ಸುಳ್ಳು ದಾಖಲೆಗಳನ್ನು ಕೊಟ್ಟು ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿರುವವರಿಗೆ ಸರ್ಕಾರದಿಂದ ಬಿಗ್ ಅಪ್ಡೇಟ್, ಹೊಸ ನಿಯಮಗಳು ಜಾರಿಗೆ!

ತಮಗೆ ಎಲ್ಲಾ ಸೌಲಭ್ಯಗಳು ಇದ್ದರು ಕೂಡ ಸುಳ್ಳು ದಾಖಲೆಗಳನ್ನು ನೀಡಿ, ಬಿಪಿಎಲ್ ಕಾರ್ಡ್ ಪಡೆದಿರುವ ಕಾರ್ಡ್ ಗಳು ಶೀಘ್ರದಲ್ಲೇ ರದ್ದಾಗುವ ಬಗ್ಗೆ ಮಾಹಿತಿ ಸಿಕ್ಕಿದೆ

BPL Ration Card : ನಮ್ಮ ರಾಜ್ಯದಲ್ಲಿ ಈಗ ಬಿಪಿಎಲ್ ಕಾರ್ಡ್ ಇರುವುದು ಬಹಳ ಮುಖ್ಯವಾಗಿದೆ. ಬಿಪಿಎಲ್ ಕಾರ್ಡ್ ಇದ್ದರೆ ಮಾತ್ರ, ಸರ್ಕಾರ ನೀಡುತ್ತಿರುವ ಎಲ್ಲಾ ಉಚಿತ ಯೋಜನೆಗಳ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ.

ಹಾಗಾಗಿ ಬಹಳಷ್ಟು ಜನರು ಹೊಸದಾಗಿ ಬಿಪಿಎಲ್ ಕಾರ್ಡ್ (Apply New Ration Card) ಪಡೆಯುವುದಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ, ಅವರಿಗೆಲ್ಲಾ ಬೇಗ ಬಿಪಿಎಲ್ ಕಾರ್ಡ್ ಕೊಡಲಾಗುತ್ತದೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ ಸರ್ಕಾರ ಈಗ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಒಂದು ಹೊಸ ನಿಯಮ (New Rules) ತಂದಿದ್ದು, ಜನರಿಗೆ ಇದು ಶಾಕ್ ತಂದಿದೆ.

ದೇಶದ ಜನರಿಗೆ ಬಿಪಿಎಲ್ ರೇಷನ್ ಕಾರ್ಡ್ ಸೌಲಭ್ಯ ನೀಡಿರುವುದು, ಕಷ್ಟದಲ್ಲಿರುವವರು ಮತ್ತು ಬಡತನದ ರೇಖೆಗಿಂತ ಕಡಿಮೆ ಇರುವವರಿಗೆ, ತಮ್ಮ ಜೀವನದಲ್ಲಿ ಎಲ್ಲಾ ಅನುಕೂಲಗಳನ್ನು ಪಡೆಯಲು ಸಾಧ್ಯ ಆಗುವುದಿಲ್ಲ ಎಂದು ಎನ್ನಿಸುವಂಥ ಜನರಿಗೆ ಸರ್ಕಾರದಿಂದ ಸಹಾಯ ಸಿಗಲಿ, ಅವರಿಗೆ ರೇಶನ್ ಮತ್ತು ಸರ್ಕಾರದ ಇನ್ನಿತರ ಸೌಲಭ್ಯಗಳು ಸುಲಭವಾಗಿ ಸಿಗಲಿ ಎಂದು.

