ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಮೂಲಕ ರಾಜ್ಯದ ಪ್ರತಿ ಮನೆಯ ಗೃಹಲಕ್ಷ್ಮಿಯರಿಗು ತಿಂಗಳಿಗೆ ₹2000 ರೂಪಾಯಿ ಕೊಡುವ ಯೋಜನೆಯನ್ನು ಸರ್ಕಾರ ತಂದಿದೆ (Govt Scheme). ಈ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ಲಕ್ಷಾಂತರ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ.
ಆದರೆ ಹಲವರ ಅರ್ಜಿ ರಿಜೆಕ್ಟ್ ಆಗಿದೆ. ಇನ್ನು ಸಾಕಷ್ಟು ಜನರ ಅರ್ಜಿಗಳು ಮತ್ತೆ ಪರಿಶೀಲನೆ ನಡೆಯುತ್ತಿದೆ. ಹಾಗಾಗಿ ನೀವು ಅರ್ಜಿ ಹಾಕಿದ್ದರೆ ಅದರ ಸ್ಟೇಟಸ್ ಏನಾಗಿದೆ ಎಂದು ತಿಳಿಯುವುದು ಬಹಳ ಮುಖ್ಯವಾಗಿದೆ.
ಗೃಹಲಕ್ಷ್ಮಿ ಯೋಜನೆಯ ಅಪ್ಲಿಕೇಶನ್ ಸ್ಟೇಟಸ್ (Application Status) ತಿಳಿಯುವುದು ಹೇಗೆ ಎಂದು ತಿಳಿಸಿಕೊಡುತ್ತೇವೆ ನೋಡಿ..
200 ಯೂನಿಟ್ ಗಿಂತ ಹೆಚ್ಚು ಕರೆಂಟ್ ಬಳಸಿರುವವರಿಗೆ ನಿಯಮ ಬದಲಾವಣೆ, ವಿದ್ಯುತ್ ಇಲಾಖೆಯಿಂದ ಹೊಸ ಸೂಚನೆ ಬಿಡುಗಡೆ
ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಅರ್ಜಿ ಹಾಕಿರುತ್ತಾರೆ. ಆದರೆ ಅವರ ಅರ್ಜಿ ಸ್ವೀಕಾರ ಆಗಿದ್ಯಾ ಅಥವಾ ರಿಜೆಕ್ಟ್ ಆಗಿದ್ಯಾ ಎಂದು ಅವರಿಗೆ ಗೊತ್ತಿರುವುದಿಲ್ಲ, ಅದನ್ನು ಹೇಗೆ ಚೆಕ್ ಮಾಡುವುದು ಎಂದು ಕೂಡ ಅವರಿಗೆ ಗೊತ್ತಿರುವುದಿಲ್ಲ..
ಒಂದು ವೇಳೆ ನಿಮ್ಮ ಅರ್ಜಿ ರಿಜೆಕ್ಟ್ ಆಗಿದ್ದರೆ, ಅದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ನಿಮ್ಮ ಅರ್ಜಿ ಸ್ವೀಕಾರವಾಗಿದ್ಯ ರಿಜೆಕ್ಟ್ ಆಗಿದ್ಯಾ ಎಂದು ಗೊತ್ತಾಗುವುದು ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡಿದಾಗ ಮಾತ್ರ. ಇದನ್ನು ಚೆಕ್ ಮಾಡುವುದು ಹೇಗೆ ಎನ್ನುವ ಮಾಹಿತಿ ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ.
ಅಪ್ಲಿಕೇಶನ್ ಸ್ಟೇಟಸ್ ಹೇಗೆ ಚೆಕ್ ಮಾಡುವುದು? ಅಪ್ಲಿಕೇಶನ್ ಹಾಕಲು ಕೇಂದ್ರಗಳಿಗೆ ಹೋದ ಹಾಗೆ ಇದಕ್ಕೂ ಹೋಗಬೇಕಾ ಎಂದು ತಲೆಕೆಡಿಸಿಕೊಳ್ಳಬೇಡಿ, ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡುವುದು ಬಹಳ ಸುಲಭ.
ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಲು ಬಂತು ಸುಲಭ ವಿಧಾನ, ಈ ರೀತಿ ಫೋನ್ ಇಂದಲೇ ಅಪ್ಲೈ ಮಾಡಬಹುದು
ನಿಮ್ಮ ಮೊಬೈಲ್ ಇಂದಲೇ ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡಬಹುದು. ನಿಮ್ಮ ಮೊಬೈಲ್ ನಲ್ಲಿರುವ ಆಪ್ ಮತ್ತು ನಿಮ್ಮ ಮೊಬೈಲ್ ನಂಬರ್ ಇಂದ ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡಲು ಸಾಧ್ಯವಾಗುತ್ತದೆ. ನೀವು ಮೆಸೇಜ್ ಮಾಡುವ ಆಪ್ಶನ್ ಸೆಲೆಕ್ಟ್ ಮಾಡಿ, ಅದರಲ್ಲಿ ನಿಮ್ಮ ಮೊಬೈಲ್ ನಂಬರ್ (Mobile Number) ಮತ್ತು ನಿಮ್ಮ ರೇಷನ್ ಕಾರ್ಡ್ (Ration Card) ಹಿಂದೆ ಇರುವ ನಂಬರ್ ಟೈಪ್ ಮಾಡಿದರೆ ಸಾಕು
ನೀವು ಆ ಮೆಸೇಜ್ ಕಳಿಸಿದ ಕೆಲವೇ ಕ್ಷಣಗಳಲ್ಲಿ ನಿಮ್ಮ ಫೋನ್ ಗೆ ರಿಪ್ಲೈ ಬರುತ್ತದೆ. ಆ ಮೆಸೇಜ್ ನಲ್ಲೇ ನೀವು ಗೃಹಲಕ್ಷ್ಮಿ ಯೋಜನೆಗೆ ಸಲ್ಲಿಸಿರುವ ಅರ್ಜಿ ರಿಜೆಕ್ಟ್ ಆಗಿದ್ಯಾ ಅಥವಾ ಸ್ವೀಕಾರವಾಗಿದ್ಯಾ ಎಂದು ಗೊತ್ತಾಗುತ್ತದೆ.
ಇದಲ್ಲದೆ ಸರ್ಕಾರದ ಅಧಿಕೃತ ವೆಬ್ ಸೈಟ್ ಸೇವಾ ಪೋರ್ಟಲ್ https://sevasindhugs.karnataka.gov.in/ ಗೆ ಭೇಟಿ ನೀಡಿದಾಗ ನಿಮಗೆ ನಿಮ್ಮ ಅರ್ಜಿಯ ಸ್ಥಿತಿ ತಿಳಿಯಿರಿ ಎಂಬ ಆಯ್ಕೆಯನ್ನು ನೋಡುತ್ತಿರಿ, ಅದನ್ನು ಕ್ಲಿಕ್ಕಿಸಿ ನಿಮ್ಮ ಅರ್ಜಿ ಸಂಖ್ಯೆ ನಮೂದಿಸಿ ತಿಳಿದುಕೊಳ್ಳಬಹುದು. ಸದ್ಯ ಇನ್ನೂ ಲಿಂಕ್ ಆಕ್ಟಿವ್ ಆಗಿಲ್ಲ, ಮುಂದಿನ ದಿನಗಳಲ್ಲಿ ನೀವು ಈ ಸೌಲಭ್ಯ ಪಡೆಯಬಹುದು.
ಬಿಪಿಎಲ್ ಕಾರ್ಡ್ ನಿಯಮ ಬದಲಿಸಿದ ಸರ್ಕಾರ, ಇಂತವರ ಕಾರ್ಡ್ ರದ್ದು! ಅಕ್ಕಿ ಬದಲಿಗೆ ನೀಡುತ್ತಿದ್ದ ಹಣ ಕೂಡ ಕ್ಯಾನ್ಸಲ್
ಇನ್ನು ಗೃಹಲಕ್ಷ್ಮಿ ಯೋಜನೆಗೆ (Gruha Lakshmi Yojana) ಅರ್ಜಿಯನ್ನು ನಿಮಗೆ ಹತ್ತಿರ ಇರುವ ಕೇಂದ್ರದಲ್ಲಿ ನೀವು ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ಬಳಿಕ ಎಲ್ಲವೂ ಸರಿಯಾಗಿ ಸ್ವೀಕಾರವಾಗಿದ್ಯಾ ಎಂದು ಚೆಕ್ ಮಾಡುವುದು ಕೂಡ ಬಹಳ ಮುಖ್ಯವಾಗುತ್ತದೆ, ಹಾಗಾಗಿ ಸ್ಟೇಟಸ್ ತಿಳಿಯುವುದನ್ನು ಮರೆಯಬೇಡಿ.
check the application status of Gruha Lakshmi Yojana Online
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.