ಇಂತಹವರು ರೇಷನ್ ಕಾರ್ಡ್ ಸರೆಂಡರ್ ಮಾಡಬೇಕು! ಕಟ್ಟಬೇಕು ಬಾರೀ ದಂಡ; ಖಡಕ್ ವಾರ್ನಿಂಗ್
ಬಡವರ ಹಸಿವು ನೀಗಿಸುವ ಸಲುವಾಗಿ ಉಚಿತವಾಗಿ ಅಥವಾ ಅತಿ ಕಡಿಮೆ ದರಕ್ಕೆ ಅಕ್ಕಿ ಹಾಗೂ ಮತ್ತಿತರ ಅಂತಹ ನೀಡಲು ಸರ್ಕಾರ ನಿರ್ಧರಿಸಿತು. ಅದಕ್ಕಾಗಿ ಅರ್ಹತೆ ಇರುವ, ಬಡತನ ರೇಖೆಗಿಂತ ಕೆಳಗಿರುವವರಿಗೆ (below poverty line) ಬಿಪಿಎಲ್ ಕಾರ್ಡ್ (BPL card) ನೀಡಲಾಗಿತ್ತು
ಯಾರ ಬಳಿ ಬಿಪಿಎಲ್ ಕಾರ್ಡ್ (BPL Ration Card) ಇದೆಯೋ ಅಂಥವರು ಸುಲಭವಾಗಿ ಸರ್ಕಾರದ ಉಚಿತ ಪಡಿತರದ ಜೊತೆಗೆ ಇತರ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬಹುದು
ಆದರೆ ಇಲ್ಲಿ ಆಗಿರುವ ದೊಡ್ಡ ಸಮಸ್ಯೆ ಅಂದ್ರೆ ಯಾರಿಗೆ ನಿಜವಾಗಿ ಅಗತ್ಯ ಇದೆಯೋ ಅಂತವರನ್ನು ಹೊರತುಪಡಿಸಿ ಅಗತ್ಯ ಇಲ್ಲದೆ ಇರುವ ಹಾಗೂ ಉಳ್ಳವರು ಕೂಡ ಪಡಿತರ ಚೀಟಿಯನ್ನು ಪಡೆದುಕೊಂಡಿದ್ದಾರೆ, ಇದರಿಂದಾಗಿ ನಿಜವಾಗಿ ಅಗತ್ಯ ಇರುವ ಅದೆಷ್ಟೋ ಜನ ಪಡಿತರ ಚೀಟಿ (ration card)!ಪಡೆದುಕೊಳ್ಳುವುದರಿಂದ ವಂಚಿತರಾಗಿದ್ದಾರೆ.
ಇದನ್ನ ಗಮನಿಸಿರುವ ರಾಜ್ಯ ಸರ್ಕಾರ ಇದೀಗ ಹೊಸದಾಗಿರುವ ಮಾನದಂಡಗಳನ್ನು ಬಿಡುಗಡೆ ಮಾಡಿದ್ದು ಆಮಾನದಂಡಗಳಿಗೆ ಒಳಪಡದೆ ಇರುವವರು ಪಡಿತರ ಚೀಟಿ ಹೊಂದಿದ್ದರೆ ಅದನ್ನು ತಕ್ಷಣವೇ ಹಿಂತಿರುಗಿಸಬೇಕು ಎಂದು ಜನರಲ್ಲಿ ಆಹಾರ ಇಲಾಖೆ ಮನವಿ ಮಾಡಿದೆ.
ಯುವಕರೇ, ಯುವ ನಿಧಿ ಯೋಜನೆ ಹಣ ಪಡೆಯಲು ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ!
ಸರ್ಕಾರದ ಹೊಸ ನಾಲ್ಕು ಮಾನದಂಡಗಳು ಯಾವವು! (Government 4 new rules)
ಮೊದಲನೆಯದಾಗಿ 100 ಚದರ್ ಮೀಟರ್ ಗಿಂತಲೂ ಹೆಚ್ಚಿನ ವಿಸ್ತೀರ್ಣದ ಸ್ವಂತ ಮನೆ (Own House) ಹೊಂದಿದ್ದರೆ ಅಂತವರು ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಅರ್ಹರಲ್ಲ.
*ಯಾರು ಶಸ್ತ್ರಾಸ್ತ್ರಗಳ ಪರವಾನಿಗೆ ಪಡೆದುಕೊಂಡಿದ್ದಾರೋ ಅಂಥವರು ಕೂಡ ಬಿಪಿಎಲ್ ಕಾರ್ಡ್ ಹೊಂದಿರಲು ಸಾಧ್ಯವಿಲ್ಲ.
