ಮಹಿಳೆಯರಿಗೆ ಈ ಯೋಜನೆಯಡಿಯಲ್ಲಿ ಸಿಗುತ್ತೆ 11,000 ಉಚಿತ! ಕೂಡಲೇ ಅರ್ಜಿ ಸಲ್ಲಿಸಿ
ಕೇಂದ್ರ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಸಾಕಷ್ಟು ಪ್ರಯತ್ನ ಪಡುತ್ತಿದೆ ಎನ್ನಬಹುದು. ಅಷ್ಟೇ ಅಲ್ಲದೆ ಮಹಿಳೆಯರ ಆರೋಗ್ಯದ ವಿಷಯದಲ್ಲೂ ಹೆಚ್ಚಿನ ಕಾಳಜಿ ವಹಿಸುತ್ತಿದ್ದು ಇದೀಗ ಪ್ರಧಾನಮಂತ್ರಿ ಮಾತೃತ್ವ ವಂದನ ಯೋಜನೆಯನ್ನು ಜಾರಿಗೆ ತರಲಾಗಿದೆ.
ಯೋಜನೆಯ ಅಡಿಯಲ್ಲಿ ತಾಯಿ ಮತ್ತು ಮಗುವಿನ ಪೋಷಣೆಗೆ ಸರ್ಕಾರ ಹಣವನ್ನು ಒದಗಿಸುತ್ತದೆ ಇದರ ಬಗ್ಗೆ ಇನ್ನಷ್ಟು ವಿವರಣೆ ಈ ಲೇಖನದಲ್ಲಿದೆ ಮುಂದೆ ಓದಿ.
ಗೃಹಲಕ್ಷ್ಮಿ ಹಣಕ್ಕೆ ಎಸ್ಎಂಎಸ್ ಬಾರದೆ ಇದ್ರೆ, ಕೂಡಲೇ ಈ ಕೆಲಸ ಮಾಡಿ ಹಣ ಬಂದೇ ಬರುತ್ತೆ!
ಏನಿದು ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆ? (PMMVY)
ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಯೋಜನೆಯನ್ನು ಜಾರಿಗೆ ತರಲಾಗಿದೆ. ಗರ್ಭಿಣಿ ಆದಾಗ ಮತ್ತು ಜನ್ಮ ನೀಡಿದ ನಂತರ ಬೇರೆ ಬೇರೆ ಕಂತುಗಳಲ್ಲಿ ಒಟ್ಟು 11000 ಆರ್ಥಿಕ ನೆರವು ನೀಡಲಾಗುತ್ತದೆ. ಹಾಲುಣಿಸುವ ಮಹಿಳೆಯರು ಹಾಗೂ ಗರ್ಭಿಣಿಯರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.
ಮಾತೃತ್ವ ವಂದನ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು 2017ರ ಬಜೆಟ್ ನಲ್ಲಿ ಘೋಷಣೆ ಮಾಡಿದರು. ಬೇರೆ ಬೇರೆ ಮೂರು ಕಂತುಗಳಲ್ಲಿ 11 ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಲಾಗುವುದು ಜೊತೆಗೆ ಮಹಿಳೆಯರ ಖಾತೆಗೆ (Bank Account) ನೇರವಾಗಿ ಈ ಹಣವನ್ನ ವರ್ಗಾವಣೆ ಮಾಡಲಾಗುತ್ತದೆ. ಮಾತೃತ್ವ ವಂದನ ಯೋಜನೆಯ ಅಡಿಯಲ್ಲಿ ಹಣಕಾಸಿನ ನೆರವಿನ ಜೊತೆಗೆ ಗರ್ಭಿಣಿ ಸ್ತ್ರೀಗೆ ಉಚಿತ ಔಷಧಿ ಗರ್ಭಧಾರಣೆಯ ಪೂರ್ವ ಮತ್ತು ನಂತರದ ವೈದ್ಯಕೀಯ ತಪಾಸಣೆ ಸೌಲಭ್ಯವನ್ನು ಕೂಡ ಉಚಿತವಾಗಿ ಒದಗಿಸಲಾಗುತ್ತದೆ.
ರೇಷನ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಸುದ್ದಿ! ಇನ್ಮುಂದೆ ಈ ಎಲ್ಲಾ ವಸ್ತುಗಳು ಫ್ರೀ
ಎರಡು ಕಂತುಗಳಲ್ಲಿ ಹಣ ಬಿಡುಗಡೆ
ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ಎರಡು ಕಂತುಗಳಲ್ಲಿ ಹಣವನ್ನು ನೇರವಾಗಿ ಖಾತೆಗೆ ಜಮಾ ಮಾಡಲಾಗುವುದು. ಮಹಿಳೆ ಮೊದಲ ಬಾರಿಗೆ ತಾಯಿಯಾದರೆ 5000 ಹಾಗೂ ಎರಡನೇ ಬಾರಿಗೆ ಹೆಣ್ಣು ಮಗುವಿಗೆ ಜನರ ನೀಡಿದರೆ 6,000ಗಳನ್ನು ನೀಡಲಾಗುವುದು. ಇನ್ನು 5,000ಗಳನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ.
