ಅನ್ನಭಾಗ್ಯ ಯೋಜನೆಯ ₹1190 ರೂಪಾಯಿ ಜಮೆ, ತಕ್ಷಣ ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

ಸಿಎಂ ಸಿದ್ದರಾಮಯ್ಯ (CM siddaramaiah) ಅವರ ನೇತೃತ್ವದ ರಾಜ್ಯ ಸರ್ಕಾರ (state government) ಜನರಿಗೆ ಅನ್ನಭಾಗ್ಯ ಯೋಜನೆಯ (Annabhagya scheme) ಅಡಿಯಲ್ಲಿ ಅಕ್ಕಿಯ ಬದಲು ಹಣ ಸಂದಾಯ ಮಾಡುತ್ತಿರುವ ವಿಚಾರ ನಿಮಗೆಲ್ಲಾ ಗೊತ್ತೇ ಇದೆ, ಈ ಮೂಲಕ ಲಕ್ಷಾಂತರ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ 5 ಕೆಜಿ ಅಕ್ಕಿಯನ್ನು ಉಚಿತವಾಗಿ (free rice) ನೀಡುವುದಾಗಿ ಹೇಳಿಕೊಂಡಿತ್ತು, ಆದರೆ ರಾಜ್ಯದಲ್ಲಿ ಅಕ್ಕಿಯ ದಾಸ್ತಾನು ಇಲ್ಲ ಹಾಗಾಗಿ ಬೇರೆ ಕಡೆಯಿಂದ ಅಕ್ಕಿಯನ್ನು ಹೊಂದಿಸಿಕೊಡಲು ಕೂಡ ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ

ಇದೇ ಕಾರಣಕ್ಕೆ ಕಳೆದ ನಾಲ್ಕು ತಿಂಗಳುಗಳಿಂದ ಬಿಪಿಎಲ್ ಕಾರ್ಡ್ (BPL card) ಹೊಂದಿರುವವರ ಖಾತೆಗೆ (Bank Account) 5 ಕೆ.ಜಿ ಅಕ್ಕಿಯ ಬದಲು ಪ್ರತಿ ಕೆಜಿಗೆ 34 ರೂಪಾಯಿಗಳಂತೆ 170 ರೂಪಾಯಿಗಳನ್ನು ನೇರವಾಗಿ ಜಮಾ (Money Deposit) ಮಾಡಲಾಗುತ್ತಿದೆ.

ಈ ರೀತಿ ಮಾಡಿದ್ರೆ ನಿಮಗೂ ಸಿಗೋಲ್ಲ ಗೃಹಜ್ಯೋತಿ ಉಚಿತ ವಿದ್ಯುತ್; ಸರ್ಕಾರ ಕಠಿಣ ನಿರ್ಧಾರ

ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಬಂದಿದ್ಯಾ ಚೆಕ್ ಮಾಡಿಕೊಳ್ಳಿ! (Check your DBT status)

Annabhagya Schemeಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ (official website) ಆಗಿರುವ https://ahara.kar.nic.in/status1/status_of_dbt_new.aspx ಇಲ್ಲಿ ನೀವು ನಿಮ್ಮ ಡಿಬಿಟಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.

ಹಂತ ಹಂತವಾಗಿ ಪ್ರತಿಯೊಂದು ಜಿಲ್ಲೆಗೂ ಕೂಡ ಅನ್ನಭಾಗ್ಯ ಯೋಜನೆಯ ಹಣ ಸಂದಾಯವಾಗುತ್ತಿದೆ. ಅದರಲ್ಲೂ ಸರ್ಕಾರ ಈಗಾಗಲೇ ಘೋಷಿಸಿರುವಂತೆ ಇನ್ನು ಮುಂದೆ ಪ್ರತಿ ತಿಂಗಳ 10ರಿಂದ 15ನೇ ತಾರೀಖಿನ ಒಳಗೆ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತದೆ

ಈಗಾಗಲೇ ಅಕ್ಟೋಬರ್ ತಿಂಗಳಿನ ಹಣ ಕೂಡ ಬಿಡುಗಡೆ ಆಗಿದ್ದು ನೀವು ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

ಗೃಹಲಕ್ಷ್ಮಿ ಹಣ ಇನ್ನೂ ಬಾರದಿದ್ರೆ ಈ ಹಂತಗಳನ್ನು ಅನುಸರಿಸಿ! ಲಕ್ಷ್ಮಿ ಹೆಬ್ಬಾಳ್ಕರ್ ಸೂಚನೆ

ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಈ ಸರ್ವಿಸ್ (e service) ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಡಿಬಿಟಿ ಸ್ಟೇಟಸ್ ಚೆಕ್ ಎನ್ನುವ ಆಯ್ಕೆ ಕಾಣಿಸುತ್ತದೆ.

