ಕನ್ನಡ ಕಾರ್ನರ್ : ನಮಗೆ ಗೊತ್ತಿಲ್ಲದ , ಶನಿದೇವನಿಗೆ ಎಳ್ಳೆಣ್ಣೆ ಅರ್ಪಿಸುವ ಕಾರಣ ತಿಳಿಯಿರಿ , ಎಲ್ಲಾ ವಿಷಯಗಳಿಗೆ ಒಂದೊಂದು ಕಥೆಗಳಿರುವಂತೆ , ಇದಕ್ಕೂ ಒಂದು ಕಥೆ ಇದೆ .
ಒಂದು ದಿನ , ವೀರ ಹನುಮಂತನು ತನ್ನ ಪ್ರೀತಿಪಾತ್ರ ಶ್ರೀ ರಾಮನ ಸೇವೆಮಾಡುತ್ತಿದ್ದನು . ಇದನ್ನು ಗಮನಿಸಿದ ಶನಿದೇವನು ಹನುಮಂತನಿಗೆ ಹೇಗಾದರೂ ಮಾಡಿ ತೊಂದರೆ ಕೊಡಬೇಕು ಅಂದುಕೊಂಡನು.
ಹನುಮಂತನಿಗೆ ಸಮಸ್ಯೆಗಳನ್ನು ಸೃಷ್ಟಿಸಲು ಬಯಸಿದನು , ಅವನ ಕಾರ್ಯಕ್ಕೆ ಅಡ್ಡಿಪಡಿಸುವುದು , ತೊದರೆಗೊಳಿಸುವುದು ಶನಿದೇವನ ನಿರ್ಧಾರವಾಗಿತ್ತು.
ಶನಿದೇವನು ಹನುಮಂತನಿಗೆ ಸಮಸ್ಯೆಗಳನ್ನು ಸೃಷ್ಟಿಸಲು ನಿರ್ಧರಿಸಿದನು.
ಶನಿದೇವನು ಹನುಮಂತನಿಗೆ ತೊಂದರೆಕೊಡಲು ಮುಂದಾದನು , ಶ್ರೀ ರಾಮನ ಸೇವೆಯಲ್ಲಿ ನಿರತನಾಗಿದ್ದ ಹನುಮಂತನಿಗೆ ಇದರಿಂದ ಸಿಟ್ಟು ಬಂದಂತಾಗಿ , ಕೋಪದಿಂದ ಶನಿಯ ಕಡೆಗೆ ನೋಡುತ್ತಾನೆ.
ಹನುಮಂತನು ತನ್ನ ಯಜಮಾನನ ಸೇವೆಗೆ ಅಡ್ಡಿಗೊಳಿಸುತ್ತಿರುವ ಶನಿಯ ಮೇಲೆ ಕೊಪಗೊಂಡಿದ್ದನು , ಶನಿದೇವನ ತೊಂದರೆಯಿಂದಾಗಿ ಎಲ್ಲಿ ಶ್ರೀ ರಾಮನ ಸೇವೆಗೆ ವಿಳಂಬವಾಗುತ್ತದೆಂದು ತಿಳಿದು ತಾನು ಇದ್ದಲ್ಲಿಯೇ ಇದ್ದು ತನ್ನ ಸೇವೆಯನ್ನು ಮುಂದುವರೆಸಿ ತನ್ನ ಬಾಲವನ್ನು ಉದ್ದಗೊಳಿಸಿ ಶನಿದೇವನನ್ನು ಗಟ್ಟಿಯಾಗಿ ಸುತ್ತಿ ಕೊಂಡು ಒಂದು ಬಂಡೆಯ ಕಡೆ ದೂಡಿದನು .
ತನ್ನ ಬಾಲದಿಂದ ಶನಿದೇವನನ್ನು ಬಿಗಿಹಿಡಿದು , ಬಂಡೆಯ ಮೇಲೆಯೇ ಜಗ್ಗಿದನು , ಶನಿದೇವನಿಗೆ ಹನುಮಂತನ ಬಾಲದ ಪಟ್ಟಿನಿಂದ ಬಿಡಿಸಿಕೊಳ್ಳಲು ಆಗಲೇ ಇಲ್ಲ.
ಇತ್ತ ಹನುಮಂತನು ತನ್ನ ಸೇವೆಯನ್ನು ಮುಂದುವರೆಸಿದನು , ತನ್ನ ಎಲ್ಲಾ ಸೇವೆಗಳು ಪೂರ್ಣಗೊಂಡ ಬಳಿಕ , ಅಂತಿಮವಾಗಿ ಅವರ ಕೆಲಸ ಮುಗಿದ ನಂತರ ಹನುಮಂತನು ಶನಿಯ ಕಡೆಗೆ ಮೆಲ್ಲಗೆ ತಿರುಗಿನೋಡುತ್ತಾನೆ.