ಮೊದಲನೆಯದಾಗಿ anc ಮಾಡಿದ ನಂತರ 3000 ಹಾಗೂ ಜನನ ನೋಂದಣಿ ಆಗಿ ಮಗುವಿಗೆ ಮೊದಲ ಲಸಿಕೆ ಕೊಟ್ಟ ನಂತರ 2000 ಕೊಡಲಾಗುವುದು. ಆದರೆ ಎರಡನೇ ಹೆಣ್ಣು ಮಗುವಿಗೆ ಜನನ ನೀಡಿದರೆ ಜನನ ಆದ ಬಳಿಕ 6,000ಗಳನ್ನು ಒಂದೇ ಬಾರಿಗೆ ಖಾತೆಗೆ ವರ್ಗಾವಣೆ ಮಾಡಲಾಗುವುದು.
ಯಾರಿಗೆ ಸಿಗುತ್ತೆ ಆರ್ಥಿಕ ನೆರವು?
* ಭಾರತೀಯ ನಾಗರಿಕರಾಗಿರಬೇಕು
* 19 ವರ್ಷ ಮೇಲ್ಪಟ್ಟ ಮಹಿಳಾ ಅಭ್ಯರ್ಥಿಗಳಿಗೆ ಸಿಗುತ್ತದೆ
* ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಮಾತ್ರ ಈ ಯೋಜನೆಯ ಅಡಿಯಲ್ಲಿ ಪ್ರಯೋಜನ ಪಡೆಯಬಹುದು
* ಅಂಗನವಾಡಿ ಕಾರ್ಯಕರ್ತೆಯರು ಅಂಗನವಾಡಿ ಸಹಾಯಕಿಯರು ಆಶಾ ಕಾರ್ಯಕರ್ತೆಯರು ಕೂಡ ಈ ಯೋಜನೆಯ ಅಡಿಯಲ್ಲಿ ಪ್ರಯೋಜನ ಪಡೆದುಕೊಳ್ಳುತ್ತಾರೆ
ನಿಮ್ಮ ಖಾತೆಗೆ ಗೃಹಲಕ್ಷ್ಮಿ 8ನೇ ಕಂತಿನ ಹಣ ಬಂದಿದ್ಯಾ ಇಲ್ವಾ? ಚೆಕ್ ಮಾಡಿಕೊಳ್ಳಿ!
ಅರ್ಜಿ ಸಲ್ಲಿಸುವುದು ಹೇಗೆ?
ನೀವು ಆನ್ಲೈನ್ ಮೂಲಕ ಮತ್ತು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಅಥವಾ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಗರ್ಭಿಣಿ ಆಗಿರುವುದರ ಬಗ್ಗೆ ಮೆಡಿಕಲ್ ಸರ್ಟಿಫಿಕೇಟ್ ಒದಗಿಸಿದರೆ ನಿಮ್ಮ ಹೆಸರನ್ನು ನೋಂದಾಯಿಸಿಕೊಂಡು ಹಣವನ್ನು ಖಾತೆಗೆ ಬರುವಂತೆ ಮಾಡಬಹುದು.
ಇನ್ನು ಆನ್ಲೈನಲ್ಲಿ ಅರ್ಜಿ ಸಲ್ಲಿಸುವುದಾದರೆ ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆಯ https://pmmvy.wcd.gov.in/Account/Login ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!
* ಅಭ್ಯರ್ಥಿಯ ಆಧಾರ್ ಕಾರ್ಡ್
* ಜನನ ಪ್ರಮಾಣ ಪತ್ರ
* ಆದಾಯ ಪ್ರಮಾಣ ಪತ್ರ
* ಪ್ಯಾನ್ ಕಾರ್ಡ್
* ಬ್ಯಾಂಕ್ ಖಾತೆಯ ವಿವರ
* ಪಾಸ್ ಪೋರ್ಟ್ ಅಳತೆಯ ಫೋಟೋ
ಈ ರೀತಿ ಮಾಡದೇ ಇದ್ರೆ ರೇಷನ್ ಕಾರ್ಡ್ ರದ್ದಾಗತ್ತೆ; ಸರ್ಕಾರದ ಮಹತ್ತರ ಸೂಚನೆ
11,000 free under this scheme for women, Apply immediately
Our Whatsapp Channel is Live Now 👇