ಟ್ಯಾಕ್ಸಿ ಹಾಗೂ ವಾಹನ ಖರೀದಿಗೆ ಸರ್ಕಾರವೇ ಕೊಡುತ್ತೆ ಹಣ! ಈ ರೀತಿ ಅರ್ಜಿ ಸಲ್ಲಿಸಿ ಸಾಕು

Story Highlights

ನಿಮ್ಮದೇ ಆಗಿರುವ ಸ್ವಂತ ವಾಹನವನ್ನು (Own Vehicle) ಕೂಡ ಖರೀದಿಸಬಹುದು. ಇದಕ್ಕಾಗಿ ಸರ್ಕಾರದಿಂದ 4 ಲಕ್ಷ ರೂಪಾಯಿ ಅಥವಾ ನೀವು ಖರೀದಿಸಿದ ವಾಹನದ 50% ನಷ್ಟು ಹಣ (Subsidy Loan) ಸಿಗುತ್ತದೆ.

ಈ ದೇಶದಲ್ಲಿ ಹಣದುಬ್ಬರದ ಸಮಸ್ಯೆ ಜಾಸ್ತಿಯಾಗುತ್ತಿದೆ, ಇದರ ಜೊತೆಗೆ ನಿರುದ್ಯೋಗ ಸಮಸ್ಯೆ (unemployment problem) ಕೂಡ ಕಾಡುತ್ತಿರುವುದರಿಂದ ಯುವಕರು ಉದ್ಯೋಗ ಇಲ್ಲದೆ ಪರದಾಡುವಂತೆ ಆಗಿದೆ

ಅದರಲ್ಲೂ ಕರ್ನಾಟಕ ರಾಜ್ಯ ಸರ್ಕಾರ (state government) ರಾಜ್ಯದಲ್ಲಿ ಇರುವಂತಹ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವ ಸಲುವಾಗಿ ಬಹಳ ಪ್ರಮುಖ ಯೋಜನೆ ಒಂದನ್ನು ಜಾರಿಗೆ ತಂದಿದೆ, ಈ ಯೋಜನೆ ಅಡಿಯಲ್ಲಿ ಸ್ವಂತ ಉದ್ಯೋಗ (Own Business) ಮಾಡಲು ಬಯಸುವವರಿಗೆ ಸಂಪೂರ್ಣ ಸಹಕಾರವನ್ನು ಸರ್ಕಾರ ನೀಡಲಿದೆ.

30 ವರ್ಷ ಮೇಲ್ಪಟ್ಟ ರಾಜ್ಯದ ಎಲ್ಲರಿಗೂ ಸರ್ಕಾರದಿಂದ ಸಿಗಲಿದೆ ಈ ಯೋಜನೆಯ ಬೆನಿಫಿಟ್

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು (guarantee schemes) ಘೋಷಣೆ ಮಾಡಿದೆ. ಆ ಯೋಜನೆಗಳಲ್ಲಿ ಐದನೇ ಯೋಜನೆ ಯುವ ನಿಧಿ ಯೋಜನೆ (Yuva Nidhi Yojana).

ಯುವ ನಿಧಿ ಯೋಜನೆಯಡಿಯಲ್ಲಿ ನಿರುದ್ಯೋಗ ಯುವಕ ಯುವತಿಯರಿಗೆ ಪ್ರತಿ ತಿಂಗಳು 3,000, ರೂಪಾಯಿಗಳನ್ನು ಅವರ ಖಾತೆಗೆ (Bank Account) ಸರ್ಕಾರ ಜಮಾ ಮಾಡಲಿದೆ. ಯೋಜನೆ ಒಂದು ಕಡೆಯಾದರೆ ತಮ್ಮದೇ ಆಗಿರುವ ಸ್ವಂತ ಉದ್ಯಮ ಆರಂಭಿಸಲು ಕೂಡ ಸರ್ಕಾರ ಹಣಕಾಸಿನ ನೆರವು ನೀಡುತ್ತಿದೆ, ಇದಕ್ಕಾಗಿ ಸರ್ಕಾರ ಆರಂಭಿಸಿರುವ ಹೊಸ ಯೋಜನೆ ಸ್ವಾವಲಂಬಿ ಸಾರಥಿ ಯೋಜನೆ!

ಏನಿದು ಸ್ವಾವಲಂಬಿ ಸಾರಥಿ ಯೋಜನೆ (Swavalambi Sarathi Yojana)

ಈ ಯೋಜನೆಯ ಅಡಿಯಲ್ಲಿ ಯುವಕರು ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂತಹವರು ತಕ್ಷಣವೇ ಉದ್ಯೋಗ ಪಡೆದುಕೊಳ್ಳಲು ಈ ಯೋಜನೆಯ ಅಡಿಯಲ್ಲಿ ಸರ್ಕಾರ ಧನ ಸಹಾಯ ನೀಡುತ್ತದೆ

ಅಂದ್ರೆ ನಿಮಗೆ ಟ್ಯಾಕ್ಸಿ (taxi) ಅಥವಾ ಆಟೋ ಓಡಿಸಲು ಬರುತ್ತಿದ್ದರೆ, ನೀವು ಟ್ಯಾಕ್ಸಿ ಡ್ರೈವರ್ (taxi driver) ಆಗಿ ಕೆಲಸ ಮಾಡಬಹುದು. ಇದಕ್ಕಾಗಿ ನಿಮ್ಮದೇ ಆಗಿರುವ ಸ್ವಂತ ವಾಹನವನ್ನು (Own Vehicle) ಕೂಡ ಖರೀದಿಸಬಹುದು. ಇದಕ್ಕಾಗಿ ಸರ್ಕಾರದಿಂದ 4 ಲಕ್ಷ ರೂಪಾಯಿ ಅಥವಾ ನೀವು ಖರೀದಿಸಿದ ವಾಹನದ 50% ನಷ್ಟು ಹಣ (Subsidy Loan) ಸಿಗುತ್ತದೆ.

ಕೃಷಿ ಭೂಮಿ ಖರೀದಿಸಲು ಮಹಿಳೆಯರಿಗೆ ₹10 ಲಕ್ಷ ರೂಪಾಯಿ ಸಹಾಯಧನ ಘೋಷಿಸಿದ ಸರ್ಕಾರ

Loanಯಾರಿಗೆ ಸಿಗಲಿದೆ ಪ್ರಯೋಜನ?

ಪರಿಶಿಷ್ಟ ಜಾತಿ ಮತ್ತು ಪಂಗಡದ (SC ST) ನಿರುದ್ಯೋಗಿ ಯುವಕರು ಸ್ವಾವಲಂಬಿ ಸಾರಥಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು, ಇದರ ಜೊತೆಗೆ ಅಲ್ಪಸಂಖ್ಯಾತರ (minorities) ಕೂಡ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ನಿಮಗೆ ಡ್ರೈವಿಂಗ್ ಮಾಡಲು ಗೊತ್ತಿದ್ದರೆ ಸರ್ಕಾರದಿಂದಲೇ ಹಣ ಪಡೆದುಕೊಂಡು ನಿಮ್ಮ ಜೀವನ ರೂಪಿಸಿಕೊಳ್ಳಲು ಇದೊಂದು ಅತ್ಯುತ್ತಮ ಅವಕಾಶ ಎನ್ನಬಹುದು.

ಈ ಯೋಜನೆ ಅಡಿ ಮಹಿಳೆಯರಿಗೆ ಸಿಗುತ್ತೆ 6,000 ರೂಪಾಯಿ ಉಚಿತ! ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ?

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!

ಬಯಸುವ ಅಭ್ಯರ್ಥಿಯ ಆಧಾರ್ ಕಾರ್ಡ್, ವಾಹನ ಚಲಾವಣೆ ಪರವಾನಿಗೆ ಪತ್ರ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಗಳನ್ನು ಒದಗಿಸಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ 18 ವರ್ಷ ಮೀರಿರಬೇಕು ಚಾಲನಾ ಪರವಾನಿಗೆ ಹೊಂದಿರುವುದು ಕಡ್ಡಾಯ (driving licence mandatory) ಹಾಗೂ ಕನಿಷ್ಠ ಒಂದು ವರ್ಷಗಳ ಅವಧಿಯ ಚಾಲನಾ ಅನುಭವ ಹೊಂದಿರಬೇಕು.

ಇಂತಹ ಕುಟುಂಬದ ಬಿಪಿಎಲ್ ರೇಷನ್ ಕಾರ್ಡ್ ರದ್ದು, ಲಿಸ್ಟ್ ಬಿಡುಗಡೆ! ಸರ್ಕಾರದ ಹೊಸ ಆದೇಶ

ಅರ್ಜಿ ಸಲ್ಲಿಸುವುದು ಹೇಗೆ? (How to apply)

ರಾಜ್ಯ ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುವ ಸೇವಾ ಸಿಂಧು ವೆಬ್ ಪೋರ್ಟಲ್ (Shiva Sindhu web portal) ನಲ್ಲಿ ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 29, 2023 ಕೊನೆಯ ದಿನಾಂಕವಾಗಿದ್ದು ನಿಮಗೆ ನಿಮ್ಮದೇ ಆಗಿರುವ ಸ್ವಂತ ವಾಹನವನ್ನು (Own Vehicle) ಇಟ್ಟುಕೊಂಡು ಹಣ ಗಳಿಕೆ ಮಾಡಲು ಮನಸ್ಸಿದ್ದರೆ ತಕ್ಷಣವೇ ಅರ್ಜಿ ಸಲ್ಲಿಸಿ.

The government Subsidy Loan for the purchase of taxis and vehicles, Just apply like this

Related Stories