ಯುವಕರೇ, ಯುವ ನಿಧಿ ಯೋಜನೆ ಹಣ ಪಡೆಯಲು ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ!
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (guarantee schemes) ಕೊನೆಯ ಹಾಗೂ ಐದನೇ ಯೋಜನೆ ಯುವ ನಿಧಿ ಯೋಜನೆ (Yuva nidhi Yojana). ಯುವಕ ಯುವತಿಯರು ಈ ಯೋಜನೆಗಾಗಿ ಕಾಯುತ್ತಿದ್ದಾರೆ.
ಈ ಯೋಜನೆಯ ಮೂಲಕ ಬಡ ಹಾಗೂ ನಿರುದ್ಯೋಗ ಯುವಕ (unemployed youth) ಯುವತಿಯರಿಗೆ ಅವರ ವಿದ್ಯಾಭ್ಯಾಸ ಮುಗಿದ ನಂತರ ಕೆಲಸ ಸಿಗದೇ ಇದ್ದರೆ ಸರ್ಕಾರವೇ ಅಂತವರಿಗೆ ನೇರವಾಗಿ ಹಣವನ್ನು ಅವರ ಖಾತೆಗೆ (Bank Account) ಜಮಾ ಮಾಡಲಿದೆ, ಇದು ಎರಡು ವರ್ಷಗಳ ಪ್ರಕ್ರಿಯೆಯಾಗಿದ್ದು ಉದ್ಯೋಗ (Job) ಸಿಗುವವರೆಗೆ ಹಣವನ್ನು ಪಡೆಯಬಹುದು,.
ರಾಜ್ಯದ ಮಹಿಳೆಯರಿಗೆ ದೀಪಾವಳಿ ಗಿಫ್ಟ್! ಗೃಹಿಣಿಯರಿಗೆ ಸಿಗಲಿದೆ ಉಚಿತ 50,000 ರೂಪಾಯಿ
ಯುವಕರಿಗೆ ಯುವ ನಿಧಿ ಯೋಜನೆ (Yuva Nidhi Yojana 2023)
ಯುವಕರ ಆರ್ಥಿಕ ನೆರವು (financial support) ನೀಡುವ ಸಲುವಾಗಿ ರಾಜ್ಯ ಸರ್ಕಾರ ಯುವ ನಿಧಿ ಯೋಜನೆಯನ್ನು ಘೋಷಣೆ ಮಾಡಿದೆ, ಈ ಯೋಜನೆಯ ಅಡಿಯಲ್ಲಿ ಸಿಗುವ ಪ್ರಯೋಜನ ನೋಡುವುದಾದರೆ 2022 23ರಲ್ಲಿ ಉತ್ತೀರ್ಣರಾಗಿ ಕೆಲಸ ಸಿಗದೇ ಇರುವವರಿಗೆ ರಾಜ್ಯ ಸರ್ಕಾರದಿಂದ ಧನ ಸಹಾಯ ಸಿಗಲಿದೆ
ಇದು ಪದವಿ ಶಿಕ್ಷಣ (degree) ಹಾಗೂ ಡಿಪ್ಲೋಮೋ (diploma) ಶಿಕ್ಷಣ (Education) ಮುಗಿಸಿದ ಯುವಕ ಯುವತಿಯರಿಗೆ ಮಾತ್ರ ಲಭ್ಯವಾಗುತ್ತದೆ. ಪದವಿ ಮುಗಿಸಿದ ಯುವಕರು ವರ್ಷವಾದರೂ ಉದ್ಯೋಗ (job) ಪಡೆದುಕೊಳ್ಳದೆ ಇದ್ದರೆ ಅಂತವರಿಗೆ ಪ್ರತಿ ತಿಂಗಳು 3000 ರೂ.ಗಳನ್ನು ಪ್ರತಿ ತಿಂಗಳು ಫಲಾನುಭವಿಗಳ ಖಾತೆಗೆ (Bank Account) ಹಾಕಲಾಗುವುದು.
ಅದೇ ರೀತಿ ಡಿಪ್ಲೋಮಾ ಮುಗಿಸಿದ ಯುವಕ ಯುವತಿಯರಿಗೆ ಕೆಲಸ ಸಿಗದೇ ಇದ್ದರೆ ಅಂತವರಿಗೆ 1,500 ರೂಪಾಯಿಗಳನ್ನು ವರ್ಗಾವಣೆ (Money Transfer) ಮಾಡಲಾಗುವುದು. ಇದು ಎರಡು ವರ್ಷ ಅವಧಿಯ ಯೋಜನೆಯಾಗಿದ್ದು ಯುವಕ ಯುವತಿಯರು ವಿದ್ಯಾಭ್ಯಾಸ ಮುಗಿಸಿ ನೌಕರಿ ಸಿಗುವ ವರೆಗೆ ಅಂದರೆ ಎರಡು ವರ್ಷಗಳವರೆಗೆ ಮಾತ್ರ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು
ಒಂದು ವೇಳೆ Yuva Nidhi ಹಣವನ್ನು ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಉದ್ಯೋಗ ದೊರೆತರೆ ಅದನ್ನ ತಕ್ಷಣ ಸರ್ಕಾರಕ್ಕೆ ತಿಳಿಸಬೇಕು ಹಾಗೂ ಅಂದಿನಿಂದ ಕೊಡಲಾಗುತ್ತಿದ್ದ ಯುವ ನಿಧಿ ಹಣವನ್ನು ನಿಲ್ಲಿಸಲಾಗುತ್ತದೆ.