ಸುಳ್ಳು ದಾಖಲೆಗಳನ್ನು ಕೊಟ್ಟು ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿರುವವರಿಗೆ ಸರ್ಕಾರದಿಂದ ಬಿಗ್ ಅಪ್ಡೇಟ್, ಹೊಸ ನಿಯಮಗಳು ಜಾರಿಗೆ! - Kannada News

2 ನಿಮಿಷದಲ್ಲಿ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ, ಸೈಬರ್ ಸೆಂಟರ್ ಗೆ ಹೋಗುವ ಅವಶ್ಯಕತೆಯೇ ಇಲ್ಲ

ಆದರೆ ಸಾಕಷ್ಟು ಜನರು ಸರ್ಕಾರದಿಂದ ಸೌಲಭ್ಯ ಸಿಗುತ್ತದೆ ಎನ್ನುವ ಕಾರಣಕ್ಕೆ ತಮಗೆ ಎಲ್ಲಾ ಸೌಲಭ್ಯಗಳು ಇದ್ದರು ಕೂಡ ಸುಳ್ಳು ದಾಖಲೆಗಳನ್ನು ನೀಡಿ, ಬಿಪಿಎಲ್ ಕಾರ್ಡ್ ಪಡೆದಿದ್ದಾರೆ..

ಈಗಲೂ ಅದರಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ ಈ ರೀತಿ ಸುಳ್ಳು ದಾಖಲೆಗಳನ್ನು (False Documents) ಕೊಟ್ಟು ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿರುವವರ ಬಿಪಿಎಲ್ ಕಾರ್ಡ್ ಅನ್ನು ಕ್ಯಾನ್ಸಲ್ ಮಾಡಿಸುವ ಬಗ್ಗೆ ಸರ್ಕಾರ ಈಗಾಗಲೇ ಮಾಹಿತಿ ಹಂಚಿಕೊಂಡಿತ್ತು.

ಇನ್ನುಮುಂದೆ ಈ ಕೆಲಸ ಮುಂದುವರೆಯುತ್ತದೆ ಎಂದು ತಿಳಿಸಿದೆ. ಸರ್ಕಾರದ ಹೊಸ ನಿಯಮಗಳ ಪ್ರಕಾರ, ಬಿಪಿಎಲ್ ಕಾರ್ಡ್ ಹೊಂದಿರುವ ಯಾರೆಲ್ಲರ ಹತ್ತಿರ ಸ್ವಂತ ಕಾರ್ (Own Car) ಇರುತ್ತದೆಯೋ, ಅವರ ಬಿಪಿಎಲ್ ಕಾರ್ಡ್ ಅನ್ನು ಕ್ಯಾನ್ಸಲ್ ಮಾಡಲಾಗುತ್ತದೆ. ಇದು ಸರ್ಕಾರದ ಕಟ್ಟುನಿಟ್ಟಿನ ನಿಯಮ ಆಗಿದೆ.

ಇದೊಂದೇ ಅಲ್ಲದೆ, ಪ್ರಸ್ತುತ ಹೊಸದಾಗಿ ಬಿಪಿಎಲ್ ರೇಶನ್ ಕಾರ್ಡ್ ಪಡೆಯಲು ಅರ್ಜಿ ಹಾಕುತ್ತಿರುವವರಿಗೆ ಸರ್ಕಾರದಿಂದ ಒಂದು ಸುದ್ದಿ ಸಿಕ್ಕಿದೆ, ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಎಲೆಕ್ಷನ್ ಗಿಂತ ಮೊದಲೇ 2.94 ಲಕ್ಷ ಜನರು ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದರು, ಆದರೆ ಎಲೆಕ್ಷನ್ ಕಾರಣ ಅವರಿಗೆ ಹೊಸ ಕಾರ್ಡ್ ಸಿಕ್ಕಿರಲಿಲ್ಲ, ಹಾಗೆಯೇ ಎಲ್ಲಾ ಪೋರ್ಟಲ್ ಗಳು ಕೂಡ ರದ್ದಾಗಿತ್ತು.

ಅನ್ನಭಾಗ್ಯ ಯೋಜನೆಯ ಹಣ ಇನ್ನು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬಂದಿಲ್ವಾ? ಹಾಗಾದ್ರೆ ಈ ಒಂದು ಕೆಲಸ ತಪ್ಪದೇ ಮಾಡಿ

BPL Ration Cardಆದರೆ ಈಗ ಸರ್ಕಾರ ಅವರಿಗೆ ಗುಡ್ ನ್ಯೂಸ್ ನೀಡಿದ್ದು, ಶೀಘ್ರದಲ್ಲೇ ಹೊಸ ರೇಷನ್ ಕಾರ್ಡ್ ವಿತರಣೆ ಮಾಡಲಿದೆ. ಹಾಗೆಯೇ ಅರ್ಜಿ ಹಾಕುವವರಿಗೆ ಪೋರ್ಟಲ್ ಕೂಡ ಓಪನ್ ಆಗಿದೆ.

ಈಗ ಬಿಪಿಎಲ್ ಕಾರ್ಡ್ ಗಾಗಿ ಹೊಸದಾಗಿ ಅರ್ಜಿ ಹಾಕುವವರು ಆನ್ಲೈನ್ ಮೂಲಕ (Apply Ration Card Online) ಅಥವಾ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಬೇಕಾಗುವ ಪ್ರಮುಖ ದಾಖಲೆಗಳು

ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಕ್ಕೂ ಮುಂಚೆಯೇ ಅರ್ಜಿ ಹಾಕಿರುವವರಿಗೆ ಹೊಸ ಸೂಚನೆ ತಂದ ಸರ್ಕಾರ!

*ಆಧಾರ್ ಕಾರ್ಡ್ *ಮನೆಯ ಮುಖ್ಯ ಸದಸ್ಯೆಯ ಇನ್ಕಮ್ ಸರ್ಟಿಫಿಕೇಟ್ (Income Certificate)  *ಬಿಪಿಎಲ್ ಕಾರ್ಡ್ ಗೆ ಹೊಸದಾಗಿ ಹೆಸರು ಸೇರಿಸುವುದಕ್ಕೆ ವ್ಯಕ್ತಿಯ ಆಧಾರ್ ಕಾರ್ಡ್ ಮತ್ತು ಇನ್ಕಮ್ ಸರ್ಟಿಫಿಕೇಟ್ *ಮಕ್ಕಳಾಗಿದ್ದು, 6 ವರ್ಷಕ್ಕಿಂತ ಕಡಿಮೆ ಇದ್ದರೆ, ಅವರ ಆಧಾರ್ ಕಾರ್ಡ್, ಲಿಂಕ್ ಆಗಿರುವ ಮೊಬೈಲ್ ನಂಬರ್, ಜೊತೆಗೆ ಬರ್ತ್ ಸರ್ಟಿಫಿಕೇಟ್ ಬೇಕು.

*ಹೊಸದಾಗಿ ಬಿಪಿಎಲ್ ಕಾರ್ಡ್ ಮಾಡಿಸಲು ಅಥವಾ ಹೊಸದಾಗಿ ಮನೆಯವರ ಹೆಸರು ಸೇರಿಸಲು, ಬೆಂಗಳೂರು ಒನ್, ಗ್ರಾಮ ಒನ್ ಅಥವಾ ಸೈಬರ್ ಸೆಂಟರ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಆಗದೆ ಹೋದರೆ, ಸರ್ಕಾರದ ವೆಬ್ಸೈಟ್ ಕೆಲವು ದಿನಗಳಲ್ಲಿ ಶುರುವಾಗಲಿದ್ದು, ಅದರ ಮೂಲಕವೂ ಅರ್ಜಿ ಸಲ್ಲಿಸಬಹುದು *ಬಿಪಿಎಲ್ ಮತ್ತು ಎಪಿಎಲ್ ಎರಡು ಕಾರ್ಡ್ ಪಡೆಯುವವರು ಅರ್ಜಿ ಸಲ್ಲಿಸಬಹುದಾಗಿದೆ. ಈ ತಿಂಗಳಲ್ಲೇ ಅರ್ಜಿ ಸಲ್ಲಿಸಲು ಸರ್ಕಾರದ ಪೋರ್ಟಲ್ ಓಪನ್ ಆಗಲಿದೆ.

Big update from Govt for those who have got BPL card by giving false documents

Follow us On

FaceBook Google News

Big update from Govt for those who have got BPL card by giving false documents