ಕೃಷಿ ಭೂಮಿ ಖರೀದಿಸಲು ಮಹಿಳೆಯರಿಗೆ ₹10 ಲಕ್ಷ ರೂಪಾಯಿ ಸಹಾಯಧನ ಘೋಷಿಸಿದ ಸರ್ಕಾರ

ಸರ್ಕಾರದಿಂದ ಬಡವರು ಕೂಡ ತಮ್ಮದೇ ಆಗಿರುವ ಸ್ವಂತ ಕೃಷಿ ಜಮೀನು (Agriculture Land) ಹೊಂದಿದ್ದು ಆ ಮೂಲಕ ಜೀವನ ಮಾಡಲು ಸರ್ಕಾರ ಹೊಸ ಯೋಜನೆಯ ಮೂಲಕ ಅನುವು ಮಾಡಿಕೊಟ್ಟಿದೆ.

Bengaluru, Karnataka, India
Edited By: Satish Raj Goravigere

ರೈತರಿಗೆ ಅನುಕೂಲವಾಗುವ (farmers schemes) ಸಾಕಷ್ಟು ಯೋಜನೆಗಳನ್ನು ಕೇಂದ್ರ ಸರ್ಕಾರ (central government) ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರುತ್ತವೆ, ಇನ್ನೂ ಪ್ರಮುಖವಾಗಿ ರೈತರಿಗೆ ಕೃಷಿ ಮಾಡಲು ಕೃಷಿ ಭೂಮಿ (agriculture land) ಬೇಕು.

ಬಡವರಿಗೆ ತಮ್ಮದೇ ಆಗಿರುವ ಸ್ವಂತ ಭೂಮಿ (Own Property) ಖರೀದಿಸಲು ಶಕ್ತಿ ಇರುವುದಿಲ್ಲ, ಇದಕ್ಕಾಗಿ ಸರ್ಕಾರದಿಂದ ಬಡವರು ಕೂಡ ತಮ್ಮದೇ ಆಗಿರುವ ಸ್ವಂತ ಕೃಷಿ ಜಮೀನು (Agriculture Land) ಹೊಂದಿದ್ದು ಆ ಮೂಲಕ ಜೀವನ ಮಾಡಲು ಸರ್ಕಾರ ಹೊಸ ಯೋಜನೆಯ ಮೂಲಕ ಅನುವು ಮಾಡಿಕೊಟ್ಟಿದೆ. ಅದುವೇ ಭೂ ಒಡೆತನ ಯೋಜನೆ.

Govt announced Rs 10 lakh subsidy Loan for women to buy agricultural land

ಈ ಯೋಜನೆ ಅಡಿ ಮಹಿಳೆಯರಿಗೆ ಸಿಗುತ್ತೆ 6,000 ರೂಪಾಯಿ ಉಚಿತ! ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ?

ಏನಿದು ಭೂ ಒಡೆತನ ಯೋಜನೆ? (Land ownership)

ಭೂ ಒಡೆತನ ಯೋಜನೆಯ ಅಡಿಯಲ್ಲಿ ಕೃಷಿ ಜಮೀನು (agriculture land) ಹೊಂದಿರದೆ ಇರುವ ರೈತರು ಅದರಲ್ಲೂ ವಿಶೇಷವಾಗಿ ಮಹಿಳಾ ರೈತರು ಜಮೀನು ಪಡೆದುಕೊಳ್ಳಲು ಘಟಕ ವೆಚ್ಚ 25 ಲಕ್ಷಗಳನ್ನು ಸರ್ಕಾರ ನೀಡಲಿದೆ

ಇದರಲ್ಲಿ 50% ನಷ್ಟು ಹಣವನ್ನು ಸರ್ಕಾರ ಸಬ್ಸಿಡಿ (Subsidy Loan) ಆಗಿ ನೀಡಿದರೆ ಇನ್ನೂ 50% ನಷ್ಟು ಹಣವನ್ನು ಸಾಲವಾಗಿ ನೀಡುತ್ತದೆ. ಬೆಂಗಳೂರು ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಿಗೆ ಘಟಕ ವೆಚ್ಚ 25 ಲಕ್ಷ ರೂಪಾಯಿಗಳಾಗಿದ್ದರೆ ಇತರ ಜಿಲ್ಲೆಗಳಿಗೆ 20 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ.

ಭಾಗ್ಯಲಕ್ಷ್ಮಿ ಬಾಂಡ್ ಹಣ ಬಿಡುಗಡೆ! ಲಿಸ್ಟ್ ಪ್ರಕಟ, ನಿಮ್ಮ ಮಗುವಿನ ಹೆಸರು ಇದ್ಯಾ ನೋಡಿ?

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents needed)

Subsidy Loan For Land Purchaseಅರ್ಜಿದಾರರ ಭಾವಚಿತ್ರ
ಆಧಾರ್ ಕಾರ್ಡ್ (Aadhaar card)
ಜಾತಿ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ – ಗ್ರಾಮೀಣ ಭಾಗದಲ್ಲಿ ವಾರ್ಷಿಕ ಆದಾಯ 1.5 ಲಕ್ಷ ಹಾಗೂ ನಗರ ಭಾಗದಲ್ಲಿ ವಾರ್ಷಿಕ ಆದಾಯ ಎರಡು ಲಕ್ಷವನ್ನು ಮೀರಬಾರದು
ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರು ಪ್ರಮಾಣಪತ್ರ.

21 ವರ್ಷದಿಂದ ಐವತ್ತು ವರ್ಷದ ಒಳಗಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಕರ್ನಾಟಕದ ಕೆಲವು ನಿಗಮಗಳ ಅಡಿಯಲ್ಲಿ ಬರುವ ಪಂಗಡಗಳು ಈ ಯೋಜನೆಯ ಲಾಭ ಪಡೆದುಕೊಳ್ಳಲು ಅರ್ಹರು.

ಮಹಿಳೆಯರಿಗೆ ಸಿಗುತ್ತೆ 2 ಲಕ್ಷ ಸಾಲ ಸೌಲಭ್ಯ, ಯಾವುದೇ ಬಡ್ಡಿ ಇಲ್ಲ! ಕೂಡಲೇ ಅಪ್ಲೈ ಮಾಡಿ

ಕರ್ನಾಟಕ ರಾಜ್ಯ ಸರ್ಕಾರದ ಅಧಿಕೃತ ವೆಬ್ಸೈಟ್ನಲ್ಲಿ (facial website) ನಿಮಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ ಅಥವಾ 9482300400 ಈ ನಂಬರ್ಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (last date for applicant) ನವೆಂಬರ್ 29 2023. ಕರ್ನಾಟಕ ರಾಜ್ಯ ಸರ್ಕಾರ ಸೇವಾ ಸಿಂಧು ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಹ ಮತ್ತು ಆಸಕ್ತ ಮಹಿಳಾ ರೈತರು ತಕ್ಷಣವೇ ಅರ್ಜಿ ಸಲ್ಲಿಸಿ ನಿಮ್ಮ ಸ್ವಂತ ಭೂಮಿ ಪಡೆದುಕೊಳ್ಳಿ.

Govt announced Rs 10 lakh subsidy Loan for women to buy agricultural land