Viral News, ನಾಲ್ಕು ಕೈ ನಾಲ್ಕು ಕಾಲುಗಳಿರುವ ಮಗು ಜನನ !
Viral News, ನಾಲ್ಕು ಕೈ ನಾಲ್ಕು ಕಾಲುಗಳಿರುವ ಮಗುವಿಗೆ ಜನನ: ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ನಾಲ್ಕು ಕಾಲುಗಳು ಮತ್ತು ನಾಲ್ಕು ಕೈಗಳೊಂದಿಗೆ ಮಗು ಜನಿಸಿದ್ದು, ಮಗುವನ್ನು ಹೆರಿಗೆ ಮಾಡಿದ ವೈದ್ಯರು ಈ ಮಗುವನ್ನು ನೋಡಿ ಶಾಕ್ ಆಗಿದ್ದಾರೆ.
ಜನರು ಆಸ್ಪತ್ರೆಗೆ ಬಂದು ಮಗುವನ್ನು ನೋಡಿ. ಫೋಟೋಗಳನ್ನು ತೆಗೆಯುವುದು, ನೋಡುವುದು ಮಾಡುತ್ತಿದ್ದಾರೆ. ಆದರೆ ತಾಯಿ ಮಾತ್ರ ತನ್ನ ಮಗುವನ್ನು ನೋಡಿ ಬೆಚ್ಚಿ ಬಿದ್ದಿದ್ದಾಳೆ. ಅಂತಹ ಮಗುವನ್ನು ಹೇಗೆ ಬೆಳೆಸುವುದು? ಬೆಳೆದ ಮಗುವಿನ ಪರಿಸ್ಥಿತಿ ಏನಾಗುವುದೋ ಎಂಬ ಚಿಂತೆ ಆ ತಾಯಿಗೆ
ಕತಿಹಾರ್ ಜಿಲ್ಲೆಯ ಸದರ್ ಆಸ್ಪತ್ರೆಯಲ್ಲಿ ಮಗು ನಾಲ್ಕು ಕಾಲುಗಳು ಮತ್ತು ನಾಲ್ಕು ಕೈಗಳೊಂದಿಗೆ ಜನಿಸಿತು. ಅಸಹಜವಾಗಿ ಜನಿಸಿದ ಶಿಶುಗಳು ಬದುಕುಳಿಯುವುದಿಲ್ಲ, ಆದರೆ ಮಗು ಆರೋಗ್ಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಆ ಮಗುವನ್ನು ನೋಡಿದ ತಾಯಿ ಆಘಾತಕ್ಕೊಳಗಾಗಿದ್ದಾಳೆ. ಭ್ರೂಣದ ಬೆಳವಣಿಗೆ ಕಳಪೆಯಾಗಿದ್ದರಿಂದ ಮಗು ನಾಲ್ಕು ಕಾಲುಗಳು ಮತ್ತು ನಾಲ್ಕು ಕೈಗಳೊಂದಿಗೆ ಜನಿಸಿದೆ ಎಂದು ವೈದ್ಯರು ಹೇಳುತ್ತಾರೆ..
ಆದರೆ ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಗರ್ಭಿಣಿಯಾಗಿದ್ದಾಗ ತೆಗೆದ ಅಲ್ಟ್ರಾಸೌಂಡ್ ಸ್ಕ್ಯಾನ್ ನಲ್ಲಿ ಈ ಬಗ್ಗೆ ಆಕೆಗೆ ಯಾವುದೇ ಮಾಹಿತಿ ಹೇಳಲೇ ಇಲ್ಲ… ಎಂದು ಅವರು ಆರೋಪಿಸಿದ್ದಾರೆ.



