Karnataka NewsBangalore News

ಗೃಹಲಕ್ಷ್ಮಿ ಹಣ ಇನ್ನೂ ಬಾರದಿದ್ರೆ ಈ ಹಂತಗಳನ್ನು ಅನುಸರಿಸಿ! ಲಕ್ಷ್ಮಿ ಹೆಬ್ಬಾಳ್ಕರ್ ಸೂಚನೆ

ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಬಹುತೇಕ ಸಕ್ಸಸ್ ಆಗಿದ್ದರು ಕೂಡ ಇನ್ನೂ ಸಾಕಷ್ಟು ಮಹಿಳೆಯರು ಒಂದು ಕಂತಿನ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗದೆ ಇರುವುದು ನಿಜಕ್ಕೂ ಬೇಸರದ ಸಂಗತಿ.

ಪ್ರತಿಯೊಬ್ಬರು ಅರ್ಜಿ (application) ಸಲ್ಲಿಸಿದ ನಂತರ ಸರ್ಕಾರ ತಿಳಿಸಿದ ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಂಡಿದ್ದಾರೆ, ಬ್ಯಾಂಕಿಂಗ್ (Banking), ಆಧಾರ್ ಸೀಡಿಂಗ್ (Aadhaar Seeding), ಕೆ ವೈ ಸಿ, ಹೊಸ ಖಾತೆ ತೆರೆಯುವುದು, ರೇಷನ್ ಕಾರ್ಡ್ ತಿದ್ದುಪಡಿ (ration card correction) ಹೀಗೆ ಪ್ರತಿಯೊಂದು ಕೆಲಸಗಳನ್ನು ಮಾಡಿದ್ದಾರೆ ಆದರೂ ಕೂಡ ಇನ್ನೂ ಎಂಟರಿಂದ ಒಂಬತ್ತು ಲಕ್ಷ ಮಹಿಳೆಯರ ಖಾತೆಗೆ (Bank Account) ಹಣ ಮಾತ್ರ ಜಮಾ ಆಗಿಲ್ಲ.

Aadhaar should be linked to the bank account to reach Gruha Lakshmi money

ಈಗಾಗಲೇ ಸರ್ಕಾರ ಫಲಾನುಭವಿ (beneficiaries) ಮಹಿಳೆಯರ ಖಾತೆಗೆ ಹಣ ಜಮಾ ಆಗದೇ ಇರುವುದಕ್ಕೆ ಹಲವು ಕಾರಣಗಳನ್ನು ಕೂಡ ನೀಡಿತ್ತು ಸರ್ಕಾರದ ಕಡೆಯಿಂದಲೂ ಹಣ ವರ್ಗಾವಣೆ (DBT) ಆಗದೆ ಇರುವುದಕ್ಕೆ ತಾಂತ್ರಿಕ ದೋಷಗಳು ಕಾರಣವಾಗಿದೆ.

ಇತ್ತೀಚಿಗೆ ಸಿಡಿಪಿಓ (CDPO officers) ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇತರ ಅಧಿಕಾರಿಗಳ ಜೊತೆಗೆ ಪರಿಶೀಲನ ಸಭೆ ನಡೆಸಿರುವ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಅವರು ಎಲ್ಲಿ ಯಾವ ರೀತಿಯ ತಪ್ಪಾಗಿದೆ ಎಂಬುದನ್ನು ಪರಿಶೀಲಿಸಿ ಇನ್ನು ಕೇವಲ 15 ದಿನಗಳಲ್ಲಿ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ಮಹಿಳೆಯರ ಖಾತೆಗೂ (Bank Account) ಹಣ ಜಮಾ ಮಾಡುವುದಾಗಿ (Money Transfer) ತಿಳಿಸಿದ್ದಾರೆ.

