ಗೃಹಲಕ್ಷ್ಮಿ ಹಣ ಸಿಗದವರು ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ, ಮನೆ ಬಾಗಿಲಿಗೆ ಬರಲಿದೆ ಹಣ

ಮೊದಲ ಕಂತಿನ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) 2,000 ರೂ. ಅರ್ಜಿ ಸಲ್ಲಿಸಿದ ಶೇಕಡಾ 80 ರಷ್ಟು ಮಹಿಳೆಯರ ಖಾತೆಯನ್ನು (Bank Account) ತಲುಪಿದೆ. ಅದೇ ರೀತಿ ಎರಡನೇ ಕಂತಿನ ಹಣ ಶೇಕಡ 90ರಷ್ಟು ಮಹಿಳೆಯರ ಖಾತೆಗೆ ಜಮಾ (DBT) ಆಗಿದೆ. ಅಕ್ಟೋಬರ್ ತಿಂಗಳಿನ ಹಣ ನೂರಕ್ಕೆ ನೂರರಷ್ಟು ಮಹಿಳೆಯರ ಖಾತೆಗೆ ಜಮಾ ಆಗುವ ನಿರೀಕ್ಷೆ ಇದೆ.
ಹೌದು, ರಾಜ್ಯ ಸರ್ಕಾರ (State government) ತನ್ನ ಮಹತ್ವಾಕಾಂಕ್ಷಿ ಯೋಜನೆಗಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯಲ್ಲಿ ಬಹುತೇಕ ಯಶಸ್ಸು ಸಾಧಿಸಿದೆ ಎಂದೇ ಹೇಳಬಹುದು. ಆದರೆ ನೂರಕ್ಕೆ ನೂರರಷ್ಟು ಫಲಾನುಭವಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ (Money Transfer) ಆಗದೆ ಇರುವುದು ನಿಜಕ್ಕೂ ವಿಪರ್ಯಾಸ.
ಯಾಕೆಂದ್ರೆ ಈ ಯೋಜನೆ ಆರಂಭವಾಗಿ ಆಗಲೇ ಮೂರು ತಿಂಗಳು ಕಳೆದಿದೆ. ಸರ್ಕಾರ ಹೇಳಿರುವ ಎಲ್ಲಾ ನಿಯಮಗಳನ್ನು ಪಾಲಿಸಿ ಎಲ್ಲಾ ದಾಖಲೆಗಳನ್ನು ನೀಡಿ ಗೃಹಿಣಿಯರು ಅರ್ಜಿ (application) ಸಲ್ಲಿಸಿದ್ದಾರೆ. ಆದರೂ ಇಲ್ಲಿಯವರೆಗೆ ಎಲ್ಲಾ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ.
ರೈತರಿಗೆ ಸಿಗಲಿದೆ ಸರ್ಕಾರಿ ಜಮೀನು, ಭೂಮಿ ವಿಲೇವಾರಿ ಮಾಡಲು ಸರ್ಕಾರ ನಿರ್ಧಾರ
ಹಣ ಜಮಾ ಆಗದೇ ಇರುವುದಕ್ಕೆ ಕಾರಣಗಳೇನು ಗೊತ್ತಾ?
ಬ್ಯಾಂಕಕ್ ಖಾತೆಗೆ ಆದ ಮ್ಯಾಪಿಂಗ್ (Aadhaar link with bank account) ಆಗದೆ ಇರುವುದು
ರೇಷನ್ ಕಾರ್ಡ್ (ration card) ನಲ್ಲಿ ಮಹಿಳೆಯ ಹೆಸರು ಮೊದಲ ಸ್ಥಾನದಲ್ಲಿ ಇಲ್ಲದೆ ಇರುವುದು
ರೇಷನ್ ಕಾರ್ಡ್ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ನಲ್ಲಿ ಹೆಸರುಗಳು ಮ್ಯಾಚ್ ಆಗದೆ ಇರುವುದು
ಸರ್ಕಾರದ ತಾಂತ್ರಿಕ ಸಮಸ್ಯೆಯಿಂದಾಗಿ (technical error) ಹಣ ವರ್ಗಾವಣೆ ಆಗದೆ ಇರುವುದು.
ಈ 4 ಕಾರಣಗಳಿಂದ ಇಲ್ಲಿಯವರೆಗೆ ಸುಮಾರು 10 ಲಕ್ಷ ಮಹಿಳೆಯರ ಖಾತೆಗೆ ಹಣ ವರ್ಗಾವಣೆ (Money Not Deposited) ಆಗಿಲ್ಲ. ಇದಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಅವರು ಎರಡು ಸುತ್ತಿನ ಪ್ರಗತಿ ಪರಿಶೀಲನ ಸಭೆಯನ್ನು ನಡೆಸಿದ್ದಾರೆ.
ಈ ಎಲ್ಲಾ ನಿಯಮ ಪಾಲನೆ ಮಾಡದಿದ್ರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತೆ! ಹೊಸ ರೂಲ್ಸ್
ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ ಸಚಿವೆ!

