ಕೋಲಾರ: ಕುಡಿದ ಮತ್ತಿನಲ್ಲಿ ಕಾರು ನೇರವಾಗಿ ರೈಲ್ವೆ ಟ್ರ್ಯಾಕ್ ಮೇಲೆ!
ಕೋಲಾರದ ಟೇಕಲ್ ರೈಲ್ವೆ ನಿಲ್ದಾಣದಲ್ಲಿ ಅಚ್ಚರಿ ಮೂಡಿಸಿದ ಘಟನೆ, ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯ ಕಾರು ರೈಲ್ವೆ ನಿಲ್ದಾಣದೊಳಕ್ಕೆ ನುಗ್ಗಿ ರೈಲ್ವೆ ಟ್ರ್ಯಾಕ್ ಮೇಲೆ ನಿಂತಿತ್ತು.
- ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯ ಕಾರು ರೈಲ್ವೆ ನಿಲ್ದಾಣದೊಳಕ್ಕೆ ನುಗ್ಗಿದ ಘಟನೆ
- ನೇರವಾಗಿ ರೈಲ್ವೆ ಪ್ಲಾಟ್‌ಫಾರ್ಮ್ ಹಾಗೂ ಟ್ರ್ಯಾಕ್ ಮೇಲೆ ಕಾರು
- ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಜೆಸಿಬಿ ಸಹಾಯದಿಂದ ಕಾರು ತೆರವು
ಕೋಲಾರ (Kolar) : ಕುಡಿದ ಮತ್ತಿನಲ್ಲಿ, ಮದ್ಯದ ನಶೆಯಲ್ಲಿ ನಿಯಂತ್ರಣ ತಪ್ಪಿದ ಚಾಲಕನೋರ್ವ, ಕಾರನ್ನು (Car) ನೇರವಾಗಿ ಕೋಲಾರ ಜಿಲ್ಲೆಯ ಟೇಕಲ್ ರೈಲ್ವೆ ನಿಲ್ದಾಣದೊಳಗೆ ನುಗ್ಗಿಸಿ, ಹಳಿಯ ಮೇಲೆ (Railway Track) ನಿಲ್ಲಿಸಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಈ ದೃಶ್ಯವನ್ನು ಕಂಡ ರೈಲ್ವೆ ಸಿಬ್ಬಂದಿ ತಕ್ಷಣ ಎಚ್ಚೆತ್ತು, ಅನಾಹುತವನ್ನು ತಪ್ಪಿಸಿದ್ದಾರೆ.
ಟೇಕಲ್ ರೈಲ್ವೆ ನಿಲ್ದಾಣವು ಪ್ರಮುಖ ಜಂಕ್ಷನ್ ಆಗಿದ್ದು, ಈ ಮಾರ್ಗದಲ್ಲಿ ಹಲವು ರೈಲುಗಳು (Trains) ಸಂಚರಿಸುತ್ತವೆ. ಅದೃಷ್ಟವಶಾತ್, ಈ ಘಟನೆ ನಡೆಯುವ ವೇಳೆಗೆ ಯಾವುದೇ ರೈಲು ಅಲ್ಲಿಗೆ ಬಂದಿರಲಿಲ್ಲ. ಏನಾದರೂ ರೈಲು ಆಗಮಿಸಿದ್ದರೆ, ಭಾರೀ ದುರಂತವೊಂದು ಸಂಭವಿಸುವ ಸಾಧ್ಯತೆ ಇತ್ತು.
ಕನ್ನಡ ಬರೆಯಲು ತಡಕಾಡಿದ ಸಚಿವರು! ವೈರಲ್ ಆದ ವಿಡಿಯೋ
ಘಟನೆಯಲ್ಲಿ ಸಿಕ್ಕಿಬಿದ್ದಿದ್ದ ಮಾರುತಿ ಸ್ವಿಫ್ಟ್ ಡಿಸೈರ್ ಕಾರು (Swift Dzire) ಪ್ಲಾಟ್‌ಫಾರ್ಮ್ ಮೆಟ್ಟಿಲು ಇಳಿದು, ರೈಲ್ವೆ ಹಳಿಯ ಮೇಲೆ ನಿಂತಿತ್ತು. ಅತ್ತ ಗಾಬರಿಗೊಂಡ ಸಿಬ್ಬಂದಿ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಬಳಿಕ ಜೆಸಿಬಿ ಬಳಸಿ ಕಾರನ್ನು ಹೊರತೆಗೆಯಲಾಯಿತು.
ಈ ಅವಾಂತರ ಸೃಷ್ಟಿಸಿದ ವ್ಯಕ್ತಿ, ಪೊಲೀಸರ ವಶದಲ್ಲಿದ್ದಾನೆ. ರೈಲ್ವೆ ಪೊಲೀಸರು ಆತನನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಕುಡಿದ ಮತ್ತಿನಲ್ಲೇ ಈ ಘಟನೆ ನಡೆದಿದೆ ಎಂಬುದು ಸ್ಪಷ್ಟವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಮಂಡ್ಯದಲ್ಲಿ 8 ವರ್ಷದ ಬಾಲಕಿಗೆ ಕೇಕ್ ಆಮಿಷ, ಶಾಲಾ ಆವರಣದಲ್ಲೇ ಅತ್ಯಾಚಾರ
Drunk Driver Crashes Car onto Railway Track in Kolar