ಅಷ್ಟೊತ್ತಿಗಾಗಲೇ ಶನಿದೇವನು ಉಸಿರು ಕಟ್ಟಂತೆ ಆಗಿ , ಹನುಮಂತನಲ್ಲಿ ಶನಿ ತನ್ನ ತಪ್ಪುಗಳಿಗಾಗಿ ಕ್ಷಮೆಯಾಚಿಸುತ್ತಾನೆ. ಹನುಮನನ್ನು ಒಲಿಸಲು ಶನಿದೇವನು “ರಾಮಾನುಸಾರ ಮಾಡಿದ ಯಾವುದೇ ಕೆಲಸವನ್ನು ಎಂದಿಗೂ ತಡೆಯೊಡ್ಡುವುದಿಲ್ಲ ಮತ್ತು ರಾಮ ಮತ್ತು ಹನುಮಂತರ ನಿಜವಾದ ಭಕ್ತರಿಗೆ ಎಂದಿಗೂ ಹಾನಿಯನ್ನುಂಟು ಮಾಡುವುದಿಲ್ಲ ಎಂದು ಶನಿದೇವ ಹನುಮಂತನಿಗೆ ಬರವಸೆ ನೀಡುತ್ತಾನೆ.
ಇದನ್ನು ಕೇಳಿದ ಹನುಮಂತನಿಗೆ ಸಂತೋಷವಾಗುತ್ತದೆ, ಮತ್ತು ತನ್ನ ಬಾಲದಿಂದ ಬಂದಿಸಿದ್ದ ಶನಿದೇವನನ್ನು ಬಿಡುಗಡೆಗೊಳಿಸುತ್ತಾನೆ.
ಹನುಮಂತನು ನಿರಂತರವಾಗಿ ಶನಿದೇವನನ್ನು ದೊಡ್ಡ ಕಲ್ಲಿನ ಬಂಡೆಗೆ ಬಡಿದುದರಿಂದ, ಶನಿದೇವನ ದೇಹದಲ್ಲಿ ತೀವ್ರವಾದ ಗಾಯಗಳು ಆಗಿದ್ದವು ಮತ್ತು ಅಪಾರ ನೋವು ಉಂಟಾಗಿತ್ತು.
ತನ್ನ ಗಾಯಗಳಿಗೆ ಸಂಬಂಧಿಸಿದಂತೆ ನೋವು ಪರಿಹಾರಕ್ಕೆ ಕೇಳಿದಾಗ , ಹನುಮಂತನು ಎಳ್ಳೆಣ್ಣೆ ನೀಡುತ್ತಾನೆ. ಹನುಮಾನ್ ನೀಡಿದ ತೈಲವನ್ನು ಹಚ್ಚಿದ ಶನಿದೇವನಿಗೆ ತನ್ನ ನೋವು, ಗಾಯ ಮತ್ತು ಚರ್ಮವು ಎಲ್ಲವೂ ಶಮನಗೊಳ್ಳುತ್ತದೆ.
ಶನಿದೇವನು ಎಲ್ಲಾ ನೋವು ಮತ್ತು ತೊಂದರೆಯಿಂದ ಬಿಡುಗಡೆಗೊಂಡಿದ್ದರಿಂದ ಬಹಳ ಖುಷಿಪಡುತ್ತಾನೆ. ಶನಿದೇವನ ನೋವು ಕಡಿಮೆ ಮಾಡಿದ ಎಣ್ಣೆ , ಅಂದಿನಿಂದ ಶನಿದೇವರಿಗೆ ಈ ಎಣ್ಣೆಯನ್ನು ಅರ್ಪಿಸುವುದು ಸಂಪ್ರದಾಯವಾಗಿ ಪ್ರಾರಂಭವಾಯಿತು.
ಅದರಲ್ಲೂ ಕಪ್ಪು ಎಳ್ಳಿನ ಎಣ್ಣೆ ಇನ್ನೂ ಶ್ರೇಷ್ಠ. ಅದಕ್ಕಾಗಿಯೇ ಇಂದಿಗೂ, ಶನಿದೇವನನ್ನು ಪೂಜಿಸುವ ಜನರು ಶನಿದೇವನನ್ನು ಸಂತೋಷಪಡಿಸಲು, ಈ ತೈಲವನ್ನು ಕೊಡುತ್ತಾರೆ.ಇದುವೇ ಶನಿದೇವನಿಗೆ ಎಳ್ಳೆಣ್ಣೆ ಅರ್ಪಿಸುವ ಕಾರಣ , ಶನಿದೇವನನ್ನು ಒಲಿಸಿಕೊಳ್ಳಲು , ಶನಿಯ ಪ್ರಭಾವದಿಂದ ತಪ್ಪಿಸಿಕೊಳ್ಳಲು , ಶನಿಯ ಪೂಜೆಗೆ ಶನಿವಾರದಂದು ಎಳ್ಳೆಣ್ಣೆ ಅರ್ಪಿಸುವ ಕಾರಣ ತಿಳಿದುಕೊಂಡಿರಲ್ಲವೇ . . ಎಲ್ಲರೂ ಒಮ್ಮೆ ಹೇಳಿ ಜೈ ಶನಿದೇವ.////
WebTitle : ಶನಿದೇವನಿಗೆ ಎಳ್ಳೆಣ್ಣೆ ಅರ್ಪಿಸುವ ಕಾರಣಕ್ಕಿದೆ ರೋಚಕ ಕೆಥೆ-why mustard oil to Lord Shanidev Read a very exciting story
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019