200 ಯೂನಿಟ್ ಗಿಂತ ಹೆಚ್ಚು ಕರೆಂಟ್ ಬಳಸಿರುವವರಿಗೆ ನಿಯಮ ಬದಲಾವಣೆ, ವಿದ್ಯುತ್ ಇಲಾಖೆಯಿಂದ ಹೊಸ ಸೂಚನೆ ಬಿಡುಗಡೆ

ರಾಜ್ಯ ಸರ್ಕಾರ ಹೊರತಂದಿರುವ ಮುಖ್ಯವಾದ ಯೋಜನೆಗಳಲ್ಲಿ ಒಂದು ಗೃಹಜ್ಯೋತಿ ಯೋಜನೆ. ಇದು ಎಲ್ಲಾ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಯೋಜನೆ ಆಗಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಆಳ್ವಿಕೆ ನಡೆಯುತ್ತಿದೆ. ಎಲೆಕ್ಷನ್ ಗಿಂತ ಮೊದಲೇ 5 ಗ್ಯಾರಂಟಿ ಯೋಜನೆಗಳ (Govt Schemes) ಬಗ್ಗೆ ತಿಳಿಸಿದ್ದ ಕಾಂಗ್ರೆಸ್, ಈಗ ಅಧಿಕಾರಕ್ಕೆ ಬಂದ ಮೇಲೆ ಆ ಎಲ್ಲಾ ಯೋಜನೆಗಳನ್ನು ಜಾರಿಗೆ ತರುವ ಬಗ್ಗೆ ಗಮನ ಹರಿಸಿದೆ.

ಒಂದೊಂದಾಗಿ ಎಲ್ಲಾ ಯೋಜನೆಗಳನ್ನು ಜಾರಿಗೆ ತರುವ ಕೆಲಸವನ್ನೂ ಮಾಡುತ್ತಿದೆ. 4 ಯೋಜನೆಗಳ ಬಗ್ಗೆ ಈಗಾಗಲೇ ಸ್ಪಷ್ಟ ಮಾಹಿತಿ ಇದ್ದು, ಯುವನಿಧಿ ಯೋಜನೆ (Yuva Nidhi Scheme) ಡಿಸೆಂಬರ್ ಇಂದ ಜಾರಿಗೆ ಬರಲಿದೆ.

ರಾಜ್ಯ ಸರ್ಕಾರ ಹೊರತಂದಿರುವ ಮುಖ್ಯವಾದ ಯೋಜನೆಗಳಲ್ಲಿ ಒಂದು ಗೃಹಜ್ಯೋತಿ ಯೋಜನೆ (Gruha Jyothi Scheme). ಇದು ಎಲ್ಲಾ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ (Free Electricity) ನೀಡುವ ಯೋಜನೆ ಆಗಿದೆ.

200 ಯೂನಿಟ್ ಗಿಂತ ಹೆಚ್ಚು ಕರೆಂಟ್ ಬಳಸಿರುವವರಿಗೆ ನಿಯಮ ಬದಲಾವಣೆ, ವಿದ್ಯುತ್ ಇಲಾಖೆಯಿಂದ ಹೊಸ ಸೂಚನೆ ಬಿಡುಗಡೆ - Kannada News

ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಲು ಬಂತು ಸುಲಭ ವಿಧಾನ, ಈ ರೀತಿ ಫೋನ್ ಇಂದಲೇ ಅಪ್ಲೈ ಮಾಡಬಹುದು

ಈ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ಬೇಗ ಅರ್ಜಿ ಸಲ್ಲಿಸಿ, ಅರ್ಜಿ ಸ್ವೀಕೃತಿ ಆದವರಿಗೆ ಬೇಗ ಈ ಯೋಜನೆಯ ಫಲ ಸಿಗುತ್ತದೆ ಎಂದು ಸರ್ಕಾರ ತಿಳಿಸಿದೆ. ಇದರ ಬೆನ್ನಲ್ಲೇ ಜನರಲ್ಲಿ ಒಂದು ಪ್ರಶ್ನೆ ಶುರುವಾಗಿದ್ದು ಒಂದು ವೇಳೆ ಯಾರಾದರೂ ಕೆಲವು ತಿಂಗಳ ಬಿಲ್ ಕಟ್ಟದೆ ಉಳಿಸಿಕೊಂಡಿದ್ದರೆ ಆಗ ಏನಾಗುತ್ತದೆ ಎನ್ನುವುದು ಹಲವರ ಪ್ರಶ್ನೆ ಆಗಿದೆ.

ಬಹಳಷ್ಟು ಜನರು ಕೆಲವು ತಿಂಗಳುಗಳಿಂದ ಅಥವಾ ವರ್ಷಗಳಿಂದ ಎಲೆಕ್ಟ್ರಿಸಿಟಿ ಬಿಲ್ (Electricity Bill) ಕಟ್ಟದೆ ಇರುವವರು ಕೂಡ ಇದ್ದಾರೆ. ಇನ್ನು ಕೆಲವರು ಗೃಹಜ್ಯೋತಿ ಯೋಜನೆ ಬರುತ್ತದೆ ಎಂದೇ ಬಿಲ್ ಬಾಕಿ ಉಳಿಸಿಕೊಂಡಿರುವವರು ಕೂಡ ಇದ್ದಾರೆ.

