ಕೇಂದ್ರ ಸರ್ಕಾರ ನೀಡುತ್ತಿರುವ ಈ ಸಾಲಕ್ಕೆ ಬಡ್ಡಿಯೇ ಇಲ್ಲ; ಸಾಲ ತೆಗೆದುಕೊಳ್ಳಲು ಮುಗಿಬಿದ್ದ ಜನ

ಕುಶಲ ಕರ್ಮಿಗಳು ತಮ್ಮ ಕೆಲಸಕ್ಕೆ ಅನುಕೂಲವಾಗುವ ವಸ್ತು ಖರೀದಿ ಹಾಗೂ ತಮ್ಮ ಉದ್ಯೋಗ ಮಾಡುವುದಕ್ಕಾಗಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಸಾಲ (Govt Loan) ಪಡೆದುಕೊಳ್ಳಬಹುದು.

ದೇಶದ ಬಡ ನಾಗರಿಕರಿಗಾಗಿ ಅನುಕೂಲವಾಗುವಂತಹ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ (Central Government) ಜಾರಿಗೆ ತರುತ್ತದೆ, ಅದರಲ್ಲೂ ಬಡವರ ಆರ್ಥಿಕ ಸಬಲೀಕರಣಕ್ಕಾಗಿ ಮೋದಿ (Modi Government) ನೇತೃತ್ವದ ಸರ್ಕಾರ ಈಗಾಗಲೇ ಸಾಕಷ್ಟು ಪ್ರಯೋಜನಕಾರಿ ಯೋಜನೆಗಳನ್ನು ಪರಿಚಯಿಸಿದೆ.

ಅಲ್ಲದೆ ಇಂತಹ ಹಲವು ಯೋಜನೆಗಳನ್ನು (Schemes) ಜನ ಸದುಪಯೋಗ ಪಡಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಕಾರ್ಯಪ್ರವೃತ್ತರಾಗಿರುವ ಕಾರ್ಮಿಕರಿಗೆ ಅನುಕೂಲವಾಗುವಂತಹ ಹೊಸ ಸೌಲಭ್ಯವನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒದಗಿಸಿಕೊಟ್ಟಿದೆ.

ಕೇಂದ್ರ ಸರ್ಕಾರ ಕಾರ್ಮಿಕರಿಗಾಗಿ ಹೊಸ ಯೋಜನೆಯನ್ನು ರೂಪಿಸಲು ಬ್ಲೂಪ್ರಿಂಟ್ ರೆಡಿ ಮಾಡಿದೆ. ಇದರ ಮೂಲಕ ಕುಶಲಕರ್ಮಿಗಳು ಸಾಲ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಯೋಜನೆಯ ಅಡಿಯಲ್ಲಿ ಸಾಲ ಪಡೆದುಕೊಂಡರೆ ಅತಿ ಕಡಿಮೆ ಬಡ್ಡಿ ಹಾಗೂ ಹೆಚ್ಚಿನ ಬೆನಿಫಿಟ್ ಪಡೆಯಬಹುದು.

ಕೇಂದ್ರ ಸರ್ಕಾರ ನೀಡುತ್ತಿರುವ ಈ ಸಾಲಕ್ಕೆ ಬಡ್ಡಿಯೇ ಇಲ್ಲ; ಸಾಲ ತೆಗೆದುಕೊಳ್ಳಲು ಮುಗಿಬಿದ್ದ ಜನ - Kannada News

ರೇಷನ್ ಕಾರ್ಡ್ ಹೊಂದಿರುವವರಿಗೆ ರಾತ್ರೋ ರಾತ್ರಿ ಹೊಸ ಯೋಜನೆ ಘೋಷಿಸಿದ ಕೇಂದ್ರ ಸರ್ಕಾರ

ವಿಶ್ವಕರ್ಮ ಯೋಜನೆ (Vishwakharma Scheme)

ಇತ್ತೀಚಿಗಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಮೂಲಕ ದೇಶದಲ್ಲಿ ಸಾಂಪ್ರದಾಯಿಕವಾಗಿ ಕೌಶಲ್ಯ ಕಲೆ ಹೊಂದಿರುವ ಜನರ ಕೆಲಸವನ್ನು ಉತ್ತೇಜಿಸುವುದು ಭಾರತೀಯ ಪರಂಪರೆಯನ್ನು ಉಳಿಸಿಕೊಂಡು ಹೋಗುವುದು ಕೇಂದ್ರ ಸರ್ಕಾರದ ಉದ್ದೇಶ.

ಆದ್ದರಿಂದ ವಿಶ್ವಕರ್ಮ ಯೋಜನೆಯ ಮೂಲಕ ಭಾರತದಲ್ಲಿ ವಾಸಿಸುವ ಕುಶಲಕರ್ಮಿಗಳಿಗೆ ಅನುಕೂಲವಾಗುವ ಸಾಲ ಸೌಲಭ್ಯ ತರಬೇತಿ ಮೊದಲಾದವುಗಳನ್ನು ನೀಡಲಾಗುತ್ತದೆ. ಇದಕ್ಕಾಗಿ 13,000 ಕೋಟಿ ಮೀಸಲಿಡಲಾಗಿದೆ.

ಅತಿ ಕಡಿಮೆ ಬಡ್ಡಿಗೆ 3 ಲಕ್ಷ ಸಾಲ (Subsidy loan)

Loanಕುಶಲ ಕರ್ಮಿಗಳು ತಮ್ಮ ಕೆಲಸಕ್ಕೆ ಅನುಕೂಲವಾಗುವ ವಸ್ತು ಖರೀದಿ ಹಾಗೂ ತಮ್ಮ ಉದ್ಯೋಗ ಮಾಡುವುದಕ್ಕಾಗಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಸಾಲ (Govt Loan) ಪಡೆದುಕೊಳ್ಳಬಹುದು. ಮೊದಲ ಕಂತಿನಲ್ಲಿ ಒಂದು ಲಕ್ಷ ಹಾಗೂ ಎರಡನೇ ಕಂತಿನಲ್ಲಿ ಎರಡು ಲಕ್ಷ ರೂಪಾಯಿಗಳನ್ನು ಸಾಲ (Loan) ನೀಡಲಾಗುತ್ತದೆ ಇದಕ್ಕೆ ಕೇವಲ 5% ನಷ್ಟು ಮಾತ್ರ ಬಡ್ಡಿ.

ವಿಶ್ವಕರ್ಮ ಯೋಜನೆಯ ಫಲಾನುಭವಿಗಳು ಬಯೋಮೆಟ್ರಿಕ್ ಆಧಾರಿತ, ಪಿಎಂ ವಿಶ್ವಕರ್ಮ ಅಧಿಕೃತ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಬೇಕು ನಂತರ ಅವರಿಗೆ ವಿಶ್ವಕರ್ಮ ಸರ್ಟಿಫಿಕೇಟ್ ಹಾಗೂ ಐಡಿ ಕೂಡ ಸಿಗಲಿದೆ.

ಕೌಶಲ್ಯ ತರಬೇತಿ

ಇನ್ನು ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಅಗತ್ಯ ಇರುವವರಿಗೆ ಕೌಶಲ್ಯ ತರಬೇತಿ (Training) ಕೂಡ ನೀಡಲಾಗುತ್ತದೆ. ತರಬೇತಿಯ ವೇಳೆ ಪ್ರತಿ ದಿನ 500 ರೂಪಾಯಿಗಳ ಸ್ಟೈಫಂಡ್ ಕೂಡ ಸಿಗುತ್ತದೆ. ಇದರ ಜೊತೆಗೆ 1500 ಉಚಿತ ಟೂಲ್ ಕಿಟ್ (Tool Kit) ನೀಡಲಾಗುವುದು.

ವಿಶ್ವಕರ್ಮ ಯೋಜನೆಯ ಪ್ರಯೋಜನ ಯಾರು ಪಡೆದುಕೊಳ್ಳಬಹುದು?

ಯಾರು ಸಾಂಪ್ರದಾಯಿಕ ಕುಶಲಕರ್ಮಿ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ ಅಂತವರಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ. ಉದಾಹರಣೆಗೆ ಮೀನುಗಾರರು, ಮಡಿಕೆ ಮಾಡುವವರು, ಅಕ್ಕಸಾಲಿಗರು, ಮೊದಲಾದ ದೇಶದ ಪರಂಪರೆ ಉಳಿಸಿಕೊಂಡು ಬರುತ್ತಿರುವ ಕುಶಲಕರ್ಮಿ ಕೆಲಸಗಾರರಿಗೆ ಸಬ್ಸಿಡಿ ದರದಲ್ಲಿ ಸಾಲ ಸಿಗಲಿದೆ.

ಇನ್ನು ಈ ಯೋಜನೆಯ ಅಡಿಯಲ್ಲಿ ಅರ್ಜಿ ಹಾಕುವವರು 18 ವರ್ಷ ವಯಸ್ಸಾಗಿರಬೇಕು. ನೀವು ನೋಂದಾಯಿಸಿಕೊಳ್ಳುವಾಗ ನಿಮ್ಮ ವ್ಯಾಪಾರ ಯಾವುದು ಎಂಬುದನ್ನು ನಮೂದಿಸಬೇಕು ಅದರ ಮೂಲಕವೇ ನಿಮಗೆ ನೋಂದಾವಣೆಯಾಗುತ್ತದೆ.

ಇನ್ನು ಈ ಯೋಜನೆಯ ಬೆನಿಫಿಟ್ ಪಡೆಯಲು ವ್ಯಾಪಾರದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಇತರ ಯೋಜನೆಯ ಅಡಿಯಲ್ಲಿ ಸಾಲ ಪಡೆದುಕೊಂಡಿರಬಾರದು. www.pmvishwakarma.gov.in ವೆಬ್ ಸೈಟ್ ನಲ್ಲಿ ಅಧಿಕೃತವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ.

Vishwakharma Scheme Subsidy Loan Benefit Details

Follow us On

FaceBook Google News

Vishwakharma Scheme Subsidy Loan Benefit Details