ಈ ಎಲ್ಲಾ ನಿಯಮ ಪಾಲನೆ ಮಾಡದಿದ್ರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತೆ! ಹೊಸ ರೂಲ್ಸ್

ಸರ್ಕಾರ ಹೇಳಿರುವ ಮಾನದಂಡಗಳನ್ನು (Rules) ಗಮನದಲ್ಲಿ ಇಟ್ಟುಕೊಂಡು ಬಿಪಿಎಲ್ ಕಾರ್ಡ್ (BPL Card) ಹೊಂದಿರುವವರು ಒಂದು ವೇಳೆ ಅಗತ್ಯ ಇಲ್ಲದೆ ಇದ್ದಲ್ಲಿ ಅದನ್ನು ತಕ್ಷಣವೇ ಆಹಾರ ಇಲಾಖೆಗೆ ಹಿಂತಿರುಗಿಸಬೇಕು

ಆಹಾರ ಮತ್ತು ನಾಗರಿಕ (food department) ಸರಬರಾಜು ಇಲಾಖೆ ರೇಷನ್ ಕಾರ್ಡ್ (ration card) ವಿತರಣೆ ಮಾಡಿದ ನಂತರ ಅದಕ್ಕೆ ಅದರದೇ ಆದ ಮಾರ್ಗಸೂಚಿಯನ್ನು (Rules) ಕೂಡ ತಿಳಿಸಿದೆ

ಆದರೆ ಹಲವರು ರೇಷನ್ ಕಾರ್ಡ್ ಪಡೆದುಕೊಂಡಿದ್ದಾರೆಯೇ ಹೊರತು ಅದರ ಮಾರ್ಗಸೂಚಿಗಳನ್ನ ಹಾಗೂ ರೇಷನ್ ಕಾರ್ಡ್ ಬಳಸುವ ನಿಯಮಗಳನ್ನು ಮರೆತಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಸಾಕಷ್ಟು ಜನ ರೇಷನ್ ಕಾರ್ಡ್ ಕಳೆದುಕೊಳ್ಳುವ ಸಂದರ್ಭ ಎದುರಾಗಿದೆ.

ಅನ್ನಭಾಗ್ಯ ಯೋಜನೆಯ ₹1190 ರೂಪಾಯಿ ಜಮೆ, ತಕ್ಷಣ ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

ಈ ಎಲ್ಲಾ ನಿಯಮ ಪಾಲನೆ ಮಾಡದಿದ್ರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತೆ! ಹೊಸ ರೂಲ್ಸ್ - Kannada News

ರೇಷನ್ ಕಾರ್ಡ್ ಗೂ ಇದೆ ಮಾನದಂಡ! (Ration card rules)

ರೇಷನ್ ಕಾರ್ಡ್ ನಲ್ಲಿ ಅದರಲ್ಲೂ ಮುಖ್ಯವಾಗಿ ಬಿಪಿಎಲ್ ಕಾರ್ಡ್ (BPL card) ನಲ್ಲಿ ಸಾಕಷ್ಟು ಮಾನದಂಡಗಳನ್ನು ಹೇಳಲಾಗಿದೆ, ಈಗಾಗಲೇ ಮತ್ತೆ ನಾಲ್ಕು ಹೊಸ ಮಾನದಂಡಗಳನ್ನು ಕೂಡ ಸರ್ಕಾರ ತಿಳಿಸಿದೆ

ಈ ಮಾನದಂಡಗಳನ್ನು ಮೀರಿ ಬಿಪಿಎಲ್ ಕಾರ್ಡ್ ಅನ್ನು ಸರಿಯಾಗಿ ಬಳಸಿಕೊಳ್ಳದೆ ಇರುವ ಗ್ರಾಹಕರ ಕಾರ್ಡ್ಗಳನ್ನು ಸರ್ಕಾರ ರದ್ದುಪಡಿಸಲು ಕ್ರಮ ಕೈಗೊಳ್ಳುತ್ತಿದೆ. ಒಂದು ವೇಳೆ ರೇಷನ್ ಕಾರ್ಡ್ ರದ್ದಾದರೆ ಸರಕಾರದ (state government) ಇತರ ಯಾವ ಪ್ರಯೋಜನಗಳು ಕೂಡ ಸಿಗುವುದಿಲ್ಲ ಎಂಬುದನ್ನು ನೆನಪಿಡಿ.

