ರೈತರು (farmers) ಒಂದೇ ಭೂಮಿಯಲ್ಲಿ ಕಳೆದ 15 ವರ್ಷಗಳಿಂದ ಉಳುಮೆ (Plowing) ಮಾಡುತ್ತಿದ್ದರೆ ಅಂತವರಿಗೆ ಗುಡ್ ನ್ಯೂಸ್ ಸರ್ಕಾರ ಘೋಷಿಸಿದೆ ಸದ್ಯದಲ್ಲಿಯೇ ಅರ್ಜಿ ಸಲ್ಲಿಸಿದ ರೈತರಿಗೆ ಅಕ್ರಮ ಸಕ್ರಮ ಜಮೀನು ವಿಲೇವಾರಿ ಮಾಡಲು ಸರ್ಕಾರ ನಿರ್ಧರಿಸಿದೆ (government decision).
ಆದರೆ ಇದರಲ್ಲಿ ಬಹಳ ಮುಖ್ಯವಾಗಿರುವ ಮಾಹಿತಿ ಒಂದನ್ನು ಸರ್ಕಾರ ಹಂಚಿಕೊಂಡಿದ್ದು ಇದರಲ್ಲಿ ಸರ್ಕಾರದ ಹೊಸ ನಿಯಮಗಳ ಬಗ್ಗೆ ಹೇಳಲಾಗಿದೆ.
ಈ ಎಲ್ಲಾ ನಿಯಮ ಪಾಲನೆ ಮಾಡದಿದ್ರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತೆ! ಹೊಸ ರೂಲ್ಸ್
ಬಗೇರ್ ಹುಕುಂ ಅರ್ಜಿದಾರರಿಗೆ ಶರತ್ತು! (Bagair Hukum rules)
15 ವರ್ಷಗಳಿಂದ ಒಂದು ಜಮೀನಿನಲ್ಲಿ ಕೃಷಿ (cultivation land) ಮಾಡುತ್ತಿರುವ ರೈತರಿಗೆ ಆ ಜಮೀನನ್ನು ಅವರ ಹೆಸರಿಗೆ ಮಾಡಿಕೊಡುವಂತಹ ಯೋಜನೆಯೇ ಅಕ್ರಮ ಸಕ್ರಮ ಬಗೆರ್ ಹುಕುಂ ಯೋಜನೆ.
ಇದು ಇಂದು ನಿನ್ನೆಯದಲ್ಲ. ಬಹಳ ವರ್ಷಗಳ ಹಿಂದೆ ಅಂದರೆ ಬ್ರಿಟಿಷ್ ಆಳ್ವಿಕೆಯ ಕಾಲದಿಂದಲೂ ಒಂದು ಜಮೀನಿನಲ್ಲಿ (Agriculture Land) ಉಳುಮೆ ಮಾಡುತ್ತಿರುವ (ಉಳುವವನೇ ಒಡೆಯ) ರೈತನಿಗೆ ಆ ಜಮೀನು ಸ್ವಂತವಾಗಿ ಮಾಡಿಕೊಡಬೇಕು ಎನ್ನುವ ನಿಯಮವನ್ನು ಜಾರಿಗೆ ತರಲಾಗಿತ್ತು
ಸರ್ಕಾರಿ ಜಮೀನಿನಲ್ಲಿ 15 ವರ್ಷಗಳ ಕಾಲ ರೈತ ಉಳುಮೆ ಮಾಡಿಕೊಂಡಿದ್ದರೆ ಆ ಜಮೀನು ಅಕ್ರಮವಾಗಿದ್ದು ಅದನ್ನು ಸಕ್ರಮಗೊಳಿಸಿ ಆತನ ಹೆಸರಿಗೆ ಬರೆದು ಕೊಡಲಾಗುತ್ತದೆ.
ಅಕ್ರಮ ಸಕ್ರಮದಲ್ಲಿ ವಂಚನೆ!
