ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಕ್ಕೂ ಮುಂಚೆಯೇ ಅರ್ಜಿ ಹಾಕಿರುವವರಿಗೆ ಹೊಸ ಸೂಚನೆ ತಂದ ಸರ್ಕಾರ!
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ, ಈ ಯೋಜನೆಯಲ್ಲಿ ನೀವು ಹಣ ಪಡೆಯಬಹುದಾ? ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ? ಎಂದು ಚೆಕ್ ಮಾಡುವ ಬಗ್ಗೆ ಮಾಹಿತಿ ತಿಳಿಸುತ್ತೇವೆ ನೋಡಿ
ಕಾಂಗ್ರೆಸ್ ಸರ್ಕಾರವು ನಮ್ಮ ರಾಜ್ಯದಲ್ಲಿ ತಂದಿರುವ ಹೊಸ ಯೋಜನೆ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಆಗಿದೆ. ಈ ಯೋಜನೆಯ ಮೂಲಕ ರಾಜ್ಯದಲ್ಲಿರುವ ಎಲ್ಲಾ ಮನೆಗಳ ಮುಖ್ಯಸ್ಥ ಮಹಿಳೆಗೆ ಪ್ರತಿ ತಿಂಗಳು ₹2000 ರೂಪಾಯಿ ಹಣವನ್ನು ನೀಡಲಾಗುತ್ತಿದೆ.
ಈ ಯೋಜನೆಗೆ ಅರ್ಜಿ ಹಾಕಲು ಸಮಯ ಶುರುವಾಗಿರುವುದರ ಜೊತೆಗೆ, ಯೋಜನೆಯ ಸೌಲಭ್ಯದ 2000 ರೂಪಾಯಿ ಕೂಡ ಗೃಹಲಕ್ಷ್ಮಿಯರ ಅಕೌಂಟ್ ಗೆ ಶೀಘ್ರದಲ್ಲೇ ತಲುಪುತ್ತದೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ನೀವು ಕೂಡ ಗೃಹಲಕ್ಷ್ಮಿ ಯೋಜನೆಗೆ (Gruha Lakshmi Yojana) ಅರ್ಜಿ ಸಲ್ಲಿಸಿದ್ದರೆ, ಈ ಯೋಜನೆಯಲ್ಲಿ ನೀವು ಹಣ ಪಡೆಯಬಹುದಾ? ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ? ಎಂದು ಚೆಕ್ ಮಾಡುವ ಬಗ್ಗೆ ಮಾಹಿತಿ ತಿಳಿಸುತ್ತೇವೆ ನೋಡಿ..
ಗ್ಯಾರೆಂಟಿ ಯೋಜನೆಗಳ ಬೆನ್ನಲ್ಲೇ ರೇಷನ್ ಕಾರ್ಡ್ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ಸರ್ಕಾರ, ಜನರಿಗೆ ಬಿಗ್ ಶಾಕ್!
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಿದರೆ ಮಾತ್ರ ಆಗುವುದಿಲ್ಲ. ಗೃಹಲಕ್ಷ್ಮಿ ಯೋಜನೆಯಿಂದ ಹಣ ಪಡೆಯಲು ನೀವು ಇನ್ನು ಕೆಲವು ಕೆಲಸಗಳನ್ನು ಸಹ ಮಾಡಬೇಕಾಗುತ್ತದೆ.
ಅದರಲ್ಲಿ ಮುಖ್ಯವಾದ ಕೆಲಸ ಏನು ಎಂದರೆ, ನಿಮ್ಮ ಆಧಾರ್ ಕಾರ್ಡ್ ಇರಬೇಕು, ಹಾಗೆಯೇ ನಿಮ್ಮ ಆಧಾರ್ ಕಾರ್ಡ್ ಗೆ ನಿಮ್ಮ ಬ್ಯಾಂಕ್ ಅಕೌಂಟ್ ಲಿಂಕ್ (Aadhaar Link with Bank Account) ಆಗಿರಬೇಕು. ಒಂದು ವೇಳೆ ನೀವು ಈ ಕೆಲಸ ಮಾಡಿಲ್ಲದೆ ಹೋದರೆ, ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣವೇ ಸಿಗುವುದಿಲ್ಲ ಎಂದು ಸರ್ಕಾರವೇ ಅಧಿಕೃತವಾಗಿ ಮಾಹಿತಿ ನೀಡಿದೆ.
ಈ 7 ಕಂಡೀಷನ್ ಗೆ ಅರ್ಹರಾದರೆ ಮಾತ್ರ ಯುವನಿಧಿ ಸ್ಕೀಮ್ ಇಂದ ₹3000 ಸಿಗೋದು! ಏನೆಲ್ಲಾ ದಾಖಲೆ ಬೇಕು ಗೊತ್ತಾ?
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿರುವವರು, ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡುವುದು ಮರೆಯಬೇಡಿ
ನಿಮ್ಮ ಅರ್ಹತೆ ಪರೀಕ್ಷಿಸಲು, ಮೊದಲಿಗೆ ನೀವು https://ahara.kar.nic.in/Home/EServices ಈ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಈ ವೆಬ್ಸೈಟ್ ಗೆ ಲಾಗಿನ್ ಆಗಿ, ರೇಷನ್ ಕಾರ್ಡ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಇಲ್ಲಿ ನೀವು ವಿಲೇಜ್ ಲಿಸ್ಟ್ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಹಾಗೆಯೇ ನಿಮ್ಮ ಜಿಲ್ಲೆ ತಾಲೂಕು ಹಾಗು ಗ್ರಾಮ ಪಂಚಾಯಿತಿ ಇದೆಲ್ಲವನ್ನು ಆಯ್ಕೆ ಮಾಡಿದ ನಂತರ ಆ ಗ್ರಾಮಕ್ಕೆ, ಅಥವಾ ಸ್ಥಳದಲ್ಲಿ ಆಯ್ಕೆ ಆಗಿರುವ ಎಲ್ಲಾ ಸದಸ್ಯರ ಹೆಸರಿನ ಲಿಸ್ಟ್ ಕೂಡ ನಿಮಗೆ ಸಿಗುತ್ತದೆ.
ಈ ಲಿಸ್ಟ್ ನಿಮಗೆ ಸಿಕ್ಕರೆ, ಅದರಲ್ಲಿ ನಿಮ್ಮ ಹೆಸರು ಇದೆಯಾ ಎಂದು ನೀವು ಚೆಕ್ ಮಾಡಿಕೊಳ್ಳಬಹುದು. ನಿಮ್ಮ ಹೆಸರು ಇದ್ದರೆ, ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಸರ್ಕಾರದಿಂದ ₹2000 ರೂಪಾಯಿ ಬರುತ್ತದೆ. ಈಗ ನೀವು SMS ಗೆ ಕಾಯದೆ ನೇರವಾಗಿ ಕೇಂದ್ರಗಳಿಗೆ ಹೋಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ತಿಳಿಸಿದೆ.
Karnataka Gruha Lakshmi Scheme Updated Information on Bank Account Credit
Follow us On
Google News |