30 ವರ್ಷ ಮೇಲ್ಪಟ್ಟ ರಾಜ್ಯದ ಎಲ್ಲರಿಗೂ ಸರ್ಕಾರದಿಂದ ಸಿಗಲಿದೆ ಈ ಯೋಜನೆಯ ಬೆನಿಫಿಟ್

ಜನವರಿ 2024ರ ಹೊತ್ತಿಗೆ ದಕ್ಷಿಣ ಕನ್ನಡ ಹಾಗೂ ರಾಮನಗರ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಮೊದಲ ಹಂತದ ಗೃಹ ಆರೋಗ್ಯ ಯೋಜನೆಯನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ

ರಾಜ್ಯದ ಜನತೆಯ ಆರ್ಥಿಕ ಸ್ಥಿರತೆ (financial problems) ಕಾಪಾಡಲು ಹಾಗೂ ಆರೋಗ್ಯ ಸುಧಾರಿಸಲು ಅನುಕೂಲವಾಗುವಂತಹ ಕೆಲವು ಪ್ರಮುಖ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ

ಈ ಯೋಜನೆಗಳಿಂದಾಗಿ ಬಡವರು ಕೂಡ ಸ್ವಾವಲಂಬಿ ಜೀವನ (independent life) ನಡೆಸಬಹುದಾಗಿದೆ, ಹಾಗೂ ಆರೋಗ್ಯಕರ ಜೀವನ (healthy life) ಪಡೆಯಬಹುದಾಗಿದೆ.

ಈಗಾಗಲೇ ಐದು ಗ್ಯಾರಂಟಿ ಯೋಜನೆಗಳನ್ನು (guarantee schemes) ಪ್ರಣಾಳಿಕೆಯಲ್ಲಿ ಹೊರಡಿಸಿದಂತೆ ಒಂದೊಂದೇ ಯೋಜನೆಗಳನ್ನ ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ನಿರತವಾಗಿದೆ.

30 ವರ್ಷ ಮೇಲ್ಪಟ್ಟ ರಾಜ್ಯದ ಎಲ್ಲರಿಗೂ ಸರ್ಕಾರದಿಂದ ಸಿಗಲಿದೆ ಈ ಯೋಜನೆಯ ಬೆನಿಫಿಟ್ - Kannada News

ಸರ್ಕಾರ ಜಾರಿಗೆ ತಂದಿರುವ ನಾಲ್ಕು ಯೋಜನೆಗಳು ಯಶಸ್ವಿಯಾಗಿದೆ ಇನ್ನೂ ಮುಂದೆ ಯುವ ನಿಧಿ ಯೋಜನೆ (Yuva Nidhi scheme) ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಆರ್ಥಿಕ ಸಬಲತೆಯ ಜೊತೆಗೆ ರಾಜ್ಯದ ಜನತೆಯ ಆರೋಗ್ಯದ ಬಗ್ಗೆಯೂ ಕೂಡ ಗಮನ ಹರಿಸಿರುವ ರಾಜ್ಯ ಸರ್ಕಾರದ ಅದಕ್ಕಾಗಿ ಹೊಸ ಯೋಜನೆ ರೂಪಿಸುತ್ತಿದೆ.

ಕೃಷಿ ಭೂಮಿ ಖರೀದಿಸಲು ಮಹಿಳೆಯರಿಗೆ ₹10 ಲಕ್ಷ ರೂಪಾಯಿ ಸಹಾಯಧನ ಘೋಷಿಸಿದ ಸರ್ಕಾರ

ಗೃಹ ಆರೋಗ್ಯ ಯೋಜನೆ (Gruha Arogya scheme)

Gruha Arogya Schemeಎಷ್ಟೋ ಬಾರಿ ಜನರಿಗೆ ಅನಾರೋಗ್ಯ ಉಂಟಾದಾಗ ತಕ್ಷಣಕ್ಕೆ ವೈದ್ಯರ ಬಳಿಗೆ ಹೋಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ, ಬಡವರಿಗೆ ಸುಲಭವಾಗಿ ಚಿಕಿತ್ಸೆ ಕೂಡ ಸಿಗುವುದಿಲ್ಲ. ಇದನ್ನು ಅರಿತಿರುವ ರಾಜ್ಯ ಸರ್ಕಾರ ಯಾವುದೇ ವ್ಯಕ್ತಿ ಅನಾರೋಗ್ಯದ ಕಾರಣದಿಂದ ಸಾಯಬಾರದು ಎನ್ನುವುದಕ್ಕಾಗಿ ಗೃಹ ಆರೋಗ್ಯ ಯೋಜನೆಯನ್ನು (Gruha Arogya scheme) ಜಾರಿಗೆ ತರಲು ತೀರ್ಮಾನಿಸಿದೆ.