ಇಂತಹವರು ರೇಷನ್ ಕಾರ್ಡ್ ಸರೆಂಡರ್ ಮಾಡಬೇಕು! ಕಟ್ಟಬೇಕು ಬಾರೀ ದಂಡ; ಖಡಕ್ ವಾರ್ನಿಂಗ್

ಆಧಾರ್ ಕಾರ್ಡ್ ಲಿಂಕ್ ನ ಸಮಸ್ಯೆ! (Aadhar Card link problem)

Ration Card with Aadhaar Linkಅದೆಷ್ಟೋ ಮಹಿಳೆಯರು ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು ಅದಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಂಡಿಲ್ಲ 12 ಲಕ್ಷ ಮಹಿಳೆಯರು ಈ ಸಮಸ್ಯೆಯನ್ನು ಅನುಭವಿಸುತ್ತಿದ್ದು ಸರ್ಕಾರ ತಿಳಿಸಿರುವಂತೆ ಇನ್ನು ಮುಂದೆ ಆಧಾರ್ ಸೀಡಿಂಗ್ (Aadhar seeding) ಆಗದೆ ಇದ್ದರೂ ಕೂಡ ಅಂತಹ ಮಹಿಳೆಯರ ಖಾತೆಗೆ ಹಣ ಜಮಾ ಆಗಲಿದೆ.

ಹಾಗಾಗಿ ಮುಂದಿನ ತಿಂಗಳಿನಿಂದ ಇನ್ನೂ ಒಂದಿಷ್ಟು ಫಲಾನುಭವಿಗಳು ಹಣ ಪಡೆದುಕೊಳ್ಳಲು ಸಾಧ್ಯವಾಗಬಹುದು.

ಯುವಕರೇ, ಯುವ ನಿಧಿ ಯೋಜನೆ ಹಣ ಪಡೆಯಲು ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ!

ಇಂಡಿಯಾ ಪೋಸ್ಟ್ ಪೇಮೆಂಟ್ (IPPB) ಖಾತೆ ತೆರೆಯುವುದು!

ಕರ್ನಾಟಕದಲ್ಲಿ ಸುಮಾರು 33 ಐಪಿಪಿಬಿ (India Post payment) ಶಾಖೆಗಳು ಇವೆ. ಹಾಗಾಗಿ ಇಲ್ಲಿ ಖಾತೆ ತೆರೆದರೆ ಗೃಹಲಕ್ಷ್ಮಿ ಯೋಜನೆಯ ಹಣ ಬಹಳ ಬೇಗ ಮಹಿಳೆಯರ ಖಾತೆ ತಲುಪುತ್ತದೆ.

ಪೋಸ್ಟ್ ಆಫೀಸ್ (post office Account) ನಲ್ಲಿ ಖಾತೆ ತೆರೆದ ಕೆಲವೇ ಗಂಟೆಗಳಲ್ಲಿ ಗೃಹಲಕ್ಷ್ಮಿ ಹಣ ಗೃಹಿಣಿಯರ ಖಾತೆಗೆ ಜಮಾ ಆಗಿರುವ ಉದಾಹರಣೆಗಳು ಇವೆ, ಹಾಗಾಗಿ ಬ್ಯಾಂಕ್ ಗಿಂತಲೂ (Bank) ಪೋಸ್ಟ್ ಆಫೀಸ್ ಖಾತೆ ತೆರೆಯುವುದು ಉತ್ತಮ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಕೃಷಿ ಭೂಮಿ ಖರೀದಿಸಲು ಮಹಿಳೆಯರಿಗೆ ₹10 ಲಕ್ಷ ರೂಪಾಯಿ ಸಹಾಯಧನ ಘೋಷಿಸಿದ ಸರ್ಕಾರ

ಸಹಾಯವಾಣಿಗೆ ಕರೆ ಮಾಡಿ – Helpline

Gruha Lakshmi Scheme Helpline Numberಎಷ್ಟೋ ಮಹಿಳೆಯರಿಗೆ ತಮ್ಮ ಖಾತೆಯಲ್ಲಿ ಯಾವ ಸಮಸ್ಯೆ ಇದೆ, ತಮಗೆ ಯಾಕೆ ಹಣ ಬರುತ್ತಿಲ್ಲ ಎನ್ನುವುದರ ಬಗ್ಗೆ ಅರಿವು ಇಲ್ಲ. ನಾವು ಎಲ್ಲಾ ದಾಖಲೆಗಳನ್ನು ಸರಿಯಾಗಿಯೇ ಕೊಟ್ಟಿದ್ದೇವೆ, ಅರ್ಜಿ ಸಲ್ಲಿಸಿದ್ದು ಆಗಿದೆ ಆದರೂ ಹಣ ಬರುತ್ತಿಲ್ಲ ಯಾಕೆ ಎನ್ನುವ ಗೊಂದಲ ಹಲವು ಮಹಿಳೆಯರಲ್ಲಿ ಇದೆ