ವೋಟರ್ ಐಡಿಯಲ್ಲಿ ಕೂಡಲೇ ಈ ಬದಲಾವಣೆ ಮಾಡಿಕೊಳ್ಳಿ! ಹೊಸ ಅರ್ಜಿ, ತಿದ್ದುಪಡಿಗೂ ಅವಕಾಶ

ಈ ಕಾರಣಕ್ಕೆ ರೇಷನ್ ಕಾರ್ಡ್ ರದ್ದಾಗಬಹುದು! (Ration card cancellation)

Cancellation of BPL ration card of such a family, New Order of Govtಬಿಪಿಎಲ್ ರೇಷನ್ ಕಾರ್ಡ್ ಅನ್ನು ವಿತರಿಸುವ ಮೂಲ ಉದ್ದೇಶ ಬಡವರ ಹಸಿವು ನಿವಾರಣೆಗಾಗಿ, ನ್ಯಾಯಬೆಲೆ ಅಂಗಡಿಯಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರು ಪಡಿತರ ವಸ್ತುಗಳನ್ನು ಉಚಿತವಾಗಿ ಹಾಗೂ ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬಹುದು.

ಇಂದು ಸಾಕಷ್ಟು ಜನ ಬಿಪಿಎಲ್ ಕಾರ್ಡ್ ಅನ್ನು ಸರಕಾರದ ಇತರ ಪ್ರಯೋಜನಗಳಾದ ಆರೋಗ್ಯ ಸೌಲತ್ತು ಪಡೆದುಕೊಳ್ಳಲು ಹಾಗೂ ಅನ್ನಭಾಗ್ಯ ಯೋಜನೆಯ (Annabhagya scheme) ಹಣ ಜೊತೆಗೆ ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) ಹಣ ಪಡೆದುಕೊಳ್ಳುವುದಕ್ಕಾಗಿ ಮಾತ್ರ ಬಳಸುತ್ತಿದ್ದಾರೆ. ಇದು ಇದೀಗ ಆಹಾರ ಇಲಾಖೆಯ ಗಮನಕ್ಕೆ ಬಂದಿದ್ದು ಇಂತಹ ರೇಷನ್ ಕಾರ್ಡ್ ರದ್ದಾಗಲಿದೆ.

ಇವೆಲ್ಲದಕ್ಕೂ ಮುಖ್ಯವಾಗಿರುವ ಕಾರಣ ಎಂದರೆ ಕಳೆದ ಆರು ತಿಂಗಳಿನಿಂದ ರೇಷನ್ ಪಡೆದುಕೊಳ್ಳದೆ ಇರುವುದು. ಹೌದು ಸಾಕಷ್ಟು ಜನ ಬಿಪಿಎಲ್ ಕಾರ್ಡ್ ಹೊಂದಿದ್ದರು ಕೂಡ ಕಳೆದ ಆರು ತಿಂಗಳಿನಿಂದ ರೇಷನ್ ಪಡೆದುಕೊಳ್ಳುತ್ತಿಲ್ಲ, ಇಂತಹ ಕಾರ್ಡ್ ದಾರರನ್ನು ಪತ್ತೆ ಹಚ್ಚಿ ಅವರ ರೇಷನ್ ಕಾರ್ಡ್ ರದ್ದುಪಡಿಸಲು ಸರ್ಕಾರ ನಿರ್ಧರಿಸಿದೆ.

ಆಹಾರ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಸುಮಾರು 3,47,000 ಅಧಿಕ ಬಿಪಿಎಲ್ ಕಾರ್ಡ್ ಹೊಂದಿರುವವರು ರೇಷನ್ ಪಡೆದುಕೊಳ್ಳುತ್ತಿಲ್ಲ.

ಈ ರೀತಿ ಮಾಡಿದ್ರೆ ನಿಮಗೂ ಸಿಗೋಲ್ಲ ಗೃಹಜ್ಯೋತಿ ಉಚಿತ ವಿದ್ಯುತ್; ಸರ್ಕಾರ ಕಠಿಣ ನಿರ್ಧಾರ

ಸರಿಯಾದ ಕಾರಣ ನೀಡಿದರೆ ರೇಷನ್ ಕಾರ್ಡ್ ರದ್ದಾಗುವುದಿಲ್ಲ!

BPL Ration Cardಬಿಪಿಎಲ್ ಕಾರ್ಡ್ ಹೊಂದಿರುವವರು ಪ್ರತಿ ತಿಂಗಳು ಸರ್ಕಾರದಿಂದ ಸಿಗುವ ರೇಷನ್ ವಸ್ತುಗಳನ್ನ ಪಡೆದುಕೊಳ್ಳಲೇಬೇಕು, ಇಲ್ಲವಾದರೆ ಅಂತವರ ರೇಷನ್ ಕಾರ್ಡ್ ರದ್ದಾಗುತ್ತದೆ. ನೀವು ಕೇವಲ ಸರ್ಕಾರದ ಇತರ ಪ್ರಯೋಜನಗಳನ್ನು ಪಡೆದುಕೊಳ್ಳಲು ಮಾತ್ರ ಬಿಪಿಎಲ್ ಕಾರ್ಡ್ ಬಳಸಿಕೊಳ್ಳುತ್ತಿದ್ದರೆ ತಕ್ಷಣವೇ ಅದನ್ನ ಆಹಾರ ಇಲಾಖೆಗೆ ಸರೆಂಡರ್ ಮಾಡಿ ಎಂದು ಆಹಾರ ಇಲಾಖೆ ಮನವಿ ಮಾಡಿದೆ.

