ಪೇಂಟ್‌ನಲ್ಲಿ ಬಳಸುವ ಥಿನ್ನರ್ ಸೇವಿಸಿ 3 ವರ್ಷದ ಬಾಲಕ ಸಾವು
ಥಿನ್ನರ್ ಲಿಖ್ವಿಡ್ ದುರದೃಷ್ಟವಶಾತ್ ಬಾಲಕನ ಕೈಗೆ ಸಿಕ್ಕಿದ್ದು, ಅದನ್ನು ಕುಡಿದಿದ್ದಾನೆ. ಅದರಿಂದ ಬಾಲಕ ತಕ್ಷಣವೇ ಅಸ್ವಸ್ಥನಾಗಿ ಕುಸಿದು ಬಿದ್ದಿದ್ದಾನೆ.
- ಪೇಂಟ್‌ನಲ್ಲಿ ಬಳಸುವ ಥಿನ್ನರ್ ಸೇವಿಸಿದ ಬಾಲಕ
- ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಿಲ್ಲ
- ಜಾತ್ರೆ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಆಘಾತ
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಹಿರೆಕೊಟ್ನೇಕಲ್ ಗ್ರಾಮದಲ್ಲಿ ಒಂದು ದುರ್ಘಟನೆ ಸಂಭವಿಸಿದ್ದು, ಮೂರು ವರ್ಷದ ಬಾಲಕ ಪೇಂಟ್‌ನಲ್ಲಿ ಬಳಸುವ ಥಿನ್ನರ್ ಸೇವಿಸಿ ಮೃತಪಟ್ಟಿದ್ದಾನೆ. ಮೃತನನ್ನು ರಮೇಶ್ ನಾಯಕ್ ಪುತ್ರ ಶಿವಾರ್ಜುನ ನಾಯಕ್ (3) ಎಂದು ಗುರುತಿಸಲಾಗಿದೆ.
ಗ್ರಾಮದಲ್ಲಿ ಜಾತ್ರೆ ಹಿನ್ನೆಲೆ ಮನೆಗೆ ಪೇಂಟಿಂಗ್ ಕೆಲಸ ನಡೆಯುತ್ತಿತ್ತು. ಈ ವೇಳೆ ಬಳಕೆಗೆ ಇಡಲಾಗಿದ್ದ ಥಿನ್ನರ್ ಲಿಖ್ವಿಡ್ ದುರದೃಷ್ಟವಶಾತ್ ಬಾಲಕನ ಕೈಗೆ ಸಿಕ್ಕಿದ್ದು, ಅದನ್ನು ಕುಡಿದಿದ್ದಾನೆ. ಅದರಿಂದ ಬಾಲಕ ತಕ್ಷಣವೇ ಅಸ್ವಸ್ಥನಾಗಿ ಕುಸಿದು ಬಿದ್ದಿದ್ದಾನೆ.
ಬೈಕ್-ಬಸ್ ಅಪಘಾತ: ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಸಾವು
ತಕ್ಷಣವೇ ಪೋಷಕರು ಶಿವಾರ್ಜುನನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರ ಪ್ರಯತ್ನ ಫಲಕಾರಿಯಾಗದೆ ಬಾಲಕನು ಮೃತಪಟ್ಟಿದ್ದಾನೆ. ಈ ಘಟನೆ ಕುಟುಂಬದೊಂದಿಗೆ ಗ್ರಾಮದಲ್ಲಿಯೂ ಆಘಾತ ಉಂಟುಮಾಡಿದೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
3-Year-Old Boy Dies After Accidentally Consuming Thinner in Raichur
Our Whatsapp Channel is Live Now 👇