ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಲು ಬಂತು ಸುಲಭ ವಿಧಾನ, ಈ ರೀತಿ ಫೋನ್ ಇಂದಲೇ ಅಪ್ಲೈ ಮಾಡಬಹುದು
ಈ ಹಿಂದೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಮಹಿಳೆಯರು ಸೇವಾ ಕೇಂದ್ರಗಳಿಗೆ ಹೋಗಬೇಕಿತ್ತು, ಆದರೆ ಇನ್ನುಮುಂದೆ ಅದರ ಅಗತ್ಯವಿಲ್ಲ
ಗೃಹಲಕ್ಷ್ಮಿ ಯೋಜನೆಯು (Gruha Lakshmi Scheme) ಸರ್ಕಾರ ಕೊಡುತ್ತಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದು ಯೋಜನೆ ಆಗಿದೆ, ಈ ಯೋಜನೆ ಮೂಲಕ ರಾಜ್ಯದ ಎಲ್ಲಾ ಗೃಹಲಕ್ಷ್ಮಿಯರಿಗೆ ₹2000 ರೂಪಾಯಿ ಕೊಡಲಾಗುತ್ತಿದೆ.
ಈಗಾಗಲೇ ಈ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, 1 ಕೋಟಿಗಿಂತ ಹೆಚ್ಚು ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಮಹಿಳೆಯರು ಸೇವಾ ಕೇಂದ್ರಗಳಿಗೆ ಹೋಗಬೇಕಿತ್ತು, ಆದರೆ ಇನ್ನುಮುಂದೆ ಅದರ ಅಗತ್ಯವಿಲ್ಲ, ಕಾರಣ ಇನ್ನಷ್ಟು ಸುಲಭಗೊಳಿಸುವ ಉದ್ದೇಶದಿಂದ ಹೊಸ ವಿಧಾನ ಪರಿಚಯಿಸಲಾಗಿದೆ.
ಹೌದು ಸ್ನೇಹಿತರೆ, ಇನ್ಮುಂದೆ ವಾಟ್ಸಾಪ್ (WhatsApp) ಇಂದಲೇ ನೀವು ಅರ್ಜಿ ಸಲ್ಲಿಸಬಹುದು. ಈಗ ನಾವೆಲ್ಲರೂ ಹೆಚ್ಚಾಗಿ ವಾಟ್ಸಾಪ್ ಬಳಸುತ್ತೇವೆ. ಸ್ನೇಹಿತರ ಜೊತೆಗೆ, ಕುಟುಂಬದವರ ಜೊತೆಗೆ ಯಾವುದೇ ಮಾಹಿತಿ ಹಂಚಿಕೊಳ್ಳಬೇಕು ಎಂದರೆ ವಾಟ್ಸಾಪ್ ಬಳಸುತ್ತೇವೆ.
ಬಿಪಿಎಲ್ ಕಾರ್ಡ್ ನಿಯಮ ಬದಲಿಸಿದ ಸರ್ಕಾರ, ಇಂತವರ ಕಾರ್ಡ್ ರದ್ದು! ಅಕ್ಕಿ ಬದಲಿಗೆ ನೀಡುತ್ತಿದ್ದ ಹಣ ಕೂಡ ಕ್ಯಾನ್ಸಲ್
ವಾಟ್ಸಾಪ್ ನಲ್ಲಿ ಹೊಸ ಒಳ್ಳೆಯ ಫೀಚರ್ಸ್ ಗಳನ್ನು ಜಾರಿಗೆ ತಂದು, ಹೆಚ್ಚು ಅನುಕೂಲ ಮಾಡಿಕೊಡಲಾಗುತ್ತದೆ. ಅದೇ ರೀತಿ ಈಗ, ಗೃಹಲಕ್ಷ್ಮಿ ಯೋಜನೆಗೆ ಕೂಡ ವಾಟ್ಸಾಪ್ ನಲ್ಲೇ ಅರ್ಜಿ ಸಲ್ಲಿಸಬಹುದು. ಅದು ಹೇಗೆ ಎಂದು ತಿಳಿಸಿಕೊಡುತ್ತೇವೆ ನೋಡಿ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಇನ್ನುಮುಂದೆ ಇನ್ನು ಸುಲಭದ ಪ್ರಕ್ರಿಯೆ ಆಗಿದೆ. ಈ ಸುದ್ದಿ ಕೇಳಿ ಮಹಿಳೆಯರು ತುಂಬಾ ಸಂತೋಷಪಟ್ಟಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಿಕೆ ಇನ್ನು ಸುಲಭವಾಗಿ ಆಗಲಿ ಎಂದು ಸರ್ಕಾರವು ವಾಟ್ಸಾಪ್ ಚಾಟ್ ಬಾಟ್ ಶುರು ಮಾಡಿದೆ, ಇದರ ಸಹಾಯದಿಂದ ನೀವು ಮೊದಲಿಗಿಂತ ಸುಲಭವಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಸಿದ್ಧತೆ! ನಿಮ್ಮ ಖಾತೆಗೆ ಜಮೆ ಆಗಿದಿಯೋ ಇಲ್ಲವೋ ಚೆಕ್ ಮಾಡಿಕೊಳ್ಳೋದು ಹೇಗೆ?
