ಇನ್ಮುಂದೆ ಗ್ರಾಮ ಪಂಚಾಯಿತಿಯಲ್ಲಿಯೇ ಸಿಗಲಿದೆ 20 ಉಚಿತ ಸೇವೆಗಳು! ಒಂದೇ ಸೂರಿನಡಿ ಸೌಲಭ್ಯ

Story Highlights

ಜಾತಿ ಮತ್ತು ಆದಾಯ ಪ್ರಮಾಣ ಪತ್ರ (Cast and Income Certificate), ಪಹಣಿ ಪರಿಶೀಲನೆ, ವಿದ್ಯಾರ್ಥಿವೇತನ (Education Scholarship), ಪಿಂಚಣಿ (Monthly Pension) ಮನೆ ಅಥವಾ ಕಟ್ಟಡ ನಿರ್ಮಾಣಕ್ಕೆ (House Construction Permit) ಪರವಾನಿಗೆ ಪ್ರಮಾಣ ಪತ್ರ ಮೊದಲಾದ ಸೌಲಭ್ಯಗಳನ್ನು ಕೇವಲ ಒಂದು ಕೇಂದ್ರದಲ್ಲಿ ಪಡೆದುಕೊಳ್ಳಬಹುದು

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) ಕಂದಾಯ ಇಲಾಖೆ (revenue department) ಸೂಚಿಸಿರುವ ಮಹತ್ವದ ಮಾಹಿತಿ ಒಂದನ್ನು ಹಂಚಿಕೊಂಡಿದೆ

ಇದು ಗ್ರಾಮೀಣ ಭಾಗದಲ್ಲಿ ವಾಸಿಸುವವರಿಗೆ ಬಹಳ ಮುಖ್ಯವಾಗಿರುವ ಹಾಗೂ ಖುಷಿ ತರುವ ವಿಚಾರ. ಸರ್ಕಾರದಿಂದ ಹೊಸ ಸುತ್ತೋಲೆ ಹೊರಡಿಸಲಾಗಿದ್ದು ಸುಮಾರು 40 ಸೌಲಭ್ಯಗಳನ್ನ (benefits) ಒಂದೇ ಸೂರಿನಡಿ ಗ್ರಾಮೀಣ ಭಾಗದ ಜನರಿಗೆ ನೀಡಲು ನಿರ್ಧರಿಸಲಾಗಿದೆ.

ಗೃಹಲಕ್ಷ್ಮಿ ಹಣ ಸಿಗದವರು ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ, ಮನೆ ಬಾಗಿಲಿಗೆ ಬರಲಿದೆ ಹಣ

ಒಂದೇ ಜಾಗದಲ್ಲಿ ಎಲ್ಲಾ ಸರ್ಕಾರಿ ಸೌಲಭ್ಯ (Get all government facility in one place)

ಗ್ರಾಮೀಣ ಭಾಗದಲ್ಲಿ ವಾಸಿಸುವ ಜನರಿಗೆ ಸರ್ಕಾರ ಜಾರಿಗೆ ತಂದಿರುವ ಹಲವು ಯೋಜನೆಗಳು (government schemes) ತಲುಪುವುದೇ ಇಲ್ಲ, ಇದಕ್ಕೆ ಮುಖ್ಯ ಕಾರಣ ಒಂದೊಂದು ಯೋಜನೆ ಪ್ರಯೋಜನ ಪಡೆದುಕೊಳ್ಳಲು ಒಂದೊಂದು ಸೇವ ಕೇಂದ್ರಗಳಿಗೆ (seva centre) ಅಥವಾ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡಬೇಕು

ಗ್ರಾಮೀಣ ಭಾಗದಲ್ಲಿ ಈ ಎಲ್ಲಾ ಸೌಲಭ್ಯಗಳು ಇರುವುದಿಲ್ಲ, ಹಾಗಾಗಿ ಸರ್ಕಾರದಿಂದ ಲಭ್ಯ ಇರುವ ಪ್ರಮುಖ ಯೋಜನೆಯ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಸರ್ಕಾರ ಯಾವುದೇ ಯೋಜನೆಯನ್ನು ಜಾರಿಗೆ ತಂದರು ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಕೇಂದ್ರ, ಸ್ಥಳೀಯ ಸೇವಾ ಕೇಂದ್ರಗಳಿಗೆ ಹೋಗಿ ಪಡೆದುಕೊಳ್ಳಬೇಕು. ಆದರೆ ಇನ್ನು ಮುಂದೆ ಈ ಸಮಸ್ಯೆ ಇರುವುದಿಲ್ಲ. ಈ ಎಲ್ಲಾ ಸೇವಾ ಕೇಂದ್ರಗಳಲ್ಲಿ ಸಿಗುವ ಒಟ್ಟು 40ಕ್ಕೂ ಹೆಚ್ಚಿನ ಸೌಲಭ್ಯಗಳನ್ನು ಒಂದೇ ಒಂದು ಜಾಗದಲ್ಲಿ ಪಡೆದುಕೊಳ್ಳಲು ಸಾಧ್ಯವಿದೆ.

ರೈತರಿಗೆ ಸಿಗಲಿದೆ ಸರ್ಕಾರಿ ಜಮೀನು, ಭೂಮಿ ವಿಲೇವಾರಿ ಮಾಡಲು ಸರ್ಕಾರ ನಿರ್ಧಾರ

ಗ್ರಾಮ ಪಂಚಾಯತ್ (gram Panchayat) ನಲ್ಲಿಯೇ ಸಿಗಲಿದೆ ಎಲ್ಲಾ ಸೌಲಭ್ಯ!

gram Panchayatಹೌದು, ಗ್ರಾಮೀಣ ಭಾಗದಲ್ಲಿ ವಾಸಿಸುವ ಜನರ ಕಷ್ಟವನ್ನು ಅರಿತಿರುವ ಸರ್ಕಾರ ಇದೀಗ ಗ್ರಾಮ ಪಂಚಾಯಿತಿಯ ಬಾಪೂಜಿ ಕೇಂದ್ರದಲ್ಲಿ ಮಾತ್ರ ಸರ್ಕಾರದ ಎಲ್ಲಾ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.

ಅಂದರೆ ಇನ್ನು ಮುಂದೆ ಪ್ರತಿಯೊಂದು ಯೋಜನೆಗೂ ಬೇರೆ ಬೇರೆ ಇಲಾಖೆಯ ಅಥವಾ ಬೇರೆ ಬೇರೆ ಸೇವಾ ಕೇಂದ್ರಗಳನ್ನು ಸಂಪರ್ಕಿಸುವ ಅಗತ್ಯವಿಲ್ಲ. ಗ್ರಾಮ ಪಂಚಾಯತ್ ಬಾಪೂಜಿ ಕೇಂದ್ರಗಳಲ್ಲಿಯೇ ನೀವು ಎಲ್ಲಾ ರೀತಿಯ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಕೋಟ್ಯಾಂತರ ಗ್ರಾಮವಾಸಿಗಳಿಗೆ ಅನುಕೂಲವಾಗುವ ಕಂದಾಯ ಇಲಾಖೆಯ ನಿಯಮ!

ಹಳ್ಳಿಯಲ್ಲಿ ಬೇರೆ ಬೇರೆ ಇಲಾಖೆಗೆ ಹೋಗಿ ಅಲ್ಲಿಯವರೊಂದಿಗೆ ಸಂಪರ್ಕ ಬೆಳೆಸಿ ಸರ್ಕಾರದಿಂದ ಜಾರಿಯಾಗುವ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಷ್ಟರಲ್ಲಿ ಗ್ರಾಮ ವಾಸಿಗಳು ಸುಸ್ತಾಗಿ ಹೋಗುತ್ತಿದ್ದರು.

ಅಷ್ಟೇ ಅಲ್ಲದೆ ಬೇರೆ ಬೇರೆ ಸೇವಾ ಕೇಂದ್ರಗಳಿಗೆ ಹೋದಾಗ ಅಲ್ಲಿ ಹೆಚ್ಚುವರಿ ಶುಲ್ಕವನ್ನು (extra fee) ಕೂಡ ಪಾವತಿಸುವ ಅನಿವಾರ್ಯತೆ ಇತ್ತು. ಆದ್ರೆ ಈ ಸಮಸ್ಯೆಯನ್ನು ಹೋಗಲಾಡಿಸಲು ಕಂದಾಯ ಇಲಾಖೆ ತೆಗೆದುಕೊಂಡಿರುವ ಈ ನಿರ್ಧಾರ ನಿಜಕ್ಕೂ ಶ್ಲಾಘನೀಯ.

2.0 ತಂತ್ರಾಂಶದ ಮೂಲಕ ಬಾಪೂಜಿ ಕೇಂದ್ರದಲ್ಲಿ ಹಾಗೂ ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ (Atal janasnehi centre) ನಾಡ ಕಚೇರಿಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳು ಸಿಗುವಂತೆ ಮಾಡಲಾಗಿದೆ.

ಈ ಕೇಂದ್ರಗಳಲ್ಲಿ ಉಚಿತವಾಗಿ ಸೇವೆಯನ್ನ ಪಡೆದುಕೊಳ್ಳಬಹುದು, ಕೆಲವು ಅರ್ಜಿ ಸಲ್ಲಿಕೆಗೆ ಮಾತ್ರ ಕಡಿಮೆ ಮೊತ್ತದ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಶುಲ್ಕ ನೀವು ಯಾವ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತೀರಿ ಎಂಬುದರ ಮೇಲೆ ನಿರ್ಧಾರಿತವಾಗುತ್ತದೆ.

ಗ್ರಾಮ ಪಂಚಾಯತ್ ಬಾಪೂಜಿ ಕೇಂದ್ರಗಳಲ್ಲಿ (Bapuji centre) ಗ್ರಾಮೀಣ ಜನತೆ ಪಡೆದುಕೊಳ್ಳಬಹುದಾದ ಸರ್ಕಾರಿ ಸೇವೆಗಳು ಯಾವವು ಎಂಬುದನ್ನು ನೋಡುವುದಾದರೆ,

ಜಾತಿ ಮತ್ತು ಆದಾಯ ಪ್ರಮಾಣ ಪತ್ರ (Cast and Income Certificate), ಪಹಣಿ ಪರಿಶೀಲನೆ, ವಿದ್ಯಾರ್ಥಿವೇತನ (Education Scholarship), ವಿಧವಾ ವೇತನ, ಹಿರಿಯ ನಾಗರಿಕರ ವೇತನ ಮೊದಲಾದ ಸರ್ಕಾರದಿಂದ ಸಿಗುವ ವೇತನಗಳಿಗೆ ಅರ್ಜಿ ಸಲ್ಲಿಸುವುದು, ಸರ್ಕಾರದಿಂದ ಬಿಡುಗಡೆ ಆಗುವ ಯಾವುದೇ ರೀತಿಯ ಉಚಿತ ಹಣ ಸೌಲಭ್ಯ ಅಥವಾ ಪಿಂಚಣಿ (Monthly Pension) ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು..

ಮನೆ ಅಥವಾ ಕಟ್ಟಡ ನಿರ್ಮಾಣಕ್ಕೆ (House Construction Permit) ಪರವಾನಿಗೆ ಪ್ರಮಾಣ ಪತ್ರ ಇನ್ನೂ ಮೊದಲಾದ ಸೌಲಭ್ಯಗಳನ್ನು ಕೇವಲ ಒಂದು ಕೇಂದ್ರದಲ್ಲಿ ಪಡೆದುಕೊಳ್ಳಬಹುದು ಇದರಿಂದ ರೈತರ ಸಮಯ ಹಾಗೂ ದುಡ್ಡು ಎರಡೂ ಉಳಿತಾಯವಾಗುತ್ತದೆ.

20 free services will be available in the Gram Panchayat itself

Related Stories