1 ಎಕರೆ ಜಮೀನು ಇರೋ ರೈತರಿಗೆ ಭರ್ಜರಿ ಗಿಫ್ಟ್! ಸಿಗಲಿದೆ 10 ಸಾವಿರ ರೂಪಾಯಿ

ರೈತರ ಕೃಷಿ ಚಟುವಟಿಕೆ (agriculture activities) ಯನ್ನು ಸರ್ಕಾರ ಪ್ರೋತ್ಸಾಹಿಸಿಕೊಂಡು ಬಂದಿದೆ. ಅದರಲ್ಲೂ ಕರೋನ (Covid 19) ಮಹಾಮಾರಿ ಆವರಿಸಿದ ನಂತರ ನಗರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದ ಯುವಕರು ಕೂಡ ಹಳ್ಳಿಗೆ ಹೋಗಿ ಜೀವನ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಯುವಕರಲ್ಲಿ ಈಗ ಕೃಷಿಯ (agriculture) ಬಗ್ಗೆ ಹೆಚ್ಚು ಆಸಕ್ತಿ ಮೂಡಿದೆ. ಸಾಕಷ್ಟು ಯುವಕರು ಇಂದು ಕೃಷಿಯನ್ನು ವೃತ್ತಿಯಾಗಿಯೂ ಸ್ವೀಕರಿಸಿದ್ದಾರೆ.
ಇಂತಹ ಯುವಕರನ್ನ ಪ್ರೋತ್ಸಾಹಿಸುವ ಸಲುವಾಗಿ ಹಾಗೂ ಸಿರಿಧಾನ್ಯ ಬೆಳೆಯುವ (shridhanya crop) ಮೂಲಕ ರೈತರನ್ನು ಪ್ರೇರೇಪಿಸುವ ಸಲುವಾಗಿ ರಾಜ್ಯ ಸರ್ಕಾರ ರೈತ ಸಿರಿ ಯೋಜನೆಯನ್ನು ಜಾರಿಗೆ ತಂದಿದೆ.
ಗೃಹಲಕ್ಷ್ಮಿ ಹಣ ಯಾರಿಗೆ ಬಂದಿಲ್ವೋ ಅವರಿಗೆ ಬಿಗ್ ಅಪ್ಡೇಟ್! ಪೆಂಡಿಂಗ್ ಹಣ ಪಡೆಯಿರಿ
ಈ ಯೋಜನೆಯಲ್ಲಿ ಎರಡು ಹೆಕ್ಟರ್ ಜಮೀನು (agriculture Land) ಹೊಂದಿರುವವರಿಗೆ 10 ಸಾವಿರ ರೂಪಾಯಿಗಳನ್ನು ಸಹಾಯಧನವಾಗಿ ನೀಡಲಾಗುವುದು.
ರೈತ ಸಿರಿ ಯೋಜನೆ! (Raita Siri scheme)
ರಾಜ್ಯ ಸರ್ಕಾರ ಮುಖ್ಯವಾಗಿ ಯುವಕರಿಗೆ ಕೃಷಿಯಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ, ರೈತ ಸಿರಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಅಡಿಯಲ್ಲಿ ಯಾರು ಸಿರಿಧಾನ್ಯ ಬೆಳೆಯುತ್ತಾರೋ ಅಂತಹ ಕೃಷಿಕರಿಗೆ ಅಗತ್ಯ ಇರುವ ತರಬೇತಿಯನ್ನು ಕೂಡ ಈ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ.
ಸಿರಿಧಾನ್ಯ ಬೆಳೆಯನ್ನ ಯಾವ ರೀತಿ ಬೆಳೆಯಬೇಕು, ಏನು ಮಾಡಬೇಕು? ಮಣ್ಣಿನ ಅಭಾವ ಇರುವ ಶುಷ್ಕ ಭೂಮಿಯಲ್ಲಿಯೂ ಹೇಗೆ ಕೃಷಿ ಮಾಡಬೇಕು? ಕಡಿಮೆ ಫಲವತ್ತತೆ ಇರುವ ಮಣ್ಣಿನಲ್ಲಿಯೂ ಹೇಗೆ ಸಿರಿಧಾನ್ಯ ಬೆಳೆ ಬೆಳೆಯುವುದು ಎನ್ನುವ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಲು ಸರ್ಕಾರ ನೀಡುವ ತರಬೇತಿಗೆ ನೀವು ಜಾಯಿನ್ ಆಗಬೇಕು.
ಇಂತಹ ರೇಷನ್ ಕಾರ್ಡ್ ರದ್ದು, ರಾಜ್ಯ ಸರ್ಕಾರದ ಖಡಕ್ ನಿರ್ಧಾರ! ವಿಶೇಷ ಸೂಚನೆ
10,000 ಪ್ರೋತ್ಸಾಹ ಧನ!
ಸಿರಿಧಾನ್ಯ ಬೆಳೆ ಬೆಳೆಯಲು ರೈತರು ಹೆಚ್ಚು ಉತ್ಸುಕಾಗಲಿ ಎನ್ನುವ ಕಾರಣಕ್ಕೆ 10,000 ಸಹಾಯಧನವನ್ನು ಸರ್ಕಾರ ನೀಡುತ್ತದೆ. ಇದನ್ನು ಎರಡು ಹಂತಗಳಲ್ಲಿ ನೀಡಲಾಗುವುದು.
ಮೊದಲ ಹಂತದಲ್ಲಿ ಆರು ಸಾವಿರ ರೂಪಾಯಿ ಹಾಗೂ ಎರಡನೇ ಹಂತದಲ್ಲಿ ನಾಲ್ಕು ಸಾವಿರ ರೂಪಾಯಿಗಳನ್ನು ಪಡೆಯಬಹುದು. ಈ ಹಣ ನೇರವಾಗಿ ರೈತರ ಖಾತೆಗೆ (Bank Account) ಜಮಾ ಆಗುತ್ತದೆ.
ಅನ್ನಭಾಗ್ಯ ಹಣ ಬಿಡುಗಡೆ ಆಯ್ತು, ಖಾತೆ ಚೆಕ್ ಮಾಡಿಕೊಳ್ಳಿ! ಹಣ ಬಾರದಿದ್ರೆ ಈ ರೀತಿ ಮಾಡಿ
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!
ಆಧಾರ್ ಕಾರ್ಡ್
ರೇಷನ್ ಕಾರ್ಡ್
ಆದಾಯ ಪ್ರಮಾಣ ಪತ್ರ
ಭೂಮಿಯ ಪಹಣಿ ಪತ್ರ
ಬ್ಯಾಂಕ್ ಖಾತೆಯ ವಿವರ
ಮೊಬೈಲ್ ಸಂಖ್ಯೆ
ಹತ್ತಿರದ ತೋಟಗಾರಿಕಾ ಇಲಾಖೆಯಲ್ಲಿ ನೀವು ಹಣಕಾಸಿನ ನೆರವು ಪಡೆಯಬಹುದು ಅಥವಾ ಕಚೇರಿಗೆ ಹೋಗಿ ಸಿರಿಧಾನ್ಯ ಯೋಜನೆಯ ಹಣ ಪಡೆದುಕೊಳ್ಳಲು ಏನು ಮಾಡಬೇಕು ಎಂದು ಕೇಳಿ ಅವರು ನಿಮಗೆ ಸರಿಯಾದ ಮಾರ್ಗದರ್ಶನ ನೀಡುತ್ತಾರೆ.
A huge gift from the government to the farmers who have one acre of land
10,000 ಪ್ರೋತ್ಸಾಹ ಧನ!