*ಮೂರನೆಯದಾಗಿ ನಾಲ್ಕು ಚಕ್ರದ ವಾಹನ (Own Vehicle) ಅಥವಾ ಟ್ರ್ಯಾಕ್ಟರ್ ಹೊಂದಿದ್ರೆ ಆ ಕುಟುಂಬಕ್ಕೆ ಬಿಪಿಎಲ್ ಕಾರ್ಡ್ ಸೌಲಭ್ಯ ಸಿಗುವುದಿಲ್ಲ.
*ಗ್ರಾಮೀಣ ಪ್ರದೇಶದಲ್ಲಿ 2 ಲಕ್ಷಕ್ಕಿಂತ ಅಧಿಕ ವಾರ್ಷಿಕ ಆದಾಯ (Yearly income) ಹಾಗೂ ನಗರ ಪ್ರದೇಶಗಳಲ್ಲಿ ಮೂರು ಲಕ್ಷಕ್ಕಿಂತ ಅಧಿಕ ವಾರ್ಷಿಕ ಆದಾಯ ಹೊಂದಿರುವ ಕುಟುಂಬದವರು ಬಿಪಿಎಲ್ ಕಾರ್ಡ್ ಸೌಲಭ್ಯ ಪಡೆದುಕೊಳ್ಳುವಂತಿಲ್ಲ.
ರಾಜ್ಯದ ಮಹಿಳೆಯರಿಗೆ ದೀಪಾವಳಿ ಗಿಫ್ಟ್! ಗೃಹಿಣಿಯರಿಗೆ ಸಿಗಲಿದೆ ಉಚಿತ 50,000 ರೂಪಾಯಿ
ಲಕ್ಷಗಟ್ಟಲೆ ಜನರಿಗೆ ಅಗತ್ಯವೇ ಇಲ್ಲ ಬಿಪಿಎಲ್ ಕಾರ್ಡ್!
ಮೇಲೆ ಹೇಳಿರುವ ನಾಲ್ಕು ಮಾನದಂಡಗಳನ್ನು ಅನುಸರಿಸದೇ ಇರುವವರು ಹಾಗೂ ಸರ್ಕಾರ ಈ ಹಿಂದೆ ತಿಳಿಸಿರುವ ಮಾನದಂಡಗಳಿಗೆ ಒಳಪಡದೆ ಇರುವವರು ಕೂಡ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿರುವುದು ಸರಕಾರದ ಗಮನಕ್ಕೆ ಬಂದಿದೆ
ಈ ಮಾನದಂಡಗಳನ್ನು ಹೊರತುಪಡಿಸಿ ಬಡತನ ರೇಖೆಗಿಂತಲು ಮೇಲೆ ಇರುವವರಿಗೆ ಎಪಿಎಲ್ ಕಾರ್ಡ್ ನೀಡಲಾಗುತ್ತದೆ, ಆದರೆ ಎಪಿಎಲ್ ಕಾರ್ಡ್ ನಲ್ಲಿ ಸರ್ಕಾರದ ಸೌಲಭ್ಯಗಳು ಲಭ್ಯವಾಗುವುದಿಲ್ಲ. ಹಾಗಾಗಿ ಉಳ್ಳವರು ಕೂಡ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ.
ಅಗತ್ಯವಿಲ್ಲದೆ ಇದ್ರೆ ಆಹಾರ ಇಲಾಖೆಗೆ ರೇಷನ್ ಕಾರ್ಡ್ ಸೆರೆಂಡರ್ ಮಾಡಿ!
ಇಂದು ಹೊಸದಾಗಿ ಪಡಿತರ ಚೀಟಿ ಗಾಗಿ 2.99 ಲಕ್ಷಕ್ಕೂ ಅಧಿಕ ಜನ ಅರ್ಜಿ ಸಲ್ಲಿಸಿ ಹೊಸ ಪಡಿತರ ಚೀಟಿ ಪಡೆದುಕೊಳ್ಳುವುದಕ್ಕೆ ಕಳೆದ ಎರಡು ವರ್ಷಗಳಿಂದ ಕಾಯುತ್ತಿದ್ದಾರೆ. ಅದೇ ರೀತಿ ಸುಮಾರು 3 ಲಕ್ಷಕ್ಕೂ ಅಧಿಕ ಜನ ಬಿಪಿಎಲ್ ಕಾರ್ಡ್ ಹೊಂದಿದ್ದರು ಕೂಡ ಕಳೆದ ಆರು ತಿಂಗಳಿನಿಂದ ಪಡಿತರ ತೆಗೆದುಕೊಳ್ಳದೆ ತಮಗೆ ಸಿಕ್ಕಿರುವ ಬಿಪಿಎಲ್ ಕಾರ್ಡ್ ಬಳಸಿಕೊಳ್ಳುತ್ತಿಲ್ಲ.