ಅದಕ್ಕೆ ಪರಿಹಾರವನ್ನು ಕೂಡ ಸೂಚಿಸುತ್ತಾರೆ. ನಂತರ ಅದೇ ರೀತಿ ಬದಲಾವಣೆಗಳನ್ನು ಮಾಡಿಕೊಂಡರೆ ತಕ್ಷಣವೇ ನಿಮ್ಮ ಖಾತೆಗೂ ಹಣ ಜಮಾ ಆಗುತ್ತದೆ.
ಅನ್ನಭಾಗ್ಯ ಯೋಜನೆಯ ₹1190 ರೂಪಾಯಿ ಜಮೆ, ತಕ್ಷಣ ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ
ಇಷ್ಟಾಗಿಯೂ ಹಣ ಬಾರದೆ ಇದ್ದರೆ ಹೀಗೆ ಮಾಡಿ! (Do this to get money)
ಈ ಎಲ್ಲಾ ಬದಲಾವಣೆಗಳನ್ನು ಮಾಡಿಕೊಂಡರು ನಿಮ್ಮ ಖಾತೆಗೆ (Bank Account) ಹಣ ಜಮಾ ಆಗಿಲ್ಲ ಎಂದಾದರೆ ಸ್ವಲ್ಪ ಸಮಯ ಕಾಯಬೇಕು ಅಷ್ಟೇ ನಿಮ್ಮ ಮನೆ ಬಾಗಿಲಿಗೆ ಅಂಗನವಾಡಿ ಸಹಾಯಕಿಯರು ಅಥವಾ ಶಿಕ್ಷಕಿಯರು ಬಂದು ನಿಮ್ಮ ಖಾತೆಗೆ ಹಣ ಬರುವುದಕ್ಕೆ ಬೇಕಾಗಿರುವ ಎಲ್ಲಾ ಸಲಹೆಗಳನ್ನು ನೀಡುತ್ತಾರೆ.
ಅದೆಷ್ಟೋ ಮಹಿಳೆಯರಿಗೆ ತಮ್ಮ ಖಾತೆಗೆ ಯಾಕೆ ಹಣ ಸಂದಾಯವಾಗಿಲ್ಲ ಎನ್ನುವ ಗೊಂದಲ ಇನ್ನು ಇದೆ, ಇದನ್ನ ಪರಿಹರಿಸುವ ಸಲುವಾಗಿ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಜಮಾ ಆಗದೆ ಇದ್ದರೆ ಅಂತವರು ಹೆಸರುಗಳ ಲಿಸ್ಟ್ ಅನ್ನು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ
ಆ ಮೂಲಕ ಅಂಗನವಾಡಿ ಶಿಕ್ಷಕರು ಅಥವಾ ಸಹಾಯಕಿಯರು ನಿಮ್ಮ ಮನೆ ಬಾಗಿಲಿಗೆ ಬಂದು ನಿಮಗೆ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಸಿಗುವಂತೆ ಮಾಡುತ್ತಾರೆ.
ಈ ರೀತಿ ಮಾಡಿದ್ರೆ ನಿಮಗೂ ಸಿಗೋಲ್ಲ ಗೃಹಜ್ಯೋತಿ ಉಚಿತ ವಿದ್ಯುತ್; ಸರ್ಕಾರ ಕಠಿಣ ನಿರ್ಧಾರ
ಆಧಾರ್ ಕಾರ್ಡ್ ಸೀಡಿಂಗ್ ಆಗದೇ ಇದ್ದರೂ ಸಿಗುತ್ತೆ ಹಣ!

ಇದರ ಜೊತೆಗೆ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವುದಕ್ಕಿಂತ ಅಂಚೆ ಕಚೇರಿಯಲ್ಲಿ (post office Account) ಖಾತೆ ತೆರೆದರೆ ಅಂತವರ ಖಾತೆಗೆ ಬೇಗ ಹಣ ಜಮಾ ಆಗುತ್ತದೆ ಎಂದು ಸಚಿವೆ ತಿಳಿಸಿದ್ದು ಫಲಾನುಭವಿ ಮಹಿಳೆಯರು ಅಂಚೆ ಕಚೇರಿಯಲ್ಲಿ ಅಕೌಂಟ್ ತೆರೆಯುವುದು ಸೂಕ್ತ ಎಂದಿದ್ದಾರೆ.
Those who not get Gruha Lakshmi money, keep these documents ready, money will come at the doorstep