ಭೂ ಸುಧಾರಣಾ ಕಾಯ್ದೆಯ (land reforms act) ನಿಯಮ 50, 53 ಹಾಗೂ 57 ಅಡಿಯಲ್ಲಿ ಜಮೀನು (Land) ಸಕ್ರಮಕ್ಕಾಗಿ ರೈತರಿಂದ ಸಾಕಷ್ಟು ಅರ್ಜಿಗಳು ಬಂದಿವೆ. ಆದರೆ ನಿಜವಾಗಿ ರೈತರಿಗೆ ಈ ನಿಯಮದ ಪ್ರಯೋಜನ ಸಿಗುತ್ತಿದೆಯೇ ಎನ್ನುವ ಪ್ರಶ್ನೆ ಉದ್ಭವ ಆಗಿದೆ
ಕಾರಣ ರೈತರಲ್ಲದೆ ಇರುವವರು ಕೂಡ ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದಾರೆ, ಜೊತೆಗೆ ಒಂದು ಗ್ರಾಮದಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಕಡೆಗೆ ಐದು ಹತ್ತು ಅರ್ಜಿಗಳನ್ನು ಒಬ್ಬ ವ್ಯಕ್ತಿ ಸಲ್ಲಿಸಿದ್ದು ಈ ಅರ್ಜಿಗಳನ್ನ ಪರಿಶೀಲಿಸಲು ಕಂದಾಯ ಇಲಾಖೆ (revenue department) ನಿರ್ಧರಿಸಿದೆ.
ಅನ್ನಭಾಗ್ಯ ಯೋಜನೆಯ ₹1190 ರೂಪಾಯಿ ಜಮೆ, ತಕ್ಷಣ ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ
ಸಚಿವರ ಹೇಳಿಕೆ!
ಕಂದಾಯ ಸಚಿವರಾಗಿರುವ ಕೃಷ್ಣಭೈರೇಗೌಡ (Krishna bairagowda) ಅವರು ಅಕ್ರಮ ಸಕ್ರಮ ಬಗ್ಗೆ ನಿಯಮದ ಬಗ್ಗೆ ಹೊಸ ರೂಲ್ಸ್ ಜಾರಿಗೆ ತರಲಾಗಿದ್ದು ಅದನ್ನು ಅನುಸರಿಸದೇ ಇದ್ದರೆ ಅಂತವರಿಗೆ ಸಕ್ರಮ ಜಮೀನು ವಿಲೇವಾರಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ
ಇವರಿಗೆ ಭೌತಿಕವಾಗಿಯೇ ಅಕ್ರಮ ಸಕ್ರಮ ಜಮೀನು ವಿಲೇವಾರಿ ಮಾಡಲಾಗುತ್ತಿತ್ತು ಆದರೆ ಇನ್ನು ಮುಂದೆ ಬೇರೆ ರೀತಿಯಲ್ಲಿ ಜಮೀನು ವಿಲೇವಾರಿ ಮಾಡಲು ನಿರ್ಧರಿಸಿರುವುದಾಗಿ ಸಚಿವರು ತಿಳಿಸಿದ್ದಾರೆ.
ತಂತ್ರಾಂಶದ ಮೂಲಕ ಕೃಷಿ ಜಮೀನು ಪತ್ತೆ – Agriculture Land
ಇನ್ನು ಮುಂದೆ ಯಾವುದೇ ಕೃಷಿ ಜಮೀನು (Agriculture Land) ಇದ್ದರೂ ಕೂಡ ಅದನ್ನು ತಂತ್ರಾಂಶದ (digital) ಮೂಲಕ ಸರ್ಕಾರ ಪತ್ತೆ ಹಚ್ಚುತ್ತದೆ ಅದು ಅಲ್ಲದೆ ಸ್ಯಾಟಲೈಟ್ (satellite) ಮೂಲಕ ಯಾವ ಜಮೀನಿನಲ್ಲಿ ಕೃಷಿ ನಡೆಯುತ್ತಿದೆ ಹಾಗೂ ನಿಜಕ್ಕೂ ರೈತರಿಗೆ ಅದರ ಅಗತ್ಯ ಇದೆಯೇ ಇಲ್ಲವೇ ಎಂಬುದನ್ನು ತಿಳಿಯಲಾಗುತ್ತದೆ
ಕಳೆದ 15 ವರ್ಷಗಳ ಚಿತ್ರಣವನ್ನು ಕೂಡ ಸ್ಯಾಟಲೈಟ್ ಮೂಲಕ ಪಡೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ, ಹಾಗಾಗಿ ಈ ಕೃಷಿಯನ್ನೇ ಮಾಡದೆ ಸರ್ಕಾರಿ ಜಮೀನನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ ಅಂತವರಿಗೆ ಜಮೀನು ಸಿಗಬಾರದು ಎನ್ನುವ ಕಾರಣಕ್ಕೆ ಈ ಹೊಸ ತಂತ್ರಾಂಶ ಪರಿಶೀಲನೆಯನ್ನು ಜಾರಿಗೆ ತರಲಾಗುವುದು.
ಈ ರೀತಿ ಮಾಡಿದ್ರೆ ನಿಮಗೂ ಸಿಗೋಲ್ಲ ಗೃಹಜ್ಯೋತಿ ಉಚಿತ ವಿದ್ಯುತ್; ಸರ್ಕಾರ ಕಠಿಣ ನಿರ್ಧಾರ
ಸರ್ಕಾರದ ಜಮೀನು ದುರ್ಬಳಕೆ!