ಹಾಗಾಗಿ ಆಹಾರ ಇಲಾಖೆ ಇಂಥವರಿಗೆ ಮಹತ್ವದ ಸೂಚನೆ ನೀಡಿದ್ದು, ಯಾರು ಸರ್ಕಾರದ ಮಾನದಂಡಗಳಿಗೆ ಒಳಪಡುವುದಿಲ್ಲವೋ ಅಂತವರು ತಕ್ಷಣವೇ ತಮ್ಮ ಬಿಪಿಎಲ್ ಕಾರ್ಡ್ ಅನ್ನು ಆಹಾರ ಇಲಾಖೆಗೆ ಅಥವಾ ಹತ್ತಿರದ ತಹಶೀಲ್ದಾರ್ ಕಚೇರಿಗೆ ಹಿಂತಿರುಗಿಸಬೇಕು.
ಟ್ಯಾಕ್ಸಿ ಹಾಗೂ ವಾಹನ ಖರೀದಿಗೆ ಸರ್ಕಾರವೇ ಕೊಡುತ್ತೆ ಹಣ! ಈ ರೀತಿ ಅರ್ಜಿ ಸಲ್ಲಿಸಿ ಸಾಕು
ಸರೆಂಡರ್ ಮಾಡದೆ ಇದ್ದರೆ ಕಟ್ಟಬೇಕು ದಂಡ!
ಒಂದು ವೇಳೆ ಯಾರು ಸರ್ಕಾರದ ಮಾನದಂಡಗಳ ಬಗ್ಗೆ ಅರಿತಿದ್ದರು ಕೂಡ ತಮಗೆ ಅಗತ್ಯ ಇಲ್ಲದೆ ಇರುವ ಬಿಪಿಎಲ್ ಕಾರ್ಡ್ ಹೊಂದಿದ್ದು, ಅದರ ಮೂಲಕ ಸರ್ಕಾರದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೋ ಅಂತವರ ರೇಷನ್ ಕಾರ್ಡ್ ಪತ್ತೆ ಹಚ್ಚುವುದಕ್ಕೆ ಸರ್ಕಾರ ನಿರ್ಧರಿಸಿದೆ
ಈ ಹಿನ್ನೆಲೆಯಲ್ಲಿ ಈಗಾಗಲೇ ತಿಳಿಸಿರುವಂತೆ ನಿಮಗೆ ಅಗತ್ಯ ಇಲ್ಲದೆ ಇದ್ದರೆ ರೇಷನ್ ಕಾರ್ಡ್ ಅನ್ನು ತಕ್ಷಣವೇ ಸೆರೆಂಡರ್ (surrender your ration card) ಮಾಡಬೇಕು. ಹಾಗೂ ಮಾಡದೆ ಇದ್ದಲ್ಲಿ ಸರ್ಕಾರವೇ ಅಂತಹ ಪಡಿತರ ಚೀಟಿ ಯನ್ನು ಗುರುತಿಸಿ ರದ್ದುಪಡಿಸುತ್ತದೆ
ಜೊತೆಗೆ ಅಂತಹ ಗುರುತಿನ ಚೀಟಿ ಹೊಂದಿರುವ ಮನೆಯ ಯಜಮಾನನಿಗೆ ಭಾರಿಮೊತ್ತದ ದಂಡವನ್ನು ಕೂಡ ವಿಧಿಸುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರದ ಮಾನದಂಡಗಳ ಮಿತಿಮೀರಿ ರೇಷನ್ ಕಾರ್ಡ್ ಹೊಂದಿದ್ರೆ ತಕ್ಷಣವೇ ಅದನ್ನ ಹಿಂತಿರುಗಿಸಿ ದಂಡ ಪಾವತಿ ಮಾಡುವುದನ್ನು ತಪ್ಪಿಸಿಕೊಳ್ಳಿ.
30 ವರ್ಷ ಮೇಲ್ಪಟ್ಟ ರಾಜ್ಯದ ಎಲ್ಲರಿಗೂ ಸರ್ಕಾರದಿಂದ ಸಿಗಲಿದೆ ಈ ಯೋಜನೆಯ ಬೆನಿಫಿಟ್
implemented New rules on ration card, Such people should surrender the ration card