ರಾಜ್ಯ ಸರ್ಕಾರ ಭರವಸೆ ನೀಡಿದ್ದ 5 ಯೋಜನೆಗಳನ್ನು ಜಾರಿಗೆ ತರುವ ಕೆಲಸ ನಡೆಯುತ್ತಿದೆ. ಇದರಲ್ಲಿ ಪ್ರತಿ ಮನೆಗೆ ಉಚಿತ ವಿದ್ಯುತ್ (Free Electricity) ಕೊಡುವ ಗೃಹಜ್ಯೋತಿ ಯೋಜನೆಗೆ (Gruha Jyothi Scheme) ಅರ್ಜಿ ಸಲ್ಲಿಕೆ ಶುರುವಾಗಿ ಇನ್ನೇನು ಜಾರಿಗೆ ಬರಲಿದೆ.

ಹೆಣ್ಣುಮಕ್ಕಳು ಇಡೀ ರಾಜ್ಯದಲ್ಲಿ ಉಚಿತವಾಗಿ (Free Bus) ಸರ್ಕಾರಿ ಬಸ್ ಗಳಲ್ಲಿ ಓಡಾಡುವ ಶಕ್ತಿ ಯೋಜನೆ (Shakti Yojana) ಕೂಡ ಜಾರಿಗೆ ಬಂದಿದೆ. ಇನ್ನು ಮನೆಯ ಗೃಹಲಕ್ಷ್ಮಿಯರಿಗೆ ತಿಂಗಳಿಗೆ ₹2000 ಕೊಡುವ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಹಣವು ಆಗಸ್ಟ್ 24ರಿಂದ ಗೃಹಲಕ್ಷ್ಮಿಯರ ಖಾತೆಗೆ ವರ್ಗಾವಣೆ ಆಗುತ್ತದೆ.

Annabhagya Yojana DBT status check Online

ಇನ್ನು ಯುವನಿಧಿ ಯೋಜನೆ ಡಿಸೆಂಬರ್ ಇಂದ ಜಾರಿಗೆ ಬರಬಹುದು ಎಂದು ಹೇಳಲಾಗುತ್ತಿದೆ. ಇನ್ನು ಅನ್ನಭಾಗ್ಯ ಯೋಜನೆಯ (Annabhagya Yojane) ಅಡಿಯಲ್ಲಿ ಕೇಂದ್ರ ಸರ್ಕಾರವು ಜನರಿಗೆ 5 ಕೆಜಿಯ ಹಣವನ್ನು ಬ್ಯಾಂಕ್ ಖಾತೆಗೆ (Bank Account) ವರ್ಗಾಯಿಸಬೇಕು. ಇದಕ್ಕಾಗಿ ಹಣ ಬಿಡುಗಡೆ ಆಗಿದ್ದು, ಕೆಲವರ ಬ್ಯಾಂಕ್ ಅಕೌಂಟ್ ಗೆ ಈ ಹಣ ವರ್ಗಾವಣೆ ಆಗಿದೆ, ಆದರೆ ಇನ್ನೂ ಕೆಲವರಿಗೆ ಹಣ ವರ್ಗಾವಣೆ ಆಗಿಲ್ಲ.

ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಕ್ಕೂ ಮುಂಚೆಯೇ ಅರ್ಜಿ ಹಾಕಿರುವವರಿಗೆ ಹೊಸ ಸೂಚನೆ ತಂದ ಸರ್ಕಾರ!

ನಮ್ಮ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಇರುವವರು ಈ ಯೋಜನೆಯ ಸೌಲಭ್ಯ ಸಿಗಲಿದ್ದು, ಒಂದು ಕೆಜಿ ಅಕ್ಕಿಗೆ ₹34 ರೂಪಾಯಿಯ ಹಾಗೆ ಒಬ್ಬ ವ್ಯಕ್ತಿಗೆ 5ಕೆಜಿ ಅಕ್ಕಿಗೆ ₹170 ರೂಪಾಯಿಗಳನ್ನು ಬ್ಯಾಂಕ್ ದಾರರ ಖಾತೆಗೆ ವರ್ಗಾವಣೆ ಮಾಡಲಾಗಿದೆ.

ಕೆಲವರಿಗೆ ಈ ಹಣ ಸಿಕ್ಕಿದೆ, ಆದರೆ ಇನ್ನೂ ಕೆಲವರಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಅಕೌಂಟ್ ಇದೆಲ್ಲವೂ ಕೂಡ ಲಿಂಕ್ ಆಗಿದ್ದರು ಕೆಲವರಿಗೆ ಹಣ ಬಂದಿಲ್ಲ. ಇದಕ್ಕೆ ಕಾರಣ ಏನು ಎಂದು ಹಲವರಿಗೆ ಚಿಂತೆಯಾಗಿದೆ.

