Haryana Bus Accident: ಹರಿಯಾಣದಲ್ಲಿ ಬಸ್‌ಗೆ ಟ್ರಕ್ ಡಿಕ್ಕಿ, ಎಂಟು ಮಂದಿ ಸಾವು
Haryana Bus Accident: ಹರಿಯಾಣದ ಅಂಬಾಲಾ ಜಿಲ್ಲೆಯ ಕಕ್ಕಡ್ ಮಜ್ರಾ ಗ್ರಾಮದ ಬಳಿ ಶುಕ್ರವಾರ ಟ್ರಕ್ ಮತ್ತು ಬಸ್ ನಡುವೆ ಡಿಕ್ಕಿ ಸಂಭವಿಸಿ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 15 ಮಂದಿ ಗಾಯಗೊಂಡಿದ್ದಾರೆ.
Haryana Bus Accident: ಹರಿಯಾಣದ ಅಂಬಾಲಾ ಜಿಲ್ಲೆಯ ಕಕ್ಕಡ್ ಮಜ್ರಾ ಗ್ರಾಮದ ಬಳಿ ಶುಕ್ರವಾರ ಟ್ರಕ್ ಮತ್ತು ಬಸ್ ನಡುವೆ ಡಿಕ್ಕಿ ಸಂಭವಿಸಿ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 15 ಮಂದಿ ಗಾಯಗೊಂಡಿದ್ದಾರೆ.
ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪಂಚಕುಲ-ಯಮುನಾನಗರ ರಾಷ್ಟ್ರೀಯ ಹೆದ್ದಾರಿಯ ಕಕ್ಕಡ್ ಮಜ್ರಾ ಗ್ರಾಮದ ಬಳಿ ಈ ಘಟನೆ ನಡೆದಿದೆ.
ಬಸ್ ಉತ್ತರ ಪ್ರದೇಶದ ಬರೇಲಿಯಿಂದ ಹಿಮಾಚಲ ಪ್ರದೇಶದಕ್ಕೆ ಹೋಗುತ್ತಿತ್ತು. ಕಕ್ಕರ್ ಮಜ್ರಾದಲ್ಲಿ ಬಸ್‌ನ ಮೂವರು ಪ್ರಯಾಣಿಕರು ಇಳಿಯುತ್ತಿದ್ದಾಗ ಟ್ರಕ್ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳನ್ನು ಅಂಬಾಲಾ ನಗರ ಮತ್ತು ನಾರಾಯಣಗಢದ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಬಸ್‌ನಲ್ಲಿದ್ದ ಬಹುತೇಕ ಪ್ರಯಾಣಿಕರು ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರು ಎಂದು ಪೊಲೀಸರು ತಿಳಿಸಿದ್ದಾರೆ.
ದಾರಿಹೋಕರ ಸಹಾಯದಿಂದ ಗಾಯಾಳುಗಳನ್ನು ಬಸ್‌ನಿಂದ ಹೊರತೆಗೆಯಲಾಯಿತು. ಈ ಸಂಬಂಧ ಲಾರಿ ಚಾಲಕನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
Truck rams into bus in Haryana, eight killed in Haryana Bus Accident
Follow us On
Google News |
Advertisement