ಟ್ಯಾಕ್ಸಿ ಹಾಗೂ ವಾಹನ ಖರೀದಿಗೆ ಸರ್ಕಾರವೇ ಕೊಡುತ್ತೆ ಹಣ! ಈ ರೀತಿ ಅರ್ಜಿ ಸಲ್ಲಿಸಿ ಸಾಕು
ಯುವ ನಿಧಿ ಹಣ ಪಡೆದುಕೊಳ್ಳಲು ಅರ್ಹತೆಗಳು!
2022 23ನೇ ಸಾಲಿನಲ್ಲಿ ಡಿಪ್ಲೋಮಾ ಅಥವಾ ಪದವಿ ಮುಗಿಸಿರುವ ಯುವಕ ಯುವತಿಯರಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ.
*ಎರಡು ವರ್ಷಗಳ ಅವಧಿಯಲ್ಲಿ ಯಾವುದೇ ಸಂದರ್ಭದಲ್ಲಿ ಯುವಕ ಯುವತಿಯರಿಗೆ ಕೆಲಸ ಸಿಕ್ಕರು ಅದನ್ನು ತಕ್ಷಣ ಸರ್ಕಾರದ ಗಮನಕ್ಕೆ ತರಬೇಕು.
*ಕೆಲಸದಲ್ಲಿಯೇ ಇದ್ದುಕೊಂಡು ಯುವನಿಧಿ ಯೋಜನೆಗೆ ಅಪ್ಲೈ ಮಾಡಿದ್ದು ಸರ್ಕಾರದ ಗಮನಕ್ಕೆ ಬಂದರೆ ಅಂತವರಿಗೆ ಬಾರಿ ಪ್ರಮಾಣದ ದಂಡ (penalty) ವಿಧಿಸಲಾಗುವುದು.
*ಕರ್ನಾಟಕ ರಾಜ್ಯದ ನಿವಾಸಿಗಳಾಗಿರುವ ಯುವಕ ಯುವತಿಯರಿಗೆ ಮಾತ್ರ ಈ ನಿರುದ್ಯೋಗ ಭತ್ಯೆ ಸಿಗಲಿದೆ.
30 ವರ್ಷ ಮೇಲ್ಪಟ್ಟ ರಾಜ್ಯದ ಎಲ್ಲರಿಗೂ ಸರ್ಕಾರದಿಂದ ಸಿಗಲಿದೆ ಈ ಯೋಜನೆಯ ಬೆನಿಫಿಟ್
ಯುವ ನಿಧಿ ನಿರುದ್ಯೋಗ ಭತ್ಯೆ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು!
ಆಧಾರ್ ಕಾರ್ಡ್
ಶಿಕ್ಷಣ ಸಂಸ್ಥೆಯಿಂದ ಪಡೆದ ಪ್ರಮಾಣ ಪತ್ರ ಹಾಗೂ ಮಾರ್ಕ್ಸ್ ಕಾರ್ಡ್
ಬ್ಯಾಂಕ ಖಾತೆಯ ವಿವರ
ಇ-ಮೇಲ್ ಐಡಿ
ಮೊಬೈಲ್ ಸಂಖ್ಯೆ
ಭಾವಚಿತ್ರ
ಆದಾಯ ಪ್ರಮಾಣ ಪತ್ರ
ಪದವಿ ಹಾಗೂ ಡಿಪ್ಲಮೋ ಮುಗಿಸಿದವರ ಕೊನೆಯ ವರ್ಷದ ಅಂಕಪಟ್ಟಿ.
ಕೃಷಿ ಭೂಮಿ ಖರೀದಿಸಲು ಮಹಿಳೆಯರಿಗೆ ₹10 ಲಕ್ಷ ರೂಪಾಯಿ ಸಹಾಯಧನ ಘೋಷಿಸಿದ ಸರ್ಕಾರ
ಯಾವಾಗ ಸಿಗಲಿದೆ ಯುವನಿಧಿ ನಿರುದ್ಯೋಗ ಭತ್ಯೆ!
ಈಗಾಗಲೇ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳು ಜಮಾ ಮಾಡುವ ಪ್ರಯತ್ನದಲ್ಲಿ ಇದೆ. ಇದರ ಜೊತೆಗೆ ಯುವನಿಧಿ ಯೋಜನೆಯನ್ನು ನವೆಂಬರ್ ತಿಂಗಳಿನಲ್ಲಿಯೇ ಆರಂಭಿಸುವುದಾಗಿ ಸರ್ಕಾರ ತಿಳಿಸಿದ್ದು ಆದರೆ ಕಾರಣಾಂತರಗಳಿಂದ ಇದು ವಿಳಂಬವಾಗುತ್ತಿದ್ದು ಡಿಸೆಂಬರ್ ತಿಂಗಳಿನಲ್ಲಿ ಯುವ ನಿಧಿ ಯೋಜನೆಗೆ ಸರ್ಕಾರ ಚಾಲನೆ ನೀಡುವ ಸಾಧ್ಯತೆ ಇದೆ.
ಇನ್ನು ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಆಫ್ಲೈನ್ ನಲ್ಲಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕೆ ಎನ್ನುವ ವಿವರಗಳನ್ನು ಸದ್ಯದಲ್ಲಿಯೇ ಸರ್ಕಾರ ಹೊರಡಿಸಲಿದೆ.
ಈ ಯೋಜನೆ ಅಡಿ ಮಹಿಳೆಯರಿಗೆ ಸಿಗುತ್ತೆ 6,000 ರೂಪಾಯಿ ಉಚಿತ! ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ?
keep these documents ready to get Yuva Nidhi Yojana money