ಈಗಾಗಲೇ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಸುಮಾರು 22 ಲಕ್ಷ ಕುಟುಂಬಗಳು ತಮ್ಮ ಬ್ಯಾಂಕ್ ಅಕೌಂಟ್ ಅನ್ನು ಆಧಾರ್ ಕಾರ್ಡ್ ಗೆ ಇನ್ನು ಲಿಂಕ್ ಮಾಡಿಲ್ಲ. ಪ್ರಸ್ತುತ ಸರ್ಕಾರ ಒಂದು ಲಿಸ್ಟ್ ನೀಡಿದ್ದು, ಆ ಲಿಸ್ಟ್ ನಲ್ಲಿ ಇರುವವರ ಬ್ಯಾಂಕ್ ಅಕೌಂಟ್ ಗೆ ಹಣ ಡೆಪಾಸಿಟ್ ಆಗಿದೆ ಎಂದು ತಿಳಿಸಿದ್ದರು ಕೂಡ, ಒಂದು ವೇಳೆ ನಿಮಗೆ ಹಣ ಸಿಕ್ಕಿಲ್ಲ ಎಂದರೆ, ಮತ್ತೊಂದು ಸಾರಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ, ಈ ಪ್ರಯೋಜನವನ್ನು ಮುಂದಿನ ತಿಂಗಳಿನಿಂದ ಪಡೆದುಕೊಳ್ಳಬಹುದು.

ಗ್ಯಾರೆಂಟಿ ಯೋಜನೆಗಳ ಬೆನ್ನಲ್ಲೇ ರೇಷನ್ ಕಾರ್ಡ್ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ಸರ್ಕಾರ, ಜನರಿಗೆ ಬಿಗ್ ಶಾಕ್!

Karnataka Annabhagya Yojana New Updatesಅದು ಸಾಧ್ಯವಾಗಲ್ಲ ಎಂದರೆ, ಇಂದು ನಿಮಗೆ ತಿಳಿಸುವ ಟಿಪ್ಸ್ ಗಳನ್ನು ತಪ್ಪದೇ ಫಾಲೋ ಮಾಡಿ. ನಿಮ್ಮ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣ ಬರುವ ಹಾಗೆ ಮಾಡಲು, ಮೊದಲು https://ahara.kar.nic.in/status1/status_of_dbt.aspx ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

ಈ ಲಿಂಕ್ ನಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ, ಕ್ಯಾಪ್ಚ ಎಂಟರ್ ಮಾಡಿ ಚೆಕ್ ಮಾಡಿದರೆ, ನಿಮ್ಮ ಅಕೌಂಟ್ ಗೆ ಹಣ ಬಂದಿದೆಯಾ ಅಥವಾ ಬಂದಿಲ್ಲವಾ ಎನ್ನುವ ವಿಷಯ ಗೊತ್ತಾಗುತ್ತದೆ. ಈ ಲಿಂಕ್ ಮೂಲಕ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಅನ್ನಭಾಗ್ಯ ಯೋಜನೆಯ ಹಣ ಸಿಕ್ಕಿದೆಯೇ ಇಲ್ಲವೇ ಎನ್ನುವುದು ಗೊತ್ತಾಗುತ್ತದೆ.

ಇದು ತಿಳಿದು, ಹಣ ಬಂದಿಲ್ಲ ಎಂದರೆ ಬ್ಯಾಂಕ್ ಗೆ ಹೋಗಿ ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಸಿ. ಆಹಾರ ಇಲಾಖೆಯ ಕೇಂದ್ರಗಳಲ್ಲಿ ಕೂಡ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು. ಈ ಕೆಲಸಕ್ಕೆ ನೀವು ಒಂದು ಫಾರ್ಮ್ ಫಿಲ್ ಮಾಡಬೇಕಾಗುತ್ತದೆ.

ಈ 7 ಕಂಡೀಷನ್ ಗೆ ಅರ್ಹರಾದರೆ ಮಾತ್ರ ಯುವನಿಧಿ ಸ್ಕೀಮ್ ಇಂದ ₹3000 ಸಿಗೋದು! ಏನೆಲ್ಲಾ ದಾಖಲೆ ಬೇಕು ಗೊತ್ತಾ?

ಬ್ಯಾಂಕ್ ಅಕೌಂಟ್, ರೇಷನ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಮೂರನ್ನು ಲಿಂಕ್ ಮಾಡಬೇಕಾಗುತ್ತದೆ. ಹೀಗೆ, ಆಧಾರ್ ಕಾರ್ಡ್ ಲಿಂಕ್ ಆಗಿರದ ರೇಷನ್ ಕಾರ್ಡ್ ಗೆ ಅನ್ನಭಾಗ್ಯ ಯೋಜನೆಯ ಹಣ ಸಿಗುವುದಿಲ್ಲ.

ಹಾಗೆಯೇ ಹಿಂದಿನ 3 ತಿಂಗಳಿನಿಂದ ರೇಷನ್ ಪಡೆಯದೆ ಇರುವವರಿಗೂ ಅನ್ನಭಾಗ್ಯ ಯೋಜನೆಯ ಹಣ ಸಿಗುವುದಿಲ್ಲ. ಆನ್ಲೈನ್ ಮೂಲಕ ಅನ್ನಭಾಗ್ಯ ಯೋಜನೆಯ ವಿಚಾರವನ್ನು ತಿಳಿದು, ನಂತರ ಲಿಂಕ್ ಮಾಡಿ.

Annabhagya Yojana Funds Transferred, Check You Received or Not to Your Bank Account