2 ನಿಮಿಷದಲ್ಲಿ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ, ಸೈಬರ್ ಸೆಂಟರ್ ಗೆ ಹೋಗುವ ಅವಶ್ಯಕತೆಯೇ ಇಲ್ಲ

ಈಗ ನಮ್ಮ ರಾಜ್ಯದ ಎಲ್ಲಾ ಉಚಿತ ಸೌಲಭ್ಯಗಳನ್ನು ಪಡೆಯಬೇಕು ಎಂದರೆ, ನಿಮ್ಮ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಇರಲೇಬೇಕು ಹಾಗೆಯೇ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ (Aadhaar Card Link) ಆಗಿರುವುದು ಕಡ್ಡಾಯ ಆಗಿದೆ.

ಸರ್ಕಾರದ ಅನ್ನಭಾಗ್ಯ ಯೋಜನೆಯ (Annabhagya Scheme) ಅಡಿಯಲ್ಲಿ 5ಕೆಜಿ ಅಕ್ಕಿ ಬದಲಾಗಿ ಒಂದು ಕೆಜಿ ಅಕ್ಕಿಗೆ 34 ರೂಪಾಯಿಯ ಹಾಗೆ, 5 ಕೆಜಿ ಅಕ್ಕಿಗೆ ₹170 ರೂಪಾಯಿಯನ್ನು ರಾಜ್ಯ ಸರ್ಕಾರವು ರೇಷನ್ ಕಾರ್ಡ್ ಬಳಕೆದಾರರ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಅಕೌಂಟ್ ಗೆ (Bank Account) ಹಣ ವರ್ಗಾವಣೆ ಮಾಡುವುದಾಗಿ ತಿಳಿಸಿದೆ.

ಈ ಹಣ ಪಡೆಯಲು, ನಿಮ್ಮ ರೇಶನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು. ಇದು ಕಡ್ಡಾಯದ ನಿಯಮ ಆಗಿದೆ. ಇದಕ್ಕಾಗಿ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಜನರು ಕಷ್ಟಪಡುತ್ತಿದ್ದಾರೆ.

ಅನ್ನಭಾಗ್ಯ ಯೋಜನೆಯ ಹಣ ಇನ್ನು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬಂದಿಲ್ವಾ? ಹಾಗಾದ್ರೆ ಈ ಒಂದು ಕೆಲಸ ತಪ್ಪದೇ ಮಾಡಿ

ಒಂದು ವೇಳೆ ನೀವು ಕೂಡ ಇದೇ ರೀತಿ ಕಷ್ಟಪಡುತ್ತಿದ್ದರೆ, ಇಂದು ನಾವು ತಿಳಿಸುವ ವಿಧಾನವನ್ನು ಅನುಸರಿಸುವ ಮೂಲಕ, ಸುಲಭವಾಗಿ ಆಧಾರ್ ಕಾರ್ಡ್ ಗೆ ರೇಷನ್ ಕಾರ್ಡ್ ಗೆ ಲಿಂಕ್ ಮಾಡಬಹುದು.

ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಗೆ ಲಿಂಕ್ ಮಾಡುವುದಕ್ಕೆ ಸರ್ಕಾರ ಇಂತಿಷ್ಟು ಎಂದು ಸಮಯದ ಗಡುವು ನೀಡಿತ್ತು, ಆದರೆ ಈಗ ಸರ್ಕಾರವು ಈ ದಿನವನ್ನು ಇನ್ನಷ್ಟು ಹೆಚ್ಚಿಸಿದೆ. ಸರ್ಕಾರ ಹೇಳಿರುವ ಹಾಗೆ ರೇಶನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಆಗಿದೆ, ಲಿಂಕ್ ಮಾಡುವುದಕ್ಕೆ ಈಗ ಸೆಪ್ಟೆಂಬರ್ 30ರವರೆಗು ಸಮಯ ನೀಡಲಾಗಿದ್ದು, ಇದಕ್ಕಾಗಿ ನೀವು ಖಚೇರಿಗೆ ಹೋಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ, ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಪೂರ್ತಿ ಪ್ರಕ್ರಿಯೆ ಹೀಗಿದೆ, ಮೊದಲಿಗೆ ನೀವು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ UIDAI ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಕ್ಕೂ ಮುಂಚೆಯೇ ಅರ್ಜಿ ಹಾಕಿರುವವರಿಗೆ ಹೊಸ ಸೂಚನೆ ತಂದ ಸರ್ಕಾರ!

Aadhaar Card Ration Card Linkingಅಷ್ಟೇ ಅಲ್ಲದೆ PDS ವೆಬ್ಸೈಟ್ ನಲ್ಲಿ ರೇಷನ್-ಆಧಾರ್ ಲಿಂಕ್ ಆಯ್ಕೆಯ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು. ಈ ವೆಬ್ಸೈಟ್ ಗಳಲ್ಲಿ ಆಧಾರ್ ಕಾರ್ಡ್ ನಂಬರ್, ರೇಷನ್ ಕಾರ್ಡ್ ನಂಬರ್ ಮತ್ತು ಫೋನ್ ನಂಬರ್ ಇಂದ ಲಾಗಿನ್ ಮಾಡಬಹುದು.

ನಂತರ ಮಾಹಿತಿಯನ್ನು ಅಪ್ಲೋಡ್ ಮಾಡಬೇಕು. ನಂತರ ಕಂಟಿನ್ಯೂ ಆಯ್ಕೆಯನ್ನು ಕ್ಲಿಕ್ ಮಾಡಿ.. ಈಗ ನಿಮ್ಮ ಮೊಬೈಲ್ ನಂಬರ್ ಗೆ ಒಂದು OTP ಬರುತ್ತದೆ, ಈ OTP ನಮೂದಿಸಿ ಆಧಾರ್ ಕಾರ್ಡ್ ರೇಶನ್ ಕಾರ್ಡ್ ಲಿಂಕ್ ಮಾಡಬಹುದು. ಆನ್ಲೈನ್ ಮೂಲಕ 2 ನಿಮಿಷದಲ್ಲಿ ಈ ಕೆಲಸ ಆಗುತ್ತದೆ.

ರೇಶನ್ ಕಾರ್ಡ್ ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದಕ್ಕೆ ಸಮಯದ ಗಡುವು ಕೊಟ್ಟು, ಈಗಾಗಲೇ ಆ ಸಮಯ ಮುಗಿದು ಹೋಗಿದೆ, ಆದರೆ ಜನರಿಗೆ ಸರ್ಕಾರವು ಮತ್ತೊಂದು ಅವಕಾಶ ಕೊಟ್ಟಿದ್ದು, ಸೆಪ್ಟೆಂಬರ್ 30ರ ವರೆಗು ಲಿಂಕ್ ಮಾಡಲು ಅವಕಾಶ ಇದೆ.

ಗ್ಯಾರೆಂಟಿ ಯೋಜನೆಗಳ ಬೆನ್ನಲ್ಲೇ ರೇಷನ್ ಕಾರ್ಡ್ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ಸರ್ಕಾರ, ಜನರಿಗೆ ಬಿಗ್ ಶಾಕ್!

ಈಗಲೂ ನೀವು ಈ ಕೆಲಸವನ್ನು ಲೇಟ್ ಮಾಡಿದರೆ, ನಿಮಗೆ ತೊಂದರೆಯಾಗಬಹುದು. ಒಂದು ವೇಳೆ ಆನ್ಲೈನ್ ಲಿಂಕ್ ಮಾಡಲು ಬರೋದಿಲ್ಲ ಎನ್ನುವವರು ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ.

ಹತ್ತಿರದ ರೇಷನ್ ಕಾರ್ಡ್ ಆಫೀಸ್ ಗೆ ಭೇಟಿ ನೀಡಿ, ಫ್ರೀಯಾಗಿ ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು. ಸರ್ಕಾರ ಈಗ ಕೊಟ್ಟಿರುವ ಸಮಯದ ಅವಕಾಶವನ್ನು ಉಪಯೋಗಿಸಿಕೊಂಡು, ನೀವು ಇನ್ನು ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲ ಎಂದರೆ, ಸೆಪ್ಟೆಂಬರ್ 30 ರ ಒಳಗೆ ಲಿಂಕ್ ಮಾಡಿ, ಸರ್ಕಾರದ ಎಲ್ಲಾ ಸೌಲಭ್ಯವನ್ನು ಪಡೆಯಿರಿ.

Link Your Ration Card with Aadhaar Number with in 2 minutes Online

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories