ಈ ರೀತಿ ಮಾಡಿದ್ರೆ ನಿಮಗೂ ಸಿಗೋಲ್ಲ ಗೃಹಜ್ಯೋತಿ ಉಚಿತ ವಿದ್ಯುತ್; ಸರ್ಕಾರ ಕಠಿಣ ನಿರ್ಧಾರ

ಕೆಲವರು ಉಚಿತ ವಿದ್ಯುತ್ (free electricity) ಪಡೆದುಕೊಳ್ಳುವುದು ಮಾತ್ರವಲ್ಲದೆ ಹೆಚ್ಚುವರಿ ವಿದ್ಯುತ್ (electricity) ಬಳಸಿಕೊಳ್ಳುತ್ತಾ ಹೆಚ್ಚುವರಿ ವಿದ್ಯುತ್ತಿಗೆ ಬಂದಿರುವ ಬಿಲ್ ಕೂಡ ಪಾವತಿ ಮಾಡುತ್ತಿಲ್ಲ

ಉಂಡು ಹೋದ ಕೊಂಡು ಹೋದ ಎನ್ನುವ ಒಂದು ಗಾದೆ ಮಾತಿದೆ. ಅಂದ್ರೆ ಬೇರೆಯವರಿಂದ ಪಡೆದುಕೊಳ್ಳುವುದು ಮಾತ್ರವಲ್ಲದೆ ಅವರಿಂದ ಕಸಿದುಕೊಂಡು ಹೋಗುವುದು ಎನ್ನುವ ಅರ್ಥ.

ಸರ್ಕಾರದ ಗೃಹಜ್ಯೋತಿ ಯೋಜನೆಯಲ್ಲಿಯೂ (Gruha Jyothi scheme) ಕೂಡ ಇಂಥದ್ದೇ ಆಗಿದೆ. ಯಾಕಂದ್ರೆ ಸರ್ಕಾರ ಹಲವರಿಗೆ ಗೃಹಜ್ಯೋತಿ ಯೋಜನೆಯಡಿಯಲ್ಲಿ ಉಚಿತವಾಗಿ ವಿದ್ಯುತ್ ನೀಡುತ್ತಿದೆ, ಆದರೆ ಜನರು ಈ ಉಚಿತ ವಿದ್ಯುತ್ (free electricity) ಪಡೆದುಕೊಳ್ಳುವುದು ಮಾತ್ರವಲ್ಲದೆ ಹೆಚ್ಚುವರಿ ವಿದ್ಯುತ್ (electricity) ಬಳಸಿಕೊಳ್ಳುತ್ತಾ ಹೆಚ್ಚುವರಿ ವಿದ್ಯುತ್ತಿಗೆ ಬಂದಿರುವ ಬಿಲ್ ಕೂಡ ಪಾವತಿ ಮಾಡದೆ ಸರಕಾರದ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದ್ದಾರೆ.

ಗೃಹಲಕ್ಷ್ಮಿ ಹಣ ಇನ್ನೂ ಬಾರದಿದ್ರೆ ಈ ಹಂತಗಳನ್ನು ಅನುಸರಿಸಿ! ಲಕ್ಷ್ಮಿ ಹೆಬ್ಬಾಳ್ಕರ್ ಸೂಚನೆ

ಈ ರೀತಿ ಮಾಡಿದ್ರೆ ನಿಮಗೂ ಸಿಗೋಲ್ಲ ಗೃಹಜ್ಯೋತಿ ಉಚಿತ ವಿದ್ಯುತ್; ಸರ್ಕಾರ ಕಠಿಣ ನಿರ್ಧಾರ - Kannada News

ಸರ್ಕಾರದ ಕಟ್ಟು ನಿಟ್ಟಿನ ಕ್ರಮ!

ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ಸಾಕಷ್ಟು ಕುಟುಂಬಗಳು ಇಂದು ಉಚಿತವಾಗಿ ಬೆಳಕು ನೋಡುತ್ತಿವೆ ಎನ್ನಬಹುದು. ರಾಜ್ಯದಲ್ಲಿ ಯಾವುದೇ ಜಾತಿ ಭೇದ ಅಥವಾ ಬಿಪಿಎಲ್ ಕಾರ್ಡ್ (BPL card ) ಎಪಿಎಲ್ ಕಾರ್ಡ್ (APL Card) ಎನ್ನುವ ಭೇದ ಇಲ್ಲದೆ ಯಾರು 200 ಯೂನಿಟ್ (200 unit power) ಗಿಂತಲೂ ಕಡಿಮೆ ವಿದ್ಯುತ್ ಬಳಕೆ ಮಾಡುತ್ತಾರೆ ಅಂತವರಿಗೆ ಉಚಿತ ವಿದ್ಯುತ್ ಅನ್ನು ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ನೀಡಲಾಗುತ್ತಿದೆ.

ಸರ್ಕಾರ ನಿಗದಿಪಡಿಸಿರುವ ಯೂನಿಟ್ ಗಿಂತಲೂ ಹೆಚ್ಚಿಗೆ ಖರ್ಚು ಮಾಡಿದರೆ, ಅದು 200 ಯೂನಿಟ್ ಗೂ ಹೆಚ್ಚುವರಿ ಆಗಿದ್ದರೆ ಒಂದಷ್ಟು ಬಿಲ್ ಪಾವತಿ ಮಾಡಬೇಕು. ಇದು ಸುಮಾರು ನೂರು ರೂಪಾಯಿಗಳಿಗಿಂತಲೂ ಕಡಿಮೆ ಮೊತ್ತದ್ದೇ ಆಗಿರುತ್ತದೆ ಎನ್ನಬಹುದು. ಆದರೆ ಜನರು ಇಷ್ಟು ಕಡಿಮೆ ಮೊತ್ತದ ಹಣವನ್ನು ಕೂಡ ಪಾವತಿ ಮಾಡಲು ಸಿದ್ಧರಿಲ್ಲ.

ಗೃಹಲಕ್ಷ್ಮಿ ಯೋಜನೆ ಆರಂಭವಾಗಿ ಮೂರು ತಿಂಗಳು ಕಳೆದಿವೆ ಈಗಾಗಲೇ ಕಳೆದ ಮೂರು ತಿಂಗಳಿನಿಂದ ಸಾಕಷ್ಟು ಜನರಿಗೆ ಉಚಿತ ವಿದ್ಯುತ್ ಲಭ್ಯವಾಗಿದೆ. ಹಾಗೂ ಹೆಚ್ಚುವರಿ ವಿದ್ಯುತ್ ಬಳಸಿದವರಿಗೆ ಅಷ್ಟು ಹೆಚ್ಚುವರಿ ವಿದ್ಯುತ್ ಗೆ (extra electricity usage) ಮಾತ್ರ ಬಿಲ್ ಪಾವತಿ ಮಾಡಲು ಹೇಳಲಾಗಿತ್ತು. ಆದರೆ ಆ ಮೊತ್ತವನ್ನು ಕೂಡ ಪಾವತಿ ಮಾಡದೆ ಕಳೆದ ಮೂರು ತಿಂಗಳಿನಿಂದ ವಿದ್ಯುತ್ ಬಿಲ್ (Electricity Bill) ಹಾಗೆಯೇ ಉಳಿಸಿಕೊಂಡಿದ್ದಾರೆ.

ಇಂತಹವರು ರೇಷನ್ ಕಾರ್ಡ್ ಸರೆಂಡರ್ ಮಾಡಬೇಕು! ಕಟ್ಟಬೇಕು ಬಾರೀ ದಂಡ; ಖಡಕ್ ವಾರ್ನಿಂಗ್

ಹಳೆಯ ಬಿಲ್ ಕೂಡ ಬಾಕಿ (Electricity bill payment pending)

Electricity Billಹೊಸದಾಗಿ ಮೂರು ತಿಂಗಳಿನಿಂದ ವಿದ್ಯುತ್ ಬಿಲ್ ಪಾವತಿ ಮಾಡದೇ ಇರುವುದು ಮಾತ್ರವಲ್ಲದೆ ಹಳೆಯ ಬಿಲ್ ಕೂಡ ಪಾವತಿ ಮಾಡದೆ ಉಳಿಸಿಕೊಂಡಿರುವುದು ಬೆಸ್ಕಾಂ (BESCOM) ಗಮನಕ್ಕೆ ಬಂದಿದೆ, ಹೀಗಾಗಿ ಯಾರೆಲ್ಲಾ ಇದುವರೆಗೆ ಬಿಲ್ ಪಾವತಿ ಮಾಡದೆ ಹಾಗೆಯೇ ಉಳಿಸಿಕೊಂಡಿದ್ದಾರೋ ಅಂತವರಿಗೆ ಶಾಕಿಂಗ್ ಸುದ್ದಿಯನ್ನು ಸರ್ಕಾರ ನೀಡಿದೆ.

ಯುವಕರೇ, ಯುವ ನಿಧಿ ಯೋಜನೆ ಹಣ ಪಡೆಯಲು ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ!

ಇನ್ನು ಮುಂದೆ ಇಲ್ಲ ಗೃಹಜ್ಯೋತಿ ಯೋಜನೆ!

ವಿದ್ಯುತ್ ಬಿಲ್ ಪಾವತಿ ಮಾಡದೇ ಇರುವವರ ಮನೆಗೆ ಉಚಿತ ವಿದ್ಯುತ್ ಅನ್ನು ಇನ್ನು ಮುಂದೆ ನೀಡಲಾಗುವುದಿಲ್ಲ, ಅಷ್ಟೇ ಅಲ್ಲ ಅಂತವರ ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಕೂಡ ಬೆಸ್ಕಾಂ ನಿರ್ಧರಿಸಿದೆ.

ಡಿಸೆಂಬರ್ ಅಂತ್ಯದ ಒಳಗೆ ಯಾರು ಬಿಲ್ ಪಾವತಿ ಮಾಡದೆ ಹಾಗೆ ಉಳಿದುಕೊಂಡಿರುತ್ತದೆಯೋ ಅಂತವರಿಗೆ ಗೃಹಜ್ಯೋತಿ ಯೋಜನೆಯ ಪ್ರಯೋಜನ ಸಿಗುವುದಿಲ್ಲ. ಅಷ್ಟೇ ಅಲ್ಲದೆ ಬಿಲ್ ಪಾವತಿ ಮಾಡುವವರೆಗೂ ಮನೆಗೆ ವಿದ್ಯುತ್ ಸಂಪರ್ಕ (power connection) ಕೂಡ ಇರುವುದಿಲ್ಲ.

ವಿದ್ಯುತ್ ಬಳಕೆ ಕಡಿಮೆ ಮಾಡಿ ಉಚಿತ ವಿದ್ಯುತ್ ಪಡೆಯಿರಿ – Save Electricity

Save Electricityಉಚಿತವಾಗಿ ವಿದ್ಯುತ್ ಸಿಗುತ್ತಿದೆ ಎನ್ನುವ ಕಾರಣಕ್ಕೆ ಮಿತಿಮೀರಿ ವಿದ್ಯುತ್ ಬಳಸುವವರ ಸಂಖ್ಯೆ ಕೂಡ ಜಾಸ್ತಿಯಾಗಿದೆ, ಈ ಹಿನ್ನೆಲೆಯಲ್ಲಿ ಸಾಕಷ್ಟು ಜನ ಇನ್ನೂರು ಯೂನಿಟ್ ಗಿಂತ ಹೆಚ್ಚುವರಿ ವಿದ್ಯುತ್ ಬಳಸುವಂತೆ ಆಗಿದೆ

ಈ ರೀತಿ ವಿದ್ಯುತ್ ಜಾಸ್ತಿ ಬಳಕೆ ಮಾಡಿದರೆ ಗೃಹಜ್ಯೋತಿ ಯೋಜನೆಯ ಪ್ರಯೋಜನ ಸಿಗುವುದಿಲ್ಲ, ಅಷ್ಟೇ ಅಲ್ಲದೆ ಈಗಾಗಲೇ ರಾಜ್ಯದಲ್ಲಿ ವಿದ್ಯುತ್ ಪ್ರಭಾವ ಉಂಟಾಗಿರುವುದರಿಂದ ಅಧಿಕ ವಿದ್ಯುತ್ ಬಳಸಿದರೆ ನಿಜವಾಗಿ ಅಗತ್ಯ ಇರುವವರಿಗೆ ವಿದ್ಯುತ್ ಪೂರೈಕೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ.

ಇವೆಲ್ಲ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ಪ್ರತಿಯೊಬ್ಬರು ವಿದ್ಯುತ್ ಬಳಕೆಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಉದಾಹರಣೆಗೆ ಮನೆಯಲ್ಲಿ ಅನಗತ್ಯವಾಗಿ ಎಸಿ, ಫ್ಯಾನ್, ಲೈಟ್, ಗೀಸರ್ ಮೊದಲಾದ ಎಲೆಕ್ಟ್ರಾನಿಕ್ ಡಿವೈಸ್ (electronic device) ಗಳನ್ನು ಸ್ವಿಚ್ ಆನ್ ಮಾಡಿಯೇ ಇಡುವುದನ್ನು ತಪ್ಪಿಸಬೇಕು.

ಟ್ಯಾಕ್ಸಿ ಹಾಗೂ ವಾಹನ ಖರೀದಿಗೆ ಸರ್ಕಾರವೇ ಕೊಡುತ್ತೆ ಹಣ! ಈ ರೀತಿ ಅರ್ಜಿ ಸಲ್ಲಿಸಿ ಸಾಕು

ಅಗತ್ಯವಿದ್ದಾಗ ಮಾತ್ರ ವಿದ್ಯುತ್ ಬಳಸಿ ಸೂರ್ಯನ ಬೆಳಕು (sunlight) ಮನೆಯ ಒಳಗೆ ಪ್ರವೇಶಿಸುವಾಗ ಅದನ್ನ ಬಳಸಿಕೊಳ್ಳಿ ನಿಮ್ಮ ಮನೆಯ ಕಿಟಕಿ ಬಾಗಿಲುಗಳನ್ನ ತೆರೆದಿಟ್ಟು ಸೂರ್ಯನ ಕಿರಣ ಒಳಗೆ ಬರುವಂತೆ ಮಾಡಿ

ಇದರಿಂದ ಅನಗತ್ಯವಾಗಿ ಲೈಟ್ ಅಥವಾ ಫ್ಯಾನ್ ಆನ್ ಮಾಡುವ ಪ್ರಮೇಯ ಬರುವುದಿಲ್ಲ. ಕಿಟಕಿ ಬಾಗಿಲುಗಳು ತೆರೆದಿದ್ದಾಗ ಸುಲಭವಾಗಿ ಗಾಳಿ ಕೂಡ ಒಳಗೆ ಬರುವುದರಿಂದ ಎಸಿ (air condition) ಬಳಕೆಯನ್ನು ಕಡಿತಗೊಳಿಸಿಕೊಳ್ಳಬಹುದು.

ಈ ರೀತಿಯಾಗಿ ಸಣ್ಣ ಪುಟ್ಟ ವಿಚಾರಗಳಲ್ಲಿಯೂ ಹೆಚ್ಚು ಮುತುವರ್ಜಿವಹಿಸಿ ವಿದ್ಯುತ್ ಉಳಿತಾಯ ಮಾಡಿದರೆ, ನಾವು ಕೂಡ ಉಚಿತ ವಿದ್ಯುತ್ ಪಡೆದುಕೊಳ್ಳಬಹುದು ಹಾಗೂ ಸರ್ಕಾರಕ್ಕೆ ಹೆಚ್ಚುವರಿ ವಿದ್ಯುತ್ ಉತ್ಪಾದನೆಯ ಭಾರವನ್ನು ಕಡಿಮೆ ಮಾಡಬಹುದು.

If you do this, you will not get Gruha Jyothi Scheme free electricity

Follow us On

FaceBook Google News

If you do this, you will not get Gruha Jyothi Scheme free electricity