ಮನೆ ಮನೆಗೆ ಬರಲಿದ್ದಾರೆ ವೈದ್ಯರು!

ಗೃಹ ಆರೋಗ್ಯ ಯೋಜನೆಯಡಿಯಲ್ಲಿ 30 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ಸಾಂಕ್ರಾಮಿಕವಲ್ಲದ ರೋಗಗಳಿಗೆ ಉಚಿತ ಔಷಧಿ ನೀಡುವ ಸಲುವಾಗಿ ಈ ಯೋಜನೆ ಜಾರಿಗೆ ಬರಲಿದೆ. ಮನೆಯಲ್ಲಿ ತಪಾಸಣೆ ನಡೆಸಿ ಚಿಕಿತ್ಸೆ ಕೊಟ್ಟು ಉಚಿತ ಔಷಧಿಯನ್ನು ಕೂಡ ವಿತರಣೆ ಮಾಡಲಾಗುವುದು.

ಈ ಯೋಜನೆ ಅಡಿ ಮಹಿಳೆಯರಿಗೆ ಸಿಗುತ್ತೆ 6,000 ರೂಪಾಯಿ ಉಚಿತ! ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ?

ಹೊಸ ವರ್ಷಕ್ಕೆ ಜಾರಿಗೆ ಬರಲಿರುವ ಗೃಹ ಆರೋಗ್ಯ ಯೋಜನೆ!

2024 ಜನವರಿ ಹೊತ್ತಿಗೆ ಈ ಯೋಜನೆಗೆ ಅನುಮೋದನೆ ಸಿಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಯೋಜನೆಯ ಅಡಿಯಲ್ಲಿ ಎನ್ ಹೆಚ್ ಎಂ (NHM) ನಿಂದು ಧನಸಹಾಯ ಪಡೆದು ಎರಡು ಅಥವಾ ನಾಲ್ಕು ಸಿಬ್ಬಂದಿಗಳನ್ನು ಒಳಗೊಂಡ ತಂಡ ಜನರ ಮನೆ ಬಾಗಿಲಿಗೆ ಬಂದು ಚಿಕಿತ್ಸೆ ನೀಡಲಿದೆ.

ಇದರಲ್ಲಿ ಆಶಾ ಕಾರ್ಯಕರ್ತೆಯರು ಸ್ಥಳೀಯ ಆರೋಗ್ಯ ಸಿಬ್ಬಂದಿ ಆರೋಗ್ಯ ಅಧಿಕಾರಿ ಹಾಗೂ ಪ್ರಾಥಮಿಕ ಆರೋಗ್ಯ ಅಧಿಕಾರಿಗಳು (primary health officers) ಕೆಲಸ ನಿರ್ವಹಿಸಲಿದ್ದಾರೆ.

ಮಹಿಳೆಯರಿಗೆ ಸಿಗುತ್ತೆ 2 ಲಕ್ಷ ಸಾಲ ಸೌಲಭ್ಯ, ಯಾವುದೇ ಬಡ್ಡಿ ಇಲ್ಲ! ಕೂಡಲೇ ಅಪ್ಲೈ ಮಾಡಿ

ಜನವರಿ 2024ರ ಹೊತ್ತಿಗೆ ದಕ್ಷಿಣ ಕನ್ನಡ ಹಾಗೂ ರಾಮನಗರ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಮೊದಲ ಹಂತದ ಗೃಹ ಆರೋಗ್ಯ ಯೋಜನೆಯನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ . ಗೃಹ ಆರೋಗ್ಯ ಯೋಜನೆ ಜಾರಿಗೆ ಬಂದರೆ ಸಾಕಷ್ಟು ಬಡವರಿಗೆ ಅನುಕೂಲವಾಗಲಿದೆ ಎನ್ನಬಹುದು.

Everyone above the age of 30 years of the state will get the benefit of this scheme from the government

Follow us On

FaceBook Google News

Everyone above the age of 30 years of the state will get the benefit of this scheme from the government