ಪಡಿತರವನ್ನು ಆರು ತಿಂಗಳಿನಿಂದ ಪಡೆದುಕೊಳ್ಳದೆ ಇರಲು ಸರಿಯಾದ ಕಾರಣ (reason) ನೀಡಿದರೆ ಅಂಥವರ ರೇಷನ್ ಕಾರ್ಡ್ ರದ್ದಾಗುವುದಿಲ್ಲ. ಉದಾಹರಣೆಗೆ ಕಳೆದ ಆರು ತಿಂಗಳಿನಿಂದ ಬಿಪಿಎಲ್ ಕಾರ್ಡ್ ಹೊಂದಿರುವವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರೆ, ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಕ್ತಿ ಸ್ಥಳಾಂತರಗೊಂಡಿದ್ದರೆ, ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಕ್ತಿ ಮರಣ ಹೊಂದಿದ್ದರೆ ಇಂತಹ ಸಂದರ್ಭದಲ್ಲಿ ರೇಷನ್ ಕಾರ್ಡ್ ರದ್ದಾಗುವುದಿಲ್ಲ, ಆದರೆ ಸೂಕ್ತ ಕಾರಣಗಳನ್ನು ದಾಖಲೆ ಸಮೇತ ಆಹಾರ ಇಲಾಖೆಗೆ ನೀಡಿದರೆ ಮಾತ್ರ ನಿಮ್ಮ ರೇಷನ್ ಕಾರ್ಡ್ ಅನ್ನು ಉಳಿಸಿಕೊಳ್ಳಬಹುದು.

ಗೃಹಲಕ್ಷ್ಮಿ ಹಣ ಇನ್ನೂ ಬಾರದಿದ್ರೆ ಈ ಹಂತಗಳನ್ನು ಅನುಸರಿಸಿ! ಲಕ್ಷ್ಮಿ ಹೆಬ್ಬಾಳ್ಕರ್ ಸೂಚನೆ

ಮಾನದಂಡಗಳ ಅಡಿಯಲ್ಲಿ ಬಾರದೆ ಇರುವ ರೇಷನ್ ಕಾರ್ಡ್ ರದ್ದು!

ಸರ್ಕಾರ ಹೇಳಿರುವ ಮಾನದಂಡಗಳನ್ನು (Rules) ಗಮನದಲ್ಲಿ ಇಟ್ಟುಕೊಂಡು ಬಿಪಿಎಲ್ ಕಾರ್ಡ್ (BPL Card) ಹೊಂದಿರುವವರು ಒಂದು ವೇಳೆ ಅಗತ್ಯ ಇಲ್ಲದೆ ಇದ್ದಲ್ಲಿ ಅದನ್ನು ತಕ್ಷಣವೇ ಆಹಾರ ಇಲಾಖೆಗೆ ಹಿಂತಿರುಗಿಸಬೇಕು ಎಂದು ಇಲಾಖೆ ತಿಳಿಸಿದೆ.

ಇಲ್ಲವಾದರೆ ಸೂಕ್ತ ಕಾರಣಗಳನ್ನು ನೀಡಿ ರೇಷನ್ ಕಾರ್ಡ್ ಉಳಿಸಿಕೊಳ್ಳಬೇಕು. ಬಿಪಿಎಲ್ ಕಾರ್ಡ್ ಹೊಂದಿದ್ದು ಅದು ನಿಮಗೆ ಅಗತ್ಯ ಇಲ್ಲದೆ ಇದ್ದಲ್ಲಿ ಸರ್ಕಾರಕ್ಕೆ ಹಿಂತಿರುಗಿಸದೆ ಹೋದರೆ ಸರ್ಕಾರ ಅಂತವರಿಗೆ ಬಾರಿ ಮೊತ್ತದ ದಂಡ ವಿಧಿಸುವ ಸಾಧ್ಯತೆಯು ಇದೆ.

ಹಾಗಾಗಿ ಈ ಎಲ್ಲಾ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ಬಿಪಿಎಲ್ ಕಾರ್ಡ್ ಅಗತ್ಯ ಇಲ್ಲದೆ ಇರುವವರು ತಕ್ಷಣವೇ ಅದನ್ನ ಆಹಾರ ಇಲಾಖೆಗೆ ಹಿಂತಿರುಗಿಸಿ. ರೇಷನ್ ಪಡೆದುಕೊಳ್ಳದೆ ಇದ್ದವರು ಈ ತಿಂಗಳಿನಿಂದ ರೇಷನ್ ವಸ್ತುಗಳನ್ನು ಪಡೆದುಕೊಂಡು ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗದಂತೆ ನೋಡಿಕೊಳ್ಳಿ.

If you do not follow all these rules, your ration card will be cancelled

Follow us On

FaceBook Google News

If you do not follow all these rules, your ration card will be cancelled