ಇದಕ್ಕಾಗಿ ಈ ಸಮಸ್ಯೆ ಪರಿಹಾರ ಮಾಡಿಕೊಳ್ಳುವುದಕ್ಕಾಗಿ ನೀವು ರಾಜ್ಯ ಸರ್ಕಾರ ನೀಡಿರುವ ಸಹಾಯವಾಣಿ ಸಂಖ್ಯೆ 1902 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಭಾಗ್ಯಲಕ್ಷ್ಮಿ ಬಾಂಡ್ ಹಣ ಬಿಡುಗಡೆ! ಲಿಸ್ಟ್ ಪ್ರಕಟ, ನಿಮ್ಮ ಮಗುವಿನ ಹೆಸರು ಇದ್ಯಾ ನೋಡಿ?

ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆ ಯಶಸ್ವಿಯಾಗಿದೆಯಾ ಚೆಕ್ ಮಾಡಿ!

Gruha Lakshmi Status Checkಗೃಹಲಕ್ಷ್ಮಿ ಯೋಜನೆ ಆರಂಭವಾದ ನಂತರ ಅಂದರೆ ಆಗಸ್ಟ್ ತಿಂಗಳಿನಿಂದ ಪಟ್ಟಿ ಬಿಡುಗಡೆ ಮಾಡಲಾಗಿದ್ದು ಇದರಲ್ಲಿ ಯಾವೆಲ್ಲ ಮಹಿಳೆಯರಿಗೆ ಹಣ ವರ್ಗಾವಣೆ ಆಗಲಿದೆ ಹಾಗೂ ಯಾವ ಮಹಿಳೆಯರ ಅರ್ಜಿ ಸ್ವೀಕೃತಿ ಆಗಿದೆ ಎನ್ನುವ ಮಹಿಳೆಯರ ಹೆಸರುಗಳನ್ನ ಪ್ರಕಟಿಸಲಾಗಿದೆ.

ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/Home/EServices ಗೆ ಭೇಟಿ ನೀಡಿ e ಸರ್ವಿಸ್ ವಿಭಾಗದಲ್ಲಿ ಪಟ್ಟಿಯನ್ನು ಪರಿಶೀಲಿಸಿ. ಅಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿದರೆ ನಿಮ್ಮ ಹೆಸರು ಗೃಹಲಕ್ಷ್ಮಿ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು.

ಒಟ್ಟಿನಲ್ಲಿ ಸರ್ಕಾರ ನೀಡಿರುವ ಭರವಸೆಯ ಪ್ರಕಾರ, ಕೊನೆ ಪಕ್ಷ ನವೆಂಬರ್ ತಿಂಗಳು ಮುಗಿಯುವಷ್ಟರಲ್ಲಿ ಫಲಾನುಭವಿ ಪ್ರತಿಯೊಬ್ಬ ಮಹಿಳೆಯರ ಖಾತೆಗೂ ಹಣ ಜಮಾ ಆಗಬಹುದು ಎನ್ನುವ ನಿರೀಕ್ಷೆ ಇದೆ.

ಇಂತಹ ಕುಟುಂಬದ ಬಿಪಿಎಲ್ ರೇಷನ್ ಕಾರ್ಡ್ ರದ್ದು, ಲಿಸ್ಟ್ ಬಿಡುಗಡೆ! ಸರ್ಕಾರದ ಹೊಸ ಆದೇಶ

Follow these steps if Gruha Lakshmi Yojana money is still not received

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories