ವಾಟರ್ ಹೀಟರ್ ಮುಟ್ಟಿದ 8 ವರ್ಷದ ಬಾಲಕ ಸಾವು; ಸ್ನಾನಕ್ಕೆ ನೀರು ಕಾಯಿಸುವಾಗ ದುರಂತ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಸ್ನಾನಕ್ಕೆ ತೆರಳಿದ್ದ ಎಂಟು ವರ್ಷದ ಬಾಲಕನಿಗೆ ವಾಟರ್ ಹೀಟರ್‌ನಿಂದ ವಿದ್ಯುತ್ ಪ್ರವಹಿಸಿ ದುರಂತ ಸಂಭವಿಸಿದ್ದು, ಕುಟುಂಬದಲ್ಲಿ ತೀವ್ರ ದುಃಖ ಮಡುಗಟ್ಟಿದೆ.

ಚಿಕ್ಕಮಗಳೂರು: ಮನೆಯಲ್ಲಿ ನಡೆದ ಸಣ್ಣ ನಿರ್ಲಕ್ಷ್ಯವೊಂದು ಎಂಟು ವರ್ಷದ ಬಾಲಕನ ಜೀವವನ್ನೇ ಬಲಿ ಪಡೆದಿದೆ. ಸ್ನಾನ ಮಾಡಲು ಹೋದ ಬಾಲಕನಿಗೆ ನೀರು ಕಾಯಿಸಲು ಬಳಸಿದ್ದ ವಿದ್ಯುತ್ ವಾಟರ್ ಹೀಟರ್‌ನಿಂದ (Water Heater) ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ.

ಭಾನುವಾರ (ನ.1) ಶಾಲೆಗೆ ರಜೆ ಇದ್ದ ಕಾರಣ ಬಾಲಕ ಮನೆಯಲ್ಲೇ ಇದ್ದನು. ಈ ವೇಳೆ ಸ್ನಾನಕ್ಕೆ ಸಿದ್ಧತೆ ಮಾಡಿಕೊಂಡಿದ್ದಾಗ ಬಕೆಟ್‌ನಲ್ಲಿ ನೀರು ಬಿಸಿಮಾಡಲು ಹೀಟರ್ ಅಳವಡಿಸಲಾಗಿತ್ತು. ನೀರು ಕಾಯುತ್ತಿದ್ದ ಸಂದರ್ಭದಲ್ಲಿ ಬಾಲಕ ಅದರೊಳಗೆ ಕೈ ಹಾಕಿದ್ದು, ಏಕಾಏಕಿ ವಿದ್ಯುತ್ ಸ್ಪರ್ಶಿಸಿದೆ.

ಇದನ್ನೂ ಓದಿ: ಕಬ್ಬು ಬೆಳೆಗಾರರ ಹೋರಾಟ ಮತ್ತಷ್ಟು ತೀವ್ರ: ನಾಳೆ ಹಿಂಡಲಗಾ ಜೈಲಿಗೆ ರೈತರ ಚಲೋ!

ವಿದ್ಯುತ್ ಆಘಾತಕ್ಕೆ (Electric Shock) ಒಳಗಾದ ಬಾಲಕ ತೀವ್ರ ಅಸ್ವಸ್ಥನಾಗಿದ್ದಾನೆ. ತಕ್ಷಣವೇ ಆತನನ್ನು ರಕ್ಷಿಸಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಲಾಯಿತಾದರೂ, ವೈದ್ಯಕೀಯ ನೆರವು ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಮೃತ ಬಾಲಕನನ್ನು ಸಖರಾಯಪಟ್ಟಣದ ನೀಲಾಂಶ್ (8) ಎಂದು ಗುರುತಿಸಲಾಗಿದೆ. ಈತ ಎರಡನೇ ತರಗತಿಯಲ್ಲಿ ಓದುತ್ತಿದ್ದ. ಆಟವಾಡುತ್ತಾ, ಓದುತ್ತಾ ಬೆಳೆಯಬೇಕಿದ್ದ ಪುಟ್ಟ ಕಂದಮ್ಮನ ಸಾವು ಕುಟುಂಬಸ್ಥರನ್ನು ದಿಕ್ಕು ತೋಚದಂತೆ ಮಾಡಿದೆ. ಮನೆಯವರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲೂ ದುಃಖದ ವಾತಾವರಣ ನಿರ್ಮಾಣವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

TRENDING ARTICLES1 / 3
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories