಲ್ಲಿ ಹಾರಿ ನಾಲ್ಕು ಸುತ್ತು ಸುತ್ತಿ ರಸ್ತೆಯಲ್ಲಿ ಪಲ್ಟಿ ಹೊಡೆದಿದೆ.
ಘಟನೆಯ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಅಪಘಾತದ ವೇಳೆ ಕಾರಿನ ಟೈರ್‌ಗಳು ಸಹ ಉದುರಿ ಹೋಗಿದ್ದು, ಕಾರು ಉಲ್ಟಾ ಬಿದ್ದು ಸಾಕಷ್ಟು ಹಾನಿಯಾಗಿದೆ ಎಂದು ದೃಶ್ಯಗಳು ತೋರಿಸುತ್ತವೆ.
ಘಟನೆಯ ತೀವ್ರತೆಯಿಂದ ಕಾರಿನೊಳಗಿದ್ದ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಕ್ಕದಲ್ಲಿದ್ದವರು ಏನಾಗಿದೆ ಎಂದು ಅರ್ಥವಾಗದೇ ಕೆಲವು ಕ್ಷಣ ತಬ್ಬಿಬ್ಬಾದರು. ನಂತರ ಧಾವಿಸಿ ಸಹಾಯ ಮಾಡಲು ಯತ್ನಿಸಿದರು.
🚨Tamil Nadu’s Tirunelveli district, a car crash was caught on CCTV at Panakudi along the 4-way national highway, leaving 2 injured. pic.twitter.com/hB0dRiYnCv
— Deadly Kalesh (@Deadlykalesh) September 30, 2025
ಅಪಘಾತದ ಪರಿಣಾಮ ರಸ್ತೆ ಮೇಲೆ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. ಮಾಹಿತಿ ತಿಳಿದ ತಕ್ಷಣ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ದರು.
ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮ ಬಳಕೆದಾರರು ವಿವಿಧ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು “ಕಾರು ಟೈರ್ ಬ್ಲಾಸ್ಟ್ ಆಗಿರಬಹುದು” ಎಂದು ಕಾಮೆಂಟ್ ಮಾಡಿದ್ದರೆ, ಇನ್ನು ಕೆಲವರು “ಅಯ್ಯೋ ಎಷ್ಟು ಭೀಕರ ದೃಶ್ಯ!” ಎಂದು ಬೆಚ್ಚಿಬಿದ್ದಿದ್ದಾರೆ.
ಅಪಘಾತವು ಕೇವಲ ಒಂದು ಕ್ಷಣದಲ್ಲಿ ಸಂಭವಿಸಿದರೂ, ಅದು ಜೀವಕ್ಕೆ ಎಷ್ಟು ಅಪಾಯವನ್ನುಂಟುಮಾಡಬಹುದು ಎಂಬುದಕ್ಕೆ ಇದು ಜೀವಂತ ಉದಾಹರಣೆಯಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
Shocking Tamil Nadu Accident, Car Flies into Air, Viral CCTV Video