ಇದರಲ್ಲಿ ಮೂರು ಜಿಲ್ಲಾವಾರು ವಿಭಾಗಗಳನ್ನು ನೀಡಲಾಗಿದ್ದು ನಿಮ್ಮ ಜಿಲ್ಲೆ ಯಾವ ವಿಭಾಗದಲ್ಲಿ ಬರುತ್ತದೆ ಎಂಬುದನ್ನು ನೋಡಿ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಯಾವ ತಿಂಗಳಿನ ಡಿಬಿಟಿ ಸ್ಟೇಟಸ್ ಚೆಕ್ ಮಾಡಲು ಬಯಸುತ್ತೀರೋ ಆ ತಿಂಗಳನ್ನು ಆಯ್ಕೆ ಮಾಡಿ..

ನಿಮ್ಮ ರೇಷನ್ ಕಾರ್ಡ್ (ration card) ಸಂಖ್ಯೆಯನ್ನು ಹಾಕಿ ಕ್ಯಾಪ್ಚ ಸಂಖ್ಯೆಯನ್ನು ನಮೂದಿಸಿದರೆ ಸಂಪೂರ್ಣವಾದ ವಿವರ ನಿಮಗೆ ಕಾಣಿಸುತ್ತದೆ. ಫಲಾನುಭವಿಯ ಹೆಸರು ಖಾತೆಯ ವಿವರ ಜಮಾ ಆಗಿರುವ ಹಣ ಎಲ್ಲಾ ವಿವರಗಳನ್ನು ಚೆಕ್ ಮಾಡಬಹುದು.

ಒಂದು ವೇಳೆ ಡಿಬಿಟಿ ಸ್ಟೇಟಸ್ ಚೆಕ್ ಮಾಡುವಾಗ Aadhar Card authentication failed ಎನ್ನುವ ಸಂದೇಶ ಸ್ವೀಕರಿಸಿದರೆ ನೀವು ಆಧಾರ್ ಕಾರ್ಡ್ ಅನ್ನು ನಿಮ್ಮ ಬ್ಯಾಂಕ್ ಖಾತೆಯ ಜೊತೆಗೆ ಲಿಂಕ್ ಮಾಡಿಕೊಳ್ಳಬೇಕು.

ಇಂತಹವರು ರೇಷನ್ ಕಾರ್ಡ್ ಸರೆಂಡರ್ ಮಾಡಬೇಕು! ಕಟ್ಟಬೇಕು ಬಾರೀ ದಂಡ; ಖಡಕ್ ವಾರ್ನಿಂಗ್

ಇನ್ನು ಪಾವತಿ ಪ್ರಗತಿಯಲ್ಲಿದೆ ಎನ್ನುವ ಸಂದೇಶ ಸ್ವೀಕರಿಸಿದರೆ ಸದ್ಯದಲ್ಲಿಯೇ ನಿಮ್ಮ ಖಾತೆಗೆ ಹಣ ಜಮಾ (Money Transfer) ಆಗುತ್ತದೆ ಎಂದು ಅರ್ಥ. ಹಾಗಾಗಿ ನೀವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ನಿಮ್ಮ ಖಾತೆಗೂ (Bank Account) ಕೂಡ ಹಣ ಜಮಾ ಆಗಲಿದೆ. ಈ ರೀತಿಯಾಗಿ ನಿಮ್ಮ ಖಾತೆಯನ್ನು ಚೆಕ್ ಮಾಡಿಕೊಂಡು ಒಂದು ವೇಳೆ ಹಣ ಜಮಾ ಆಗದೆ ಇದ್ದಲ್ಲಿ ಆಹಾರ ಇಲಾಖೆಯನ್ನು ಸಂಪರ್ಕಿಸಬಹುದು.

Annabhagya Yojana Rs 1190 has been deposited, check your Bank account

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories