ಹೈ-ವೋಲ್ಟೇಜ್ ವಿದ್ಯುತ್ ತಂತಿ ತಗುಲಿ ನಾಲ್ವರು ಯುವಕರು ಸ್ಥಳದಲ್ಲೇ ಸಾವು
ಚರ್ಚ್ ಉತ್ಸವದ ವೇಳೆ ಹೈವೋಲ್ಟೇಜ್ (High Voltage) ವೈರ್ ತಗುಲಿ ನಾಲ್ವರು ಯುವಕರು ವಿದ್ಯುತ್ ಶಾಕ್‌ಗೆ ಸಿಲುಕಿ ಮೃತಪಟ್ಟಿರುವ ದುರ್ಘಟನೆ ಕನ್ಯಾಕುಮಾರಿ ಜಿಲ್ಲೆಯ ಬುದ್ಧಂತುರೈ ಪ್ರದೇಶದಲ್ಲಿ ಸಂಭವಿಸಿದೆ.

- ಚರ್ಚ್ ಉತ್ಸವದ ಸಿದ್ಧತೆಯಲ್ಲಿ ಮದ್ಯರಾತ್ರಿ ದುರ್ಘಟನೆ
- ಹೈವೋಲ್ಟೇಜ್ ತಗುಲಿ ಸ್ಥಳದಲ್ಲಿಯೇ ನಾಲ್ವರು ಸಾವು
- ಪೊಲೀಸರಿಂದ ಪ್ರಕರಣದ ತನಿಖೆ ಆರಂಭ
ಕನ್ಯಾಕುಮಾರಿ ಜಿಲ್ಲೆಯಲ್ಲಿ ಚರ್ಚ್ ಉತ್ಸವದ (Church Festival) ಸಿದ್ಧತೆ ವೇಳೆ ಭೀಕರ ಘಟನೆ ಸಂಭವಿಸಿದೆ. ಹೈವೋಲ್ಟೇಜ್ ವಿದ್ಯುತ್ ತಂತಿ ತಗುಲಿ ನಾಲ್ವರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳೀಯರು ಅವರನ್ನು ರಕ್ಷಿಸಲು ಹರಸಾಹಸ ಪಟ್ಟರೂ ಫಲಕಾರಿಯಾಗಿಲ್ಲ.
ಬುದ್ಧಂತುರೈ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದ್ದು, ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳುವಾಗ ಏಣಿ (Ladder) ಎತ್ತುತ್ತಿದ್ದಾಗ ಹೈವೋಲ್ಟೇಜ್ ವಿದ್ಯುತ್ ತಂತಿಗೆ ತಗುಲಿದೆ.
ಕ್ಷಣಾರ್ಧದಲ್ಲಿ ಯುವಕರು ವಿದ್ಯುತ್ ಶಾಕ್‌ಗೆ ಒಳಗಾಗಿದ್ದಾರೆ. ಅಲ್ಲಿಯೇ ನೆರೆದಿದ್ದ ಜನರು ಆಶ್ಚರ್ಯದಿಂದ ನೋಡುತ್ತಿರುವಷ್ಟರಲ್ಲಿಯೇ ಯುವಕರು ಪ್ರಾಣಬಿಟ್ಟಿದ್ದಾರೆ.
ಸ್ಥಳದಲ್ಲಿ ಪೋಷಕರ ಆಕ್ರಂದನ, ಕುಟುಂಬದವರ ದುಃಖ ಮುಗಿಲು ಮುಟ್ಟಿತ್ತು. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿ (Case Registered) ತನಿಖೆ ಆರಂಭಿಸಿದ್ದಾರೆ.
Tragic Electrocution in Kanyakumari, 4 Dead