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಸಲುವಾಗಿ ಸರ್ಕಾರ ಒಂದು ವಾಟ್ಸಾಪ್ ನಂಬರ್ (WhatsApp Number) ಅನ್ನು ನೀಡಿದೆ, 8147500500 ಇದು ಸರ್ಕಾರದ ಹೊಸ ವಾಟ್ಸಾಪ್ ನಂಬರ್ ಆಗಿದ್ದು, ಈ ಯೋಜನೆಗೆ ಅರ್ಜಿ ಸಲ್ಲಿಸಲು, ಈ ವಾಟ್ಸಾಪ್ ನಂಬರ್ ಗೆ ನೀವು ನಿಮ್ಮ ವಿವರಗಳನ್ನು ಕಳಿಸಬೇಕು.
ಈ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನಿಮಗೆ ಯಾವುದೇ ಡೌಟ್ ಇದ್ದರು ಕೂಡ, ಅದನ್ನು ಈ ನಂಬರ್ ಗೆ ಕೇಳಬಹುದಾಗಿದೆ.
ಗೃಹಲಕ್ಷ್ಮಿ ಯೋಜನೆಗೆ ನೀವು ಈಗಲೂ ಅರ್ಜಿ ಸಲ್ಲಿಸಬಹುದು, ಈ ಯೋಜನೆಯ ಅರ್ಜಿ ಸಲ್ಲಿಕೆಗೆ ಸರ್ಕಾರ ಇನ್ನು ಕೊನೆಯ ದಿನಾಂಕವನ್ನು ನಿಗದಿ ಮಾಡಿಲ್ಲ, ಹಾಗಾಗಿ ನೀವು ಈಗಲೂ ಅರ್ಜಿ ಸಲ್ಲಿಸಬಹುದು. ವಾಟ್ಸಾಪ್ ನಂಬರ್ ಮೂಲಕ ಈಗಾಗಲೇ ಹಲವು ಜನರು ಅರ್ಜಿ ಸಲ್ಲಿಸಿದ್ದು, ನೀವು ಕೂಡ ಇದನ್ನು ಟ್ರೈ ಮಾಡಬಹುದಾಗಿದೆ.
ಗೃಹ ಲಕ್ಷ್ಮಿ ಯೋಜನೆಗೆ WhatsApp ಮೂಲಕವೇ ಸುಲಭವಾಗಿ ಅರ್ಜಿ ಸಲ್ಲಿಸಿ! ಇಲ್ಲಿದೆ ಸಂಪೂರ್ಣ ಪ್ರಕ್ರಿಯೆ
ಇನ್ನು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಹಾಗೆ ಯಾವುದೇ ಡೌಟ್ ಇದ್ದರು, 1902 ನಂಬರ್ ಗೆ ಕರೆಮಾಡಿ ಬಗೆಹರಿಸಿಕೊಳ್ಳಬಹುದು. ಅರ್ಜಿ ಸಲ್ಲಿಸುವ ದಿನಾಂಕ, ಸಮಯ ಮತ್ತು ಸ್ಥಳವನ್ನು ಈ ನಂಬರ್ ಮೂಲಕ ಪಡೆಯಬಹುದು.
ಗೃಹಲಕ್ಷ್ಮಿ ಯೋಜನೆಗೆ ಜುಲೈ ನಲ್ಲಿ ಅರ್ಜಿ ಹಾಕಿರುವವರಿಗೆ ಆಗಸ್ಟ್ ಇಂದಲೇ ಹಣ (Gruha Lakshmi Yojana Money) ಬರುತ್ತದೆ ಎಂದು ಹೇಳಲಾಗುತ್ತಿದೆ. ಇನ್ನು ಅರ್ಜಿ ಸಲ್ಲಿಸದೆ ಇರುವವರು ಈ ಕೂಡಲೇ ಅರ್ಜಿ ಸಲ್ಲಿಸಿ.
Easy way to apply for Gruha Lakshmi Yojana by Your Smartphone Online