ಆದರೆ ಅಂಥ ಜನರಿಗೆ ಸರ್ಕಾರ ಈಗಾಗಲೇ ನೋಟೀಸ್ ಕೂಡ ಕಳಿಹಿಸಲಾಗಿದೆ. ಮೂರು ತಿಂಗಳ ಒಳಗೆ ಬಾಕಿ ಇರುವ ಎಲ್ಲ ಬಿಲ್ ಗಳನ್ನು ಜನರು ಕ್ಲಿಯರ್ ಮಾಡುಕೊಳ್ಳಬೇಕು ಎಂದು ಸರ್ಕಾರದಿಂದ ಸೂಚನೆ ಸಿಕ್ಕದ್ದು, ಜನರಿಗೆ ನೋಟಿಸ್ ಕಳಿಸಲಾಗಿದೆ.

ಬಿಪಿಎಲ್ ಕಾರ್ಡ್ ನಿಯಮ ಬದಲಿಸಿದ ಸರ್ಕಾರ, ಇಂತವರ ಕಾರ್ಡ್ ರದ್ದು! ಅಕ್ಕಿ ಬದಲಿಗೆ ನೀಡುತ್ತಿದ್ದ ಹಣ ಕೂಡ ಕ್ಯಾನ್ಸಲ್

Gruha Jyothi free electricity Schemeಜನರು ಇದನ್ನು ಮೀರಿ ಬಿಲ್ ಕಟ್ಟದೆ ಹೋದರೆ, ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು, ಮನೆಯ ವಿದ್ಯುತ್ ಸಂಪರ್ಕ ಕಟ್ ಮಾಡಬಹುದು ಎನ್ನಲಾಗಿದೆ.

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿರುವವರಿಗೆ ಆಗಸ್ಟ್ ಇಂದಲೇ ಯೋಜನೆಯ ಸೌಲಭ್ಯ ಸಿಗುತ್ತದೆ, ಉಚಿತ ವಿದ್ಯುತ್ ಸಿಗುತ್ತದೆ ಎನ್ನುವುದು ನಿಜವೇ ಆಗಿದೆ. ಆದರೆ ಫ್ರೀ ಕರೆಂಟ್ ಸಿಗುತ್ತದೇ ಎಂದು ಜನರು ಕೂಡ ಅಸಡ್ಡೆ ಮಾಡಬಾರದು.

ಈ ಹಿಂದಿನ ಎಲ್ಲಾ ಬಿಲ್ ಗಳು ಕ್ಲಿಯರ್ ಆಗಿದ್ದರೆ ಮಾತ್ರ ಫ್ರೀ ವಿದ್ಯುತ್ ಸಿಗುತ್ತದೆ. ಒಂದು ವೇಳೆ ನೀವು ಯೋಜನೆಗೆ ಅರ್ಹತೆ ಹೊಂದಿದ್ದು, ವಿದ್ಯುತ್ ಬಿಲ್ ಕ್ಲಿಯರ್ ಮಾಡಿಲ್ಲ ಎಂದರೆ ನಿಮಗೆ ಗೃಹಜ್ಯೋತಿ ಯೋಜನೆಯ ಫ್ರೀ ವಿದ್ಯುತ್ ಸಿಗುವುದಿಲ್ಲ.

ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಸಿದ್ಧತೆ! ನಿಮ್ಮ ಖಾತೆಗೆ ಜಮೆ ಆಗಿದಿಯೋ ಇಲ್ಲವೋ ಚೆಕ್ ಮಾಡಿಕೊಳ್ಳೋದು ಹೇಗೆ?

ನಿಮಗೆ ಬಿಲ್ ಕ್ಲಿಯರ್ ಮಾಡಲು ಮೂರು ತಿಂಗಳ ಸಮಯ ಕೊಡಲಾಗುತ್ತದೆ. ಹಾಗಿದ್ದರೂ ನೀವು ಕ್ಲಿಯರ್ ಮಾಡದೆ ಹೋದರೆ, ನಿಮ್ಮ ಮನೆಗೆ ಕರೆಂಟ್ ಕಟ್ ಮಾಡಿ, ಫ್ಯೂಸ್ ಕಿತ್ತುಕೊಂಡು ಹೋಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ನೀವು ಬೇಗ ಕರೆಂಟ್ ಬಿಲ್ ಗಳನ್ನು ಕ್ಲಿಯರ್ ಮಾಡಿ.

ಜನರಿಗೆ ಮನೆಗಳಿಗೆ ಮಾತ್ರವಲ್ಲದೆ, ಕೃಷಿಕರಿಗೆ ಸಹ ಉಚಿತ ವಿದ್ಯುತ್ ನೀಡಬೇಕು ಎನ್ನುವ ಚರ್ಚೆ ನಡೆಯುತ್ತಿದೆ. ರೈತರು ಗದ್ದೆಗೆ ನೀರು ಪಂಪ್ ಮಾಡಲು, ಮತ್ತು ಇನ್ನಿತರ ಸೌಲಭ್ಯಕ್ಕೆ ಉಚಿತ ವಿದ್ಯುತ್ ನೀಡುವ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ. ಹಾಗೂ ಮೀನುಗಾರರಿಗೆ ಬೀಟ್ ಫ್ಯುಲ್ ನೀಡುವುದಕ್ಕೂ ಸರ್ಕಾರ ಮುಂದಾಗಿದೆ. ಹಾಗಾಗಿ ರೈತರಿಗೂ ಸೌಲಭ್ಯ ಕೊಡಲು ಮುಂದಾಗಿದ್ದು, ರೈತರು ಕೂಡ ಈ ಫಲವನ್ನು ಪಡೆಯಬಹುದು..

Change in rules for those who have consumed more than 200 units of electricity

Follow us On

FaceBook Google News

Change in rules for those who have consumed more than 200 units of electricity