ಜಮೀನು ಸಕ್ರಮ ಮಾಡಿಕೊಡುತ್ತಾ ಹೋದರೆ ಸರ್ಕಾರಕ್ಕೆ ಅಗತ್ಯ ಇರುವ ಯೋಜನೆಗಳನ್ನು ಜಾರಿಗೆ ತರಲು ಕೂಡ ಭೂಮಿ ಇಲ್ಲದಂತೆ ಆಗುತ್ತದೆ ಉದಾಹರಣೆಗೆ ಒಂದು ಗ್ರಾಮದಲ್ಲಿ 100 ಜಾನುವಾರು ಸಾಕಾಣಿಕೆ ಮಾಡಿದರೆ 30 ಎಕರೆ ಗೋಮಾಳ ಮೀಸಲಿಡಬೇಕು ಎನ್ನುವ ನಿಯಮ ಇದೆ
ಆದರೆ ಇತ್ತೀಚಿನ ದಿನಗಳಲ್ಲಿ ಅಕ್ರಮ ಸಕ್ರಮ ಬಗೇರ್ ಹುಕುಂ ನಿಯಮದ ಅಡಿಯಲ್ಲಿ ಸಾಕಷ್ಟು ಜನ ಬೋಗಸ್ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಹಾಗಾಗಿ ಇಂಥವರಿಗೆ ಯಾವುದೇ ಕಾರಣಕ್ಕೂ ಜಮೀನು ವಿಲೇವಾರಿ ಆಗಬಾರದು. ಇದಕ್ಕಾಗಿ ಸರಿಯಾದ ತಂಡವನ್ನು ರಚಿಸಿ, ತಾಲೂಕು ಸಮಿತಿ ರಚನೆಯ ಮೂಲಕ ವಂಚನೆ ಪ್ರಕರಣಗಳನ್ನು ಕಂಡುಹಿಡಿಯಲಾಗುವುದು.
ಕೇವಲ ಜಮೀನಿನ ಸರ್ವೆ ನಂಬರ್ ಮೂಲಕ ಉಪಗ್ರಹದಿಂದ 15 ವರ್ಷಗಳ ಚಿತ್ರವನ್ನು ಪಡೆದು ಆ ಜಮೀನಿನಲ್ಲಿ ನಿಜವಾಗಿ ಕೃಷಿ ನಡೆಯುತ್ತಿದೆಯೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ.
ಆರಂಭದಲ್ಲಿ ಈ ನಿಯಮವನ್ನು 4-5 ತಾಲೂಕುಗಳಲ್ಲಿ ಜಾರಿಗೆ ತಂದು ಅದು ಯಶಸ್ವಿಯಾದರೆ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಕೂಡ ಇದೇ ಮಾದರಿಯಲ್ಲಿ ಅಕ್ರಮ ಸಕ್ರಮ ಜಮೀನು ವಿಲೇವಾರಿ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಹಣ ಇನ್ನೂ ಬಾರದಿದ್ರೆ ಈ ಹಂತಗಳನ್ನು ಅನುಸರಿಸಿ! ಲಕ್ಷ್ಮಿ ಹೆಬ್ಬಾಳ್ಕರ್ ಸೂಚನೆ
ನಿಜವಾದ ರೈತರಿಗೆ ಸಿಗಲಿದೆ ಸರ್ಕಾರಿ ಜಮೀನು – Government Land
ಕಳೆದ 15 ವರ್ಷಗಳಿಂದ ಒಂದು ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬಂದಿರುವ ರೈತರಿಗೆ ಅಕ್ರಮ ಸಕ್ರಮ ಜಮೀನು ನೀಡಲು ಸರ್ಕಾರ ನಿರ್ಧರಿಸಿದೆ, ಸಾಕಷ್ಟು ಜನ ಹಲವು ವರ್ಷಗಳಿಂದ ಅರ್ಜಿ ಸಲ್ಲಿಸಿ ಸಕ್ರಮಕ್ಕಾಗಿ ಕಾಯುತ್ತಿದ್ದಾರೆ. ಅಂತಹ ನಿಜವಾದ ಫಲಾನುಭವಿಗಳಿಗೆ ಮುಂದಿನ ಆರು ತಿಂಗಳ ಒಳಗೆ ಸಕ್ರಮ ಜಮೀನು ವಿಲೇವಾರಿ ಮಾಡಲು ಸರ್ಕಾರ ನಿರ್ಧರಿಸಿದೆ.
Farmers will get government land, government decision to dispose of land
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.